ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ಕ್ಯಾರೆಟ್ ಜ್ಯೂಸ್
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕ್ಯಾರೆಟ್ ಜ್ಯೂಸ್

ಕ್ಯಾರೆಟ್‍ಗಳು ಬೇರಿನಲ್ಲಿ ಬೆಳೆಯುವ ಅತ್ಯುತ್ತಮ ತರಕಾರಿಗಳಾಗಿವೆ.

ಆರೋಗ್ಯಕರವಾದ ತ್ವಚೆಗಾಗಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ!

ಕ್ಯಾರೆಟ್‍ಗಳು ಬೇರಿನಲ್ಲಿ ಬೆಳೆಯುವ ಅತ್ಯುತ್ತಮ ತರಕಾರಿಗಳಾಗಿವೆ. ಇವು ಶಾಖಾಹಾರಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿರುತ್ತದೆ. ಕೆಲವರು ಕಚ್ಛಾ ಕ್ಯಾರೆಟ್‍ಗಳನ್ನು ತಿನ್ನಲು ಇಷ್ಟಪಟ್ಟರೆ, ಇನ್ನೂ ಕೆಲವರು ಬೇಯಿಸಿದ ಕ್ಯಾರೆಟನ್ನು ತಿನ್ನಲು ಇಷ್ಟಪಡುತ್ತಾರೆ. ಬಹಳಷ್ಟು ಜನಕ್ಕೆ ಗೊತ್ತಿಲ್ಲ ಕ್ಯಾರೆಟ್ ನೇರಳೆ, ಬಿಳಿ, ಹಳದಿ, ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ಬರುತ್ತದೆ. ಈ ತರಕಾರಿ ಬೆಳೆಯಲು ಆರಂಭಿಸಿ ಸುಮಾರು ಸಾವಿರ ವರ್ಷಗಳೇ ಆಗಿವೆ. ಈ ಅಂಕಣದಲ್ಲಿ ನಾವು ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ತ್ವಚೆಗೆ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ. ಕ್ಯಾರೆಟ್‍ಗಳು ರುಚಿಕರ ಮತ್ತು ಅವುಗಳಲ್ಲಿ ಬೀಟಾ ಕ್ಯಾರೊಟಿನ್, ವಿಟಮಿನ್ ಎ ಮತ್ತು ಆಂಟಿ ಆಕ್ಸಿಡೆಂಟ್‍ಗಳು ಅಧಿಕವಾಗಿರುತ್ತವೆ. ನಮಗೆಲ್ಲ ತಿಳಿದಿರುವಂತೆ ಕ್ಯಾರೆಟ್‍ಗಳನ್ನು ಸೇವಿಸುವುದರಿಂದ ಕಣ್ಣುಗಳಿಗೆ, ಜೀರ್ಣ ಕ್ರಿಯೆಗೆ, ತ್ವಚೆಗೆ ಮತ್ತು ಹಲ್ಲುಗಳಿಗೆ ತುಂಬಾ ಒಳ್ಳೆಯದು. ವಾಸ್ತವವಾಗಿ ಕ್ಯಾರೆಟ್‍ಗಳನ್ನು ಕೆಲವೊಂದು ಖಚಿತವಾದ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಏಕೆಂದರೆ ಬಹಳಷ್ಟು ಜನ ಕ್ಯಾರೆಟ್ ಜ್ಯೂಸ್‍ನ ಆರೋಗ್ಯಕಾರಿ ಅಂಶಗಳು ತ್ವಚೆಗೆ ನೆರವನ್ನು ನೀಡುತ್ತದೆ ಎಂದು ನಂಬುತ್ತಾರೆ. ಈ ಅಂಕಣದಲ್ಲಿ ನಾವು ಅವುಗಳ ಬಗ್ಗೆ ಚರ್ಚಿಸಿದ್ದೇವೆ. ಮುಂದೆ ಓದಿ...

ಹೊಳೆಯುವ ತ್ವಚೆಗೆ ನಿಮ್ಮ ತ್ವಚೆಯು ಸದಾ ಹೊಳಪಿನಿಂದ ಮತ್ತು ಆರೋಗ್ಯದಿಂದ ಕೂಡಿರಬೇಕೇ? ಹಾಗಾದರೆ ಪ್ರತಿ ನಿತ್ಯ ಕ್ಯಾರೆಟ್ ಜ್ಯೂಸ್ ಸೇವಿಸಿ. ಏಕೆಂದರೆ ಇದರಲ್ಲಿರುವ ಆಂಟಿ ಆಕ್ಸಿಡೆಂಟ್‍ಗಳು ಮತ್ತು ವಿಟಮಿನ್ ಸಿ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತವೆ. ಕ್ಯಾರೆಟನ್ನು ಪೇಸ್ಟ್ ಮಾಡಿಕೊಂಡು ಜೇನು ತುಪ್ಪದ ಜೊತೆಗೆ ನಿಮ್ಮ ಮುಖಕ್ಕೆ ಫೇಸ್ ಮಾಸ್ಕ್ ಆಗಿ ಸಹ ಬಳಸಬಹುದು. ಸುಮ್ಮನೆ ಕಾಸ್ಮೆಟಿಕ್‍ಗಳ ಮೇಲೆ ಹಣ ಚೆಲ್ಲುವ ಬದಲು ಕ್ಯಾರೆಟ್ ಜ್ಯೂಸ್ ಸೇವಿಸಲು ಆರಂಭಿಸಿ.

ವಯಸ್ಸಾದಂತೆ ಕಾಣುವುದನ್ನು ತಡೆಯುವ ಪ್ರಯೋಜನಗಳು ಕ್ಯಾರೆಟ್‍ನಲ್ಲಿರುವ ವಿಟಮಿನ್ ಸಿ ದೇಹದಲ್ಲಿ ಕೊಲ್ಲಾಜೆನ್ ಉತ್ಪಾದನೆಯನ್ನು ಹೆಚ್ಚಿಸಲು ವಿಶೇಷವಾಗಿ ಶ್ರಮಿಸುತ್ತದೆ. ತ್ವಚೆಯ ಬಿಗಿತವನ್ನು ಕಾಪಾಡಿಕೊಳ್ಳುವುದು ಕೊಲ್ಲಾಜೆನ್‍ನ ಪ್ರಮುಖ ಕೆಲಸವಾಗಿರುತ್ತದೆ. ಕ್ಯಾರೆಟ್‍ನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ತ್ವಚೆಯಲ್ಲಿ ಸುಕ್ಕುಗಳು ಬರದಂತೆ ಸಮರ್ಥವಾಗಿ ಕಾಪಾಡುತ್ತದೆ

ಸೂರ್ಯನಿಂದ ರಕ್ಷಣೆ ಸೂರ್ಯನ ಕಿರಣಗಳಿಂದ ನಿಮ್ಮ ತ್ವಚೆಯನ್ನು ಕಾಪಾಡುವಲ್ಲಿ ಕ್ಯಾರೆಟ್ ಜ್ಯೂಸ್ ನಿಮಗೆ ಉತ್ತಮವಾಗಿ ಸಹಕರಿಸುತ್ತದೆ. ಕ್ಯಾರೆಟ್ ಜ್ಯೂಸ್ ಸನ್ ಬರ್ನ್‍ಗಳನ್ನು ಗುಣಪಡಿಸುತ್ತದೆ ಮತ್ತು ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡುತ್ತದೆ. ಸನ್‍ಸ್ಕ್ರೀನ್ ಲೋಶನ್ ಬಳಸುವ ಬದಲು, ನೀವು ಕ್ಯಾರೆಟ್ ಜ್ಯೂಸನ್ನು ಸೇವಿಸಿ ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳಿ.

ತ್ವಚೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಕ್ಯಾರೆಟ್‍ಗಳನ್ನು ಹಲವಾರು ತ್ವಚೆಯ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಚರ್ಮದ ತುರಿಕೆ, ಗುಳ್ಳೆಗಳು, ಮೊಡವೆಗಳು ಮುಂತಾದ ತ್ವಚೆಯ ಸಮಸ್ಯೆಗಳನ್ನು ಕ್ಯಾರೆಟ್‍ನಿಂದ ಗುಣಪಡಿಸಿಕೊಳ್ಳಬಹುದು. ಇದರ ಜೊತೆಗೆ ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ತ್ವಚೆಯ ಹೊಳಪನ್ನು ಸಹ ಹೆಚ್ಚಿಸಿಕೊಳ್ಳಬಹುದು. ಹೀಗೆ ಮನೆಯಲ್ಲಿ ತಯಾರಿಸಿದ ಕ್ಯಾರೆಟ್ ಜ್ಯೂಸ್ ತ್ವಚೆಗೆ ಉತ್ತಮ ಸ್ನೇಹಿಯಾಗಿ ವರ್ತಿಸುತ್ತದೆ ಎಂದು ಸಾಬೀತಾಗಿದೆ. ಹಾಗಾಗಿ ಕ್ಯಾರೆಟ್ ಜ್ಯೂಸನ್ನು ನಿಮ್ಮ ಆರೋಗ್ಯಕರ ತ್ವಚೆಯ ರಹಸ್ಯವನ್ನಾಗಿ ಸೇವಿಸಲು ಇಂದೇ ಆರಂಭಿಸಿ ಮತ್ತು ಪ್ರತಿನಿತ್ಯ ಸೇವಿಸಿ.

ಮೂಲ : ಬೋಲ್ಡ್ ಸ್ಕೈ(http://kannada.boldsky.com/ )

2.95698924731
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top