অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಾಲ್ಟರ್ , ನಾರ್ಮನ್ ಹೊವರ್ಥ್

ವಾಲ್ಟರ್ , ನಾರ್ಮನ್ ಹೊವರ್ಥ್

ವಾಲ್ಟರ್ , ನಾರ್ಮನ್ ಹೊವರ್ಥ್ (1883--) ೧೯೩೭

ಇಂಗ್ಲೆಂಡ್-ರಸಾಯನಶಾಸ್ತ್ರ- ಕಾರ್ಬೋಹೈಡ್ರೇಟ್ ಹಾಗೂ ವಿಟಮಿನ್‍ಗಳ ಮೇಲೆ ವಿಸ್ತೃತ ಸಂಶೋಧನೆ ನಡೆಸಿದಾತ.

19 ಮಾರ್ಚ್ 1883ರಲ್ಲಿ ಲಂಕಾಷೈರ್‍ನಲ್ಲಿ ವಾಲ್ಟರ್‍ನ ಜನನವಾಯಿತು.  ಪ್ರೌಢಶಾಲೆಯ ಶಿಕ್ಷಣ ಮುಗಿಸಿದ ನಂತರ ತಂದೆಯ ಲಿನೋಲಿಯಂ ಬಟ್ಟೆ ವಿನ್ಯಾಸ ಹಾಗೂ ತಯಾರಿಕೆಯಲ್ಲಿ ನೆರವಾಗಲು ಶಾಲೆಯನ್ನು ಹದಿನಾಲ್ಕನೇ ವರ್ಷದಲ್ಲಿ ತೊರೆದನು. ಇಲ್ಲಿ ಬಣ್ಣ, ರಾಸಾಯನಿಕಗಳೊಂದಿಗಿನ ಓಡನಾಟ ವಾಲ್ಟರ್’ನನ್ನು ರಸಾಯನಶಾಸ್ತ್ರದತ್ತ  ಸೆಳೆಯಿತು.  ಖಾಸಗಿಯಾಗಿ ಮನೆಪಾಠ ಪಡೆದು, ಪ್ರವೇಶ ಪರೀಕ್ಷೆ ಎದುರಿಸಿ, 1903ರಲ್ಲಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಪದವಿಗೆ ಸೇರಿದನು. 1906ರಲ್ಲಿ ಪದವಿ ಪಡೆದು, ವಿದ್ಯಾರ್ಥಿವೇತನ ಗಳಿಸಿ, ಮ್ಯಾಂಚೆಸ್ಟರ್ ಹಿಂದುರುಗಿದನು.  ಲಂಡನ್‍ನ ಇಂಪೀರಿಯಲ್ ಕಾಲೇಜ್ ಸ್ಕಾಟ್ಲೆಂಡಿನ ಸೇಂಟ್ ಆ್ಯಂಡ್ರೂಸ್ ಕಾಲೇಜ್ ಹಾಗೂ ಡರ್’ಹ್ಯಾಂ ವಿಶ್ವವಿದ್ಯಾಲಯಗಳಲ್ಲಿ ವಿವಿಧ ಸ್ತರಗಳಲ್ಲಿ ಬೋಧಕ ವೃತ್ತಿಯಲ್ಲಿದ್ದನು.  ಟರ್ಪೇನ್‍ಗಳ ಘಟಕಗಳ ಅಧ್ಯಯನ ಕೈಗೊಂಡ ವಾಲ್ಟರ್ 1912ರಲ್ಲಿ ಸಿಲ್ವೆಸ್ಟ್ರೇನ್‍ನ್ನು ಸಂಶ್ಲೇಷಿಸಿದನು.  ಸಕ್ಕರೆಯ ಘಟಕಗಳ ವಿಸ್ತೃತ ಅಧ್ಯಯನ ವಾಲ್ಟರ್‍ನಿಂದ ಜರುಗಿತು. ಮೊದಲ ಜಾಗತಿಕ ಯುದ್ದದ ಸಮಯದಲ್ಲಿ ಔಷಧಿ ಹಾಗೂ ಸಂಬಂಧಿ ರಾಸಾಯನಿಕಗಳ ತಯಾರಿಕೆಯಲ್ಲಿ ನಿರತನಾಗಿದ್ದನು. 1928ರಲ್ಲಿ ಮಾಲ್ಟೇಸ್, ಸೆಲ್ಯುಲೇಸ್, ಲ್ಯಾಕ್ಟೋಸ್,ಬೆಂಟಿ ಬಯೋಸ್ ಹಾಗೂ ಸಾಮಾನ್ಯ ಗ್ಲುಕೋಸ್‍ಗಳ ಗ್ಲುಕೋಸೈಡ್ ಉಂಗುರ ಸಂರಚನೆಯ ತನಿಖೆ ನಡೆಸಿದನು.  ಸಕ್ಕರೆಯ ಲ್ಯಾಕ್ಟೋನ್‍ಗಳನ್ನು ಅಭ್ಯಸಿಸಿ, ಅವುಗಳ ಸಂರಚನೆ ಹಾಗೂ ದೃಗ್ ಆವರ್ತಕ ಗುಣಗಳ ಸಂಬಂಧವನ್ನು ವಿವರಿಸಿದನು.  ಮಿಥಿಲೇಟೆಡ್ ಪಾಲಿಸ್ಯಾಖರೈಡ್‍ಗಳ ಸರಣಿ ಉದ್ದ ನಿರ್ಧರಿಸುವ ವಿಧಾನ ರೂಪಿಸಿದನು.  ಇದರಿಂದ ಗಂಜಿ ಸೆಲ್ಯುಲೋಸ್,ಗ್ಲೈಕೋಜೆನ್  ಹಾಗೂ ಇನ್ನಿತರ ಅಣುಗಳ ಸಂರಚನೆ ಸ್ಪಷ್ಟವಾಯಿತು.  ಅಸ್ಕೊರ್ಬಿಕ್ ಆಮ್ಲವನ್ನು ವಾಲ್ಟರ್ ಸಂಶ್ಲೇಷಿಸಿದನು.  ಈತನ ವಿಧಾನದಿಂದ ಈ ಆಮ್ಲವನ್ನು ಭೂರಿ ಪ್ರಮಾಣದಲ್ಲಿ(Mass Scale) ಅಗ್ಗವಾಗಿ ಉತ್ಪಾದಿಸುವಂತಾಯಿತು.  ಕಾರ್ಬೋಹೈಡ್ರೇಡ್ ಹಾಗೂ ವಿಟಮಿನ್‍ಗಳ ಮೇಲಿನ ವಿಸ್ತೃತ ಸಂಶೋಧನೆಗಳಿಗಾಗಿ ವಾಲ್ಟರ್ 1937ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 5/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate