ವೃತ್ತಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಅರಿಯುವುದು
ಉದ್ದೇಶ :
ವೃತ್ತದ ವ್ಯಾಖ್ಯೆ ಮತ್ತು ವೃತ್ತಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಅರಿಯುವುದು
ವೃತ್ತ :
ಸಮತಲದಲ್ಲಿ ಕೇಂದ್ರದಿಂದ ಸಮಾನ ದೂರದಲ್ಲಿರುವ ಬಿಂದುಗಳ ಗಣಕ್ಕೆ ವೃತ್ತ ಎನ್ನುವರು. ಮಧ್ಯ ದಲ್ಲಿರುವ ಈ ಬಿಂದುವಿಗೆ ವೃತ್ತದ ಕೇಂದ್ರ ಎನ್ನುವರು ಮತ್ತು ಕೇಂದ್ರದಿಂದ ನಿರ್ದಿಷ್ಟ ದೂರಕ್ಕೆ ವೃತ್ತದ ತ್ರೀಜ್ಯ ಎನ್ನುವರು.
ವಿಧಾನ :
- circle with centre through point toolನ ಸಹಾಯದಿಂದ ವೃತ್ತವನ್ನು ರಚಿಸಬೇಕು.
- line Segment tool ಅನ್ನು ಬಳಸಿ ವೃತ್ತದ ಕೇಂದ್ರದಿಂದ ಪರಿಧಿಗೆ multiple line segments ಅನ್ನು ರಚಿಸಬೇಕು.
- line segments ನ ಬೆಲೆಯನ್ನು ಗಮನಿಸಿ.
ವೃತ್ತವು ತಾನು ಇರುವ ಸಮತಲವನ್ನು ಮೂರು ಭಾಗಗಳಾಗಿ ವಿಭಾಗಿಸುತ್ತದೆ. ಅವುಗಳೆಂದರೆ (i) ವೃತ್ತದ ಒಳಗಿದ ಕ್ಷೇತ್ರ (interior of the circle) (ii)ವೃತ್ತ ಮತ್ತು (iii) ವೃತ್ತದ ಹೊರಗಿನ ಭಾಗ ( exterior of the circle). ವೃತ್ತ ಮತ್ತು ಅದರ ಒಳಗಿನ ಕ್ಷೇತ್ರವನ್ನು ವೃತ್ತೀ ಯ ಕ್ಷೇತ್ರ (circular region) ಎನ್ನುವರು.
ವಿಧಾನ :
- circle with centre through point toolನ ಸಹಾಯದಿಂದ ವೃತ್ತವನ್ನು ರಚಿಸಬೇಕು.
- ವೃತ್ತವನ್ನು ಆಯ್ಕೆ ಮಾಡಿ, right click ಮತ್ತು object propertiesನ್ನು ಆಯ್ಕೆ ಮಾಡಿ.
- object propertiesನಲ್ಲಿರುವ colour tab ಅನ್ನು ಆಯ್ಕೆ ಮಾಡಿ, ಬೇಕಾದ ಬಣ್ಣವನ್ನು ಆಯ್ಕೆ ಮಾಡಿ.
- object properties windowದಲ್ಲಿರುವ style tabನ್ನು ಆಯ್ಕೆ ಮಾಡಿ ಮತ್ತು line thickness and filling valuesವನ್ನು ಬದಲಾಯಿಸಿ.
- ಇದು ವೃತ್ತದ ಮೇಲಿನ ವಿವರಿಸಿದ ಮೂರು ಭಾಗಗಳನ್ನು ವಿವರಿಸುತ್ತವೆ
ಜ್ಯಾ :
ವೃತ್ತದ ಪರಿಧಿಯಲ್ಲಿರುವ ಯಾವು ದೇ ಎರಡು ಬಿಂದುಗಳನ್ನು ಸೇರಿಸುವ ರೇಖಾಖಂಡಕ್ಕೆ ಜ್ಯಾ ಎನ್ನುವರು ಮತ್ತು ವೃತ್ತದ ಕೇಂದ್ರದಿಂದ ಹಾದು ಹೋಗುವ ಜ್ಯಾಕ್ಕೆ ವೃತ್ತದ ವ್ಯಾಸ ಎನ್ನುವರು. ವ್ಯಾಸವು ವೃತ್ತದ ಅತಿ ಉದ್ದವಾದ ಜ್ಯಾ ಆಗಿದೆ ಮತ್ತು ಒಂದು ವೃತ್ತದ ಎಲ್ಲಾ ವ್ಯಾಸಗಳು ಒಂದೇ ಅಳತೆಯನ್ನು ಹೊಂದಿರುತ್ತವೆ ಮತ್ತು ವ್ಯಾಸವು ತ್ರಿಜ್ಯದ ಎರಡರಷ್ಟಿರುತ್ತದೆ
ವಿಧಾನ :
- circle with centre through point tool ಅನ್ನು ಬಳಸಿ ವೃತ್ತವನ್ನು ರಚಿಸಿ.
- line segmentನ್ನು ಬಳಸಿ ಕೇಂದ್ರ ದಿಂದ (ವ್ಯಾಸ) ಹಾದು ಹೋಗದಂತೆ ಅನೇಕ ಜ್ಯಾವನ್ನು ರಚಿಸಿ.
- ವೃತ್ತಕ್ಕೆ ತ್ರೀಜ್ಯವನ್ನು ರಚಿಸಿ.
- ನಂತರ ಮೇಲೆ ಸೂಚಿಸಿದ ವೃತ್ತದ ಮೂರು ಭಾಗಗಳನ್ನು ವಿವರಿಸಿ
ಮೂಲ: ಕರ್ನಾಟಕ ಶಿಕ್ಷಣ
ಕೊನೆಯ ಮಾರ್ಪಾಟು : 5/1/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.