ಮಕ್ಕಳಿಗೆ ಸ್ತನ್ಯಪಾನವನ್ನು ಎಷ್ಟು ದಿನದ ವರೆಗೆ ನೀಡಬೇಕು
ಆರು ತಿಂಗಳ ವರೆಗೆ ಕೇವಲ ಸ್ತನ್ಯಪಾನವನ್ನು ಪಾಲಿಸಬೇಕು. ಸ್ತನ್ಯಪಾನವನ್ನು ಎರಡು ವರ್ಷದ ವರೆಗೆ ಮುಂದುವರೆಸಬಹುದು
- ಶಿಶುಗಳ ಸಾಮಾನ್ಯ ಬೆಳವಣಿಗೆ ಮತ್ತು ಆರೋಗ್ಯಕರ ಅಭಿವೃದ್ಧಿಗಾಗಿ ಮೊಲೆ ಹಾಲು ಅತಿ ನೈಸರ್ಗಿಕ ಮತ್ತು ಪರಿಪೂರ್ಣ ಆಹಾರ.
- ಪ್ರಥಮ ಸ್ತನ್ಯ ಪೌಷ್ಟಿಕಾಂಶಭರಿತವಾಗಿದ್ದು ರೋಗನಿರೋಧಕಗಳನ್ನು ಹೊಂದಿದೆ. ಹಾಗಾಗಿ ಕಡ್ಡಾಯವಾಗಿ ಶಿಶುವಿಗೆ ಈ ಹಾಲೂಡಿಸಬೇಕು.
- ಸ್ತನ್ಯಪಾನ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
- ಸ್ತನ್ಯಪಾನ ತಾಯಿ-ಶಿಶುವಿನ ಸಂಪರ್ಕ ಸ್ಥಾಪಿಸುತ್ತದೆ ಮತ್ತು ತಾಯಿ-ಶಿಶುವಿನ ಸಂಬಂಧ ಗಟ್ಟಿಗೊಳಿಸುತ್ತದೆ
- ಇದರಿಂದ ಜನನದ ಮಧ್ಯಂತರ ಪ್ರಮಾಣ ಹೆಚ್ಚಿಸಿ ಫಲವಂತಿಕೆ ನಿಯಂತ್ರಿಸುತ್ತದೆ (ಮುಟ್ಟಿನ ತಡವ
- ಅದ ಹಿಂತಿರುಗುವಿಕೆ).
- ಗರ್ಭಕೋಶದ ಪ್ರತ್ಯಾಕರ್ಷಣೆಯಲ್ಲಿ ಸ್ತನ್ಯಪಾನ ಸಹಾಯಕಾರಿಯಾಗುತ್ತದೆ.
- ತಮ್ಮ ಮಕ್ಕಳಿಗೆ ಸ್ತನ್ಯಪಾನ ಮಾಡಿರುವ ತಾಯಂದಿರಲ್ಲಿ ಮೊಲೆ ಕ್ಯಾನ್ಸರ್ ನ ಪ್ರಮಾಣ ಕಡಿಮೆ.
- ಪ್ರಸವದ ಒಂದು ಘಂಟೆಯೊಳಗೆ ಸ್ತನ್ಯಪಾನವನ್ನು ಮಾಡಿಸಿರಿ ಮತ್ತು ಪ್ರಥಮ ಸ್ತನ್ಯವನ್ನು ತೊರೆಯಬೇಡಿ.
- ಕನಿಷ್ಠ ನಾಲ್ಕರಿಂದ ಆರು ತಿಂಗಳ ವರೆಗೆ ಕೇವಲ ಸ್ತನ್ಯಪಾನವನ್ನು ಮಾಡಿಸಿರಿ.
- ಪೂರಕ ಆಹಾರಗಳ (ಶಿಶು ಆಹಾರಗಳು) ಕೊಡಲು ಆರಂಭಿಸಿದ ನಂತರವೂ ಎರಡು ವರ್ಷಗಳವರೆಗೆ ಸ್ತನ್ಯಪಾನವನ್ನು ಮುಂದುವರೆಸಿರಿ.
- ಹಾಲಿನ ಉತ್ತಮ ಪೂರೈಕೆಗಾಗಿ ಶಿಶುವಿಗೆ ಸ್ತನ್ಯಪಾನವನ್ನು ಆಗ್ಗಾಗೆ ಅಥವಾ ಕೇಳಿದಾಗ ಮಾಡಿರಿ.
- ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಪೌಷ್ಟಿಕ ಮತ್ತು ಸಮರ್ಪಕ ಆಹಾರಕ್ರಮವನ್ನು ಅನುಸರಿಸಿ.
- ಹಾಲುಣಿಸುವ ಸಮಯದಲ್ಲಿ ತಂಬಾಕು (ಧೂಮಪಾನ ಮತ್ತು ಅಗೆಯುವುದು), ಮದ್ಯ ಮತ್ತು ಮಾದಕವಸ್ತುಗಳ ಸೇವನೆಯನ್ನು ತೊರೆಯಿರಿ.
ಆರು ತಿಂಗಳ ನಡುವೆ ಶಿಶುವಿಗೆ ಪೂರಕ ಆಹಾರಗಳನ್ನು ಪರಿಚಯಿಸಿರಿ
- 6 ತಿಂಗಳ ವಯಸ್ಸಿನ ನಂತರ ಶಿಶುವಿಗೆ ಮೊಲೆ ಹಾಲು ಮಾತ್ರ ಸಾಕಾಗುವುದಿಲ್ಲ.
- 6 ತಿಂಗಳ ನಡುವೆ ಶಿಶುಗಳಿಗೆ ಸ್ತನ್ಯಪಾನದ ಜೊತೆಗೆ ಪೂರಕ ಆಹಾರಗಳ ಪರಿಚಯ ಅಗತ್ಯ.
- ಚಿಕ್ಕ ಮಕ್ಕಳಿಗೆ ಸಮರ್ಪಕ ಮತ್ತು ಸೂಕ್ತ ಪೂರಕ ಆಹಾರಗಳನ್ನು ನೀಡಿದಲ್ಲಿ ಅಪೌಷ್ಟಿಕತೆಯನ್ನು ತಡೆಯಬಹುದು.
- ಮಗುವಿಗೆ ಆಹಾರಗಳನ್ನು ತಯಾರಿಸುವಾಗ ಮತ್ತು ತಿನ್ನಿಸುವಾಗ ಸ್ವಚ್ಚತೆ ಅಭ್ಯಾಸಗಳನ್ನು ಪಾಲಿಸಬೇಕು. ತಪ್ಪಿದಲ್ಲಿ ಬೇಧಿಗೆ ಕಾರಣವಾಗುತ್ತದೆ.
ಶಿಶುವಿಗೆ ಪೂರಕ ಆಹಾರಗಳನ್ನು 6 ತಿಂಗಳ ವಯಸ್ಸಿನಿಂದ ಪ್ರಾರಂಭಿಸಿರಿ. ಸ್ತನ್ಯಪಾನವನ್ನು ಎರಡು ವರ್ಷಗಳ ವರೆಗೆ ಮುಂದುವರೆಸಿರಿ.
ಪೂರಕ ಆಹಾರಗಳನ್ನು ನೀಡಲು ತಡೆ ಮಾಡದಿರಿ.
ಮನೆಯಲ್ಲಿ ತಯಾರಿಸಿದ, ಕಡಿಮೆ ಬೆಲೆಯ ಶಿಶು ಆಹಾರಗಳನ್ನು ತಿನ್ನಿಸಿರಿ.
ಪೂರಕ ಆಹಾರಗಳನ್ನು ದಿನದಲ್ಲಿ 5-6 ಬಾರಿ ತಿನ್ನಿಸಿರಿ.
ಹಣ್ಣುಗಳನ್ನು ಮತ್ತು ಸರಿಯಾಗಿ ಬೇಯಿಸಿದ ತರಕಾರಿಗಳನ್ನು ನೀಡಿರಿ.
ಆಹಾರಗಳನ್ನು ತಯಾರಿಸುವಾಗ ಮತ್ತು ತಿನ್ನಿಸುವಾಗ ಸ್ವಚ್ಚತೆ ಅಭ್ಯಾಸಗಳನ್ನು ಪಾಲಿಸಿರಿ
ಸ್ತನ್ಯಪಾನ ಸಮರ್ಪಕವಾಗಿಲ್ಲದಿದ್ದಲ್ಲಿ (ಸಾಕಾಕದಿದ್ದಲ್ಲಿ) ಏನು ಮಾಡಬೇಕು
- ಸ್ತನ್ಯಪಾನ ವಿಫಲವಾದಲ್ಲಿ, ಹಾಲೂಡಿಕೆಯನ್ನು ಪ್ರಚೋದಿಸಲು ಎಲ್ಲಾ ಎಲ್ಲಾ ಪ್ರಯತ್ನವನ್ನು ಮಾಡಬೇಕು. ಎಲ್ಲಾ ಕ್ರಮಗಳು ವಿಫಲವಾಗಿದ್ದಲ್ಲಿ, ಪ್ರಾಣಿ ಹಾಲನ್ನು ಅಥವ ಮಕ್ಕಳಿಗಾಗಿ ಮಾರುಕಟ್ಟೆಯಲ್ಲಿ ದೊರೆಯುವ ಆಹಾರಗಳನ್ನು ಉಪಯೋಗಿಸಿರಿ.
- ಹಾಲನ್ನು ಮಗುವಿಗೆ ಕುಡಿಸುವ ಮುನ್ನ ಕುದಿಸಬೇಕು.
- ಮೇಲು ಹಾಲನ್ನು ಪ್ರಾರಂಭಿಸುವಾಗ ಹಾಲಿಗೆ ಸಮವಾಗಿ ನೀರನ್ನು ಬೆರೆಸಬಹುದು.
- ಪೂರ್ಣ ಪ್ರಮಾಣದ ಹಾಲನ್ನು ಮಗುವಿಗೆ ನಾಲ್ಕನೆಯ ವಾರದಿಂದ ಶುರುಮಾಡಬಹುದು
- ಶಿಶುವಿಗೆ ಕೊಡಲಾಗುವ ಪ್ರಾಣಿ ಹಾಲು ಕಬ್ಬಿಣಾಂಶದ ಮತ್ತು ಸಿ ಅನ್ನಾಂಗದ ಪೂರಕಗಳನ್ನು ನೀಡಬೇಕು.
- ಸುಮಾರು ಸಿ 120-180 ಮಿಲಿ ಲೀಟರ್ ಹಾಲನ್ನು ಒಂದು ಚಮಚ ಸಕ್ಕರೆ ಬೆರೆಸಿ ಪ್ರತಿದಿನ 6-8 ಬಾರಿ ನೀಡಬೇಕು.
- ಶಿಶುವಿಗಾಗಿ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಆಹಾರವನ್ನು ತಯಾರಿಸುವಾಗ ಅದರ ಲೇಬಲ್ (ಹೆಸರು ಪಟ್ಟಿ) ಮೇಲೆ ಬರೆದಿರುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು.
- ಎಲ್ಲಾ ರೀತಿಯ ನಿಗಾವಹಿಸಿ ಶಿಶು ಆಹಾರವನ್ನು ಸ್ವಚ್ಛ ಬಟ್ಟಲಿನಲ್ಲಿ, ಚಮಚದಿಂದ, ಬಾಟ್ಲಿಯಲ್ಲಿ ಮತ್ತು ನಿಪ್ಪಲಿನಲ್ಲಿ ನೀಡ ಬೇಕು.
- ಹೊರ ಆಹಾರ ತಿನ್ನುತ್ತಿರುವ ಶೀಶುಗಳಲ್ಲಿ ಬೊಜ್ಜುಮೈ ತಡೆಯಲು ಅತಿ ಹೆಚ್ಚಾಗಿ ತಿನ್ನಿಸ ಬಾರದು.
- ಕಡಿಮೆ ಬೆಲೆಯ ಮನೆಯಲ್ಲಿ ತಯಾರಿಸಿದ ಶಿಶು ಆಹಾರಗಳನ್ನು ತಿನ್ನಿಸಬೇಕು. ಸಾಧ್ಯವಾದರೆ ಮಾರುಕಟ್ಟಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಬಹುದು.
ಮೂಲ:ರಾಷ್ಟ್ರೀಯ ಪೌಷ್ಟಿಕತೆಯ ಸಂಸ್ಥೆ, ಹೈದರಾಬಾದ್
ಕೊನೆಯ ಮಾರ್ಪಾಟು : 6/22/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.