ಇಮೈಲ್ ವಿಳಾಸ ಮಾತ್ರ ಇಂಗ್ಲೀಷಿನಲ್ಲೇ ಇರಬೇಕು. ಮುಂದಕ್ಕೆ ಅದೂ ಕನ್ನಡದಲ್ಲೇ ಬರೆಯಬಹುದಾದ ಕಾಲವೂ ಬರಬಹುದು. ಇಮೈಲ್‌ನ ವಿಷಯವನ್ನೂ (subject) ಕನ್ನಡದಲ್ಲೇ ಬರೆಯಬಹುದು. ಇಮೈಲ್ ಓದುವವರು ಔಟ್‌ಲುಕ್ ಬಳಸುವವರಾದರೆ ಈ ಇಮೈಲನ್ನು ಯಾವುದೇ ತೊಂದರೆಯಿಲ್ಲದೆ ಓದಬಹುದು. ಅಂತರಜಾಲದ ಮೂಲಕ ಕೆಲಸ ಮಾಡುವ ಬಹುಪಾಲು ಇಮೈಲ್ ತಂತ್ರಾಂಶಗಳೂ (ಉದಾ –Hotmail, Gmail, Yahoo, …) ಯುನಿಕೋಡ್ ಅನ್ನು ಬೆಂಬಲಿಸುವುದುರಿಂದ ಕನ್ನಡ ಇಮೈಲ್ ಓದಬಹುದು. ಆದರೂ ಕೆಲವೊಮ್ಮೆ ಬ್ರೌಸರಿನಲ್ಲಿ ಒಂದು ಚಿಕ್ಕ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅದು View => Encoding => Unicode (UTF-8) ಎಂಬುದಾಗಿದೆ.
ಔಟ್‌ಲುಕ್ ಬಳಸಿ ದಿನಚರಿ ಮತ್ತು ಅಪಾಯಿಂಟ್‌ಮೆಂಟ್‌ಗಳ ದಾಖಲಾತಿ ಮಾಡಬಹುದು. ಇಂತಹ ದಿನ ಇಂತಹ ವೇಳೆಗೆ ಇಂತಹವರೊಡನೆ ಭೇಟಿ ಇದೆ ಎಂಬುದನ್ನು ದಾಖಲಿಸುವುದೇ ಅಪಾಯಿಂಟ್‌ಮೆಂಟ್. ಈ ಅಪಾಯಿಂಟ್‌ಮೆಂಟ್‌ಗಳು ಕನ್ನಡದಲ್ಲೇ ಇರಬಹುದು. ಇಲ್ಲಿ ನೀಡಿರುವ ಒಂದು ಉದಾಹರಣೆಯಲ್ಲಿ ಕನ್ನಡದಲ್ಲೇ ಕಾರ್ಯಕ್ರಮ ವಿವರ ದಾಖಲಿಸಿರುವುದನ್ನು ಗಮನಿಸಬಹುದು.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 10/16/2019