অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೌಲ್ , ಕರೆರ್ (1889-1971) 1937

ಪೌಲ್ , ಕರೆರ್ (1889-1971) 1937

ಪೌಲ್ , ಕರೆರ್ (1889-1971)  ೧೯೩೭

ಸ್ವಿಟ್ಸರ್ಲ್ಯಾಂಡ್-ರಸಾಯನಶಾಸ್ತ್ರ-  ಕೆರೋಟಿನಾಯಿಡ್ಸ್ ಹಾಗೂ ವಿಟಮಿನ್‍ಗಳ ಬಗೆಗೆ ಸಂಶೋಧಿಸಿದಾತ.

ಕರೀರ್‍ನ ಪೂರ್ವಜರು ಸ್ವಿಟ್ಸಲ್ರ್ಯಾಂಡಿನವರು. 21 ಏಪ್ರಿಲ್ 1889ರಂದು ಮಾಸ್ಕೋದಲ್ಲಿ ಜನಿಸಿದನು. 1892ರಲ್ಲಿ ಕರೀರ್ ಕುಟುಂಬ ತಮ್ಮ ತಾಯ್ನಾಡಿಗೆ ಮರಳಿತು.  ವೈಲ್ಡ್‍ರಿಗ್,ಲೆಂಜ್‍ಬರ್ಗ್, ಆರಾವ್ ಪಟ್ಟಣಗಳಲ್ಲಿ ಓದಿದ ಕರೀರ್ 1908ರಲ್ಲಿ ಪ್ರೌಢಶಿಕ್ಷಣ ಮುಗಿಸಿದನು. ಝೂರಿಕ್ ವಿಶ್ವವಿದ್ಯಾಲಯ ಸೇರಿ, ಆಲ್ಫ್ರೆಡ್ ವೆರ್ನರ್‍ನ ಮಾರ್ಗದರ್ಶನದಲ್ಲಿ 1911ರಲ್ಲಿ ಡಾಕ್ಟರೇಟ್ ಗಳಿಸಿದನು. 1912ರಲ್ಲಿ ಫ್ರಾಂಕ್’ಫರ್ಟ್’ನಲ್ಲಿ ಪೌಲ್, ಎಹ್ರ್‍ಲಿಖ್‍ನ ಕೆಳಗೆ ರಾಸಾಯನಿಕ ತಜ್ಞನಾದನು. 1919ರಲ್ಲಿ ಝೂರಿಕ್ ವಿಶ್ವವಿದ್ಯಾಲಯ ಸೇರಿ ರಸಾಯನಶಾಸ್ತ್ರ ವಿಬಾಗದ ನಿರ್ದೇಶಕನಾದನು.  ಕರೀರ್ ಸಂಕೀರ್ಣ ಲೌಹಿಕ ಸಂಯುಕ್ತಗಳ ಅಧ್ಯಯನದಿಂದ ತನ್ನ ವೃತ್ತಿ ಜೀವನ ಪ್ರಾರಂಭಿಸಿದನು.  ಸಸ್ಯಗಳಲ್ಲಿರುವ ಹಳದಿ ಬಣ್ಣದ ಕೆರೋಟಿನಾಯಿಡ್ಸ್‍ನ ಮೇಲೆ ನಡೆಸಿದ ಅಧ್ಯಯನಗಳಿಂದ ಕರೀರ್ ಖ್ಯಾತನಾದನು.  ಕೆಲವು ಕೆರೋಟಿನಾಯಿಡ್‍ಗಳು ಪ್ರಾಣಿಗಳ ದೇಹದಲ್ಲಿ ವಿಟಮಿನ್-ಎ ಗಳಾಗಿ ಪರಿವರ್ತನೆ ಹೊಂದುವುವೆಂದು ತೋರಿಸಿದನು.  ಕರೀರ್‍ನ ಪ್ರಯೋಗಗಳಿಂದ 1930ರಲ್ಲಿ, ವಿಟಮಿನ್-ಎಗೆ ಪ್ರಧಾನ ಕಾರಣವಾದ ಕೆರೋಟಿನ್‍ನ ರಾಚನಿಕ ಸ್ವರೂಪ ಖಚಿತವಾಯಿತು. ಇದು ಸಂಪೂರ್ಣ ಸಂರಚನೆ ನಿರ್ಧರಿಸಲ್ಪಟ್ಟ ಪ್ರಥಮ ವಿಟಮಿನ್ ಎಂದು ದಾಖಲಾಯಿತು.  ಮುಂದೆ  ವಿಟಮಿನ್-ಸಿಗೆ ಕಾರಣವಾದ ಆಸ್ಕೊರ್ಬಿಕ್ ಆಮ್ಲದ ಸಂರಚನೆಯನ್ನು ಆಲ್ಬರ್ಟ್ ವಾನ್ ಜೆಂಟ್ ಗಯೋರ್ಗಿ ನಿರ್ಧರಿಸಿದನು. ವಿಟಮಿನ್ ಬಿ2,ವಿಟಮಿನ್-ಇ ಇದೇ ಅಧ್ಯಯನಕ್ಕೊಳಗಾದವು. ಕರೀರ್ ಸಾವಯವ ರಸಾಯನಶಾಸ್ತ್ರದಲ್ಲಿ ವಿಟಮಿನ್‍ಗಳನ್ನು ವಿಶೇಷವಾಗಿ ಕುರಿತಾದಂತೆ ಹಲವಾರು ವೈಜ್ಞಾನಿಕ ಪತ್ರಿಕೆಗಳಲ್ಲಿ 1000ಕ್ಕೂ ಅಧಿಕ ಲೇಖನಗಳನ್ನು ಪ್ರಕಟಿಸಿದ್ದನು.  ಕೆರೊಲಿನಾಯಿಡ್ಸ್, ಸಸ್ಯ ಬಣ್ಣಗಳು, ಅಲ್ಕಲಾಯಿಡ್, ಅಮೈನೋ ಆಮ್ಲಗಳು ಕಾರ್ಬೊಹೈಡ್ರೇಟ್, ಸಾವಯವ ಆರ್ಸೆನಿಕ್ ಸಂಯುಕ್ತಗಳು ಕರೀರ್‍ನ ಸಂಶೋಧನೆಗಳಲ್ಲಿ ದಾಖಲಾದವು. 1930ರಲ್ಲಿ ಕರೀರ್ ಪ್ರಕಟಿಸಿದ ಲೆಹರ್ಬಕ್ ಡೆರ್ ಆಗ್ರ್ಯಾನಿಕೊನ್  ಕೆಮಿ ಕೃತಿ 13 ಸಲ ಪ್ರಕಟಣೆಗೊಂಡು ಯುರೋಪಿನ ಎಲ್ಲಾ ಪ್ರಮುಖ ಭಾಷೆಗಳಿಗೂ ಅನುವಾದಗೊಂಡಿತು.  ಕರೀರ್ ತನ್ನ ಸಂಶೋಧನೆಗಳಿಗಾಗಿ 1937ರ ನೊಬೆಲ್ ಪ್ರಶಸ್ತಿ ಗಳಿಸಿದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 12/2/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate