অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಯುರೆ, ಹೆರಾಲ್ಡ್ ಕ್ಲೇಟನ್ (1893-1981) 1934

ಯುರೆ, ಹೆರಾಲ್ಡ್ ಕ್ಲೇಟನ್ (1893-1981) 1934

ಯುರೆ, ಹೆರಾಲ್ಡ್  ಕ್ಲೇಟನ್ (1893-1981) ೧೯೩೪

ಅಸಂಸಂ-ಭೌತ ರಸಾಯನಶಾಸ್ತ್ರ- ಸಮಸ್ಥಾನಿಗಳನ್ನು (Isotopes) ಪ್ರತ್ಯೇಕಿಸುವ ವಿಧಾನ ರೂಪಿಸಿದಾತ.

ಯುರೆ, ಮೊಂಟಾನದಿಂದ  ಪ್ರಾಣಿಶಾಸ್ತ್ರದಲ್ಲಿ ಪದವಿಗಳಿಸಿದನಾದರೂ ಅಲ್ಪಕಾಲದಲ್ಲಿ ರಾಸಾಯನಿಕ ಕಾರ್ಖಾನೆಗಳಲ್ಲಿ ಕೆಲಸ ಮಾಡತೊಡಗಿದನು, ನಂತರ ವಿಶ್ವವಿದ್ಯಾಲಯ ಸೇರಿ, ಇಲ್ಲಿಯೂ ಇದನ್ನೇ ಮುಂದುವರೆಸಿದನು.  ಒಂದು ವರ್ಷ ಬೊಹ್ರ್ ಜೊತೆಗಿದ್ದ ಯುರೆ, ಹಲವಾರು ವಿಶ್ವವಿದ್ಯಾಲಯಗಳಲ್ಲಿದ್ದನು. 1932ರಲ್ಲಿ ಜಲಜನಕದ, ಭಾರವಾದ ಸಮಸ್ಥಾನಿ ಡ್ಯುಟೇರಿಯಂ  ಪ್ರತ್ಯೇಕಿಸಿದ ಯುರೆ, ಭಾರ ಜಲವನ್ನು ಭೂರಿ ಪ್ರಮಾಣದಲ್ಲಿ ಪಡೆಯುವ ವಿಧಾನ ರೂಪಿಸಿದನು.  ಯುರೆ, ಧಾತುಗಳ ಸಮಸ್ಥಾನಿಗಳನ್ನು ಬೇರ್ಪಡಿಸುವಲ್ಲಿ ಪರಿಣಿತಿ ಹೊಂದಿದನು. ಎರಡನೇ ಜಾಗತಿಕ ಯುದ್ದ ಸಮಯದಲ್ಲಿ ಪರಮಾಣು ಅಸ್ತ್ರ ತಯಾರಿಕೆಗೆ ಯುರೇನಿಯಂ ಸಮಸ್ಥಾನಿಗಳನ್ನು ಬೇರ್ಪಡಿಸುವುದು ಬಹು ಮುಖ್ಯ  ಹಂತ.  ಈ ಕಾರ್ಯದಲ್ಲಿ ಯುರೆ ಪ್ರಮುಖ ಪಾತ್ರ ವಹಿಸಿದ್ದನು. ಜಲಜನಕದ ಬೈಜಿಕಾಸ್ತ್ರ (Nuclear Weapon) ತಯಾರಿಕೆಗೆ ಬೇಕಾದ ಟ್ರೈಷಿಯಂ ಪಡೆಯಲು ಸಹ ಯುರೆ ಪರಿಣಿತಿ ನೆರವಾಯಿತು.  ಇದೇ ಆಧಾರದ ಮೇಲೆ ಯುರೆ,ಸಾಗರಗಳ ಹಿಂದಿದ್ದ ತಾಪಮಾನ ನಿರ್ಧರಿಸಿ, ಜೀವ ಉಗಮ ಹಾಗೂ ಭೂ ಚರಿತ್ರೆಯ ಬಗೆಗೆ ಹಲವಾರು ಹೊಸ ವಿಷಯಗಳತ್ತ ಗಮನ ಸೆಳೆದನು.  ತಂಪಿನ ಸ್ಥಿತಿಯಲ್ಲಿ ಲೋಹ ಕಣಗಳು ಕೂಡಿ,ಭೂಮಿ ರೂಪು ತಳೆಯಿತೆಂದು ನಂಬಿದ್ದ ಯುರೆ, ಆದಿಯಲ್ಲಿ ಭೂಮಿಯಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮುಖವಾಗಿದ್ದಿತೆಂದು ಹೇಳಿದನು.  ಅದೆಷ್ಟೋ ಕಾಲದ ನಂತರ ಚಂದ್ರ ಸ್ವತಂತ್ರವಾಗಿ ರೂಪುಗೊಂಡಿತೆಂದು ಸಹ ವಾದಿಸಿದನು.  ಮುಂದುವರೆದ ಅಧ್ಯಯನಗಳು ಯುರೆಯ ದೃಷ್ಟಿಗೆ  ಬೆಂಬಲ ನೀಡಿದವು.  ಯುರೆಯ ಪ್ರಯೋಗಾಲಯದಲ್ಲಿ ಮಿಲ್ಲರ್ ನಡೆಸಿದ ಪ್ರಯೋಗಗಳು ಸಹ ಇದಕ್ಕೆ ಸಮರ್ಥನೆಯನ್ನೊದಗಿಸಿದವು.  ಯುರೆ 1934ರ ನೊಬೆಲ್ ಪ್ರಶಸ್ತಿ ಪಡೆದನು.  ಸಮಸ್ಥಾನಿ ಬಳಸಿ ರಾಸಾಯನಿಕಗಳನ್ನು ಗುರುತಿಸಲು ಯುರೆ ಜಾರಿಗೆ ತಂದ ವಿಧಾನ, ಭೌತಶಾಸ್ತ್ರ,ಜೀವಶಾಸ್ತ್ರ ವೈದ್ಯಕೀಯ ರಂಗಗಳ ಸಂಶೋಧನೆಗೆ ಹೊಸ ಸಾಧ್ಯತೆಗಳನ್ನು ತಂದಿತ್ತಿತು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 5/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate