অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಊರ್ಧ್ವಮುಖ ಪಶ್ಚಿಮೋತ್ಥಾನಾಸನ

ಊರ್ಧ್ವಮುಖ ಪಶ್ಚಿಮೋತ್ಥಾನಾಸನ

 

 

ಊರ್ಧ್ವಮುಖ ಪಶ್ಚಿಮೋತ್ಥಾನಾಸನಕ್ಕೆ ವಿಪರೀತ ನಾವಾಸನ ಹಾಗೂ ವಿಪರೀತ ಮೇರುದಂಡಾಸನ ಎಂಬ ಹೆಸರುಗಳೂ ಇವೆ.

ಮಾಡುವ ಕ್ರಮ

1)    ನೆಲದ ಮೇಲೆ ಅಂಗಾತನಾಗಿ, ನೇರವಾಗಿ, ಬೆನ್ನನ್ನು ನೆಲಕ್ಕೆ ತಗಲಿಸಿಕೊಂಡು ಮಲಗಬೇಕು.

2)    ನಂತರ ಉಸಿರನ್ನು ನಿಧಾನವಾಗಿ ಹೊರಗೆ ಬಿಡುತ್ತಾ ಕಾಲುಗಳನ್ನು ಉತ್ಥಿತ ಪಾದಾಸನದಂತೆ ನೆಲದಿಂದ ಮೇಲಕ್ಕೆ ಎತ್ತಿ ಭೂಮಿಗೆ ಲಂಬವಾಗಿರಿಸಬೇಕು. ಆನಂತರ ಚಿತ್ರದಲ್ಲಿ ತೋರಿಸಿರುವಂತೆ ಸೊಂಟದ ಮೇಲ್ಭಾಗದ ಶರೀರವನ್ನು ನೆಲದಿಂದ ಮೇಲಕ್ಕೆತ್ತಿ ಎರಡೂ ಕೈಗಳಿಂದ ಕಾಲುಗಳನ್ನು ಭದ್ರವಾಗಿ ಹಿಡಿದು ಕೊಳ್ಳಬೇಕು.

3)  ಈ ಸ್ಥಿತಿಯಲ್ಲಿ ಸೊಂಟ ಮಾತ್ರ ನೆಲದ ಮೇಲೆ ಇರುತ್ತದೆ. ಮಂಡಿಯನ್ನು ನೇರವಾಗಿರಿಸುವುದರೊಂದಿಗೆ ಎದೆಯನ್ನು ಮಂಡಿಗಳಿಗೆ ಮುಟ್ಟಿಸಲು ಪ್ರಯತ್ನಿಸಬೇಕು. ಇದೇ ಸ್ಥಿತಿಯಲ್ಲಿ ಆದಷ್ಟು ಹೆಚ್ಚು ಹೊತ್ತು ಇದ್ದು ಸಮತೋಲನವನ್ನು ಪಡೆಯುವುದುತ್ತಮ.

ಲಾಭಗಳು

ಹೊಟ್ಟೆ, ಎದೆ, ತೊಡೆ ಹಾಗೂ ಸೊಂಟದೊಳಗಿನ ಅನೇಕ ದೋಷಗಳು ಈ ಆಸನದ ಅಭ್ಯಾಸದಿಂದ ದೂರವಾಗುವುವು. ತೀವ್ರವಾದ ಬೆನ್ನು ನೋವಿನಿಂದ ನರಳುವವರಿಗೆ ಇದು ಹೆಚ್ಚು ಸಹಾಯಕಾರಿ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 4/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate