অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ - ೧

ಭಾಗ - ೧

ಮೈಕ್ರೋಸಾಫ್ಟ್‌ ಕಂಪೆನಿಯ ಆಫೀಸ್ 2003 ತಂತ್ರಾಂಶಗುಚ್ಚದಲ್ಲಿ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್, ಔಟ್‌ಲುಕ್ ಇತ್ಯಾದಿಗಳಿವೆ. ಇದರಲ್ಲಿ ಸೇರಿಕೊಂಡಿರುವ ವರ್ಡ್‌ 2003ನ್ನು ಬಳಸಿ ಲೇಖನಗಳನ್ನು ಸಿದ್ಧಮಾಡಬಹದು. ಅಷ್ಟು ಮಾತ್ರವಲ್ಲ, ಪುಸ್ತಕಗಳನ್ನೂ ಸಿದ್ಧಮಾಡಬಹುದು. ಅದಕ್ಕೆ ಪೂರಕವಾದ ಹಲವು ಸೌಲಭ್ಯಗಳು ಈ ತಂತ್ರಾಂಶದಲ್ಲಿ ಲಭ್ಯವಿವೆ. ಪದಪರೀಕ್ಷೆ, ಹುಡುಕು-ಬದಲಿಸು, ಅಕ್ಷರ ಸ್ವರೂಪಣ ಮತ್ತು ಪುಟ ವಿನ್ಯಾಸ, ಕೋಷ್ಟಕಗಳ ಅಳವಡಿಕೆ ಇತ್ಯಾದಿಗಳ ಜೊತೆ ಚಿತ್ರಗಳ ಅಳವಡಿಕೆ –ಇವು ಕೆಲವು ಸೌಲಭ್ಯಗಳು. ಉಪಯುಕ್ತ ಸವಲತ್ತುಗಳ ಪಟ್ಟಿ ಇನ್ನೂ ದೊಡ್ಡದಿದೆ. ವರ್ಡ್‌ 2003 ರಲ್ಲಿ ಕೋಷ್ಟಕಗಳ ಅಳವಡಿಕೆ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ಕೋಷ್ಟಕಗಳನ್ನು ಎರಡು ವಿಧಾನಗಳಲ್ಲಿ ತಯಾರಿಸಬಹುದು. ಅವುಗಳನ್ನು ಅಡ್ಡ ನೀಟ ಗೆರೆಗಳನ್ನು ಎಳೆದು ತಯಾರಿಸುವುದು ಒಂದು ವಿಧಾನ. ಇನ್ನೊಂದು ವಿಧಾನದಲ್ಲಿ Table ಮೆನುವನ್ನು ಬಳಸುವುದು. ವರ್ಡ್ 2003 ರ Table ಮೆನುವಿನಲ್ಲಿರುವ Insert => Table ಆದೇಶವನ್ನು ಬಳಸಿ ಕೋಷ್ಟಕಗಳನ್ನು ಸೇರಿಸಬಹುದು. ಇದನ್ನು ಆಯ್ಕೆ ಮಾಡಿದಾಗ ಒಂದು ಸಂವಾದಚೌಕ ಮೂಡಿಬರುತ್ತದೆ. ಅದರಲ್ಲಿ ನಮಗೆ ಎಷ್ಟು ಅಡ್ಡ ಸಾಲುಗಳು ಮತ್ತು ಕಾಲಂಗಳು ಬೇಕು ಎಂಬುದನ್ನು ನಮೂದಿಸಬಹುದು.

ಮೂಲ : ಭಾಷಾಇಂಡಿಯ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate