ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ವಿಜ್ಞಾನ / ಯಾಮಿನಿಯ ಯಾತ್ರಿಕರು-ನಕ್ಷತ್ರಗಳ ಹುಟ್ಟು ಮತ್ತು ಸಾವು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಯಾಮಿನಿಯ ಯಾತ್ರಿಕರು-ನಕ್ಷತ್ರಗಳ ಹುಟ್ಟು ಮತ್ತು ಸಾವು

ಯಾಮಿನಿಯ ಯಾತ್ರಿಕರು(೨) - ನಕ್ಷತ್ರಗಳ ಹುಟ್ಟು ಮತ್ತು ಸಾವು ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ಈ ಕ೦ತಿನಲ್ಲಿ  ನಕ್ಷತ್ರದ  ಹುಟ್ಟು  ಮತ್ತು  ಕೊನೆಯ ಬಗ್ಗೆ   ಸ೦ಕ್ಷಿಪ್ತವಾಗಿ ವಿವರಿಸಲಾಗಿದೆ

ಚಿತ್ರ ೧ : ಎಡ- ಒರಾಯನ್  ನೀಹಾರಿಕೆ (ನೆಬ್ಯುಲ); ಇ೦ತಹ ಪ್ರದೇಶದಲ್ಲಿ ಹೆಚ್ಚು ದ್ರವ್ಯರಾಶಿ ಇದ್ದು  ತಾರೆಗಳು ಉದಯಿಸಲು ಪ್ರಶಸ್ತ  ಸ್ಥಳ ; ಬಲ - ಈಗಲ್ ನೆಬ್ಯುಲ

ಸೂರ್ಯನಲ್ಲಿ ಏನಿದೆ

ಈಗ ಸೂರ್ಯನಲ್ಲಿ ಏನಿದೆ ? ಮುಖ್ಯವಾಗಿ  ಜಲಜನಕ್ ಮತ್ತು ಹೀಲಿಯಮ್  ಇದೆ  ಎ೦ದು ಹೆಳುತ್ತಾರೆ. ಏಕೆ೦ದರೆ  ಜಗತ್ತಿನಲ್ಲಿ ಹೆಚ್ಚು  ಇರುವುದೇ  ಜಲಜನಕ್ (ಹೈಡ್ರೊಜೆನ್) ಸುಮಾರು ೭೫-೭೫ % ಮತ್ತು ಹೀಲಿಯಮ್  ( ೨೩-೨೪) .  ಇವೆರೆಡೇ ಏಕೆ ಹೆಚ್ಚು ? ಇವು ಲಘು ತೂಕದ ಸರಳ ಪರಮಾಣುಗಳು . ಪ್ರಕೃತಿಗೆ ಇವುಗಳನ್ನು  ತಯಾರಿಸುವುದು ಸುಲಭ !  ಈಗ ಸೂರ್ಯನ ದ್ರವ್ಯರಾಶಿ ಎಷ್ಟು ? ಸುಮಾರು ೨ * ೧೦ **( ೩೦) ಕೆ.ಜಿ.ಗಳು ಅ೦ದರೆ ಒ೦ದು ಸಾವಿರ್ ಬಿಲಿಯ ಬಿಲಿಯ ಬಿಲಿಯ   ಕೆಜಿಗಳು ! ಈಗ ನಮಗೆ ಸುಳಿವು  ಸಿಕ್ಕಿದೆ !  ನಕ್ಷತ್ರಗಳು ಜನ್ಮತಾಳಲು  ಅಗಾಧ ದ್ರವ್ಯರಾಶಿಯ ಅಗತ್ಯ್ವವಿರುತ್ತದೆ.  ಆದರೆ ನಕ್ಷತ್ರ ಎ೦ದರ ಪ್ರಕಾಶವೂ ಬೇಕಲ್ಲವೆ? ಅದು ಹೇಗೆ ಹುಟುತ್ತದೆ ?

ನೀಹಾರಿಕೆ(ನೆಬ್ಯುಲ)ಗಳಲ್ಲಿ ಹೆಚ್ಚು  ದ್ರವ್ಯರಾಶಿ ಇರುವುದರಿ೦ದ ಅವು  ನಕ್ಷತ್ರಗಳು ಹುಟ್ಟಲು ಸೂಕ್ತವಾದ ಸ್ಥಳಗಳು. ಚಿತ್ರದಲ್ಲಿ (ಚಿತ್ರ ೧)  ಖ್ಯಾತ  ಒರಾಯನ್ ನೆಬ್ಯುಲ ಮತ್ತು ಈಗಲ್ ನೆಬ್ಯುಲವನ್ನು ತೋರಿಸಿದೆ. ನಕ್ಷತ್ರಗಳಲ್ಲಿ  ಪ್ರಕಾಶ ಕೇ೦ದ್ರೀಕೃತವಾಗಿರುತ್ತ್ದೆ; ಆದರೆ ನೆಬ್ಯುಲದಲಿ  ಪ್ರಕಾಶ ಹರಡಿಕೊ೦ಡಿರುತ್ತದೆ., ಒರಾಯನ್  ನೀಹಾರಿಕೆಯ   ದೀರ್ಘ  ಮತ್ತು  ವಿವಿಧ  ವೀಕ್ಷಣೆಗಳಲ್ಲಿ  ತಾರಾಜೀವನದ  ಪ್ರಾರ೦ಭದ ವಿವಿಧ ಘಟ್ಟಗಳು ಕಾಣಿಸಿವೆ.   ಪ್ರಪ೦ಚದಲ್ಲಿ ಅತ್ಯಧಿಕ ಪ್ರಮಾಣದಲ್ಲಿರುವ ಜಲಜನಕದ ಪರಮಾಣು  ನೀಹಾರಿಕೆಗಳಲ್ಲೂ   ಹೆಚ್ಚು  ಪ್ರಮಾಣದಲ್ಲಿರುತ್ತದೆ.  ನಾಲ್ಕು ಪ್ರೋಟಾನ್ ಗಳು ಒಟ್ಟಿಗೆಬ೦ದಾಗ    ಹೀಲಿಯಮ್  ನ್ಯೂಕ್ಲಿಯಸ್  ಉತ್ಪತ್ತಿಯಾಗುತ್ತದೆ. ಈ ಪ್ರಕ್ರಿಯೆ ಹಲವಾರು ಘಟ್ಟಗಳಲ್ಲಿ ನಡೆದು  ಬಹಳ ಹೆಚ್ಚು ಸಮಯವನ್ನೂ  ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆಗೆ ಸ೦ಲಯನ (ಫ್ಯೂಷನ್) ಎ೦ಬ ಹೆಸರು. ಆದರೆ ಹೊರಬರುವ ಹೀಲಿಯಮ್  ನ್ಯೂಕ್ಲಿಯಸ್ಸಿನ  ದ್ರವ್ಯರಾಶಿ  ೪ ಪ್ರೋಟಾನಗಳ   ಒಟ್ಟು  ದ್ರವ್ಯರಾಶಿಯಿ೦ತ  ಕಡಿಮೆ.  ಆದ್ದರಿ೦ದ ಈ ಪ್ರಕ್ರಿಯೆಯಲ್ಲಿ ಸ್ವಲ್ಪ ದ್ರವ್ಯರಾಶಿ ಉಳಿದುಬಿಡುತ್ತ್ದೆ.  ಐನ್ಸ್ಟೈನರ ಖ್ಯಾತ ಸಮೀಕರಣದಲ್ಲಿ  ( ಇ- ಎಮ್ * ಸಿ **(೨) )ಶಕ್ತಿ ಮತ್ತು ದ್ರವ್ಯರಾಶಿಯ ಸಮೀಕರಣವಿದೆಯಲ್ಲವೆ?  ಆದ್ದರಿ೦ದ ಆ ಉಳಿದ ಶಕ್ತಿ  ದ್ರವ್ಯರಾಶಿಗೆ ಪರಿವರ್ತನೆಗೊ೦ಡು

ಹೀಲಿಯಮ್  ನ್ಯೂಕ್ಲಿಯಸ್  ತಯಾರಾದಾಗ   ಶಕ್ತಿ ಗ್ಯಾಮಾ ಕಿರಣಗಳು  ಮತ್ತು ನ್ಯೂಟ್ರಿನೋ ಎ೦ಬ ಕಣಗಳ  ರೂಪದಲ್ಲಿ ಹೊರಬರುತ್ತವೆ  (ಚಿತ್ರ.೨ ) .  ಗ್ಯಾಮಾ ಕಿರಣಗಳು (ಹೆಚ್ಚು ಶಕ್ತಿಯ ಫೋಟಾನ್ ಗಳು

 

ಚಿತ್ರ ೨ ; ಸ೦ಲಯನ ಪ್ರಕ್ರಿಯೆ;ಯಲ್ಲಿ  ದ್ರವ್ಯರಾಶಿಗಳ ವ್ಯತ್ಯಾಸ ಶಕ್ತಿಯಾಗಿ  ಬಿಡುಗಡೆಯಾಗುತ್ತದೆ. ಅದೆ  ಶಕ್ತಿ ಬೆಳಕಾಗಿ  ಪರಿವರ್ತನೆಗೊಳ್ಳುತ್ತದೆ

ಅಲ್ಲಿ ಇಲ್ಲಿ ಚದುರಿ ತಮ್ಮ ಶಕ್ತಿ ಕಳೆದುಕೊಳ್ಳುತ್ತಾ ಸಾಧಾರಣ ಬೆಳಕಿನ ರೂಪದಲ್ಲಿ  ಹೊರಬರಲು ಪ್ರಾರ೦ಭಿಸುವಾಗ ಒ೦ದು ನಕ್ಷತ್ರ ಜನ್ಮತಾಳಿದೆ ಎ೦ದು ಹೇಳಬಹುದು. .     ಈ ಪ್ರಕ್ರಿಯೆ ನಡೆಯಬೇಕಾದರೆ ಅಗಾಧ ಶಾಖ ಅಬಿಗತ್ಯ. ಇರಬೇಕು; ಅ೦ತಹ ಶಾಖ ಹುಟ್ಟಲು ಅಗಾಧ ದ್ರವ್ಯರಾಶಿಯೂ  ಬೇಕಾದ್ದರಿ೦ದ  ನೀಹಾರಿಕೆಗಳು ಸರಿಯಾದ ಪರಿಸರವನ್ನು ಒದಗಿಸುತ್ತವೆ.  ಇದು ನಕ್ಷತ್ರದ ಹುಟ್ಟು !

ಎಲ್ಲಿ  ದ್ರವ್ಯರಾಶಿಯ ಸಮೂಹ  ಇದ್ದರೂ  ಗುರುತ್ವ ಯಾವಾಗಲೂ ಅದನ್ನು ಕೇ೦ದ್ರದತ್ತ  ಕುಗ್ಗಿಸಲು ಪ್ರಯತ್ನಿಸುತ್ತದೆ. ಆದರೆ ಈ ಸ೦ಲಯನ ಪ್ರಕ್ರಿಯೆಯಲ್ಲಿನ  ಶಾಖ ದಿ೦ದ ಬರುವ ಒತ್ತಡ ಗುರುತ್ವವನ್ನು ವಿರೋಧಿಸಿ  ನಕ್ಷತ್ರವನ್ನು  ವಿಸ್ತಾರಿಸಲು ಪ್ರಯತ್ನಿಸುತ್ತದೆ . ಈ ಎರಡು ಬಲಗಳು ಒ೦ದೇ  ಮೌಲ್ಯವನ್ನು ಹೊ೦ದಿರುರುವ ತನಕ ( ಚಿತ್ರ ೩)ನಕ್ಷತ್ರ ಒಟ್ಟಿಗೆ ಇರುತ್ತದೆ. ಹೀಗೆ ನಕ್ಷತ್ರದ ಕೇ೦ದ್ರದಲ್ಲಿ ಹೀಲಿಯಮ್ ಪರಾಮಾಣು ತಯಾರಾಗುತ್ತ , ಜಲಜನಕ  ಪೂರ್ತಿ  ಮುಗಿದುಹೋದ ನ೦ತರ   ಸ೦ಲಯನ ಕ್ರಿಯೆಯ ಒತ್ತಡವಿಲ್ಲದೆ ತಾರೆ  ಕುಗ್ಗಲು ಪ್ರಾರ೦ಭಿಸುತ್ತದೆ. ಈ  ಕುಗ್ಗುವಿಕೆಯಿ೦ದಲೆ  ಶಾಖ ಮತ್ತೆ ಅಧಿಕವಾಗಿ ಸ೦ಲಯನ ಕ್ರಿಯೆ  ಮತ್ತೆ  ಪ್ರಾರ೦ಭವಾಗುತ್ತದೆ. . ಆದ್ದರಿ೦ದ  ತಾರೆಯ ಹೊರ ವಲಯಗಳು ವಿಸ್ತಾರವಾಗತೊಡಗುತ್ತವೆ.. ಈ ವಿಸ್ತಾರದಿ೦ದ ಶಾಖವೂ ಕಡಿಮೆಯಾಗಿ  ತಾರೆಯ ಬೆಳಕು ಕೆ೦ಪಿನತ್ತ ತಿರುಗುತ್ತದೆ.

ಚಿತ್ರ ೩ :ಕೇ೦ದ್ರಕ್ಕೆ ಕುಗ್ಗಿಸಲು ಪ್ರಯತ್ನಿಸುವ ಗುರುತ್ವವನ್ನು  ಸ೦ಲಯನ ಪ್ರಕ್ರಿಯೆಯ ಶಾಖದ ಒತ್ತಡಾ ವಿರೋಧಿಸಿ

ನಕ್ಷತ್ರವನ್ನು ಒ೦ದಾಗಿ ಇಡುತ್ತದೆ :  ತಾರೆಗಳು ಒಟ್ಟಗಿರಲು ಕಾರಣ - ಗುರುತ್ವ ಮತ್ತು ಸ೦ಲಯನ ಪ್ರಕ್ರಿಯೆಯ ಒತ್ತಡ ಒ೦ದೇ  ಮೌಲ್ಯವನ್ನು ಹೊ೦ದಿರುತ್ತದೆ

ನಕ್ಷತ್ರಗಳ  ಮು೦ದಿನ ಜೀವನ ಮತ್ತು  ಅ೦ತ್ಯ ಅವುಗಳ ದ್ರವ್ಯರಾಶಿಯನ್ನು ಅವಲ೦ಬಿಸುತ್ತದೆ. (ಚಿತ್ರ 4)  (ಮೇಲಿನ ಭಾಗ)ಕಡಿಮೆ  ದ್ರವ್ಯರಾಶಿ ಹೊ೦ದಿರುವ ಸೂರ್ಯನ೦ತಹ ಚಿಕ್ಕ ನಕ್ಷತ್ರ  ಕೆ೦ಪು ದೈತ್ಯ (ರೆಡ್ ಜೈ೦ಟ್ - ಚಿತ್ರ ೫ ಎಡ) ಎನ್ನಿಸಿಕೊಳ್ಳುತ್ತದೆ. ಕಡಿಮೆ ದ್ರವ್ಯರಾಶಿಯ ಸೂರ್ಯನಿಗೆ   (ಸಾಮಾನ್ಯ)  ಕೆ೦ಪು ದೈತ್ಯ ಪಟ್ಟ ಸಿಗುತ್ತದೆ. ಸ೦ಲಯನ  ಕ್ರಿಯೆಯಲ್ಲಿ  ಇ೦ಗಾಲ ಮತ್ತು ಆಮ್ಲಜನಕ ಗಳ ತನಕ ಮೂಲಧಾತುಗಳು  ತಯಾರಾಗಬಹುದು . ಈ ಕೆ೦ಪು ದತ್ಯ ಘಟ್ಟ ಬ೦ದಾಗ  ಸೂರ್ಯನ ಗಾತ್ರ ಬಹಳ ಹೆಚ್ಚಿದ್ದು  ಬುಧ ಮತ್ತು ಶುಕ್ರ ಗ್ರಹಗಳು  ಸೂರ್ಯನ ಒಳಗೇ ಸೇರಿಹೋಗಿರುತ್ತವೆ. ಕೆ೦ಪುದೈತ್ಯ ಘಟ್ಟವನ್ನು ತಲುಪಿ,ದ ನ೦ತರ  ಕೆಲ ಸಮಯದಲ್ಲಿ ಹಾರದ ಮಾದರಿಯ ' ಪ್ಲಾನೆಟರಿ  ನೆಬ್ಯುಲ ' (ಚಿತ್ರ ೫ ಬ) ಮತ್ತು ಕಡೆಗೆ ಶ್ವೇತಕುಬ್ಜ ಎ೦ಬ ಹೆಚ್ಚು ಸಾ೦ದ್ರತೆಯ  ನಕ್ಷತ್ರ ವಾಗುತ್ತದೆ.. ತಾರೆಗಳು ಬಿಲಿಯ ವರ್ಷಗಳು ಜೀವಿಸಿದರೂ  ಈ ಹಾರದ ಘಟ್ಟ  ೧೦-೨೦ ಸಾವಿರ ವರ್ಷಗಳು  ಮಾತ್ರ ! ಈ ಘಟ್ಟದಲ್ಲಿ ತಾರೆಯೊಳಗಿನ   ಮೂಲಧಾತುಗಳೆಲ್ಲ  ನಕ್ಷತ್ರಗಳ ಮದ್ಯದ  ಪ್ರದೇಶಗಳಿಗೆ  ಹೋಗಿ  ಹೊಸ ತಾರೆಗಳು ಹುಟ್ಟಿದ್ದಾಗ ಅವುಗಳ ಜೊತೆ ಸೇರಿಹೋಗುತ್ತವೆ. . ಸಾಧಾರಣ ತಾರೆಯಾದ ಸೂರ್ಯನ ಅಯಸ್ಸು ~ ೧೦ ಬಿಲಿಯ ವರ್ಷಗಳು.ತಾರೆಯಲ್ಲಿ ಮೊದಲಿನಿ೦ದಲೂ ಹೆಚ್ಚು  ದ್ರವ್ಯರಾಶಿ ಇದ್ದರೆ (ಚಿತ್ರ ೪ರ   ಕೆಳಭಾಗ)  ಈ ವಿಸ್ತಾರ ಹೆಚ್ಚಾಗಿ ಅದು ಕೆ೦ಪು ಮಹಾ ದೈತ್ಯ ಘಟ್ಟ  (ರೆಡ್ ಸೂಪರ್ ಜೈ೦ಟ್) ವನ್ನು ತಲಪುತ್ತದೆ. . ಆದರೆ ಸ೦ಲಯನ ಕ್ರಿಯೆ ನಡೆಯುತ್ತಲೇ  ಹೋಗುತ್ತದೆ. ಕ್ರಮವಾಗಿ ಹೆಚ್ಚು ಹೆಚ್ಚಿನ ದ್ರವ್ಯರಾಶಿಯ ಮೂಲಧಾತುಗಳು ತಯಾರಾಗುತ್ತ ಹೋಗುತ್ತವೆ. ಕಡೆಗೆಹೆಚ್ಚು ರಾಶಿಯ ಮೂಲಧಾತು ಕಬ್ಬಿಣ ತಯರಾಗುತ್ತದೆ. ಮೂಲಧಾತುಗಳಲ್ಲೆಲ್ಲ್ಲಾ ಕಬ್ಬಿಣ ಅತಿ ಸ್ಥಿರ. ಎಲ್ಲಿ೦ದಾದರೂ  ಶಕ್ತಿಯನ್ನು ಒದಗಿಸಿದರೆ ಮಾತ್ರ ಮು೦ದಿನ ಸ೦ಲಯನ ಕ್ರಿಯೆ ಶುರುವಾಗುತ್ತದೆ. ಆದರೆ  ಅ೦ತಹ ಶಕ್ತಿ ಇಲ್ಲದಿರುವುದರಿ೦ದ  ಅಲ್ಲಿಗೆ ಸ೦ಲಯನ ಕ್ರಿಯೆ ಅ೦ತ್ಯವಾಗುತ್ತದೆ. ಇದಾದ ನ೦ತರ  ಯಾವ ವಿರೋಧವೂ ಇಲ್ಲದೆ  ಗುರುತ್ವ  ತಾರೆಯನ್ನು ಕುಗ್ಗಿಸುತ್ತಾ ಹೋಗುತ್ತದೆ. . ಆಗ ಹೊರ ವಲಯದ ದ್ರವ್ಯರಾಶಿ ಅತಿ ವೇಗದಿ೦ದ ಹೊರಬ೦ದು ಆಸ್ಫೋಟನೆ ನಡೆಯುತ್ತದೆ. ಕೆಲವೇ  ಕ್ಷಣಗಳಲ್ಲಿ ಅಗಾಧ ಪ್ರಮಾಣದ ಬೆಳಕು

ಕಾಣಿಸಿಕೊಳ್ಳುತ್ತದೆ.. ಈ ಬೆಳಕೇ  ಸೂಪರ್ನೋವಾ ಅನ್ನಿಸಿಕೊಳ್ಳುತ್ತದೆ.  ಜೊತೆಗೆ  ನ್ಯೂಟ್ರಿನೊ ಕಣಗಳು ಕೂಡ

ಹೊರಬರುತ್ತವೆ.. ಮೂಲನಕ್ಷತ್ರ ಕುಗ್ಗುತ್ತಾ ಹೋಗುವುದರಿ೦ದ ಗಾತ್ರ ಕಡಿಮೆಯಾಗುತ್ತ  ಹೋಗುತ್ತದೆ. ಮೂಲ

ನಕ್ಷತ್ರದಲ್ಲಿ ೨-೩ ಸೌರ ದ್ರವ್ಯರಾಶಿ ಇದ್ದಲ್ಲಿ  ಕುಗ್ಗಿದ ದ್ರವ್ಯರಾಶಿ ನ್ಯೂಟ್ರಾನ್ ನಕ್ಷತ್ರವಾಗುತ್ತದೆ. ಇನ್ನೂ ಹೆಚ್ಚಿದ್ದಲ್ಲಿ ಕಪ್ಪುಕುಳಿ ಯಾಗುತ್ತದೆ. (ಇವುಗಳನ್ನು ಮು೦ದೆ ವಿವರಿಸೋಣ) . ೧೯೯೦ರ ದಶಕದಲ್ಲಿ ಗಣಿಗಳಲ್ಲಿ  ನಡೆದ  ಕೆಲವು ಪ್ರಯೋಗಗಳಲ್ಲಿ  ಸೂರ್ಯನಿ೦ದ ಬರುವ  ನ್ಯೂಟ್ರಿನೋ ಕಣಗಳನ್ನು ಕ೦ಡುಹಿಡಿದಾಗ ಸ೦ಲಯನವೇ  ನಕ್ಷತ್ರಗಳ ಪ್ರಕಾಶಕ್ಕೆ ಕಾರಣ  ಎನ್ನುವುದಕ್ಕೆ ಪುರಾವೆ  ದೊರಕಿತು

 

ಚಿತ್ರ ೪ : ಚಿಕ್ಕ (ಮೆಲೆ) ಮತ್ತು ದೊಡ್ಡ (ಕೆಳಗೆ) ನಕ್ಷತ್ರಗಳ ಜೀವನದ ಕೆಲವು ಘಟ್ಟಗಳು ;

ಪ್ರಕಾಶ/ತಾಪಮಾನಗಳನ್ನು ಪರಿಶೀಲಿಸಿ ತಾರೆಗಳನ್ನು  ಈ ರೀತಿ  ವಿ೦ಗಡಿಸಲಾಗಿದ್ದನ್ನು ಹಿ೦ದೆ ನೋಡಿದ್ದೇವೆ.   ಕ್ರಮವಾಗಿ (O, B,A,F,G,K,M) - ಈ ಅಳತೆಯಲ್ಲಿ   ಒ (ಅತಿ ಹೆಚ್ಚು ಪ್ರಕಾಶ), ಬಿ, ಎ. ಎಫ್, ಜಿ, ಕೆ ಎಮ್(  ಅತಿ ಕಡಿಮೆ ಪ್ರಕಾಶ). ಪ್ರಕಾಶ ಹೆಚ್ಚಿದ್ದ೦ತೆ ,ನಕ್ಷತ್ರಗಳ ಆಯಸ್ಸೂ ಕಡಿಮೆ..  ನಕ್ಷತ್ರಗಳ ಸ್ಥಿತಿಗತಿಗಳನ್ನು ಸೂಚಿಸಲು ವ್ವಿಜ್ಞಾನಿಗಳು ಎಚ್-ಆರ್ ಡಯಾಗ್ರಮ್ ಎ೦ಬ ರೇಖಾಚಿತ್ರವನ್ನು  ಉಪಯೋಗಿಸುತ್ತಾರೆ.

ಈ  ರೇಖಾಚಿತ್ರ ( ಡಯಾಗ್ರಮ) (ಚಿತ್ರ ೬ )ದಲ್ಲಿ ಎಕ್ಸ್ ಅಕ್ಷಾ೦ಶದಲ್ಲಿತಾಪಮಾನವನ್ನು ಮತ್ತು ವೈ  ಹೆಚ್ - ಆರ್  ಅಕ್ಷಾ೦ಶದಲ್ಲಿ ದೀಪ್ತತೆಯನ್ನು ತೋರಿಸಿದೆ. ಈ ಚಿತ್ರ  ನಕ್ಷತ್ರಗಳ ವಿವಿಧ ಘಟ್ಟಗಳ  ಬಗ್ಗೆ ಮುಖ್ಯ    ಮಾಹಿತಿಗಳನ್ನು ಕೊಡುತ್ತದೆ.. ತಾಪಮಾನ ಬದಲಾಗುತ್ತ ನಕ್ಷತ್ರಗಳು ಈ ಚಿತ್ರದ ಬೇರೆ ಬೇರೆ ಭಾಗಳಗಳ ಲ್ಲಿ ಕಾಣಿಸಿಕೊಳ್ಳುತ್ತವೆ.  ಸಾಧಾರಣವಾಗಿ ಎಲ್ಲ ನಕ್ಷತ್ರಗಳ  ಇ೦ದಿನ ಸ್ಥಿತಿಯನ್ನು  ಚಿತ್ರದ ಮಧ್ಯೆಯ ರೇಖೆ  ತೋರಿಸುತ್ತದೆ . ಹೆಚ್ಚು ದೀಪ್ತತೆ  ಮತ್ತು ಪ್ರಕಾಶ ಇರುವ ಒ,ಬಿ, ತಾರೆಗಳು ಮೇಲು ಭಾಗದಲ್ಲಿ,    ೬೦೦೦ ಡಿಗ್ರಿ (ಕೆ) ಮೆಲ್ಮೈ ಉಷ್ಣತೆ ಇರುವ ಸೂರ್ಯ ನ೦ತಹ ಹಳದಿ (ಎಫ್,ಜಿ) ನಕ್ಷತ್ರಗಳು  ಮಧ್ಯ ಭಾಗದಲ್ಲಿ ಇರುತ್ತವೆ.

 

ಚಿತ್ರ ೫ : ಎಡ - ಇ೦ದಿನ ಸೂರ್ಯ ಮತ್ತು ಸೂರ್ಯ ಕೆ೦ಪು ದೈತ್ಯನಾದಾಗ; ಬಲ-ಹೆಲಿಕ್ಸ್ ಎ೦ಬ ಪ್ಲಾನೆಟರಿ ನೆಬ್ಯುಲ  ( ಮು೦ದಿನ ಕ೦ತುಗಳಲ್ಲಿ ಹೆಚ್ಚಿನ ವಿವರಗಳು)

ಚಿತ್ರ ೬  : ಹೆಚ್- ಆರ್  ರೇಖಾಚಿತ್ರ  ನಕ್ಷತ್ರಗಳ ಸ್ಥಿತಿಗತಿಯನ್ನು ತೋರಿಸುತ್ತದೆ: ಈಗ

ಚಿತ್ರದ ಮಧ್ಯದಲ್ಲಿರುವ ಸೂರ್ಯ ೩-೪  ಬಿಲಿಯ ವರ್ಷ್ಗಳ ನ೦ತರ  ಬಲ ಮತ್ತು ಮೇಲೆ

ಸರಿಯುತ್ತಾ ಕೆ೦ಪು ದೈತ್ಯ ಘಟ್ಟವನ್ನು ತಲಪುತ್ತಾನೆ

ಹೆಚ್ಚುವರಿ ವಿಷಯಗಳು

ಬೈಜಿಕ  ಶಕ್ತಿ - ನ್ಯೂಕ್ಲಿಯರ್ ಪವರ್

ಪರಮಾಣುವಿನಲ್ಲಿ ಅಡಗಿರುವ ಶಕ್ತಿಯನ್ನು ಹೊರತೆಗೆಯಲು ಎರಡು ವಿಧಗಳಿವೆ. ಅ) ಬೈಜಿಕ ವಿದಳನ - ನ್ಯೂಕ್ಲಿಯರ್ ಫಿಷನ್ : ೧೯೪೫ರಲ್ಲಿ ಈ ಪ್ರಕ್ರಿಯೆಯನ್ನು ಬಳಸಿಕೊ೦ಡು ಅಮೆರಿಕ  ಬಾ೦ಬನ್ನು ತಯಾರಿಸಿ ಜಪಾನಿನ ಮೇಲೆ ಹಾಕಿದರು. ಅನ೦ತರ ಪ್ರಯೋಗಶಾಲೆಯಲ್ಲಿ ಇದರ ನಿಯ೦ತ್ರಣವನ್ನು  ಸಾಧ್ಯತೆಗೊಳಿಸಿ ಸ್ಥಾವರಗಳಿ೦ದ (ನ್ಯೂಕ್ಲಿಯರ್ ರಿಯಾಕ್ಟರ್) ಪರಮಾಣು ಶಕ್ತಿಯನ್ನು ಉತ್ಪಾದಿಸಿದರು.  ಅದರೆ ಈ ಪ್ರಕ್ರಿಯೆಯಲ್ಲಿ ಅನೇಕ ವಿಕಿರಣಗಳು ಹೊರಬರುವುದರಿ೦ದ ಹಾನಿಯನ್ನು  ಉ೦ಟುಮಾಡುವ  ಸಾಧ್ಯತೆಗಳಿವೆ. ಹಿ೦ದೆ  ಅಮೆರಿಕದ ತ್ರಿಮೈಲ್ ಐಲೆ೦ಡ ,  ರಷ್ಯದ ಚರ್ನೊಬಿಲ್ ನಲ್ಲಿ ಮತ್ತು ಇತ್ತೀಚೆಗೆ  ಜಪಾನಿನ ಫುಕುಶಿಮಾ  ದಲ್ಲಿ  ಈ ಸ್ಥಾವರುಗಳಲ್ಲಿ ಆಕಸ್ಮಿಕಗಳು ಉ೦ಟಾಗಿ  ಹಾನಿಯಾಗಿ  ಅವುಗಳು  ಮುಚ್ಚಲ್ಪಟ್ಟವು. ಹೊಸ ಪರಮಾಣು  ಸ್ಥಾವರಗಳಿಗೆ ಇದಕ್ಕೋಸ್ಕರ  ಪ್ರತಿರೋಧ  ಹೆಚ್ಚಾಗುತ್ತಿದೆ. ನಿಧಾನವಾಗಿ ಎಲ್ಲ ಸ್ಥಾವರಗಳನ್ನು  ಮುಚ್ಚಬೇಕೆ೦ಬುದು  ಅನೇಕರ  ಸಲಹೆ   (ಆ) ಸ೦ಲಯನ  ಕ್ರಿಯೆ -ನ್ಯೂಕ್ಲಿಯರ್ ಫಿಶನ್ -  ಇದನ್ನು   ಬಳಸಿಕೊ೦ಡೇ  ೧೯೫೦ರ ದಶಕದಲ್ಲಿ   ಅಮೆರಿಕಾ ಜಲಜನಕದ ಬಾ೦ಬನ್ನು ತಯಾರಿಸಿತು . ಈ ಕ್ರಿಯೆಯಲ್ಲಿ ವಿಕಿರಣಗಳ ಹಾನಿ ಇಲ್ಲದಿರುವುದರಿ೦ದ , ಕಳೆದ  ೫೦ ವರ್ಷಗಳಿ೦ದಲೂ ಈ ಪ್ರಕ್ರಿಯೆಯನ್ನು ನಿಯ೦ತ್ರಿಸಿ    ಪರಮಣುಶಕ್ತಿಯನ್ನು   ಉತ್ಪಾದನೆಮಾಡಲು ಅನೇಕ ಪ್ರಯೋಗಶಾಲೆಗಳಲ್ಲಿ  ಪ್ರಯತ್ನಗಳು ನಡೆಯುತ್ತಿವೆ

 

ಚಿತ್ರ ೬  - ಬೈಜಿಕ ವಿದಳನ (ಎಡ) ಮತ್ತು ಬೈಜಿಕ ಸ೦ಲಯನ (ಬಲ)  - ಮೂಲ ಪ್ರಕ್ರಿಯೆಗಳು

. ಆದರೆ ಮಾನವ ಈ ಕಾರ್ಯದಲ್ಲಿ ಇನ್ನೂ  ಸಫಲಗೊ೦ಡಿಲ್ಲ . . ಆದ್ದರಿ೦ದ ಮು೦ದೆ ಎ೦ದಾದರೂ  ಈ ಪ್ರಕ್ರಿಯೆಯಿ೦ದ  ಶಕ್ತಿಯ ಉತ್ಪಾದನೆ  ಸಾಧ್ಯವಾದಲ್ಲಿ ವಿಕಿರಣಗಳ ಭಯವಿಲ್ಲದ ಪರಮಾಣು ಶಕ್ತಿ ಲಭ್ಯವಾಗುತ್ತದೆ.

( ಮು೦ದಿನ ಓದಿಗೆ :ಲೇಖಕರ  ' ಭೂಮಿಯಿ೦ದ ಬಾನಿನತ್ತ (ನವಕರ್ನಾಟಕ ಪ್ರಕಾಶನ) , ಆಕಾಶದಲ್ಲೊ೦ದು   ಮನೆ ( ಐ.ಬಿ.ಎಚ್ ಪ್ರಕಾಶನ) ಕಣಕಣದೇವಕಣ ( ವಸ೦ತ  ಪ್ರಕಾಶನ) , ಪಾಲಹಳ್ಳಿ ), ಪಾಪ ಪ್ಲೂಟೊ   (ಇ೦ಡಿಗೊ ಪ್ರಕಾಶನ ) )

ಮೂಲ: ಪಾಲಹಳ್ಳಿ ವಿಶ್ವನಾಥ್ ಅಂಕಣ

3.04210526316
krihanappa Jul 19, 2016 04:42 PM

ಬಹಳ ಚನ್ನಾಗಿ ಇರುವ ಲೇಖನ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top