ಅತ್ಯುತ್ತಮ ವಿನ್ಯಾಸ
ಅತ್ಯುತ್ತಮವಾಗಿ ವಿನ್ಯಾಸ ಮಾಡಿದ ಅಪ್ಲಿಕೇಶನ್‌ನ ಕಲ್ಪನೆಯು ಅಪ್ಲಿಕೇಶನ್‌ನ ಬಳಕೆದಾರ ಮಾದರಿ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿನ ನಡವಳಿಕೆಯಿಂದ ಹಿಡಿದು ಅಪ್ಲಿಕೇಶನ್‌ನ ಸೌಂದರ್ಯ ಮತ್ತು ವ್ಯಕ್ತಿತ್ವದ ಘಟಕಾಂಶಗಳನ್ನು ಒಳಗೊಂಡಿರುತ್ತದೆ. ವಿನ್ಯಾಸ ಮಾರ್ಗದರ್ಶಿಯನ್ನು ಒಳಗೊಳ್ಳುವ ಅಪ್ಲಿಕೇಶನ್‌ಗಳನ್ನು ಎದ್ದುಗಾಣಿಸಲು ಮೈಕ್ರೋಸಾಫ್ಟ್ ಎದುರು ನೋಡುತ್ತದೆ ಮತ್ತು ಇದು ಅಪ್ಲಿಕೇಶನ್‌ಗಳಿಂದ ಹೆಚ್ಚಿನ ಸದುಪಯೋಗ ಪಡೆದುಕೊಳ್ಳಲು ಗ್ರಾಹಕರಿಗೆ ಸಹಾಯ ಮಾಡುತ್ತದೆ. ಈ ಮುಂದಿನಂತಹ ವಿಂಡೋಸ್ ಸ್ಟೋರ್ ಅಪ್ಲಿಕೇಶನ್ ವೈಶಿಷ್ಟ್ಯಗಳನ್ನು ಜಾರಿಗೊಳಿಸುವ ಮೂಲಕ ಅತ್ಯುತ್ತಮ ಕಾರ್ಯ ಮಾಡುವ ಅಪ್ಲಿಕೇಶನ್‌ಗಳನ್ನು
ಒಳಪಡಿಸಿಕೊಳ್ಳಲು ನಿರ್ದಿಷ್ಟವಾಗಿ ಮೈಕ್ರೋಸಾಫ್ಟ್ ಉತ್ತೇಜಿತವಾಗಿದೆ:
• ಚಾರ್ಮ್‌ಗಳು ಮತ್ತು ಒಪ್ಪಂದಗಳು (ಸೆಟ್ಟಿಂಗ್‌ಗಳು, ಶೋಧ, ಹಂಚಿಕೆ)
• ಅಪ್ಲಿಕೇಶನ್ ಬಾರ್ ಮೇಲೆ ಕಮಾಂಡ್‌ಗಳನ್ನು ಇರಿಸುವುದು
• ಓರಿಯಂಟೇಶನ್ ಬದಲಾವಣೆಗಳನ್ನು ಪತ್ತೆಹಚ್ಚುವುದು
• ಸ್ನಾಪ್ ಮಾಡಿದ ಮತ್ತು ತುಂಬಿದ ವೀಕ್ಷಣೆಗಳನ್ನು ಒದಗಿಸುವುದು
ಅಪ್ಲಿಕೇಶನ್ ಅನ್ನು ಯೋಜಿಸುವಾಗ, ವಿನ್ಯಾಸದಲ್ಲಿ ಈ ವೈಶಿಷ್ಟ್ಯಗಳನ್ನು ಸೇರಿಸಿಕೊಳ್ಳುವ ಅತ್ಯುತ್ತಮ ಮಾರ್ಗವನ್ನು ನಿರ್ಧರಿಸುವ ಸಂದರ್ಭದಲ್ಲಿ Dev Center ನಲ್ಲಿ ಮೈಕ್ರೋಸಾಫ್ಟ್ ವಿನ್ಯಾಸ ತತ್ವಗಳನ್ನು ವಿಮರ್ಶಿಸಿ. ಈ ವಿಷಯಗಳು ಮೂಲಭೂತ ಅಪ್ಲಿಕೇಶನ್ ವಿನ್ಯಾಸ ತತ್ವಗಳನ್ನು ಒಳಗೊಳ್ಳುವುದರ ಜೊತೆಗೆ ನ್ಯಾವಿಗೇಶನ್, ಕಮಾಂಡ್‌ಗಳು, ಬ್ರಾಂಡಿಂಗ್ ಮತ್ತು ಬಳಕೆದಾರ ಅನುಭವದ ಇತರ ಘಟಕಗಳನ್ನು ಒಳಗೊಳ್ಳುತ್ತವೆ.
ಅಪ್ಲಿಕೇಶನ್‌ನ ನಿರ್ದಿಷ್ಟ ನಡವಳಿಕೆ ಮತ್ತು ಬಳಕೆದಾರ ಅನುಭವಕ್ಕೆ ಸಹಾಯ ಮಾಡಲು ಅಪ್ಲಿಕೇಶನ್ ಲ್ಯಾಬ್ಸ್ ಅನ್ನು ಮತ್ತು ವಿಶ್ವದಾದ್ಯಂತದ ಈವೆಂಟ್‌ಗಳನ್ನು ಮೈಕ್ರೋಸಾಫ್ಟ್ ರನ್ ಮಾಡುತ್ತದೆ. ಎಲ್ಲಾ ಸಮಯದಲ್ಲೂ ಹೊಸ ಈವೆಂಟ್‌ಗಳನ್ನು ನಿಗದಿಪಡಿಸಲಾಗುತ್ತದೆ. ವಿಂಡೋಸ್ 8 ಅಪ್ಲಿಕೇಶನ್‌ನ ಅತ್ಯುತ್ತಮ ಬಳಕೆಯನ್ನು ಮಾಡಿಕೊಳ್ಳುವ ಎರಡು ಮಾದರಿ ಅಪ್ಲಿಕೇಶನ್‌ಗಳೆಂದರೆ: ಅಪ್ಲಿಕೇಶನ್ ಬಾರ್‌ನಲ್ಲಿ ಫಿಲ್ಟರಿಂಗ್ ಮತ್ತು ಸಾರ್ಟಿಂಗ್ ನಿಯಂತ್ರಣಗಳನ್ನು ತೋರಿಸುತ್ತಿರುವ "eBay" ಮತ್ತು KEXP ಆರ್ಟಿಸ್ಟ್ ಡಿಸ್ಕವರಿ, ಇಲ್ಲಿ ಬಳಕೆದಾರರು ಏನು ಪ್ಲೇ ಆಗುತ್ತಿದೆ ಎಂಬುದನ್ನು ನೋಡಬಹುದು, ಆಡಿಯೋವನ್ನು ಪಾಸ್ ಮಾಡಬಹುದು ಅಥವಾ ರೀಸ್ಟಾರ್ಟ್ ಮಾಡಬಹುದು ಮತ್ತು ಹಾಡುಗಳು, ಶೋಗಳು ಮತ್ತು ಈವೆಂಟ್‌ಗಳ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಕ್ಲಿಕ್ ಮಾಡಬಹುದು.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 11/16/2019