অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ -೧

ಭಾಗ -೧

ಪಿಸಿಯ ವಿದ್ಯುತ್ ಬಳಕೆಯನ್ನು ತಗ್ಗಿಸುವ ಜೊತೆಗೆ ಪ್ರತಿಕ್ರಿಯೆ ನೀಡುವಿಕೆ ಮತ್ತು ಬಳಕೆಯನ್ನು ಗರಿಷ್ಠಗೊಳಿಸುವತ್ತ ವಿಂಡೋಸ್ 8 ಕಾರ್ಯನಿರವಹಿಸುತ್ತಿದೆ. ವಿಂಡೋಸ್ 8 ರಲ್ಲಿ ಬಹುದೊಡ್ಡ ಮೆಟ್ರೋ ಶೈಲಿ ಅಪ್ಲಿಕೇಶನ್‌ಗಳಿಗೆ ಅನ್ನಯಿಸುವ ನಿಯಮದೊಂದಿಗೆ ನಾವು ಪ್ರಾರಂಭಿಸಿದ್ದೇವೆ ಮತ್ತು ಮುನ್ನೆಲೆಯಲ್ಲಿ ಚಲಿಸುತ್ತಿರುವ, ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಮತ್ತು ಸುಸ್ಪಷ್ಟ ಹಿನ್ನೆಲೆ ಚಟುವಟಿಕೆಯನ್ನು ನಿರ್ವಹಣೆ ಮಾಡುತ್ತಿರುವ ಮೂರು ಮೂಲಭೂತ ಸಂಭಾವ್ಯ ಸ್ಥಿತಿಗಳ ಮೇಲೆ ಕೇಂದ್ರೀಕೃತವಾಗಿದೆ.

 

ಮುನ್ನೆಲೆ ಆಧಾರಿತ ಕಾರ್ಯದಲ್ಲಿ, ವೇಗವಾದ, ಸರಾಗವಾದ ಮತ್ತು ಜವಾಬ್ದಾರಿಯುತ ಅಪ್ಲಿಕೇಶನ್‌ಗಳನ್ನು ಹೇಗೆ ಅಭಿವೃದ್ಧಿಪಡಿಸುವುದು ಎನ್ನುವುದು ಪ್ರಮುಖ ಭಾಗವು ಜತೆಗೂಡುವಿಕೆಯಾಗಿದೆ. ಇದು ಸಂದರ್ಭಗಳನ್ನು ಹೇಗೆ ಕೋಡ್ ಮಾಡುವುದು ಎಂಬ ಬಗ್ಗೆ ವಿಭಿನ್ನವಾಗಿ ಚಿಂತಿಸಲು ಡೆವಲಪರ್‌ಗಳನ್ನು ಸಕ್ರಿಯಗೊಳಿಸುತ್ತದೆ. ಉದಾಹರಣೆಗಾಗಿ, ಅಗತ್ಯವಿಲ್ಲದಿರುವಾಗಲೂ ಸಹ ಏನನ್ನಾದರೂ ಮಾಡಲು ಪ್ರತ್ಯೇಕವಾದ ಹಿನ್ನೆಲೆ ಅಪ್ಲಿಕೇಶನ್ ಯಾವಾಗಲೂ ರನ್ ಆಗುತ್ತಿರುವಂತೆ ಇರಿಸುವುದು. ಹಿನ್ನೆಲೆ ಕಾರ್ಯಗಳನ್ನು ಬಹು ವಿಧದಲ್ಲಿ, ಪುಷ್ ಪ್ರಕಟಣೆಯಿಂದ ಸಮಯಾಧಾರಿತ ಈವೆಂಟ್‌ವರೆಗೆ ಅಥವಾ ಒಳಬರುವ ನೆಟ್‌ವರ್ಕ್ ಡೇಟಾದವರೆಗೆ ಸಹ ಆಹ್ವಾನಿಸಬಹುದು. ನಿಮ್ಮ ಪಿಸಿ ಅನ್ನು ಗೋಡೆಗೆ ಪ್ಲಗ್ ಮಾಡಿದಾಗಲೂ ಸಹ ಹಿನ್ನೆಲೆಯಲ್ಲಿ ಆಗಾಗ್ಗೆ ರನ್ ಆಗುವಂತೆ ಅಪ್ಲಿಕೇಶನ್‌ಗಳಿಗೆ ಅನುಮತಿಸಲು ಸಹ ಸಿಸ್ಟಮ್ ಚತುರವಾಗಿರುತ್ತದೆ. ಒಟ್ಟಾರೆಯಾಗಿ, ಇದು ಬ್ಯಾಟರಿ ಜೀವಿತಾವಧಿಗೆ ಅನುಕೂಲಕರವಾಗಿದೆ, ಏಕೆಂದರೆ ಎಲ್ಲಾ ಸಮಯದ ಬದಲಿಗೆ, ಅಗತ್ಯವಿದ್ದಾಗ ಮಾತ್ರ ಕೋಡ್ ರನ್ ಆಗುತ್ತದೆ. ಅಸಿಂಕ್ರೋನಸ್ ಪ್ರೋಗ್ರಾಮಿಂಗ್ ಅನ್ನು ಸುಲಭ ಮತ್ತು ಹೆಚ್ಚು ಶಕ್ತಿಯುತವನ್ನಾಗಿಸಲು ಪರಿಕರಗಳ ಮೂಲಭೂತ ಸೌಕರ್ಯ ಮತ್ತು ವಿನ್RT API ನಲ್ಲಿ ಹಲವು ಸುಧಾರಣೆಗಳನ್ನೂ ಸಹ ಮಾಡಲಾಗಿದೆ. ವೇಗವಾದ ಮತ್ತು ಜವಾಬ್ದಾರಿಯುತ ಅಪ್ಲಿಕೇಶನ್‌ಗಳನ್ನು ಅಸಿಂಕ್ರೊನಸ್ ಪ್ರೋಗ್ರಾಮಿಂಗ್‌ನ ಬಲವಾದ ಆಧಾರದ ಮೇಲೆ ನಿರ್ಮಿಸಲಾಗಿದೆ.

 

ಬಳಕೆದಾರರೊಬ್ಬರು ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದಾಗ ತದನಂತರ ಅದರಿಂದ ದೂರ ಸರಿದಾಗ, ಅದನ್ನು ಆಪರೇಟಿಂಗ್ ಸಿಸ್ಟಮ್ ಅಮಾನತುಗೊಳಿಸುತ್ತದೆ. ಇದರರ್ಥ ಇದನ್ನು CPU  ಷೆಡ್ಯೂಲಿಂಗ್‌ನಲ್ಲಿ ವಿಂಡೋಸ್ ಷೆಡ್ಯೂಲರ್ ಒಳಪಡಿಸಿಕೊಳ್ಳುವುದಿಲ್ಲ ಎಂಬುದಾಗಿದೆ. ಅಪ್ಲಿಕೇಶನ್ CPU  ಅನ್ನು ಬಳಸುತ್ತಿರುವುದಿಲ್ಲ ಮತ್ತು ಕಡಿಮೆ ಇಂಧನ ಸ್ಥಿತಿಗೆ CPU ಬದಲುಗೊಳ್ಳುವ ಸಾಧ್ಯತೆ ಇರುತ್ತದೆ. ಅತ್ಯುತ್ತಮ ಬ್ಯಾಟರಿ ಜೀವಿತಾವಧಿಯನ್ನು ಸಾಧಿಸುವುದಕ್ಕೆ ಕಡಿಮೆ ವಿದ್ಯುತ್ ಸ್ಥಿತಿಯಲ್ಲಿ CPU ಅನ್ನು ಚಾಲನೆ ಮಾಡುವುದು ಪ್ರಮುಖವಾಗಿರುತ್ತದೆ. ತಡೆಹಿಡಿದಿರುವ ಅಪ್ಲಿಕೇಶನ್‌ಗಳೂ ಸಹ ಇಂತಹುದೇ ಪ್ರಕಾರದ ಕ್ಯಾಶ್ ಆದ ಸ್ಥಿತಿಯಲ್ಲಿರುತ್ತವೆ. ಅಪ್ಲಿಕೇಶನ್ ಅನ್ನು ಈಗಾಗಲೇ ಪ್ರಾರಂಭಗೊಳಿಸಲಾಗಿರುವುದರಿಂದ, ತತ್‌ಕ್ಷಣದ ಅಪ್ಲಿಕೇಶನ್ ಬದಲುಗೊಳ್ಳುವಿಕೆಯ ಪ್ರಯೋಜನವನ್ನು ಬಳಕೆದಾರರು ಪಡೆದುಕೊಳ್ಳುತ್ತಾರೆ. ನೀವು ವಿಂಡೋಸ್‌ನಲ್ಲಿ ಎಂದಿಗಾದರೂ ಪಡೆದುಕೊಂಡದ್ದಕ್ಕಿಂತ ಎಂದೆಂದಿಗಿಂತಲೂ ವೇಗವಾಗಿ ಹೆಚ್ಚು ಅಪ್ಲಿಕೇಶನ್‌ಗಳ ನಡುವೆ ಬದಲುಗೊಳ್ಳಲು ಬಳಕೆದಾರರಿಗೆ ಈ ವೈಶಿಷ್ಟ್ಯದ ಮೂಲಕ ಸಾಧ್ಯವಾಗುತ್ತದೆ. ಅಪ್ಲಿಕೇಶನ್‌ಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುವ ಪ್ರಯೋಜನವೆಂದರೆ, ಬ್ಯಾಟರಿ ಜೀವಿತಾವಧಿಗೆ ಅಥವಾ ಸಿಸ್ಟಮ್ ಕಾರ್ಯನಿರ್ವಹಣೆಗೆ ಋಣಾತ್ಮಕವಾಗಿ ಪರಿಣಾಮಗೊಳ್ಳದೆಯೇ  ಅಪ್ಲಿಕೇಶನ್‌ಗಳ ನಡುವೆ ವೇಗವಾಗಿ ಬದಲುಗೊಳ್ಳಲು ಬಳಕೆದಾರರಿಗೆ ಸಾಧ್ಯವಾಗುತ್ತದೆ. ಮೆಮೋರಿ ಎನ್ನುವುದು ಸೀಮಿತ ಸಂಪನ್ಮೂಲವಾಗಿದೆ ಮತ್ತು ನೀವು ತೀರಾ ಆಗಾಗ್ಗೆ ಬಳಸುತ್ತಿರುವ ಅಪ್ಲಿಕೇಶನ್‌ಗಳು ನಿಮಗೆ ತತ್‌ಕ್ಷಣ ಲಭ್ಯವಿರುವಂತೆ ಮಾಡಲು ನಾವು ಬಯಸುತ್ತೇವೆ. ಸ್ವಲ್ಪ ಸಮಯದವರೆಗೆ ನೀವು ಒಂದು ಅಪ್ಲಿಕೇಶನ್ ಅನ್ನು ಬಳಸದೇ ಇದ್ದರೆ ಮತ್ತು ಆಪರೇಟಿಂಗ್ ಸಿಸ್ಟಮ್‌ಗೆ ಹೆಚ್ಚಿನ ಮೆಮೋರಿ ಅಗತ್ಯವಾಗಿದ್ದರೆ, ಅದು ನೀವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಅಪ್ಲಿಕೇಶನ್‌ಗಳಲ್ಲಿ ಒಂದನ್ನು ಅಂತ್ಯಗೊಳಿಸುತ್ತದೆ. ನಿಮ್ಮ ತಡೆಹಿಡಿದಿರುವ ಅಪ್ಲಿಕೇಶನ್‌ಗಳನ್ನು ಮೆಮೋರಿ ನಿರ್ವಾಹಕರು ತೆಗೆದುಕೊಳ್ಳುವುದರಿಂದ ಮತ್ತು ಅವುಗಳನ್ನು ಡಿಸ್ಕ್‌ಗೆ ಸೇವ್ ಮಾಡುವುದರಿಂದ ಇದು ತೀರಾ ಆಗಾಗ್ಗೆ ಸಂಭವಿಸುವುದಿಲ್ಲ. ಯಾವ ಅಪ್ಲಿಕೇಶನ್ ಅನ್ನು ಅಂತ್ಯಗೊಳಿಸಬೇಕು ಎಂದು ಆಪರೇಟಿಂಗ್ ಸಿಸ್ಟಮ್ ನಿರ್ಧರಿಸುವಾಗ ಅಪ್ಲಿಕೇಶನ್ ಅನ್ನು ಯಾವಾಗ ಕೊನೆಯದಾಗಿ ಬಳಸಲಾಗಿದೆ ಮತ್ತು ಅದು ಎಷ್ಟು ಪ್ರಮಾಣದ ಮೆಮೋರಿಯನ್ನು ಬಳಸಿಕೊಳ್ಳುತ್ತಿದೆ ಎಂಬಂತಹ ಹಲವು ಸಂಗತಿಗಳನ್ನು ಆಪರೇಟಿಂಗ್ ಸಿಸ್ಟಮ್ ಪರಿಗಣಿಸುತ್ತದೆ.

 

ತಡೆಹಿಡಿಯಲಾಗಿರುವ ಸ್ಥಿತಿಯಿಂದ ಅಪ್ಲಿಕೇಶನ್ ಅನ್ನು ಅಂತ್ಯಗೊಳಿಸಬಹುದಾದರೂ, ನಿಮ್ಮ ಅನುಭವಕ್ಕೆ ತೀರಾ ಕಡಿಮೆ ಪರಿಣಾಮ ಉಂಟಾಗುತ್ತದೆ. ಏಕೆಂದರೆ ಅಪ್ಲಿಕೇಶನ್ ಅನ್ನು ಬಳಸುತ್ತಿರುವಾಗ ಸ್ಥಿತಿಯನ್ನು ಹೆಚ್ಚಳವಾಗುವಂತೆ ಉಳಿಸಲು ಡೆವಲಪರ್‌ಗಳಿಗೆ ಸುಲಭವಾಗಿ ಅನುಮತಿಸಲು ಮತ್ತು ಅಪ್ಲಿಕೇಶನ್ ಅನ್ನು ಮರು ಪ್ರಾರಂಭಿಸಿದಾಗ ಅದನ್ನು ರೀಸ್ಟೋರ್ ಮಾಡುವಂತೆ ಅಪ್ಲಿಕೇಶನ್ ಮಾಡೆಲ್ ಅನ್ನು ನಿರೂಪಿಸಲಾಗಿದೆ. ವಿಂಡೋಸ್ 8 ನ ಹೊಸ ಟಾಸ್ಕ್ ಮ್ಯಾನೇಜರ್‌ನಲ್ಲಿ, ರನ್ ಆಗುತ್ತಿರುವ ಮತ್ತು ತಡೆಹಿಡಿಯಲಾಗಿರುವ ಅಪ್ಲಿಕೇಶನ್‌ಗಳ ಸ್ಥಿತಿಯನ್ನು ನಾವು ವೀಕ್ಷಿಸಬಹುದು.

 

ಮೂಲ : ಭಾಷಾಇಂಡಿಯ

ಕೊನೆಯ ಮಾರ್ಪಾಟು : 4/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate