অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಡುಬಿಯ್, ಪೀಟರ್ (ಜೋ ಸೆಫ್ ವಿಲಿಯಂ) (1884-1966)-1936

ಡುಬಿಯ್, ಪೀಟರ್ (ಜೋ ಸೆಫ್ ವಿಲಿಯಂ) (1884-1966)-1936

ಡುಬಿಯ್, ಪೀಟರ್ (ಜೋ ಸೆಫ್ ವಿಲಿಯಂ) (1884-1966 ) -೧೯೩೬
ಡೆನ್ಮಾರ್ಕ್-ಅಸಂಸಂ-ರಸಾಯನ ಭೌತಶಾಸ್ತ್ರ-ದ್ವಿಧೃವ  ಭ್ರಾಮ್ಯತೆಗಳ (Bipolar Moments) ಮೇಲೆ ಪರಿಕಲ್ಪನೆಗಳನ್ನು ಹಾಗೂ (Electrolyte) ದ್ರಾವಣಗಳನ್ನು ಅಭಿವೃದ್ದಿ ಗೊಳಿಸಿದಾತ.

ಡುಬಿಯ್ ನೆದರ್ಲ್ಯಾಂಡ್ ಹಾಗೂ ಜರ್ಮನಿಗಳಲ್ಲಿ ಶಿಕ್ಷಣ ಪಡೆದ ನಂತರ , ಒಂದಾದ ನಂತರ ಒಂದರಂತೆ ಹಲವಾರು ಯುರೋಪಿಯನ್ ದೇಶಗಳಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಬೋಧನೆಯಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದನು.  ಕ್ಷಿಪ್ರ ಬದಲಾವಣೆಯ ವೃತ್ತಿ ಹಿನ್ನೆಲೆಯಿದ್ದರೂ ಡುಬಿಯ್ 1911ರಿಂದ 1916ರ ಮಧ್ಯೆ, ತಾಪಮಾನ ಬದಲಾದಂತೆ ವಸ್ತುಗಳ ನಿರ್ದಿಷ್ಟ ಶಾಖ (Specific Heat) ಬದಲಾಗುವುದರ ಬಗೆಗೂ , ಪುಡಿಗೊಳಿಸಿದ ಸ್ಪಟಿಕಗಳನ್ನು ಬಳಸಿ, ಕ್ಷ-ಕಿರಣ ವಿವರ್ತನ  ವಿಶ್ಲೇಷಣಾ (X-ray Diffraction Analysis) ವಿಧಾನವನ್ನು ಹಾಗೂ ಶಾಶ್ವತ ಅಣ್ವಯಿಕ ವೈದ್ಯುತ್ ಧೃವ ಭ್ಯಾಮತೆಗಳ ಪರಿಕಲ್ಪನೆಯ ಮೇಲೆ ಸರಳ ಅಣು ರಚನೆಗಳನ್ನು ನಿರ್ಧರಿಸುವ ವಿಧಾನಗಳನ್ನು ನೀಡಿದನು.  ನೀರಿನ ಅಣು ಊ-ಔ-ಔ ನೇರವಾಗಿರದೆ ಬಾಗಿದೆ0iÉುಂದು ಡುಬಿಯ್ ತೋರಿಸಿದನಲ್ಲದೆ, ಬೆಂಜೀನ್ ಉಂಗುರ ಚಪ್ಪಟೆ0iÉುಂದು ಸಾಧಿಸಿದನು.  ಡುಬಿಯ್ ವೈವಿಧ್ಯಮಯ ಸಂಶೋಧನೆಗಳ ಗೌರವಾರ್ಥವಾಗಿ ವೈದ್ಯುತ್ ದ್ವಿಧೃವ ಭ್ರಾಮ್ಯತೆಯ ಮಾನಕವನ್ನು ಡುಬಿಯ್ ಎಂದು ಹೆಸರಿಸಲಾಗಿದೆ . 1923ರಲ್ಲಿ ಹಕಲ್ ಜೊತೆ ಸೇರಿ ಡುಬಿಯ್ ಹಕ್ಕಲ್ (Electrolyte) ಸಿದ್ಧಾಂತ ಮಂಡಿಸಿದನು.  ಈ ಸಿದ್ಧಾಂತ ಪ್ರಬಲ ದ್ರಾವಣಗಳ ಆವಿಷ್ಟಿತ ಅಣುಗಳ ಮಧ್ಯದ ಅಂತ:ಕ್ರಿ0iÉುಯನ್ನು ಪರಿಗಣಿಸುತ್ತದೆ.  ಈ ಮೊದಲಿಗಿದ್ದ ಸಿದ್ಧಾಂತಗಳು ದುರ್ಬಲ ದ್ರಾವಣಗಳನ್ನು ಕುರಿತಾಗಿ ಮಾತ್ರ ವಿವೇಚಿಸುತ್ತಿದ್ದವು. 1934ರಲ್ಲಿ ಬರ್ಲಿನ್‍ಗೆ ತೆರಳಿದ್ ಡುಬಿಯ್ 1940ರಲ್ಲಿ , ಕಾರ್ವೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿ ಅಸಂಸಂ ಸೇರಿದನು. ಡುಬಿಯ್ ದ್ರಾವಣಗಳಲ್ಲಿ ಬೆಳಕು ಚದುರಿಕೆ ಹಾಗೂ ಕಾಂತತ್ವ ಕುರಿತಾದ ಕೆಲಸಗಳು ಸಹ ಮನ್ನಣೆ ಗಳಿಸಿವೆ. 1936ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಗಳಿಸಿದ ಡುಬಿಯ್, 1939ರಲ್ಲಿ ತನ್ನ ಪುತ್ಥಳಿಯನ್ನು ತನ್ನ ಹುಟ್ಟೂರಾದ ಮ್ಯಾಚೆಂಸ್ಟರ್‍ನಲ್ಲಿ ಅನಾವರಣಗೊಳಿಸುವ ಸಮಾರಂಭದಲ್ಲಿ ಭಾಗಿಯಾಗುವ ವಿಲಕ್ಷಣ ಸಂದರ್ಭದಲ್ಲಿ ಅವನ ಜೀವನದಲ್ಲಿ ಒದಗಿ ಬಂದಿತು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/23/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate