অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರುಟ್ಸಿಚ್ಕಾ, ಲಿಯೋಪೋಲ್ಟ್

ರುಟ್ಸಿಚ್ಕಾ, ಲಿಯೋಪೋಲ್ಟ್

ರುಟ್ಸಿಚ್ಕಾ, ಲಿಯೋಪೋಲ್ಟ್ (1887-1976) ೧೯೩೯

ಕ್ರೊವೇಷಿಯಾ-ಸ್ವಿಟ್ಸರ್ಲ್ಯಾಂಡ್- ರಸಾಯನಶಾಸ್ತ್ರ-

ರುಟ್ಸಿಚ್ಕಾ, ಆಸ್ಟ್ರೀಯಾ ಹಂಗರಿಯ ಭಾಗವಾಗಿದ್ದ ಕ್ರೊವೇಷಿಯಾದಲ್ಲಿ ಬೆಳೆದನು.  ಜರ್ಮನಿ, ಸ್ವಿಟ್ಸರ್ಲ್ಯಾಂಡ್ ಗಳಲ್ಲಿ ಶಿಕ್ಷಣ ಪಡೆದು, ಝೂರಿಕ್‍ನಲ್ಲಿ ಪ್ರಾಧ್ಯಾಪಕನಾದನು. 1916ರಲ್ಲಿ ಸುಗಂಧ ದ್ರವ್ಯಗಳನ್ನು ಕುರಿತು ಅಧ್ಯಯನಕ್ಕೆ ತೊಡಗಿದನು.  ಹಿಮಾಲಯದ ಕಸ್ತೂರಿ ಮೃಗ ಹಾಗೂ ಪುನಗಿನ ಬೆಕ್ಕು ಭಾರಿ ಬೆಲೆಯ ಸುಗಂಧ ದ್ರವ್ಯಗಳ ಆಕರಗಳಾಗಿದ್ದವು.  ಈ ಸುಗಂಧ ದ್ರವ್ಯಗಳು ಇಂಗಾಲದ ಬಹು ದೊಡ್ಡ ಉಂಗುರ ರಚನೆಗಳಾದ ಕಿಟೋನ್ ರಾಸಾಯನಿಕಗಳು.  ಇಂತಹ ದೊಡ್ಡ ರಾಸಾಯನಿಕ ಉಂಗುರಗಳು ಅಸ್ತಿತ್ವದಲ್ಲಿರಲಾರವೆಂದೇ ಆ ಮೊದಲು ಭಾವಿಸಲಾಗಿದ್ದಿತು. ರುಟ್ಸಿಚ್ಕಾ ಇವು ಸ್ಥಿರವಾಗಿರುವುದೆಂದು ತೋರಿಸಿದನಲ್ಲದೆ ಕೃತಕ ಉತ್ಪಾದನೆಯ ವಿಧಾನಗಳನ್ನು ಬಳಕೆಗೆ ತಂದನು.  ರುಟ್ಸಿಚ್ಕಾ, ಗಂಡು ಜೋದನಿಕೆಗಳು(Hormones) ಅದರಲ್ಲಿ ವಿಶೇಷವಾಗಿ ಪುರುಷ ಲೈಂಗಿಕ ಜೋದನಿÂಕೆಗಳ ಬಗೆಗೆ ಅಧ್ಯಯನ ನಡೆಸಿ ಟೆಸ್ಟಸ್ಟೆರೋನ್‍ನ್ನು ಸಂಶ್ಲೇಷಿಸಿದನು. ಇದರಿಂದ ಶ್ರೀಮಂತನಾದ್ ರುಟ್ಸಿಚ್ಕಾ ಬೆಲೆ ಬಾಳುವ ಡಚ್ ಚಿತ್ರಗಳನ್ನು ಖರೀದಿಸಿ, ಸಂಗ್ರಹಿಸಿದನು.  ರುಟ್ಸಿಚ್ಕಾ , ಟರ್ಪೆನೆಸ್ ಬಗೆಗೆ ಪ್ರಯೋಗಗಳನ್ನು ನಡೆಸಿ ,ಇವು ಐದು ಇಂಗಾಲದ ಅಣುಗಳ ಜೋಡಣೆಯೆಂzತೋರಿಸಿದನು. 1939ರಲ್ಲಿ ರುಟ್ಸಿಚ್ಕಾ ,ಅಡಾಲ್ಫ್ಫೆ್ರಡರಿಕ್ ಜೊಹಾನ್ ಹಾಗೂ ಬೂಟನ್ಯಾಂಟ್ ನೊಬೆಲ್ ಪ್ರಶಸ್ತಿ ಪಡೆದರು. ಆದರೆ ಬೂಟನ್ಯಾಂಟ್ ಈ ಪ್ರಶಸ್ತಿಯನ್ನು ಪಡೆಯಲು ಜರ್ಮನ್ ಸರ್ಕಾರ ಅನುಮತಿ ನೀಡಲಿಲ್ಲ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 5/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate