অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅನಾಫಿಲೀಸ್ ಸೊಳ್ಳೆಗಳು:3 ಪಂಗಡ

ಅನಾಫಿಲೀಸ್ ಸೊಳ್ಳೆಗಳು:3 ಪಂಗಡ

ಅನಾಫಿಲೀಸ್ ಕ್ಯುಲಿಸಿಫೇಸೀಸ್

ಈ ಪಂಗಡಕ್ಕೆ ಸೇರಿದ ಸೊಳ್ಳೆಗಳು ನಮ್ಮ ದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ಮಲೇರಿಯ ರೋಗ ಹರಡುತ್ತವೆ. ಇವು ಮೈದಾನ ಪ್ರದೇಶಗಳಲ್ಲಿ ಹೆಚ್ಚಾಗಿದ್ದು, ವರ್ಷದ ಎಲ್ಲಾ ತಿಂಗಳುಗಳಲ್ಲೂ ಉತ್ಪತ್ತಿ ಹೊಂದಿ ಇಡೀ ವರ್ಷ ಮಲೇರಿಯ ಹರಡುವ ಸಾಮಥ್ರ್ಯ ಹೊಂದಿರುತ್ತವೆ. ನೀರಾವರಿ ಇರುವ ಸ್ಥಳಗಳಲ್ಲಿ ಈ ಸೊಳ್ಳೆಗಳ ಹಾವಳಿ ಹೆಚ್ಚು, ಮಳೆ ನೀರು ಸಂಗ್ರಹಗಳಲ್ಲಿ, ನೀರಾವರಿ ಕಾಲುವೆಗಳಲ್ಲಿ, ಕೆರೆ, ಕೊಳ್ಳ, ಬಾವಿಗಳಲ್ಲಿ, ಗದ್ದೆಗಳಲ್ಲಿ, ಹಸುವಿನ ಹೆಜ್ಜೆ ಗುಳಿಗಳಲ್ಲಿ ನಿಂತ ಮಳೆ ನೀರಿನಲ್ಲಿ ಈ ಪಂಗಡದ ಸೊಳ್ಳೆಗಳು ಸಾಮಾನ್ಯವಾಗಿ ಉತ್ಪತ್ತಿಯಾಗುತ್ತವೆ. ಈ ಸೊಳ್ಳೆಗಳು ಮುಖ್ಯವಾಗಿ ಜಾನುವಾರುಗಳ ರಕ್ತವನ್ನು ಮನುಷ್ಯನ ರಕ್ತಕ್ಕಿಂತ ಹೆಚ್ಚಾಗಿ ಅವಲಂಬಿಸಿರುತ್ತವೆ. ಹೆಚ್ಚಾಗಿ ಇವು ಮನೆ ಹಾಗೂ ದನಗಳ ಕೊಟ್ಟಿಗೆಯಲ್ಲಿ ವಾಸವಾಗಿರುತ್ತವೆ. ಕೆಲವೆಡೆ ಇವು ಮನೆಯ ಹೊರಗೆ ವಾಸವಾಗಿರುತ್ತವೆ. ಇವು ಸುಮಾರು ಮೂರು ಕಿಲೋಮೀಟರ್ ದೂರ ಹಾರಬಲ್ಲವು. ಇವು ಸಾಮಾನ್ಯವಾಗಿ ಸಂಜೆ 7.00 ರಿಂದ 10.00 ಗಂಟೆಯ ವೇಳೆಯಲ್ಲಿ ರಕ್ತ ಸೇವನೆಗೆ ಮನೆಗಳನ್ನು ಪ್ರವೇಶಿಸುತ್ತವೆ. ಹಲವಾರು ಸ್ಥಳಗಳಲ್ಲಿ ಈ ಪಂಗಡದ ಸೊಳ್ಳೆಗಳು ಸಾಮಾನ್ಯವಾಗಿ ಉಪಯೋಗಿಸುವ ಡಿಡಿಟಿ, ಮ್ಯಾಲಾಥಿಯಾನ್ ಮತ್ತಿತರ ಕೀಟನಾಶಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೊಂದಿರುತ್ತವೆ.

ಅನಾಫಿಲೀಸ್ ಫ್ಲೂವಿಯಾಟಲಿಸ್:

ಈ ಪಂಗಡದ ಸೊಳ್ಳೆಗಳು ನೆರಳಿರುವ ಸ್ಥಳಗಳಲ್ಲಿ ನಿಧಾನವಾಗಿ ಹರಿಯುವ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಹೀಗಾಗಿ ಇದು ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಸೊಳ್ಳೆಗೆ ಮನುಷ್ಯನ ರಕ್ತದ ಅವಶ್ಯಕತೆ ಹೆಚ್ಚಾಗಿದ್ದು, ಮಲೇರಿಯ ರೋಗ ಹರಡುವಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಹರಿಯುವ ನೀರಿನ ಅವಶ್ಯಕತೆ ಇರುವುದರಿಂದ ಹಿಂಗಾರು ಮಳೆಯ ನಂತರ ಹರಡುವ ಮಲೇರಿಯದಲ್ಲಿ ಈ ಸೊಳ್ಳೆಗಳ ಪಾತ್ರ ಹೆಚ್ಚು. ಇವು ಡಿ.ಡಿ.ಟಿ ಕ್ರಿಮಿನಾಶಕಕ್ಕೆ ಇನ್ನೂ ಪ್ರತಿರೋಧಕ ಶಕ್ತಿ ಪಡೆಯದ ಕಾರಣ ಈ ಸೊಳ್ಳೆಗಳು ಹೆಚ್ಚಾಗಿ ಕೀಟನಾಶಕ ಸಿಂಪಡಿಸಿದ ಮನೆಗಳ ಹೊರಗೆ ವಾಸವಾಗುತ್ತವೆ. ರಕ್ತ ಸೇವನೆಗೆ ಮನೆಗಳ ಒಳಗೆ ಅಥವಾ ಹೊರಗೆ ಮನುಷ್ಯರನ್ನು ಕಚ್ಚುತ್ತವೆ. ಇವು ಸುಮಾರು ರಾತ್ರಿ 9.00 ರಿಂದ 12.00 ಗಂಟೆ ಸಮಯದಲ್ಲಿ ಮನೆಗಳನ್ನು ಪ್ರವೇಶ ಮಾಡುತ್ತವೆ.

ಅನಾಫಿಲೀಸ್ ಸ್ಟಿಫೆನ್ಸೈ

ಇವು ಸಾಮಾನ್ಯವಾಗಿ ಪಟ್ಟಣ ಪ್ರದೇಶದಲ್ಲಿ ಮಲೇರಿಯ ರೋಗದ ಹರಡುವಿಕೆಗೆ ಕಾರಣವಾದ ಸೊಳ್ಳೆಗಳು. ಇವು ಮನೆಗಳ ಒಳಗೆ ಹಾಗೂ ಹೊರಗೆ ಶೇಖರಿಸಿದ ತಿಳಿ ನೀರಿನಲ್ಲಿ ವರ್ಷವಿಡೀ ಉತ್ಪತ್ತಿಯಾಗಿ ಮನುಷ್ಯನ ಸಂಗಡ ಸುಖ ಜೀವನ ನಡೆಸುತ್ತವೆ. ಹೀಗಾಗಿ ಮನೆಗಳ ನೀರು ಶೇಖರಣೆ ಮಾಡುವ ತೊಟ್ಟಿಗಳಲ್ಲಿ, ಪಾತ್ರೆಗಳಲ್ಲಿ, ಬಾವಿಗಳಲ್ಲಿ, ಸಂಪ್ ಹಾಗೂ ಮನೆ ಮೇಲಿನ ತೊಟ್ಟಿಗಳಲ್ಲಿ, ಆಕರ್ಷಣೆಗೆಂದು ಇಡುವ ಗಿಡಗಳಲ್ಲಿ, ಕೂಲರ್ ಮುಂತಾದ ಆಧುನಿಕ ಸಾಮಾಗ್ರಿಗಳಲ್ಲಿ ಇವು ಉತ್ಪತ್ತಿಯಾಗುವುವು. ಹಳ್ಳಿ ಪ್ರದೇಶಗಳಲ್ಲಿ ಇವು ಬಾವಿ ಮತ್ತು ಕಲ್ಲುಬಂಡೆಗಳ ಗುಂಡಿಗಳಲ್ಲಿ ಉತ್ಪತ್ತಿ ಹೊಂದುತ್ತವೆ. ಇವು ಸಾಮಾನ್ಯವಾಗಿ ಮನೆಗಳ ಒಳಗೆ ವಾಸಿಸುವ ಸೊಳ್ಳೆಗಳು. ಹೀಗಾಗಿ ಇವು ಬಹಳ ದೂರ ಹಾರಿ ಹೋಗದಿರುವಂತ ಸೊಳ್ಳೆಗಳು. ಇವು ಸಾಮಾನ್ಯವಾಗಿ ಮನುಷ್ಯನ ಹಾಗೂ ಪ್ರಾಣಿಗಳ ರಕ್ತವನ್ನು ಸೇವಿಸುತ್ತವೆ. ಇವು ರಕ್ತ ಸೇವನೆಗೆ ರಾತ್ರಿ 7.00 ರಿಂದ 10.00 ಗಂಟೆಯವರೆಗೆ ಚಟುವಟಿಕೆ ತೋರಿದರೂ ಕತ್ತಲಿನ ಸ್ಥಳಗಳಲ್ಲಿ ದಿನದ ಯಾವ ಹೊತ್ತಿನಲ್ಲಾದರೂ ತನ್ನ ಆಹಾರ ಸೇವನೆ ಮಾಡಬಹುದು.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate