ವಿಂಡೋಸ್ ಸ್ಟೋರ್ ಅಪ್ಲಿಕೇಶನ್‌ಗಳಿಗೆ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ ನಿರ್ಮಿಸುವ ಭಾಗವಾಗಿ, ಗ್ರಾಹಕರು ತಮ್ಮ ಅಪ್ಲಿಕೇಶನ್‌ಗಳಲ್ಲಿ ವಿಶ್ವಾಸವನ್ನು ಇರಿಸುವಂತೆ ಮಾಡುವುದು ಪ್ರಾಥಮಿಕ ಗುರಿಯಾಗಿದೆ. ತಾವು ನಿರೀಕ್ಷಿಸಿದಂತೆ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತದೆ ಮತ್ತು ಸರಿಯಾಗಿ ಅನ್‌ಇನ್‌ಸ್ಟಾಲ್ ಆಗುತ್ತದೆ ಎಂಬುದರ ಬಗ್ಗೆ ಗ್ರಾಹಕರು ವಿಶ್ವಾಸ ಹೊಂದಿರಬೇಕೆಂಬುದನ್ನು ನಾವು ಬಯಸುತ್ತೇವೆ. ಈ ವಿಶ್ವಾಸವು ಸ್ವತಃ ವಿಂಡೋಸ್ ಸ್ಟೋರ್‌ನಿಂದ, ಅದರ ಸರಾಗ ಇನ್‌ಸ್ಟಾಲ್ ಮತ್ತು ಅನ್‌ಇನ್‌ಸ್ಟಾಲ್‌ನಿಂದ, ಬಳಕೆದಾರ ಸ್ಥಳ ಮತ್ತು ವೆಬ್‌ಕ್ಯಾಮ್ ಬಳಸಲು ಸಮ್ಮತಿಯಿಂದ ಹಿಡಿದು ವಿಂಡೋಸ್ ಸ್ಟೋರ್ ಸಲ್ಲಿಕೆ ಮಾನದಂಡವನ್ನು ಬಳಕೆದಾರ ಅಪ್ಲಿಕೇಶನ್ ಪೂರೈಸುತ್ತದೆ ಎಂದು ಪರೀಕ್ಷಿಸುವ ವಿಂಡೋಸ್ ಸ್ಟೋರ್ ಸರ್ಟಿಫಿಕೇಶನ್ ಕಿಟ್‌ನಿಂದ ಬರುತ್ತದೆ.
ಇಂದಿನ ಅಪ್ಲಿಕೇಶನ್‌ಗಳು ಹಣಕಾಸು ದಾಖಲೆಯಿಂದ ಹಿಡಿದು ಬದಲಾಯಿಸಲಾಗದ ವೈಯಕ್ತಿಕ ಫೋಟೋಗಳವರೆಗೆ ಪ್ರಮುಖವಾದ ಗ್ರಾಹಕರ ಡೇಟಾವನ್ನು ಹೊಂದಿರುತ್ತವೆ. ಗ್ರಾಹಕರ ವಿಶ್ವಾಸವನ್ನು ನಿರ್ಮಿಸಲು ಮತ್ತು ಗ್ರಾಹಕರಲ್ಲಿ ಸತತವಾಗಿ ಸಂತೋಷವನ್ನು ಮೂಡಿಸುವುದಕ್ಕಾಗಿ ಭದ್ರತೆಯ ಅತ್ಯುತ್ತಮ ಅಭ್ಯಾಸಗಳನ್ನು ಬಳಕೆದಾರ ಅಪ್ಲಿಕೇಶನ್‌ನೊಳಗೆ ಜಾರಿಗೊಳಿಸುವುದು ಪ್ರಮುಖವಾಗಿದೆ. ಭದ್ರತೆಯ ಅತ್ಯುತ್ತಮ ಅಭ್ಯಾಸಗಳು ನೇರವಾಗಿದೆ ಮತ್ತು ಭದ್ರತೆ ರಕ್ಷಣೆಗಳನ್ನು ಬಳಕೆದಾರ ಅಪ್ಲಿಕೇಶನ್‌ಗೆ ಸೇರಿಸುವುದು ಕಷ್ಟಕಕರವೇನಲ್ಲ. ಅನನ್ಯವಾದ ಅಪ್ಲಿಕೇಶನ್ ಕಂಟೇನರ್‌ನ ಪ್ರಸಂಗದಲ್ಲಿಯೂ ಸಹ ಅಪ್ಲಿಕೇಶನ್‌ಗಳು ರನ್ ಆಗುತ್ತವೆ ಮತ್ತು ಇದು ಅದರ ಡೇಟಾವನ್ನು ಇತರ ಅಪ್ಲಿಕೇಶನ್‌ಗಳಿಂದ ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. ಡೇಟಾ ಮತ್ತು ಸೆಟ್ಟಿಂಗ್‌ಗಳಿಗೆ ಸ್ವಂತ ಸ್ಟೋರ್ ಅನ್ನು ಒಳಗೊಂಡು ವಿಶೇಷವಾದ ವಾತಾವರಣವನ್ನು ಬಳಕೆದಾರರಿಗೆ ಅಪ್ಲಿಕೇಶನ್ ಕಂಟೇನರ್‌ಗಳು ಒದಗಿಸುತ್ತವೆ.
ವಿಂಡೋಸ್ 8 ಮತ್ತು ವಿಶುವಲ್ ಸ್ಟುಡಿಯೋ 2012 ಇವುಗಳು ಸಾಕಷ್ಟು API ಗಳು, ನಿಯಂತ್ರಣಗಳು ಮತ್ತು ಪರಿಕರಗಳನ್ನು ಒದಗಿಸುತ್ತವೆ ಮತ್ತು ಇವುಗಳು ಅಪ್ಲಿಕೇಶನ್ ತುತ್ತಾಗುವಿಕೆಯನ್ನು ತಗ್ಗಿಸುತ್ತದೆ ಮತ್ತು ಸಾಮಾನ್ಯ ಭದ್ರತೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ವಿಶುವಲ್ ಸ್ಟುಡಿಯೋದೊಂದಿಗೆ ಸೇರಿಸಿ
ವಿಶುವಲ್ ಸ್ಟುಡಿಯೋ 2012 ರೊಂದಿಗೆ ಸೇರಿಸಿದಾಗ, ಸಾಮಾನ್ಯ ಆಕ್ರಮಣಗಳಿಂದ ಅಪ್ಲಿಕೇಶನ್‌ಗಳನ್ನು ರಕ್ಷಿಸುವ ಭದ್ರತೆ ತಂತ್ರಜ್ಞಾನಗಳು (GS, ASLR, DEP etc..) ಡೀಫಾಲ್ಟ್ ಆಗಿ ನೇಟಿವಿ ಕೋಡ್‌ಗಾಗಿ ಅಪ್ಲಿಕೇಶನ್‌ನೊಳಗೆ ಸಕ್ರಿಯಗೊಳ್ಳುತ್ತವೆ.
ಅಪ್ಲಿಕೇಶನ್ ಸಾಮರ್ಥ್ಯಗಳನ್ನು ಕಡಿಮೆಗೊಳಿಸುವುದು
ಅಪ್ಲಿಕೇಶನ್‌ಗಳಿಗೆ ಅಗತ್ಯವಾಗುವ ಕನಿಷ್ಠ ಸಾಮರ್ಥ್ಯಗಳನ್ನು ನಿರೂಪಿಸುವುದು ಪ್ರಮುಖವಾಗಿದೆ, ಇದರಿಂದ ಅಪ್ಲಿಕೇಶನ್‌ಗಳು ಅಗತ್ಯವಾಗುವ ಕನಿಷ್ಠ ಸವಲತ್ತಿನೊಳಗೆ ರನ್ ಆಗುತ್ತವೆ.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 12/25/2019