ನಾವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಗಣಿತದ ವಿಷಯಾಂಶಗಳನ್ನು ಕಲಿಯಲು ಇರುವ ಸಮಸ್ಯೆಗಳನ್ನು ಗಮನಿಸಿದ್ದೇವೆ. ಬಿಂದು, ರೇಖೆ, ಸಮತಲ, ತ್ರಿಜ್ಯ ಇಂತಹ ಕಲ್ಪನೆಗಳನ್ನು ಮಕ್ಕಳಿಗೆ ವ್ಯಾಖ್ಯೆಗಳ ಮುಖಾಂತರ ನೀಡಿದಾಗ ಅವರು ಅದನ್ನು ಸುಲಭವಾಗಿ ಗೃಹಿಸಲು ಕಷ್ಟವಾಗುತ್ತದೆ ಮತ್ತು ಇದರಿಂದ ಮುಂದಿನ ವಿಷಯವನ್ನು ಗೃಹಿಸಲು ಅವರಿಗೆ ಕಷ್ಟವಾಗುತ್ತದೆ.
ಈಗ ಗಣಿತದ ಅಮೂರ್ತ ಕಲ್ಪನೆಗಳನ್ನು ಅರಿವು ಮೂಡಿಸಲು ಚಿತ್ರಗಳು, ಕಾರ್ಡ್ ಬೊರ್ಡ್ ಗಳಲ್ಲಿ ಆಕೃತಿಗಳನ್ನು ಕತ್ತರಿಸುವುದು, ಮುಂತಾದ ವಿಧಾನಗಳನ್ನು ಬಳಸಲಾಗಿತ್ತಿದೆ ಆದರೆ ಇದು ತುಂಬಾ ವೇಳೆಯನ್ನು ತೆಗೆದುಕೊಳ್ಳುತ್ತದೆ. IT based ಸಾಧನಗಳು ಚಿತ್ರ ಬಿಡಿಸುವ ಕೌಶಲವನ್ನು ಸುಲಭವಾಗಿ ರೂಢಿಸುತ್ತವೆ ಮತ್ತು ಮಕ್ಕಳಿಗೆ ಪ್ರಾಯೋಗಿಕ ಅನುಭವವನ್ನು ನೀಡುತ್ತವೆ ಹಾಗೂ ದೃಶ್ಯದ ಮೂಲಕ ಗಣಿತವನ್ನು ಕಲಿಯುವುದರಿಂದ ಅದರ ಅಮೂರ್ತ ಕಲ್ಪನೆಗಳು ಸರಳವಾಗಿ ಅರ್ಥವಾಗುವಂತೆ ಇರುತ್ತವೆ.
Geogebra ಇದು ಗಣಿತದ ಅತ್ಯುತ್ತಮವಾದ ಕಂಪ್ಯೂ ಟರೀಕೃ ತ ಸಾಧನವಾಗಿದ್ದು ರೇಖಾಗಣಿತ, ಬೀಜಗಣಿತ ಮತ್ತು ಸಂಖ್ಯಾಶಾಸ್ತ್ರ (Calculus)ಕಲಿಯಲು ಸಹಾಯಕ. ಇದು free software ಆಗಿದ್ದು , GNU Linux Operating System ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ.
Geogebra ಇದು ಮಕ್ಕಳಿಗೆ ಕಂಪಾಸ್ ಬದಲು ಬಳಸುವ ಸಾಧನವಲ್ಲ. ರೇಖಾಗಣಿತದ ರಚನೆಗಳನ್ನು ಮಾಡಲು ಮಕ್ಕಳು ಕಂಪಾಸ್ ಮತ್ತು ಪೆನ್ಸಿಲ್‌ಗಳನ್ನು ಕಡ್ಡಾಯವಾಗಿ ಬಳಸುವರು. ಇದು ಗಣಿತದ ಕೆಲವು ಕಲ್ಪನೆಗಳು ಮತ್ತು ಪ್ರಮೇಯಗಳನ್ನು ಬೋಧಿಸಲು ಶಿಕ್ಷಕರು ಒಂದು ಬೋಧನಾ ವಿಧಾನವಾಗಿ ತಮ್ಮ ಬೋಧನೆಯಲ್ಲಿ ಬಳಸಿಕೊಳ್ಳಬಹುದು.
Geogebra ಇದು ಗಣಿತದ ಅತ್ಯು ತ್ತಮವಾದ ಕಂಪ್ಯೂಟರೀಕೃತ ಸಾಧನವಾಗಿದ್ದು , ರೇಖಾ ಗಣಿತ, ಬೀಜಗಣಿತ ಮತ್ತು ಸಂಖ್ಯಾಶಾಸ್ತ್ರ (calculus) ಗಳನ್ನು ಒಟ್ಟಿಗೆ ಸೇರಿಸುತ್ತದೆ.ಇದು ರೇಖಾಗಣಿತದ ಮೂಲ ಅಂಶಗಳಿಂದ ಬೋಧನೆ ಮಾಡುತ್ತದೆ. ನಾವು ಬಿಂದು, ರೇಖೆಗಳು, ಕಿರಣಗಳು, ಸಮಾಂತರ ರೇಖೆಗಳು, ರೇಖಖಂಡಗಳು,ಚತುರ್ಭುಜಗಳು, ವೃತ್ತಗಳು ಮತ್ತು ರೇಖಾಗಣಿತದ ಅನೇಕ ಆಕೃತಿಗಳನ್ನು ರಚಿಸಬಹುದು.
Geogebra ದ ಇನ್ನೊಂದು ಭಾಗವು ಸಮೀಕರಣಗಳನ್ನು ನೇರವಾಗಿ ರಚಿಸಲು ಸಹಾಯ ಮಾಡುತ್ತದೆ. ಹೀಗೆ ಇದು variables for numbers, vectors, and pointsಗಳ ಬಗ್ಗೆ ಸುಲಭವಾಗಿ ಮಾಹಿತಿಯನ್ನು ನೀಡುತ್ತದೆ.
ನಾವು ರೇಖಾಗಣಿತದ ಆಕೃತಿಗಳ ಅಂಶಗಳನ್ನು , ಬೆಲೆಗಳಲ್ಲಿನ ವ್ಯತ್ಯಾಸಗಳನ್ನು ಮತ್ತು ಬೆಲೆಗಳಲ್ಲಿನ ವ್ಯತ್ಯಾ ಸಗಳಿಂದ
ಆಕೃತಿಗಳಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಬಹುದು.
Desktop ನ ಮೇಲೆ click Applications > Science > Geogebra or Applications > Education> Geogebra.
Geogebra ಇನ್‌ಷ್ಟಾಲ್ ಮಾಡಲು:
Please see the 2425Install New Software ಅನ್ನು ಗಮನಿಸಿ ಅದು ನಿಮ್ಮ Ubuntu systemನಲ್ಲಿ ಕಂಡು ಬರದಿದ್ದರೆ ಇಂಟರ್ನೆಟ್ ಮೂಲಕ ನಿಮ್ಮ ಕಂಪ್ಯೂಟರ್‌ನಲ್ಲಿ ಡೌನ್ ಲೋಡ್ ಮಾಡಿ.
ಕೊನೆಯ ಮಾರ್ಪಾಟು : 10/28/2019