ಅಳತೆ
ಉದ್ದೇಶ:
ಇದನ್ನು ಕೋನಗಳು, ದೂರ ಮತ್ತು ಉದ್ದವನ್ನು ಅಳತೆ ಮಾಡುವುದು.
ಚಟುವಟಿಕೆ 3 (ಅಳತೆ):ಉದ್ದೇಶ:ಇದನ್ನು ಕೋನಗಳು, ದೂರ ಮತ್ತು ಉದ್ದವನ್ನು ಅಳತೆ ಮಾಡುವುದು.
Process' Activity- 1.ggb' : ವಿಧಾನ
1. 'Activity_1.ggb'.ಅನ್ನು ತೆರೆಯಿರಿ.
2. ಕೋನಗಳ toolbarನಿಂದ ನಿಮಗೆ ಅಳತೆ ಮಾಡಲು ಅಗತ್ಯವಾದ ಸಾಧನಗಳನ್ನು ಆಯ್ಕೆ ಮಾಡಿ. ಈ ಸಾಧನಗಳನ್ನು ಈ ಕೆಳಗಿನ ಅಂಶಗಳನ್ನು ಅಳತೆ ಮಾಡಲು ಬಳಸಿ
- ರೇಖಾಖಂಡದ ಉದ್ದವನ್ನು ಅಳೆಯಲು ( ದೂರ ಮತ್ತು ಉದ್ದ)
- ಚೌಕದ ಕೋನವನ್ನು ಅಳೆಯಲು (ಕೋನ).
- ವೃತ್ತದ ಪರಿಧಿಯನ್ನು ಅಳೆಯಲು ( ದೂರ ಮತ್ತು ಉದ್ದ)
ಹಿಂಟ್ ಬಾಕ್ಸ್ :
- ನೀವು ಯಾವಾಗ graphics windowದ ಮೇಲೆ ವಸ್ತುವನ್ನು ಆಯ್ಕೆ ಮಾಡುವಿರೋ ಆಗ ಅದು highlight ಆಗುತ್ತದೆ.
- ನೀವು ಯಾವುದೇ ವಸ್ತುವಿನ ಮೇಲೆ right click ಮಾಡಿ ಮತ್ತು ಅದರ ಲಕ್ಷಣ ಗಳಾದ ಬಣ್ಣ ,ಹೆಸರು, ಬೆಲೆ ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. (ಈ ಕೆಳಗಿನ ಚಿತ್ರವನ್ನು ನೋಡಿ ).
- ಆಕೃತಿಗಳ ಒಳಗಿನ ಕೋನಗಳನ್ನು ಅಳೆಯಲು, ಅದರ ಮೂರು ಕೋನಗಳನ್ನು clock-wise ಆಯ್ಕೆ ಮಾಡಬೇಕು. ಇದರಿಂದ ಅದರ ಮಧ್ಯದ ಕೋನವನ್ನು ಅಳತೆ ಮಾಡಲು ಸಾಧ್ಯ
ಇದರಿಂದ ತ್ರಿಭುಜದ ಮೂರು ಕೋನಗಳ ಅಳತೆಯನ್ನು ಮಾಡಿ, ಮೂರು ಕೋನಗಳ ಮೊತ್ತ 180 ಡಿಗ್ರಿ ಎಂದು ಸಾಧಿಸಲು ಸಾಧ್ಯ.
Process: ವಿಧಾನಗಳು:
- A,B,C ಎನ್ನುವ ಮೂರು ಬಿಂದುಗಳನ್ನು ರಚಿಸಿಕೊಳ್ಳಿ (New Point tool)
- AB, AC, BC ಯ ನಡುವೆ ರೇಖಾ ಖಂಡಗಳನ್ನು ರಚಿಸಿಕೊಳ್ಳಿ . (Segment between two points tool)
- Angle toolನ್ನು ಆಯ್ಕೆ ಮಾಡಿ ತ್ರಿಭುಜದ ಪ್ರತಿ ಆಂತರಿಕ ಕೋನಗಳನ್ನು ಅಳತೆ ಮಾಡಿ.
- ನಂತರ ತ್ರಿಭುಜದ ಮೂರು ಕೋನಗಳ ಮೊತ್ತ 1800ಎನ್ನುವುದನ್ನು ದೃಢೀಕರಿಸಿಕೊಳ್ಳಿ .
- ತ್ರಿಭುಜದ ಆಕಾರವನ್ನು ಬದಲಾಯಿಸಲು ಒಂದು ಶೃಂಗಬಿಂದುವನ್ನು ಆಯ್ಕೆ ಮಾಡಿ (A,B or C) ಮತ್ತು ಆ ಬಿಂದುವನ್ನು ಚಲಿಸಿ (Move tool) .
ಹಿಂಟ್ ಬಾಕ್ಸ್ :
file ಅನ್ನು 'Activity- 4.ggb'ಆಗಿ save ಮಾಡಲು ಮರೆಯಬೇಡಿ.
ಯಾವ objects , ಇದು free objects ಮತ್ತು ಯಾವುದು dependent objects ಎಂದು ಗುರುತಿಸಿ. ನೀವು free objectsಅನ್ನು ಮಾತ್ರ
Constructive ಕಾರ್ನರ್:
- ನೀವು ತರಗತಿಯಲ್ಲಿ ಪ್ರಮೇಯವನ್ನು ಸಾಧಿಸುವ ಪೂರ್ವದಲ್ಲಿ ಮಕ್ಕಳು ತಾವೇ ಸ್ವತಃ ಪ್ರಮೇಯಗಳನ್ನು , ಈ ಸಾಧನಗಳನ್ನು ಬಳಸಿ ಸಾಧಿಸುವಂತೆ ಪ್ರೋತ್ಸಾಹಿಸಿ.
- ಸರಳರೇಖೆಯಲ್ಲಿರುವ A,B,C ಮೂರು ಬಿಂದುಗಳನ್ನು ಒಮ್ಮೆಲೆ ಚಲಿಸಿದಾಗ ಏನಾಗುವುದೆಂದು ಗಮನಿಸಿ.
- ಕೇಳಗೆ ಸೂಚಿಸಿದ ರೀತಿಯಲ್ಲಿ tablesನ್ನು ರಚಿಸಲು ತಿಳಿಸಿ ಅದರ ಮೇಲೆ ಬೆಲೆಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಸೂಚಿಸಿ. ಇದು ಮಕ್ಕಳಿಗೆ ತಾವು ಏನನ್ನು ಗಮನಿಸಿದ್ದೇವೆ ಎಂದು ತಿಳಿಯಲು ಸಹಾಯಕ.
ಮೂಲ: ಕರ್ನಾಟಕ ಶಿಕ್ಷಣ
ಕೊನೆಯ ಮಾರ್ಪಾಟು : 9/7/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.