ಟ್ಯಾಪ್ ಮತ್ತು ಡೂ ವಿಶುವಲ್ ಮಾರ್ಕ್
ಟ್ಯಾಪ್ ಮಾಡುವ ಸಂದರ್ಭದಲ್ಲಿ, ಸಾಧನಗಳು ವ್ಯಾಪ್ತಿಯಲ್ಲಿರುವಾಗ ಮತ್ತು ಪರಸ್ಪರ ಸಂವಹನ ಮಾಡುತ್ತಿರುವಾಗ ಧ್ವನಿಯೊಂದನ್ನು ವಿಂಡೋಸ್ ಸ್ವಯಂಚಾಲಿತವಾಗಿ ಪ್ಲೇ ಮಾಡುತ್ತದೆ.
NFC ಬಳಸುವುದು
ಏನನ್ನಾದರೂ ಆಯ್ಕೆಮಾಡಲು NFC ಬಳಸುವುದು ಬಳಕೆದಾರರಿಗೆ ಅಗತ್ಯವಾದಾಗ, ಮ್ಯಾನ್ಯುಯಲ್ ಆಗಿ ಹುಡುಕುವುದಕ್ಕಿಂತ ಯಾವುದು ವೇಗವೆಂದು ಆಯ್ಕೆಮಾಡಿಕೊಳ್ಳಲು ವಿಭಿನ್ನ ಮಾರ್ಗವನ್ನು NFC ನೀಡುತ್ತದೆ. ಅನುಭವವನ್ನು ಪ್ರಾರಂಭಿಸಲು ಟ್ಯಾಪ್ ಎನ್ನುವುದು ಆರಂಭವಾಗಿದೆ ಮತ್ತು ಅಪ್ಲಿಕೇಶನ್ ಅನ್ನು ಅವಲಂಬಿಸಿ, ಫೋಟೋವನ್ನು ಸ್ವೀಕರಿಸುವುದರಿಂದ ಹಿಡಿದು ಪ್ಲೇಲೀಸ್ಟ್ ಪ್ರಾರಂಭಿಸುವ ತನಕ ಅನುಭವವನ್ನು ಹೊಂದಬಹುದು. ಟ್ಯಾಪ್ ಆನಂತರ ಏನಾಗುತ್ತದೆ ಎಂಬುದನ್ನು ನಿರ್ಧರಿಸುವುದು ಬಳಕೆದಾರ ಅಪ್ಲಿಕೇಶನ್‌ಗೆ ಬಿಟ್ಟ ಸಂಗತಿಯಾಗಿದೆ. ಅಂತಿಮ ಬಳಕೆದಾರರಿಗೆ ಸಾಕಷ್ಟು ದೈನಂದಿನ ಕಾರ್ಯವನ್ನು NFC ಸುಲಭಗೊಳಿಸುತ್ತದೆ. ಒಂದೇ ಸಂಗತಿಯನ್ನು ಸಾಧಿಸಲು ಹಲವಾರು ಮಾರ್ಗಗಳನ್ನು NFC API ಅನುಮತಿಸುತ್ತದೆ.
Windows.Networking.Proximity namespace ನಲ್ಲಿ NFC API ನೆಲೆಸಿದೆ. ಮೊದಲು, ಯಾವಾಗ ಟ್ಯಾಗ್ ವ್ಯಾಪ್ತಿಯ ಒಳಗಿದೆ/ಹೊರಗಿದೆ ಎನ್ನುವುದನ್ನು ತಿಳಿಸುವ ಪ್ರಾಕ್ಸಿಮಿಟಿ ಆಬ್ಜೆಕ್ಟ್ ಅನ್ನು ಅಪ್ಲಿಕೇಶನ್ ಪ್ರಾರಂಭಿಸುತ್ತದೆ. ಮುಂದೆ, ಡಿವೈಸ್ ಅರೈವಲ್ ಈವೆಂಟ್ ಹ್ಯಾಂಡ್ಲರ್ ಅನ್ನು ಸೇರಿಸಲಾಗುತ್ತದೆ. ಟ್ಯಾಗ್ ಅನ್ನು ಯಾವಾಗ ಟ್ಯಾಪ್ ಮಾಡಲಾಗಿದೆ ಎಂಬುದನ್ನು ಹ್ಯಾಂಡ್ಲರ್ ಗುರುತಿಸುತ್ತದೆ, ಇದರರ್ಥ ಬಳಕೆದಾರರು ಟ್ಯಾಗ್‌ಗೆ ಮಾಹಿತಿಯನ್ನು ಬರೆಯುವುದನ್ನು ಪ್ರಾರಂಭಿಸಬಹುದು. ಮುಂದೆ, ಬಳಕೆದಾರರು ಮಾಹಿತಿಯನ್ನು ಟ್ಯಾಗ್‌ಗೆ ಪ್ರಕಟಿಸುತ್ತಾರೆ. ಅಪ್ಲಿಕೇಶನ್ ಎರಡು ಸಂಗತಿಯನ್ನು ಪ್ರಕಟಿಸುತ್ತದೆ; ಅಪ್ಲಿಕೇಶನ್ ID ಮತ್ತು ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ ಅನ್ನು ಒಳಗೊಂಡಿರುವ ಅಪ್ಲಿಕೇಶನ್ ಐಡೆಂಟಿಫೈರ್ ಸ್ಟ್ರಿಂಗ್ ಮತ್ತು ಪ್ರಾರಂಭ ಆರ್ಗ್ಯುಮೆಂಟ್‌ಗಳು. ವಿಂಡೋಸ್ 8 ಗಾಗಿ, ಅಪ್ಲಿಕೇಶನ್ ಐಡಿಯು <ಪ್ಯಾಕೇಜ್ ಕುಟುಂಬ ಹೆಸರು>!<ಅಪ್ಲಿಕೇಶನ್ ಐಡಿ> ಆಗಿರುತ್ತದೆ ಮತ್ತು ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ ‘ವಿಂಡೋಸ್’ ಆಗಿರುತ್ತದೆ. ಬಳಕೆದಾರರು ಅಪ್ಲಿಕೇಶನ್ ಐಡಿ ಮೌಲ್ಯವನ್ನು ಅಪ್ಲಿಕೇಶನ್ ಘಟಕದ ಐಡಿ ಅಟ್ರಿಬ್ಯೂಟ್‌ನಿಂದ ಅಪ್ಲಿಕೇಶನ್‌ಗಾಗಿನ ಪ್ಯಾಕೇಜ್ ಮ್ಯಾನಿಫೆಸ್ಟ್‌ನಲ್ಲಿ ನಕಲಿಸಬೇಕು.
ಪ್ಲಾಟ್‌ಫಾರ್ಮ್‌ಗಳಾದ್ಯಂತ ಒಂದು ವೇಳೆ ಅಪ್ಲಿಕೇಶನ್ ಕಾರ್ಯನಿರ್ವಹಿಸಿದರೆ, ಪರ್ಯಾಯ ಅಪ್ಲಿಕೇಶನ್ ಐಡಿ(ಗಳು) ಮತ್ತು ಅಪ್ಲಿಕೇಶನ್ ಪ್ಲಾಟ್‌ಫಾರ್ಮ್(ಗಳನ್ನು) ಪ್ರಕಟಿಸಲು ಬಳಕೆದಾರರಿಗೆ ವಿಂಡೋಸ್ ಅವಕಾಶ ನೀಡುತ್ತದೆ.
ಪಬ್ಲಿಷ್ ಬೈನರಿ ಮೆಸೇಜ್ ಎಂದು ಕರೆಯಲಾಗುವ ವಿಧಾನವನ್ನು ಬಳಸಿಕೊಂಡು ಟ್ಯಾಗ್‌ಗೆ ಡೇಟಾವನ್ನು ಅಪ್ಲಿಕೇಶನ್ ಪ್ರಕಟಿಸುತ್ತದೆ. ವಿಧಾನವು ಮೂರು ಮಾನದಂಡಗಳನ್ನು ತೆಗೆದುಕೊಳ್ಳುತ್ತದೆ – ಮೆಸೇಜ್ ಟೈಪ್, ಮೆಸೇಜ್ ಮತ್ತು ಮೆಸೇಜ್ ಟ್ರಾನ್ಸ್ ಮಿಟೆಡ್ ಹ್ಯಾಂಡ್ಲರ್ ಕಾರ್ಯ. ಬಳಕೆದಾರರ ಮೆಸೇಜ್ ಟೈಪ್ ಅನ್ನು ‘LaunchApp:WriteTag’ ಗೆ ಹೊಂದಿಸಬೇಕು, ಮತ್ತು ಇದು ಮಾಹಿತಿಯನ್ನು NFC ಟ್ಯಾಗ್‌ಗೆ ಬರೆಯಲು ಬಳಕೆದಾರರ ಅಪ್ಲಿಕೇಶನ್ ಬಯಸುತ್ತದೆ ಎಂಬುದನ್ನು ತಿಳಿಯಲು ವಿಂಡೋಸ್‌ಗೆ ಅವಕಾಶ ನೀಡುತ್ತದೆ. ಸಂದೇಶವನ್ನು ಬಳಕೆದಾರರು ಬೈನರಿ ಸಂದೇಶವಾಗಿ ಬಫರ್‌ನಲ್ಲಿ ಸಂಗ್ರಹಿಸಬೇಕು.
ಕಾಲ್‌ಬ್ಯಾಕ್‌ಗಳಿಗಾಗಿ ಮೆಸೇಜ್ ಟ್ರಾನ್ಸ್‌ಮಿಟರ್ ಹ್ಯಾಂಡ್ಲರ್ ಕ್ರಿಯೆಯು ನೋಂದಣಿ ಮಾಡಿಕೊಳ್ಳುತ್ತದೆ. ಇದು ಸಂದೇಶವನ್ನು ಯಶಸ್ವಿಯಾಗಿ ಟ್ಯಾಗ್‌ಗೆ ಬರೆಯಲಾಗಿದೆ ಎಂಬುದನ್ನು ತಿಳಿಯಲು ಬಳಕೆದಾರ ಅಪ್ಲಿಕೇಶನ್‌ಗೆ ಅನುಮತಿಸುತ್ತದೆ. ಬಳಕೆದಾರರು ಸ್ಟಾಪ್ ಪಬ್ಲಿಶಿಂಗ್ ಮೆಸೇಜ್ ಕ್ರಿಯೆಯನ್ನು ಕರೆ ಮಾಡುವ ತನಕ ಅಥವಾ ಪ್ರಾಕ್ಸಿಮಿಟಿ ಡಿವೈಸ್ ಆಬ್ಜೆಕ್ಟ್ ಅನ್ನು ಬಿಡುಗಡೆಗೊಳಿಸುವ ತನಕ ಸಂದೇಶಗಳ ಪ್ರಕಟಣೆ ಮುಂದುವರಿಯುತ್ತದೆ.
ದೋಷ ನಿರ್ವಹಣೆ
ಅಪ್ಲಿಕೇಶನ್ ಹೊಂದಿರಬಹುದಾದ ಕೆಲವು ಸಾಮಾನ್ಯ ದೋಷಗಳೆಂದರೆ
• ಟ್ಯಾಪ್ ಮಾಡಿದ ಟ್ಯಾಗ್ NDEF ಫಾರ್ಮ್ಯಾಟ್ ಮಾಡದೇ ಇರುವಾಗ. ಟ್ಯಾಗ್ ಅನ್ನು NDEF ಗೆ ಸ್ವಯಂಚಾಲಿತವಾಗಿ ಮರುಫಾರ್ಮ್ಯಾಟ್ ಮಾಡುವುದನ್ನು ವಿಂಡೋಸ್ 8 ಬೆಂಬಲಿಸುವುದಿಲ್ಲ, ಆದ್ದರಿಂದ ಬಳಕೆದಾರರು NDEF ಅನ್ನು ಡೌನ್‌ಲೋಡ್ ಮಾಡಬೇಕು ಮತ್ತು ಸ್ಥಾಪನೆಗೊಳಿಸಬೇಕು.
• ಟ್ಯಾಪ್ ಮಾಡಿದ ಟ್ಯಾಗ್ ಓದು-ಮಾತ್ರ ಆಗಿದೆ. ಕೆಲವು NFC ಟ್ಯಾಗ್‌ಗಳನ್ನು ಓದು-ಮಾತ್ರಕ್ಕೆ ಲಾಕ್ ಮಾಡಬಹುದು.
• ಟ್ಯಾಪ್ ಮಾಡಿದ ಟ್ಯಾಗ್ ತೀರಾ ಚಿಕ್ಕದಾಗಿದೆ ಮತ್ತು ಎಲ್ಲಾ ಡೇಟಾ ಹಿಡಿದಿಡಲಾಗುವುದಿಲ್ಲ.
• NFC ಎನ್ನುವುದು ಬೆಳವಣಿಗೆ ಹೊಂದುತ್ತಿರುವ ತಂತ್ರಜ್ಞಾನ ಆಗಿರುವುದರಿಂದ NFC ಅನ್ನು ಬಳಕೆದಾರ PC ಹೊಂದಿರದೇ ಇರುವಾಗ.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 6/9/2020