অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಟಿಸೆಲಿಯಸ್, ಅರ್ನೆ (ವಿಲ್‍ಹೆಲ್ಮ್ ಕಾರಿನ್)

ಟಿಸೆಲಿಯಸ್, ಅರ್ನೆ (ವಿಲ್‍ಹೆಲ್ಮ್ ಕಾರಿನ್)

ಟಿಸೆಲಿಯಸ್, ಅರ್ನೆ (ವಿಲ್‍ಹೆಲ್ಮ್ ಕಾರಿನ್) (1902-1971) ೧೯೪೮

ಸ್ವೀಡನ್-ಭೌತ ಜೀವ ರಸಾಯನಶಾಸ್ತ್ರ-ಪ್ರೊಟಿನ್‍ಗಳನ್ನು ಪ್ರತ್ಯೇಕಗೊಳಿಸಲು ವಿದ್ಯುತ್ಕಣ ಸಂಚಲನೆ (Electrophoresis) ವಿಧಾನ ಅಭಿವೃದ್ಧಿಗೊಳಿಸಿದಾತ.

ಟೆಸೆಲಿಯಸ್  ಉಪ್ಸಾಲದಲ್ಲಿ ಸ್ವೆಡ್‍ಬರ್ಗ್‍ನ ವಿದ್ಯಾರ್ಥಿಯಾಗಿ ಸಹಾಯಕನಾದನು. ಪ್ರೋಟಿನ್;ಗಳು ವಿದ್ಯುದಾವೇಶ (Electrical  Charge ) ಹೊಂದಿರುವುದರಿಂದ ಹಾಗೂ ಕಲಿಲ(Colloid) ರೂಪಿಗಳಾಗಿರುವುದರಿಂದ  ದ್ರಾವಣದಲ್ಲಿರುವಾಗ ವಿದ್ಯುತ್ ಕ್ಷೇತ್ರದ ಪ್ರಭಾವದಲ್ಲಿ ಇವು ಒಂದು ಕಡೆಗೆ ಸಾಗುವಂತೆ ಮಾಡಬಹುದು. ಪ್ರೋಟಿನ್ ಕಣಗಳು ಬೇರ್ಪಡುವ ಸಮಯ ವೈದ್ಯುತ್ ಪ್ರಭಾವ, ದ್ರಾವಕದ ವಾಹಕತೆ ಕಣಗಳ ವೈದ್ಯುತಾವಿಷ್ಟವನ್ನು ಅವಲಂಬಿಸಿರುತ್ತದೆ. ವೈದ್ಯುತ್ ಕ್ಷೇತ್ರದಲ್ಲಿ ಈ ಕಣಗಳು ಸಾಗುವ ವೇಗ ಒಂದೊಂದಕ್ಕೆ ಒಂದೊಂದು ಬಗೆಯದಾಗಿರುತ್ತದೆ. ಈ ತತ್ತ್ವವೇ ಪ್ರೋಟಿನ್‍ಗಳನ್ನು ಪ್ರತ್ಯೇಕಿಸಲು ನೆರವಾಗುತ್ತದೆ. ಈ ತಂತ್ರದ ಸುಧಾರಿತ ಮಾರ್ಗ ಬಳಸಿ ರಕ್ತದಲ್ಲಿನ 30ಕ್ಕೂ ಹೆಚ್ಚು ಪ್ರೋಟಿನ್’ಗಳನ್ನು ಬೇರ್ಪಡಿಸಿ ಗುರುತಿಸಲಾಗಿದೆ. ಡಿಎನ್‍ಎ, ಆರ್‍ಎನ್‍ಎಗಳ ನ್ಯೂಕ್ಲಿಯೇಡೈಡ್ ಸರಣಿ ನಿರ್ಧಾರದಲ್ಲೂ ಈ ತಂತ್ರ ಬಳಕೆಂiÀiಲ್ಲಿದೆ. ತಳಿ ತಂತ್ರಜ್ಞಾನದಲ್ಲಿ ವಂಶವಾಹಕವನ್ನು (Gene) ಜೀವಿಯಿಂದ ಬೇರ್ಪಡಿಸಿ ಬ್ಯಾಕ್ಟೀರಿಯಾಗಳ ಕೋಶಗಳೊಳಗೆ ಸೇರಿಸಿ ಮುಂದೆ ಇನ್ನೊಂದು ಜೀವಿಗೆ ಅಳವಡಿಸುವುದು ಈ ತಂತ್ರದಿಂದ ಸಾಧ್ಯವಾಗಿದೆ. ವ್ಯಕ್ತಿಗಳ ಡಿಎನ್‍ಎ ಬೆರಳಚ್ಚು ತಂತ್ರದಲ್ಲಿ ಇದರ ಬಳಕೆ ವ್ಯಾಪಕ. ಈ ತತ್ತ್ವ ಬಳಸಿ ಟೆಸೆಲಿಯಸ್, ಪ್ರೋಟಿನ್’ಗಳನ್ನು ಪ್ರತ್ಯೇಕಿಸಿದನು. ಟೆಸೆಲಿಯಸ್ ವಿಧಾನ ಈಗ ಜಗತ್ತಿನಾದ್ಯಂತ ಬಳಕೆಯಲ್ಲಿದೆ,. ಟೆಸೆಲಿಯಸ್, ರಕ್ತ ರಸಕದ (Serrum)ಪ್ರೋಟಿನ್‍ಗಳನ್ನು ಅಲ್ಬ್ಯುಮಿನ್, ಆಲ್ಫಾ, ಬೀಟಾ, ಗಾಮಾ-ಗ್ಲೋಬುಲಿನ್  ಹೆಸರಿನ ನಾಲ್ಕು ಸಾಂಬಂಧಿಕ ಗುಂಪುಗಳಾಗಿ ವರ್ಗೀಕರಿಸಬಹುದೆಂದು ತೋರಿಸಿದನು.  ಇದಕ್ಕಾಗಿ ಟೆಸೆಲಿಯಸ್1948ರ ನೊಬೆಲ್ ಪ್ರಶಸ್ತಿ ಪಡೆದನು. ಟೆಸಲಿಯಸ್‍ನ ವಿದ್ಯುತ್ಕಣ ಸಂಚಲನೆ ವಿಧಾನದಿಂದ ಸಂಕೀರ್ಣ ಪದಾರ್ಥಗಳಲ್ಲಿರುವ ಅತ್ಯಲ್ಪ ಪ್ರಮಾಣದ ಅಶುದ್ದತೆಗಳನ್ನು ಪ್ರತ್ಯೇಕಿಸಬಹುದು, ಸಹಜ ಹಾಗೂ ರೋಗಗ್ರಸ್ತ ರಸಕಗಳ ವ್ಯತ್ಯಾಸ ಗುರುತಿಸಬಹುದು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 4/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate