ಒಂದು ಕೋಷ್ಟಕದ ಉದಾಹರಣೆ ಇಲ್ಲಿದೆ. ಈಗಾಗಲೆ ತೋರಿಸಿದ ಪೂರ್ವನಿರ್ಧಾರಿತ ವಿನ್ಯಾಸದಲ್ಲಿ ಈ ಕೋಷ್ಟಕವನ್ನು ತಯಾರಿಸಲಾಗಿದೆ.
ಇಲ್ಲೊಂದು ಪ್ರಮುಖ ವಿಷಯವನ್ನು ಗಮನಿಸಬಹುದು. ಈ ಕೋಷ್ಟಕದ ಮೊದಲ ಕಾಲಂನಲ್ಲಿರುವ ಪಠ್ಯವನ್ನು ಎಡಕ್ಕೆ ಹೊಂದಿಸಲಾಗಿದೆ. ಆದರೆ ನಂತರದ ಮೂರು ಕಾಲಂಗಳಲ್ಲಿ ತೋರಿಸಿರುವ ಸಂಖ್ಯೆಗಳನ್ನು ಬಲಕ್ಕೆ ಹೊಂದಿಸಲಾಗಿದೆ. ಈ ಎಲ್ಲ ಸವಲತ್ತುಗಳು ಕೋಷ್ಟಕದಲ್ಲಿ ಅಡಕವಾಗಿವೆ.
Table ಮೆನುವಿನಲ್ಲಿರುವ Draw Table ಎಂಬ ಆಯ್ಕೆಯನ್ನು ಬಳಸಿಯೂ ಕೋಷ್ಟಕಗಳನ್ನು ತಯಾರಿಸಬಹುದು. ಈ ವಿಧಾನದಲ್ಲಿ ಗ್ರಾಫಿಕ್ಸ್ ತಂತ್ರಾಂಶಗಳಲ್ಲಿ ಮಾಡುವಂತೆ ಅಡ್ಡ ಮತ್ತು ನೀಟ ಗೆರೆಗಳನ್ನು ನಾವೇ ಮೌಸ್ ಬಳಸಿ ಎಳೆದು ಕೋಷ್ಟಕ ತಯಾರಿಸಬೇಕು. ಪರಿಣತರು ಈವಿಧಾನವನ್ನು ಹೆಚ್ಚು ಇಷ್ಟಪಡಬಹುದು. ಇದರಲ್ಲಿ ಎಳೆದ ಗೆರೆಯನ್ನು ಅಳಿಸುವ ಸವಲತ್ತೂ ಇದೆ. ಇದಕ್ಕಾಗಿ ನೀಡಿರುವ ಎರೇಸರ್ ಅನ್ನು ಬಳಸಿ ಕೆಲವು ಗೆರೆಗಳನ್ನು ಅಳಿಸಿ ಕಾಲಂಗಳನ್ನು ಜೋಡಿಸಬಹುದು.
Table ಮೆನುವಿನಲ್ಲಿರುವ ಇತರೆ ಆದೇಶಗಳು ಇನ್ನೂ ಹಲವು ಸೌಲಭ್ಯಗಳಿಂದ ಕೂಡಿದೆ. ಅವುಗಳನ್ನು ಬಳಸಿ ಕೋಷ್ಟಕದಲ್ಲಿರುವ ಸಾಲು ಅಥವಾ ಕಾಲಂಗಳನ್ನು ಅಳಿಸಬಹುದು, ಕೋಷ್ಟಕದ ವಿನ್ಯಾಸವನ್ನು ಬದಲಿಸಬಹುದು, ಕೋಷ್ಟಕದಲ್ಲಿರುವ ಮಾಹಿತಿಯನ್ನು ಆರೋಹಣ ಅಥವಾ ಅವರೋಹಣ ಕ್ರಮದಲ್ಲಿ ವಿಂಗಡಿಸಬಹುದು, ಕೋಷ್ಟಕವನ್ನು ಪಠ್ಯವಾಗಿ ಬದಲಿಸಬಹುದು –ಇತ್ಯಾದಿ ಹಲವು ಸೌಕರ್ಯಗಳಿವೆ.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 10/16/2019