অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬೇರ್ಜಿಯೂಸ್, ಫ್ರೆಡ್‍ರಿಕ್ ಕಾರ್ಲ್ ರುಡಾಲ್ಫ್

ಬೇರ್ಜಿಯೂಸ್, ಫ್ರೆಡ್‍ರಿಕ್ ಕಾರ್ಲ್ ರುಡಾಲ್ಫ್

ಬೇರ್ಜಿಯೂಸ್, ಫ್ರೆಡ್‍ರಿಕ್ ಕಾರ್ಲ್ ರುಡಾಲ್ಫ್ (1884-1949)-೧೯೩೧

ಜರ್ಮನಿ-ಕೈಗಾರಿಕಾ ರಸಾಯನಶಾಸ್ತ್ರ- ಕಲ್ಲಿದ್ದಲಿನಿಂದ ತೈಲ ಪಡೆಯುವ ವಿಧಾನ ರೂಪಿಸಿದಾತ. 

ರಾಸಾಯನಿಕಗಳ ತಯಾರಿಕನ ಮಗನಾಗಿದ್ದ ಬೇರ್ಜಿಯೂಸ್ ನೆನ್ರ್ಸ್ ಹಾಗೂ ಹೇಬರ್ ಮಾರ್ಗದರ್ಶನದಲ್ಲಿ ವ್ಯಾಸಂಗ ಮಾಡಿದನು. ಮೊದಲ 5 ವರ್ಷ ಉಪನ್ಯಾಸಕನಾಗಿ ಕೆಲಸ ಮಾಡಿದ ಬೇರ್ಜಿಯೂಸ್ , ಮೊದಲ ಹಾಗೂ ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ರಾಸಾಯನಿಕ ಕಾರ್ಖಾನೆಯ ನೌಕರನಾಗಿದ್ದನು. ಬೇರ್ಜಿಯೂಸ್ ಪೆಟ್ರೋಲಿಯಂ, ಕಲ್ಲಿದ್ದಲಿಗಿಂತಲೂ ಭಿನ್ನವಾಗಿದ್ದು ಅದಕ್ಕಿಂತಲೂ ಹೆಚ್ಚಿನ ಜಲಜನಕವನ್ನು ಹಾಗೂ ಕಡಿಮೆ ಸಾಂಬಂಧಿಕ ಅಣು ರಾಶಿಯನ್ನು (Relative molecular Mass) ಹೊಂದಿದೆಯೆಂದು ಅರಿತನು. ಪೆಟ್ರೋಲಿಯಂನ್ನು ಘಟಕಗಳಾಗಿ ಒಡೆಯುವ ಬೇರ್ಜಿಯೂಸ್ ವಿಧಾನವನ್ನು ಅಭಿವೃದ್ದಿಗೊಳಿಸಿದನು.  ಈ ವಿಧಾನದಲ್ಲಿ ಕಲ್ಲಿದ್ದಲು ಪುಡಿ ಹಾಗೂ ಪೆಟ್ರೋಲಿಯಂನ್ನು, ಜಲಜನಕ ಹಾಗೂ ವೇಗವರ್ಧಕದೊಂದಿಗೆ (Catalyst)  ಒತ್ತಡದಲ್ಲಿ ಸುಡಲಾಗುತ್ತದೆ. ಆಗ ಜಲಜನಕ ಬಳಕೆಯಾಗಿ ಭಟ್ಟಿ ಇಳಿಸಿದಾಗ ಪೆಟ್ರೋಲ್ ದೊರೆಯುತ್ತದೆ. ಎರಡನೇ ಜಾಗತಿಕ ಯುದ್ದದಲ್ಲಿ ಜರ್ಮನಿ ಈ ವಿಧಾನವನ್ನು ಅಳವಡಿಸಿಕೊಂಡಿತು. ಬೇರ್ಜಿಯೂಸ್ ಕೈಗಾರಿಕಾ ಮದ್ಯದಲ್ಲಿ ಫಿನಾಲ್  ಹಾಗೂ  ಈಥೇನ್ 1,2 ನ್ನು ಸಂಶ್ಲೇಷಿಸುವ (Synthesis) ವಿಧಾನಗಳನ್ನು ಅಭಿವೃದ್ದಿಗೊಳಿಸಿದನು.  ಬೇರ್ಜಿಯೂಸ್ 1931ರಲ್ಲಿ ಕಾರ್ಲ್ ಬಾಷ್‍ನೊಂದಿಗೆ  ನೊಬೆಲ್ ಪ್ರಶಸ್ತಿ ಪಡೆದನು. ಬ್ಯುಟೆನಾಂಟ್, ಅಡಾಲ್ಫ್ ಫ್ರೆಡರಿಕ್ ಜೊಹಾನ್ನ್ (1903-1995)- 1939

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 6/8/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate