অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿಧಾನ ಮತ್ತು ತಂತ್ರ.

ವಿಧಾನ ಮತ್ತು ತಂತ್ರ.

ಪ್ರೌಢ / ಮಾಧ್ಯಮಿಕ ಶಿಕ್ಷಣದ ಸಾರ್ವತ್ರಿಕರಣದ ಸಂದರ್ಭದಲ್ಲಿ, ಹೆಚ್ಚಿನ ಪ್ರಮಾಣದ ಹೂಡಿಕೆ, ಹೆಚ್ಚುವರಿ ಶಾಲೆಗಳು, ಹೆಚ್ಚುವರಿ ಕೋಣೆಗಳು, ಶಿಕ್ಷಕರು ಮತ್ತು ಇತರೆ ಸೌಲಭ್ಯಗಳ ಸಂಖ್ಯೆಯ ಸವಾಲನ್ನು ಎದುರಿಸಲು, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗಾಗಿ ಮಾಡಲೇ ಬೇಕು ಇದಲ್ಲದೆ ಶೈಕ್ಷಣಿಕ ಅಗತ್ಯಗಳು, ಮೂಲ ಅಸೆಸ್ಮೆಂಟ್ / ಅವಕಾಶ ಭೌತಿಕ ಮೂಲ ಸೌಕರ್ಯಗಳು, ಮಾನವ ಸಂಪನ್ಮೂಲ, ಶೈಕ್ಷಣಿಕ ಇನ್ಪುಟ್, ಕಾರ್ಯಕ್ರಮಗಳ ಅನುಷ್ಠಾನದ ಪರಿಣಾಮಕಾರಿ ಮೇಲುಸ್ತುವಾರಿಯು ಅಗತ್ಯ.ಈ ಯೋಜನೆಯು ಮೊದಲಲ್ಲಿ Xನೆ ತರಗತಿಯವರೆಗೆ ಇದ್ದು ತದನಂತರ ಹಿರಿಯ ಪ್ರೌಢ / ಮಾಧ್ಯಮಿಕ ಹಂತವನ್ನು ಸಾಧ್ಯವಾದಷ್ಟು ಮಟ್ಟಿಗೆ ಎರಡು ವರ್ಷದಲ್ಲೆ ಒಳಗೊಳ್ಳುವುದು. ಪ್ರೌಢ / ಮಾಧ್ಯಮಿಕ ಶಿಕ್ಷಣದ ಲಭ್ಯತೆಯನ್ನು ಸಾರ್ವತ್ರಿಕರಿಸಲು ಮತ್ತು ಗುಣ ಮಟ್ಟವನ್ನು ಸುಧಾರಿಸಲು ಈ ಕೆಳ ಕಂಡ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಲಭ್ಯತೆ

ದೇಶದ ವಿಭಿನ್ನ ಪ್ರದೇಶಗಳಲ್ಲಿ ದೊರೆಯುವ ಶಾಲಾ ಸೌಲಭ್ಯಗಳ ನಡುವೆ ಬಹಳ ವ್ಯತ್ಯಾಸವಿದೆ. ಖಾಸಗಿ ಶಾಲೆ ಮತ್ತು ಸರಕಾರಿ ಶಾಲೆಗಳ  ನಡುವೆಯೂ ವ್ಯತ್ಯಾಸವಿದೆ. ಗುಣಾತ್ಮಕ ಪ್ರೌಢ / ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕ ವಾಗಿ ಒದಗಿಸಲು ರಾಷ್ಟ್ರ ಮಟ್ಟದಲ್ಲಿ ವಿಶೇಷ ವಿನ್ಯಾಸದ ಮಂಡಳಿಯ  ಮಾದರಿಯ ರಚನೆ ಅತ್ಯಗತ್ಯ.  ಪ್ರತಿರಾಜ್ಯದ / ಕೇಂದ್ರಾಡಳಿತ ಪ್ರದೇಶಗಳ ಭೌಗೋಳಿಕ, ಸಾಂಸ್ಕೃತಿಕ, ಸಮಾಜಿಕ, ಭಾಷಾ ಮತ್ತು ಜನಸಂಖ್ಯೆಯ ಅಂಶಗಳನ್ನು ಮಾತ್ರ ಗಮನದಲ್ಲಿ ಇಟ್ಟುಕೊಳ್ಳದೆ ಅಗತ್ಯವಿದ್ದಲ್ಲಿ ಸ್ಥಳೀಯ ಅಂಶಗಳನ್ನೂ  ಪರಿಗಣಿಸಬೇಕು. ಪ್ರೌಢ / ಮಾಧ್ಯಮಿಕ ಶಾಲೆಯನ್ನು ಸಾಧಾರಣವಾಗಿ ಕೇಂದ್ರೀಯ ವಿದ್ಯಾಲಯಗಳ ಮಾದರಿಗೆ ತುಲನಾತ್ಮಕವಾಗಿರುವಂತೆ ಇರಬೇಕು. ಮೂಲ ಸೌಕರ್ಯಗಳ ಮತ್ತು ಕಲಿಕೆಯ ಸಂಪನ್ಮೂಲದ ಅಭಿವೃದ್ಧಿಯನ್ನು ಈ ವಿಧಾನದಲ್ಲಿ ಮಾಡಲಾಗುವುದು:
•           ವಿಸ್ತರಣೆ /  ಈಗ ಇರುವ ಪ್ರೌಢ / ಮಾಧ್ಯಮಿಕ ಶಾಲೆಗಳು ಮತ್ತು ಹಿರಿಯ ಪ್ರೌಢ / ಮಾಧ್ಯಮಿಕ ಶಾಲೆಗಳನ್ನು ಈಗಿರುವ ಲ್ಲಿ ಸರದಿ ಯ ಮೇಲೆ ನೆಡೆಸುವ ತಂತ್ರ.
•           ಹಿರಿಯ ಪ್ರಾಥಮಿಕ ಶಾಲೆಗಳನ್ನು ಚಿಕ್ಕ ಯೋಜನೆ ತಯಾರಿಸುವ ಕ್ರಿಯೆ (ಮೈಕ್ರೋ ಪ್ಲಾನಂಗ್ ಎಕ್ಸರಸೈಜ) ಆಧಾರದ ಮೇಲೆ  ಎಲ್ಲ ಅಗತ್ಯ ಮೂಲಭೂತ ಸೌಲಭ್ಯ ಮತ್ತು ಶಿಕ್ಷಕರ ಸಮೇತ ಉನ್ನತಿ ಕರಣ, ಹಿರಿಯ ಪ್ರಾಥಮಿಕಶಾಲೆಗಳನ್ನು ಉನ್ನತೀಕರಿಸುವಾಗ  ಆಶ್ರಮ ಶಾಲೆಗಳಿಗೆ ಆದ್ಯತೆ ನೀಡಲಾಗುವುದು.
•           ಹಿರಿಯ ಪ್ರೌಢ / ಮಾಧ್ಯಮಿಕ ಶಾಲೆಗಳಲ್ಲಿರುವ , ಪ್ರೌಢ / ಮಾಧ್ಯಮಿಕ ಶಾಲೆಗಳನ್ನು ಅಗತ್ಯಕ್ಕೆ ತಕ್ಕಂತೆ ಉನ್ನತೀ ಕರಿಸಲಾಗುವುದು
•           ಹೊಸ  ಪ್ರೌಢ / ಮಾಧ್ಯಮಿಕ ಶಾಲೆಗಳನ್ನು / ಹಿರಿಯ ಪ್ರೌಢ / ಮಾಧ್ಯಮಿಕ ಶಾಲೆಗಳನ್ನು  ಶಾಲಾ ಸವಲತ್ತು ಲಭ್ಯವಿಲ್ಲದ ಪ್ರದೇಶಗಳಲ್ಲಿ  ಶಾಲಾ ನಕ್ಷೆಯ ಪ್ರಕಾರ  ತೆರೆಯಲಾಗುವುದು. ಈ ಎಲ್ಲ ಶಾಲೆಗಳು ಕಡ್ಡಾಯವಾಗಿ ಮಳೆಕೊಯಿಲು ಸೌಲಭ್ಯ ಹೊಂದಿರುವವು ಮತ್ತು ವಿಕಲಚೇತನ ಸ್ನೇಹಿಯಾಗಿರುವವು.
•          ಈಗಿರುವ ಕಟ್ಟಡಗಳಲ್ಲಿ  ಕೂಡಾ ಮಳೆ ಕೊಯಿಲು  ವ್ಯವಸ್ಥೆಯನ್ನು ಹೊಂದಲಾಗುವುದು.

ಈಗಿರುವ  ಶಾಲಾಕಟ್ಟಡಗಳನ್ನು  ವಿಕಲಚೇತನ ಸ್ನೇಹಿಗಳಾಗಿ ಬದಲಾಯಿಸಲಾಗುವುದು.

•          ಹೊಸ ಶಾಲೆಗಳನ್ನು ಸರ್ಕಾರಿ ಖಾಸಗಿ ಸಹಭಾಗಿತ್ವದ  ವಿಧಾನದಲ್ಲಿ ತೆರೆಯಲಾಗುವುದು.

 

ಗುಣಮಟ್ಟ

ಅಗತ್ಯ ಮೂಲ ಸೌಲಭ್ಯಗಳಾಧ , ಕಪ್ಪು ಹಲಗೆ, ಪೀಠೋಪಕರಣಗಳು,ಗ್ರಂಥಾಲಯ, ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ, ಗಣಕಯಂತ್ರ ಪ್ರಯೋಗಾಲಯ (ಕಾಂಪ್ಯೂಟರ್ ಲ್ಯಾಬ್) ಗಳು, ಶೌಚಾಲಯ (ಟಾಯಲೆಟ್) ಗಳನ್ನು  ಒದಗಿಸಲಾಗುವುದು.

ಹೆಚ್ಚುವರಿ ಶಿಕ್ಷಕರನ್ನು , ಸೇವಾನಿರತ ಶಿಕ್ಷಕರಿಗೆ ತರಬೇತಿ ನೀಡಲಾಗುವುದು.

VIII ನೇ ತರಗತಿ  ಪಾಸಾದ ಮಕ್ಕಳಿಗೆ  ಕಲಿಕೆ ಸಾಮರ್ಥ್ಯ ಹೆಚ್ಚಿಸಲು ಸೇತು ಬಂಧ ತರಗತಿಗಳು.

NCF, 2005 ಮಾದರಿಗಳಿಗೆ ಅನುಗುಣವಾಗಿ ಪಠ್ಯಕ್ರಮದ ವಿಮರ್ಶೆ.

ಗ್ರಾಮಾಂತರ  ಮತ್ತು  ಕಠಿನ ಪ್ರದೇಶ, ಬೆಟ್ಟ ಪ್ರದೇಶದ  ಶಿಕ್ಷಕರಿಗೆ ವಸತಿ ಸೌಕರ್ಯ.

ಮಹಿಳಾ  ಬೋಧಕರಿಗೆ ಆದ್ಯತೆಯ ಮೇರೆಗೆ   ವಸತಿ ನೀಡಲಾಗುವುದು.

 

ಸಮಾನತೆ

ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (SC,ST,OBC)  ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ  ಉಚಿತ ಊಟ ಮತ್ತು ವಸತಿ ವ್ಯವಸ್ಥೆ

ಹಾಸ್ಟೆ ಲ್ ಗಳು /  ವಸತಿ ಶಾಲೆಗಳು, ನಗದು ಉತ್ತೇಜಕಗಳು, ಸಮವಸ್ತ್ರ, ಪುಸ್ತಕಗಳು,ಹೆಣ್ಣು ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ (ಟಾಯಿಲೆಟ್) ಗಳು

ಪ್ರೌಢ / ಮಾಧ್ಯಮಿಕ ಹಂತದಲ್ಲಿ ಅರ್ಹತೆಯಿರುವ ವಿದ್ಯಾರ್ಹತೆಯಿರುವ/ ಅಗತ್ಯವಿರುವ   ಮಕ್ಕಳಿಗೆ ವಿದ್ಯಾರ್ಥಿ ವೇತನ  ಕೊಡುವುದು.

ಸರ್ವಾಂಗಿಣ ಶಿಕ್ಷಣವು  ಎಲ್ಲ ಚಟುವಟಿಕೆಗಳ  ವಿಭಿನ್ನ ಸಾಮರ್ಥ್ಯ ಹೊಂದಿರುವ ಮಕ್ಕಳಿಗೆ ಎಲ್ಲ ಶಾಲೆಗಳಲ್ಲಿ  ಅಗತ್ಯ ಸೌಲಭ್ಯ ದೊರಕಿಸಲು ಪ್ರಯತ್ನ

ಮುಕ್ತ ಮತ್ತು ದೂರ ಶಿಕ್ಷಣದ  ಅಗತ್ಯಗಳ ವಿಸ್ತರಣೆ , ವಿಶೇಷವಾಗಿ ಯಾರಿಗೆ ಪೂರ್ಣಾವಧಿ ಪ್ರೌಢ / ಮಾಧ್ಯಮಿಕ ಶಿಕ್ಷಣವನ್ನು ಮುಂದುವರಿಸಲು ಆಗುವುದಿಲ್ಲವೋ,  ಅಂಥಹವರಿಗಾಗಿ/ ಮತ್ತು ಪೂರಕವಾಗಿ/ ಮುಖಾ ಮುಖಿ ಬೋಧನೆಯ ಹೆಚ್ಚಳ . ಈ ವ್ಯವಸ್ಥೆಯಿಂದ ಶಾಲೆಯಿಂದ ಹೊರಗಿರುವ ಮಕ್ಕಳ ಶಿಕ್ಷಣಕ್ಕೆ ತುಂಬ ಸಹಾಯಕ ವಾಗುವುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate