ಈ ಸಂವಾದಚೌಕದಲ್ಲಿ Autofit bevahior ಎಂಬಲ್ಲಿ ಕಾಲಂಗಳು ಯಾವ ರೀತಿಯಲ್ಲಿರಬೇಕು ಎಂಬುದನ್ನು ಆಯ್ಕೆ ಮಾಡಬಹುದು. ನಿರ್ದಿಷ್ಟ ಅಗಲ, ಕಾಲಂನಲ್ಲಿರುವ ಮಾಹಿತಿಗೆ ಸರಿಯಾಗಿ ಹೊಂದಿಕೊಳ್ಳುವುದು ಅಥವಾ ಪುಟದ ಅಗಲಕ್ಕೆ ಸರಿಯಾಗಿ ಹೊಂದಿಕೊಳ್ಳುವುದು –ಈ ವಿಧಾನಗಳಲ್ಲಿ ಯಾವ ರೀತಿ ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಕೋಷ್ಟಕದ ವಿನ್ಯಾಸವನ್ನು ಹಲವು ಪೂರ್ವನಿರ್ಧಾರಿತ ವಿನ್ಯಾಸಗಳಿಂದ ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ AutoFormat ಎಂಬ ಬಟನನ್ನು ಕ್ಲಿಕ್ ಮಾಡಬೇಕು. ಹಾಗೆ ಮಾಡಿದಾಗ ಮೂಡಿಬರುವ ಹಲವು ವಿನ್ಆಯಸಗಳಲ್ಲಿ ನಮಗಿಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳಬಹುದು
.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 1/28/2020