অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಲಾಂಗ್’ಮೂಯಿರ್, ಇರ್ವಿಂಗ್

ಲಾಂಗ್’ಮೂಯಿರ್, ಇರ್ವಿಂಗ್

ಲಾಂಗ್’ಮೂಯಿರ್, ಇರ್ವಿಂಗ್ (1881-1957) ೧೯೩೨

ಅಸಂಸಂ-ರಾಸಾಯನಿಕ ಭೌತಶಾಸ್ತ್ರ-ಹಲವಾರು ಸಾಧನಗಳ ಉಪಜ್ಞೆಕಾರ.

ಲಾಂಗ್ಮೂಯಿರ್, ನಾಲ್ಕು ಜನ ಮಕ್ಕಳ ಕುಟುಂಬದಲ್ಲಿ ಮೂರನೆಯನು.  ಹದಿನೇಳು ವರ್ಷದವನಿರುವಾಗ ತಂದೆಯನ್ನು ಕಳೆದುಕೊಂಡು  ಜೀವವಿಮಾ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡಿ, ಆರ್ಥಿಕವಾಗಿ ಸುಸ್ಥಿತಿವಂತನಾದನು.  ಕೊಲಂಬಿಯಾದ ಸ್ಕೂಲ್ ಆಫ್ ಸೈನ್ಸ್ ಸೇರಿದನು. ನಂತರ ಗಟ್ಟಿಂಜೆನ್‍ನಲ್ಲಿ ನೆರ್ಸ್ಟ್  ಜೊತೆ ಕೆಲಸ ಮಾಡಿದನು.  ಇಲ್ಲಿ ಬಿಸಿಗೊಳಿಸಿದ ಪ್ಲಾಟಿನಂ ಮೇಲೆ ಅನಿಲಗಳನ್ನು ಹಾಯಿಸಿದಾಗ ಅವು ಹೇಗೆ ವಿಯೋಜನೆಗೊಳ್ಳುವುವೆಂದು (Decompose)ಅರಿಯುವ ಹೊಣೆ ಈತನ ಮೇಲೆ ಬಿದ್ದಿತು. 1901ರಲ್ಲಿ, ಜನರಲ್ ಎಲೆಕ್ಟ್ರಿಕಲ್ ಕಂಪನಿಯ,ಷೆನೆಕ್ಟಾಡಿ ಕೇಂದ್ರ ಸೇರಿದ ಲಾಂಗ್ಮೂಯಿರ್, ಅಲ್ಲಿ ನಲವತ್ತೊಂದು ವರ್ಷಗಳಿಗೂ ಅಧಿಕ ಕಾಲ ದುಡಿದನು, ಉರಿಯುವ ದೀಪಗಳ ಬುರುಡೆಗಳಲ್ಲಿ ಆರ್ಗಾನ್‍ನಂತಹ ಜಡ ಅನಿಲ ತುಂಬಿ,ಟಂಗ್‍ಸ್ಟನ್ ತಂತುಗಳು ಬಹುದೀರ್ಘಕಾಲ ಬಾಳಿಕೆ ಬರುವಂತೆ ಮಾಡಿದನು. ಇದಕ್ಕೂ ಮೊದಲು ಟಂಗ್‍ಸ್ಟನ್ ಬಲ್ಬ್‍ನಲ್ಲಿ ನಿರ್ವಾತದಲ್ಲಿರುತ್ತಿದ್ದಿತು. ಟಂಗ್‍ಸ್ಟನ್‍ನ ಪರಮಾಣುಗಳು ಬಿಳಿಗಾವಿನಲ್ಲಿ ಆವಿಯಾಗಿ ತಂತು ಪುಡಿಯಾಗುತ್ತಿತ್ತು. ಇದರ ಮುಂದುವರೆದ ಸಂಶೋಧನೆಯಿಂದಾಗಿ ಅಣ್ವಯಿಕ ಜಲಜನಕ ಪತ್ತೆಯಾಯಿತು.  ಇದನ್ನು ಉರಿಸಿ, 6000 ಡಿಗ್ರಿ ಸೆಂಟಿಗ್ರೇಡ್‍ಗೂ ಅಧಿಕ ತಾಪಮಾನ ಗಳಿಸಿ, ಬೆಸುಗೆ ಬತ್ತಿಯಾಗಿ ಉಪಯೋಗಿಸಿದನು. ಟಂಗ್‍ಸ್ಟನ್  ವಿದ್ಯುಧೃವಗಳ (Electrodes) ಮಧ್ಯೆ ಪ್ರಬಲವಾದ ವೈದ್ಯುಚ್ಛಾಪವನ್ನು (Electric Arc) ಪಡೆದು,ಸಾಮಾನ್ಯ ಒತ್ತಡದಲ್ಲಿರುವ ಜಲಜನಕವನ್ನು ಅವುಗಳ ಮೂಲಕ ಕಳಿಸಿದಾಗ, ಅಂತಹ ಅನಿಲದಲ್ಲಿ 10% ಗಿಂತಲೂ ಅಧಿಕ ಪರಮಾಣವಿಕ ಜಲಜನಕ ಇರುತ್ತದೆ.  ಇಂತಹ ಕ್ರಿಯೆಯಲ್ಲಿ ಅಧಿಕ ಶಾಖ ವ್ಯಯವಾಗುತ್ತದೆ. ಇಂತಹ ಜಲಜನಕ ಲೋಹದ ಸಂಪರ್ಕಕ್ಕೆ ಬಂದಾಗ, ಅದರ ಮೈ ಮೇಲಿನ ಪರಮಾಣುಗಳೊಂದಿ ಸೇರಿ ಅಣುರೂಪ ತಾಳುತ್ತದೆ. ಹಾಗೂ ಶಾಖ ಹೊರ ಹಾಕುತ್ತದೆ. ಇದರಿಂದ ಪ್ಲಾಟಿನಂ, ಟಂಗ್‍ಸ್ಟನ್, ಟ್ಯಾಂಟಲಮ್‍ನಂತಹ ಲೋಹಗಳನ್ನು ದ್ರವೀಕರಿಸಿ ಬೆಸೆಯಬಹುದು. 1919ರಿಂದ 1921 ರವರೆಗೆ ಲ್ಯಾಂಗ್ ಮೂಯೂರ್ , ಅಣುಗಳ ರಚನೆ, ಅವುಗಳು ಸಂಯೋಜಿತವಾಗುವ ರೀತಿಯ ಬಗೆಗೆ ಲೆವಿಸ್‍ನೊಂದಿಗೆ ಕಾರ್ಯ ನಿರತನಾದನು.  ಇದರ ¥sóÀಲವಾಗಿ ಲೆವಿಸ್ ಲಾಂಗ್‍ಮ್ಯೂರ್‍ನ ಸಂಯೋಗ ಸಾಮಥ್ರ್ಯದ ಅಷ್ಟಕ ಸಿದ್ಧಾಂತ ಬೆಳಕಿಗೆ ಬಂದಿತು,. ಲೋಹ ಫಲಕಗಳ ಮೇಲ್ಮೆ ಮೇಲೆ ಅನಿಲಗಳನ್ನು ಹರಿಯಿಸಿ ಲಾಂಗ್ಮೂಯಿರ್  ಘನ ಲೋಹಗಳ  ಮೇಲಿನ ಅನಿಲಗಳ ಅಧಿಶೋಷಣೆ (Odsorption) ಸಿದ್ಧಾಂತ  ನೀಡಿದನು. 1932ರಲ್ಲಿ ಲಾಂಗ್ಮೂಯಿರ್ ನೊಬೆಲ್ ಪ್ರಶಸ್ತಿ ಗೌರವಿತನಾದನು. ಶೈಕ್ಷಣಿಕ ವಲಯದಲ್ಲಿರದೆ, ಸಂಪೂರ್ಣವಾಗಿ ಕೈಗಾರಿಕಾ ರಂಗದಲ್ಲಿದ್ದು, ನೊಬೆಲ್ ಪ್ರಶಸ್ತಿ ಗಳಿಸಿದ ಮೊದಲಿಗ ಲಾಂಗ್ಮೂಯಿರ್ , ಅನಿಲಗಳ ಪ್ಲಾಸ್ಮಾ ಸ್ಥಿತಿಯ ಬಗೆಗೂ ಲಾಂಗ್ಮೂಯಿರ್ ಅಧ್ಯಯನ ನಡೆಸಿದನು.  ಪವನಶಾಸ್ತ್ರದ ಬಗೆಗೆ ಆಸಕ್ತನಾಗಿದ್ದ ಲಾಂಗ್ಮೂಯಿರ್ ಘನ ಇಂಗಾಲದ ಡೈ ಆಕ್ಸೈಡ್ ಮೂಲಕ ಮೋಡ ಬಿತ್ತನೆ ಮಾಡಿದ ಮೊದಲಿಗ.  ಸಂಗೀತ, ಸಂವಾದ, ಸ್ನೇಹಗಳಿಗೂ ಲಾಂಗ್ಮೂಯಿರ್ ಖ್ಯಾತನಾಗಿದ್ದನು.  ಆಲಾಸ್ಕಾದಲ್ಲಿರುವ ಪರ್ವತವೊಂದನ್ನು ಮೌಂಟ್ ಲಾಂಗ್ಮೂಯಿರ್ ಎಂದು ಹೆಸರಿಸಿ ಅವನ ನೆನಪನ್ನು ಸ್ಥಿರವಾಗಿರಿಸಲಾಗಿದೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 4/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate