ಪ್ಯಾರಾಗ್ರಾಫ್‌ಗಳನ್ನು ಜೋಡಿಸುವುದು :
ಶೀರ್ಷಿಕೆ ಮತ್ತು ವಿಷಯಗಳು ಪತ್ರದ ಎಡಭಾಗದಲ್ಲಿ ಮೂಡಿರುವುದನ್ನು ನೀವು ಗಮನಿಸಬಹುದು. ಆದರೆ ಶೀರ್ಷಿಕೆಯು ಪುಟದ ಮಧ್ಯ ಭಾಗದಲ್ಲಿ ಇರುವುದಾದರೆ, ಅದು ಹೆಚ್ಚು ಚೆನ್ನಾಗಿ ಕಾಣುತ್ತದೆ. ಶೀರ್ಷಿಕೆಯನ್ನು ಮಧ್ಯ ಭಾಗಕ್ಕೆ ತರಲು Open Office Writer/Libre Office Writerನಲ್ಲಿನ ಅಲೈನ್‌ಮೆಂಟ್ ಕಮಾಂಡ್ ಅನ್ನು ಉಪಯೋಗಿಸಿ. ಪಠ್ಯದ ಅಲೈನ್‌ಮೆಂಟ್ ಎಂದರೆ, ದಾಖಲೆಯ ಪುಟದ ಅಂಚುಗಳಿಗೆ ಹೋಲಿಸಿರುವಂತೆ ಪಠ್ಯದ ಸ್ಥಾನ. ನಾಲ್ಕು ಅಲೈನ್ ಮೆಂಟ್ ಕಮಾಂಡ್ ಗಳಿವೆ, ಅವುಗಳೆಂದರೆ ಅಲೈನ್ ಲೆಫ್ಟ್, ಸೆಂಟರ್, ಅಲೈನ್ ರೈಟ್ ಮತ್ತು ಜಸ್ಟಿಫೈ.
ಪಠ್ಯದ ಜೋಡಿಸುವಿಕೆಯನ್ನು ಬದಲಾಯಿಸಲು:
ಹೆಡರ್ಸ್ ಮತ್ತು ಫೂಟರ್ಸ್ ಗಳು ದಾಖಲೆಯಲ್ಲಿ ಪ್ರತಿಪುಟದ ಮೇಲುಭಾಗ ಮತ್ತು ಕೆಳಭಾಗದ ಅಂಚುಗಳಲ್ಲಿರುವಂತಹ ವಿಶೇಷವಾದ ಸ್ಥಳಗಳು. ಈ ವಿಭಾಗಗಳು, ಪುನರಾವರ್ತಿಸುವ ಮಾಹಿತಿಗಳಾದಂತಹ ಶೀರ್ಷಿಕೆಗಳು, ಟಿಪ್ಪಣಿಗಳು ಮತ್ತು ಪುಟದ ಸಂಖ್ಯೆಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ನೀವು ಪತ್ರದಲ್ಲಿ ವಿಷಯದ ಹೆಸರನ್ನು ಹೆಡರ್ ನಲ್ಲಿ ಮತ್ತು ಪುಟದ ಸಂಖ್ಯೆಯನ್ನು ಫೂಟರ್ ನಲ್ಲಿ ಸೇರಿಸಬಹುದು.
ಇನ್ ಸರ್ಟ್ ಮೆನು ಕ್ಲಿಕ್ ಮಾಡಿ, ನಂತರ ಹೆಡರ್ ಕಾಣುತ್ತದೆ, ನಂತರ ಡಿಫಾಲ್ಟ್ ಕ್ಲಿಕ್ ಮಾಡಿ. ಹೆಡರ್ ಮತ್ತು ಫೂಟರ್ ಟೂಲ್ ಬಾರ್ ನ ಮೇಲಿರುವ ಇನ್ ಪೇಜ್ ನಂಬರ್ ಅನ್ನು ಕ್ಲಿಕ್ ಮಾಡಿ ಅಥವಾ ಇನ್‌ಸರ್ಟ್ - ಫೀಲ್ಡ್ ಆಪ್ಷನ್ ಗೆ ಹೋದಾಗ ಅಲ್ಲಿರುವ ಆಯ್ಕೆಗಳಲ್ಲಿ ನಿಮ್ಮ ದಾಖಲೆಗೆ ಅನ್ವಯಿಸುವುದನ್ನು ಬಳಸಿ. ಹೆಡರ್ ಅಂಡ್ ಫೂಟರ್ ಟೂಲ್ ಬಾರ್ ಅನ್ನು ಮುಕ್ತಾಯಗೊಳಿಸಲು ಕ್ಲೋಸ್ ಅನ್ನು ಕ್ಲಿಕ್ ಮಾಡಿ
ಮೂಲ: ಕರ್ನಾಟಕ ಶಿಕ್ಷಣ
ಕೊನೆಯ ಮಾರ್ಪಾಟು : 6/4/2020