ಬೇರೆ ರೀತಿಯಲ್ಲಿ ತಿಳಿಸಲು ಕಷ್ಟಕರವಾದ ಡೇಟಾವನ್ನು ತೋರಿಸಲು ವರ್ಡ್ ನಲ್ಲಿ ಟೇಬಲ್ ರಚಿಸುವ ಮೊದಲ ಹಂತಗಳನ್ನು ನಿಮಗೆ ಈ ಸೆಶನ್ ಕಲಿಸುತ್ತದೆ.
ಟೇಬಲ್ ಎಂದರೇನು?
ರೋ ಮತ್ತು ಕಾಲಮ್ ಗಳಲ್ಲಿ ವ್ಯವಸ್ಥೆಗಳಿಸಿದ ಪರಸ್ಪರ ಸಂಬಂಧಪಟ್ಟ ಡೇಟಾದ ಸಂಗ್ರಹವೇ ಟೇಬಲ್. ಟೇಬಲ್ನಲ್ಲಿ ಡೇಟಾದ ಅಡ್ಡ ಸಾಲಿನ ನಿರೂಪಣೆಯೇ ರೋ; ಡೇಟಾದ ಲಂಬ(ಕಂಬ) ಸಾಲಿನ ನಿರೂಪಣೆಯೇ ಕಾಲಮ್. ರೋ ಮತ್ತು ಕಾಲಮ್‌ಗಳ ಪರಸ್ಪರ ಛೇದನೆಯನ್ನು ಸೆಲ್ ಎಂದು ಪ್ರಸ್ತಾಪಿಸಲಾಗುತ್ತದೆ. ಇದು ಒಂದು ತುಣುಕು ಡೇಟಾವನ್ನು ಒಳಗೊಡಿಂದೆ.
ಹೊಸ ಟೇಬಲ್ ರಚಿಸುವುದು:
ಹೊಸ ಅಥವಾ ಈಗಾಗಲೇ ಇರುವ ಡಾಕ್ಯುಮೆಂಟ್ ಗೆ ಟೇಬಲ್ ಇನ್ ಸರ್ಟ್ ಮಾಡುವುದು.
ನೀವು ಟೇಬಲ್ ಸೇರಿಸಬೇಕಿರುವ ಜಾಗದಲ್ಲಿ ಕ್ಲಿಕ್ ಮಾಡಿ.
ಟೇಬಲ್ ಮೆನುನಲ್ಲಿ ಇನ್ ಸರ್ಟ್ ಗುರುತಿಸಿ, ನಂತರ ಟೇಬಲ್ ಕ್ಲಿಕ್ ಮಾಡಿ.
ಪ್ರವಾಸದ ವಿವರಗಳನ್ನು ತೋರಿಸಲು ನಿಮಗೆ 22 ರೋಗಳು ಮತ್ತು 3 ಕಾಲಮ್‌ಗಳು ಬೇಕಿವೆ. ಟೇಬಲ್ ಸೈಜ್ ನ ಅಡಿ, ಸಂಬಂಧಪಟ್ಟ ಬಾಕ್ಸ್ ಗಳಲ್ಲಿ ಈ ಅಂಕಿಗಳನ್ನು ತುಂಬಿರಿ.
ನೀವು ಟೇಬಲ್ ರಚಿಸಿದ್ದೀರಿ. ಈಗ ನೀವು ಪಠ್ಯ ತುಂಬಲು ಪ್ರಾರಂಭಿಸಬಹುದು. ಮೊದಲ ಹಂತವೆಂದರೆ ಕಾಲಮ್ ತಲೆಬರಹಗಳನ್ನು ತುಂಬುವುದು.
ಹೀಗೆ ನಿಮಗೆ ಅಗತ್ಯವಿರುವಷ್ಟು ರೋ ಮತ್ತು ಕಾಲಮ್‌ಗಳಲ್ಲಿ ಮಾಹಿತಿಯನ್ನು ತುಂಬಿ.
ನೀವು ಮಾಹಿತಿ ತುಂಬುವ ಸಂದರ್ಭದಲ್ಲಿ ಯಾವುದಾದರೊಂದು ರೋ ಅಥವಾ ಕಾಲಮ್ ಇಲ್ಲದಿರುವುದನ್ನು ಕಂಡಿದ್ದ ಲ್ಲಿ ಸುಲಭವಾಗಿ ಅದನ್ನು ತುಂಬಬಹುದು.
ನಿಮಗೆ ಟೇಬಲ್‌ನಲ್ಲಿ ನಿರ್ದಿಷ್ಟ ಗುಂಪಿನ ವಿವರಗಳು ಕಾಣವುದು ಬೇಡವಾಗಿದ್ದರೆ, ನೀವು ರೋ ಡಿಲೀಟ್ ಮಾಡಬಹುದು.
ಈಗ ಟೇಬಲ್ ಪೂರ್ಣಗೊಂಡಿದೆ. ಆದರೆ ನೀವು ತಲೆಬರಹಗಳನ್ನು ಹೊಂದಿರುವ ರೋಗಳ ಎತ್ತರ ಹೆಚ್ಚಿಸಿದರೆ ಅದು ಉತ್ತಮವಾಗಿ ಕಾಣುತ್ತದೆ.
ವರ್ಡ್ ನ ಬಾರ್ಡರ್ಸ್ ಅಂಡ್ ಶೇಡಿಂಗ್ ವೈಶಿಷ್ಟ್ಯಗಳನ್ನು ಬಳಸಿ ನೀವು ಟೇಬಲ್‌ಗೆ ವಿವಿಧ ಸ್ಟೈಲ್ ಗಳನ್ನು, ಬಾರ್ಡರ್‌ಗಳನ್ನು ಮತ್ತು ಬಣ್ಣಗಳನ್ನು ಹಚ್ಚಬಹುದು.
ಮೂಲ: ಕರ್ನಾಟಕ ಶಿಕ್ಷಣ
ಕೊನೆಯ ಮಾರ್ಪಾಟು : 10/16/2019