অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹೆಚ್ ಐ ವಿ

ಮಿಥ್ಯ ಮತ್ತು ಸತ್ಯ

  • ಮಿಥ್ಯೆ:       -ಹೆಚ್ ಐ ವಿ/ ಏಡ್ಸ್   : ಒಂದು ವಯಸ್ಕರ ವಿಷಯ. ಮಕ್ಕಳಿಗೂ ಅದಕ್ಕೂ ಏನೂ ಸಂಬಂಧ ವಿಲ್ಲ. ಅವರಿಗೆ ಹೆಚ್ ಐ ವಿ/ ಏಡ್ಸ್,  ಸಂತಾನೋತ್ಪತ್ತಿ ಆರೋಗ್ಯ, ಲೈಂಗಿಕತೆ ಮತ್ತು ಇತರ ವಿಷಯಗಳ ಬಗ್ಗೆ ತಿಳಸುವುದರಿಂದ ಅವರ ಮನಸ್ಸು ಕೆಡುತ್ತದೆ . -ಹೆಚ್ ಐ ವಿ/ ಏಡ್ಸ್ ಇರುವ ಕುಟುಂಬದಿಂದ ಮಕ್ಕಳ ವಿಷಯದಲ್ಲಿ ಎಚ್ಚರದಿಂದ ಇರಬೇಕು. ಹೆಚ್ ಐ ವಿ/ ಏಡ್ಸ್   ಹರಡುವುದನ್ನು ತಡೆಯಲು  ಅವರನ್ನು ಸಾಧ್ಯವಾದಷ್ಟು ದೂರ ಇಡಬೇಕು
  • ಸತ್ಯ: ಹೆಚ್ ಐ ವಿ/ ಏಡ್ಸ್  ಗೆ   ವಯಸ್ಸು ,ಬಣ್ಣ , ಜಾತಿ, ವರ್ಗ,ಧರ್ಮ,ಭೌಗೋಲಿಕತೆ, ನೈತಿಕತೆ , ಒಳ್ಳೆಯದು, ಕೆಟ್ಟದು ಎಂಬ ತಾರತಮ್ಯವಿಲ್ಲ. ಎಲ್ಲ ಮನುಷ್ಯರಿಗೂ ಇದು ಬರಬಹುದು.

ಹೆಚ್ ಐ ವಿ  ಯು ಮಾನವನ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ (ಹ್ಯುಮನ್ ಇಮ್ಯುನೋ ಡಿಫಿಷಿಯನ್ಸಿ)  ವೈರಾಣುವು ಏಡ್ಸ್ಗೆ ಕಾರಣವಾಗಿದೆ.   ಅದು ಹೆಚ್ ಐ ವಿ  ಪೀಡಿತ (ಪಾಜಿಟಿವ್)  ವ್ಯಕ್ತಿಯ  ದೇಹದ  ದ್ರವಗಳಾದ  ವೀರ್ಯ,ಅದಕ್ಕೂಮೊದಲುಚಿಮ್ಮಿದ ದ್ರವ, ಯೋನಿ ದ್ರವ,  ರಕ್ತ ಅಥವಾ ಎದೆಹಾಲುಗಳ ಸಂಪರ್ಕದಿಂದ  ಮತ್ತು ಇಂಜೆಕ್ಷನ್ ನೀಡಿದ , ರಕ್ತನೀಡಿದ,   ಹಚ್ಚೆಹಾಕಿದ,ಮಾದಕ ದ್ರವ್ಯ ನೀಡಲು ಬಳಸಿದ, ಶರೀರಕ್ಕೆ ಚುಚ್ಚಿದ ಸೂಜಿಯಿಂದಲೂ ಬರಬಹುದು.

ಹೆಚ್ ಐ ವಿ/ ಏಡ್ಸ್ ನಿಂದ ಮಿಲಿಯನ್ ಗಟ್ಟಲೆ ಮಕ್ಕಳು ಸೋಂಕಿತರಾಗಿದ್ದಾರೆ  . ಮಕ್ಕಳು ತಾಯಿತಂದೆಯರ ಅಕಾಲ ಮರಣದಿಂದ  ಅನಾಥರಾಗಿ ರಕ್ಷಣೆ ಆರೈಕೆಗಳಿಂದ ವಂಚಿತರಾಗಿದ್ದಾರೆ.

ತಾಯಿಯಿಂದ ಮಗುವಿಗೆ ಹರಡುವ ಸೋಂಕು ಮಕ್ಕಳಲ್ಲಿ ಬಹು ಸಾಮಾನ್ಯವಾಗಿದೆ.ಹೆಚ್ಚಿನ ಮಕ್ಕಳ ಲೈಂಗಿಕ ದುರ್ಬಳಕೆ, ನಿಷಿದ್ಧ ಗಮನ ದಿಂದಾಗಿ ಬಹಳ ಮಕ್ಕಳು ಈ ಮಾರಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಲ್ಲಿ ಮತ್ತು  ಯುವಕರಲ್ಲಿ ಮಾದಕ ದ್ರವ್ಯ ಸೇವನೆಯು ಹೆದರಿಕೆ ಮೂಡಿಸಿದೆ. ಹೆಚ್ ಐ ವಿ/ ಏಡ್ಸ್ ಪೀಡಿತ ಮಕ್ಕಳಿಗೆ ಮಾಹಿತಿಯನ್ನು ನೀಡದಿದ್ದರೆ  ಅವರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬ ಹಕ್ಕನ್ನು ಕಸಿದುಕೊಂಡಂತೆ ಆಗುವುದು.

ಏಷಿಯಾದಲ್ಲಿ ಭಾರತವೇ ಅತ್ಯಂತ ಹೆಚ್ಚು ಹೆಚ್ ಐ ವಿ/ ಏಡ್ಸ್ ಹೊಂದಿರುವದೇಶ. ನಂತರದ ಸ್ಥಾನ ಚೀನಾದ್ದು. UNAID  ಪ್ರಕಾರ ಭಾರತದಲ್ಲಿ ೦-೧೪ ವಯೋಮಾನದ ೦.೧೬ ಮಿಲಿಯನ್ ಮಕ್ಕಳು ಹೆಚ್ ಐ ವಿ ಸೊಂಕಿತರಾಗಿದ್ದಾರೆ.

ಒಂದು ವರದಿಯ ಪ್ರಕಾರ ಕೇರಳದ  ಪರಪ್ಪನಅಂಗಡಿಯ ಆರು ವರ್ಷದ ಬಬಿತರಾಜ್ ಎಂಬ ಮಗುವಿಗೆ  ಅವನ ತಂದೆ ಏಡ್ಸ್ (AIDS), ನಿಂದ ಮೃತನಾದ ಎಂಬಕಾರಣಕ್ಕೆ ಶಿಕ್ಷಕ ಪೋಷಕ ಸಂಘ ,ಮತ್ತು ಶಾಲಾ ಅಧಿಕಾರಿಗಳ ಪ್ರತಿಭಟನೆಮಾಡಿದ್ದರಿಂದ ಸರಕಾರಿ  ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ನಿರಾಕರಿಸಲಾಗಿದೆ.  ಸಮಾಜಿಕ ಕಾರ್ಯಕರ್ತರು, ಸ್ಥಳಿಯ ಸರಕಾರಿ ಅಧಿಕಾರಿಗಳು  ಮಧ್ಯ ಪ್ರವೇಶಿಸಿ , ಅವನಿಗೆ ಹೆಚ್. ಐ. ವಿ (HIV) ಇಲ್ಲ ಎಂಬ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದು ತೋರಿಸಿದ ಮೇಲೂ ಶಾಲೆಯವರು ಮಗುವನ್ನು ಪುನಃ ಸೇರಿಸಿಕೊಳ್ಳಲು ನಿರಾಕರಿಸಿದರು.

ಮೂಲ: ತೊರೆದ ಭವಿಷ್ಯ, ಹ್ಯುಮನ್ ರೈಟ್ಸ ವಾಚ್ ;  ಪುಟ ೭೩, ೨೦೦

ನಾವು ಸೊಂಕಿತ ವ್ಯಕ್ತಿಯನ್ನು ಮುಟ್ಟಿದರೆ, ಅವನ ಪಕ್ಕದಲ್ಲಿ ಕುಳಿತರೆ. ಅಪ್ಪಿಕೊಂಡರೆ, ಅವರ ಜತೆ ಆಟ ಆಡಿದರೆ ಅಥವ  ಮುತ್ತು ಕೊಟ್ಟರೆ ಹೆಚ್. ಐ. ವಿ (HIV) ಹರಡುವುದಿಲ್ಲ ಎಂಬುದನ್ನು ಅರಿಯಬೇಕು.

ಮಕ್ಕಳ ಮಾಹಿತಿ ಪಡೆಯುವ ಮತ್ತು ಭಾಗವಹಿಸುವ ಹಕ್ಕು “ ಮಗುವಿನ ಹಿತಾಸಕ್ತಿ”ಯನ್ನು ಕಾಪಾಡುವುದನ್ನು ಆಧರಿಸಿದೆ. ಆದ್ದರಿಂದ ಲೈಂಗಿಕತೆ ಸಂತಾನೋತ್ಪತ್ತಿ  ಆರೋಗ್ಯ,ಹೆಚ್. ಐ. ವಿ ಏಡ್ಸ್ (HIV/AIDS) ಬಗ್ಗೆ ಚರ್ಚಿಸುವಾಗ  ಮಗುವಿನ ವಯಸ್ಸಿನ ಪರಿಗಣನೆ  ಮನದಲ್ಲಿ ಇರಬೇಕು. ವಾಸ್ತವ ಏನಂದರೆ ನಾವು ಮಾನಸಿಕವಾಗಿ ಮಗುವಿನ  ಪ್ರಶ್ನೆಗಳನ್ನು ಪರಿಗಣಿಸುವ   ತಯಾರಿ ಮಾಡಿ ಕೊಂಡಿರುವುದಿಲ್ಲ.ಅದಕ್ಕಾಗಿ ಏನೋ ನೆಪ ಹೇಳಿ ಚರ್ಚೆಮಾಡುವುದನ್ನು ತಪ್ಪಿಸಿಕೊಳ್ಳುತ್ತೇವೆ.  ನಾವು ಲೈಂಗಿಕ ಶಿಕ್ಷಣವೂ  ಸೇರಿದಂತೆ ಜೀವನ-ಕೌಶಲ್ಯ ಶಿಕ್ಷಣವನ್ನು  ನಿರಾಕರಿಸುವ ಬದಲು ಅದಕ್ಕೆ ಸಿದ್ಧರಾಗಿರುವುದು ಬಹಳ ಮುಖ್ಯ.

ಅನೇಕ ಶಾಲೆಗಳು ಮಕ್ಕಳು  ಹೆಚ್. ಐ. ವಿ ಏಡ್ಸ್ (HIV/AIDS) ಹಿನ್ನೆಲೆ ಇರುವ ಕುಟುಂಬದಿಂದ ಬಂದಿದ್ದರೆ  ಅವರಿಗೆ  ಆ ಬಗೆಗೆ ಶಿಕ್ಷಣ ನೀಡುವ ಬದಲು  ಅವರನ್ನು ಸುಮ್ಮನೆ  ಶಾಲೆಯಿಂದ ಹೊರಹಾಕುವರು. ಅವರಿಗೆ ಹೆಚ್. ಐ. ವಿ ಏಡ್ಸ್ (HIV/AIDS) ಇದೆ ಎಂದು ಪ್ರಾಥಮಿಕ ಸೇವೆಗಳನ್ನು,ಮಾನವ ಹಕ್ಕುಗಳನ್ನು ನಿರಾಕರಿಸಿದರೆ ಅದು ತಾರತಮ್ಯ ಎನಿಸುವುದು. ಭಾರತೀಯ ಸಂವಿಧಾನವು ಸಮಾನತೆ ಮತ್ತು ತಾರತಮ್ಯರಹಿತ ಹಕ್ಕಿನ ಖಾತ್ರಿ ನೀಡಿದೆ ಮತ್ತು ಯಾರು ಅಸಮಾನತೆ ಮತ್ತು ತಾರತಮ್ಯವನ್ನು ಯಾವುದೇ ಆಧಾರದ ಮೇಲೆ ಉತ್ತೇಜಿಸಿದರೂ ಅವರು ಶಿಕ್ಷೆಗೆ ಗುರಿಯಾಗುವರು.

ವ್ಯಕ್ತಿ  ಹೆಚ್. ಐ. ವಿ ಏಡ್ಸ್ (HIV/AIDS) ಸೊಂಕಿತ (ಪಾಜಿಟಿವ್) ಎಂದು ಅವನಿಗ ತಿಳಿದಿರುವುದು,  ಅವನು ಅದಷ್ಟು ಬೇಗ ಚಿಕಿತ್ಸೆ ಪಡೆಯಲು ಅದರಿಂದ ಹೆಚ್ಚುದಿನ ಆರೋಗ್ಯವಂತನಾಗಿರಲು ಮತ್ತು  ವೈರಾಣುವನ್ನು ಇನ್ನೊಬ್ಬರಿಗೆ ಹರಡದಿರಲು ಸಹಾಯವಾಗುವುದು  .ವಾಸ್ತವವಾಗಿ ಅಪಾಯದ ಹಂಚಿನಲ್ಲಿರುವ ಮಕ್ಕಳನ್ನುಶಾಲೆಯಿಂದ ಹೊರಹಾಕಿದರೆ ಅವರ ಆರೋಗ್ಯದ ಮೇಲುಸ್ತುವಾರಿ ಮಾಡುವ ಮತ್ತು ಅವರಿಗೆ ಅಗತ್ಯ ಸಹಾಯ ನೀಡುವ ಅವಕಾಶವೆ ಇಲ್ಲದಾಗುವುದು.    ಹೀಗೆ ಅದು ಇತರರಿಗೂ ಹೆಚ್ಚು ಅಪಾಯಕಾರಿಯಾಗಬಹುದು. ತಾರತಮ್ಯವು ಬೇಳೆಯುತ್ತಿರುವ  ಪಿಡುಗಿಗೆ ಕೊನೆ ಹೇಳುವುದಿಲ್ಲ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate