অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ -೧

ಭಾಗ -೧

ನಿಯರ್ ಫೀಲ್ಡ್ ಕಮ್ಯೂನಿಕೇಶನ್ (NFC) ಎನ್ನುವುದು ಪ್ರವರ್ಧಮಾನಕ್ಕೆ ಬರುತ್ತಿರುವ, ಅಲ್ಪ ವ್ಯಾಪ್ತಿಯ ವೈರ್‌ಲೆಸ್ ತಂತ್ರಜ್ಞಾನವಾಗಿದೆ. 2 ಸೆಂಮೀ ನಿಖರ ವ್ಯಾಪ್ತಿಯ ಶ್ರೇಣಿಯೊಂದಿಗೆ ವಿಷಯವನ್ನು ಕಳುಹಿಸಲು/ಸ್ವೀಕರಿಸಲು ಜನರು ಸಾಧನಗಳನ್ನು ಒಟ್ಟಿಗೆ ಟ್ಯಾಪ್ ಮಾಡಬಹುದು.

ನೋಕಿಯಾ 360 ಸ್ಪೀಕರ್ ಫೋನ್ ತನ್ನ ಬ್ಲೂಟೂಥ್ ಜೋಡಿಗೊಳಿಸುವಿಕೆ ಮಿತಿಯನ್ನು ವಿಂಡೋಸ್ ಫೋನ್‌ನೊಂದಿಗೆ ಹಂಚಿಕೊಳ್ಳುತ್ತಿದೆ

NFC ಎನ್ನುವುದು ಪ್ರಮಾಣಿತ ವೈರ್‌ಲೆಸ್ ಪ್ರೋಟೋಕಾಲ್ ಆಗಿದೆ. ಬಳಕೆದಾರ PC ಗೆ NFC ರೇಡಿಯೋ ಅಗತ್ಯವಿರುತ್ತದೆ. ಸಾಕಷ್ಟು ವಿಂಡೋಸ್ 8 PC ಗಳು ಅವುಗಳೊಳಗೆ ಏಕೀಕೃತಗೊಳಿಸಿರುವ NFC ರೇಡಿಯೋಗಳನ್ನು ಹೊಂದಿವೆ.


ಕೆಲವು ಆಕರ್ಷಕ ಸಾಮರ್ಥ್ಯಗಳನ್ನು NFC ಒದಗಿಸುತ್ತದೆ. ಜನರು ಫೋಟೋಗಳನ್ನು ಟ್ಯಾಪ್ ಮಾಡಬಹುದು ಮತ್ತು ಕಳುಹಿಸಬಹುದು ಅಥವಾ ಬ್ಲೂಟೂಥ್ ಸಾಧನವನ್ನು ಜೋಡಿಗೊಳಿಸಲು ಸಹ ಟ್ಯಾಪ್ ಮಾಡಬಹುದು. NFC ಅನ್ನು PC ಗಳು, ಫೋನ್‌ಗಳು, ಸ್ಪೀಕರ್‌ಗಳು, ಹೆಡ್‌ಸೆಟ್‌ಗಳು, ವೈರ್‌ಲೆಸ್ ಪ್ರದರ್ಶನಗಳ ಹಾಗೂ ಇತರವುಗಳಂತಹ ವಿವಿಧ ಸಾಧನದಲ್ಲಿ ಸಾಧನಗಳನ್ನು ಒಟ್ಟಿಗೆ ಸಂಪರ್ಕಿಸುವುದನ್ನು ನಿಜವಾಗಿಯೂ ಅತ್ಯುತ್ತಮ ಅನುಭವವನ್ನು ಮಾಡಲು ಬಳಸಲಾಗುತ್ತದೆ. RFID ಟ್ಯಾಗ್‌ಗಳನ್ನು NFC ಬಳಸುತ್ತದೆ; ಇವುಗಳು ನಿಜವಾಗಿಯೂ ಅಗ್ಗವಾದ, ಹಗುರವಾದ ಪ್ಯಾಸಿವ್ ಆಂಟೆನಾಗಳಾಗಿದ್ದು, ಇವುಗಳು ಸಾಕಷ್ಟು ಪ್ರಮಾಣದ ಡೇಟಾವನ್ನು ಹಿಡಿದಿಡುತ್ತವೆ ಮತ್ತು ಹೆಚ್ಚು ಸಾಮಾನ್ಯವಾದ ಪೋಸ್ಟರ್‌ಗಳನ್ನು ಒಳಗೊಂಡು ಯಾವುದರಲ್ಲಿಯಾದರೂ ಅಂಟಿಸಬಹುದು.

 

‘ಟ್ಯಾಪ್’ ಅನ್ನು ವ್ಯಾಖ್ಯಾನಿಸುವುದು

ಒಂದೇ ರೀತಿಯಲ್ಲಿ ಸಾಧನಗಳನ್ನು ಟ್ಯಾಪ್ ಮಾಡುವುದು ಬಳಕೆದಾರರಿಗೆ ಪ್ರಮುಖವಾಗಿದೆ. ಮತ್ತೊಂದು ಸಾಧನಕ್ಕೆ ಪ್ರತಿಯಾಗಿ PC ಅನ್ನು ಟ್ಯಾಪ್ ಮಾಡುವುದು ಹೆಚ್ಚು ಜನರಿಗೆ ಹೊಸತಾಗಿದೆ. “ಟ್ಯಾಪ್ ಮತ್ತು ಡೂ” ವಿಶುವಲ್ ಮಾರ್ಕ್ ಎಂದೂ ಕರೆಯಲಾಗುವ ಟಚ್‌ಮಾರ್ಕ್ ಬಳಸಿಕೊಂಡು ಬಳಕೆದಾರರು ಸಾಧನಗಳನ್ನು ಒಟ್ಟಿಗೆ ಟ್ಯಾಪ್ ಮಾಡಬಹುದು ಮತ್ತು ಈ ಮೂಲಕ NFC ಆಂಟೆನಾ ಎಲ್ಲಿ ನೆಲೆಸಿದೆ ಎಂಬುದನ್ನು ಸೂಚಿಸಬಹುದು. PC ಮಾಡೆಲ್ ಆಧರಿಸಿ, ಬಳಕೆದಾರರು PC ಯ ವಿಭಿನ್ನ ಭಾಗಗಳನ್ನು ಟ್ಯಾಪ್ ಮಾಡಬಹುದು.

ಮೂಲ : ಭಾಷಾಇಂಡಿಯ

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate