ಯಾವುದೇ ಕೀಟನಾಶಕವಾದರೂ ಉಪಯೋಗಿಸುವಾಗ ಎಚ್ಚರಿಕೆ ವಹಿಸಬೇಕು.
1. ಶರೀರದ ಯಾವ ಭಾಗಕ್ಕೂ ಈ ಕೀಟನಾಶಕ ತಾಕದಂತೆ ನೋಡಿಕೊಳ್ಳಬೇಕು.
2. ಕೀಟನಾಶಕದ ಮಿಶ್ರಣ ಮಾಡುವಾಗ ರಬ್ಬರ್ ಕೈ ಚೀಲ (ಗ್ಲೋವ್) ಧರಿಸಬೇಕು. ಇಲ್ಲವಾದರೆ ಒಂದು ಕೋಲನ್ನು ಉಪಯೋಗಿಸಬೇಕು.
3. ಅಕಸ್ಮಾತ್ತಾಗಿ ಕೀಟನಾಶಕ ಮೈ ಮೇಲೆ ಬಿದ್ದರೆ ಕೂಡಲೇ ನೀರಿನಲ್ಲಿ ಆ ಭಾಗವನ್ನು ತೊಳೆಯಬೇಕು.
4. ಮನೆಗಳಲ್ಲಿ ಕೀಟನಾಶಕ ಸಿಂಪಡಿಸುವಾಗ ಮೊದಲಿಗೆ ಆಹಾರ ಪದಾರ್ಥಗಳನ್ನು, ತಿಂಡಿ ತಿನಿಸುಗಳನ್ನು, ಪಾತ್ರೆಗಳನ್ನು ಮತ್ತು ಮೇವನ್ನು ದೊಡ್ಡ ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಬೇಕು.
5. ಮ್ಯಾಲಥಿಯಾನ್ ಹಾಗೂ ಸಿಂಥಟಿಕ್ ಪೈರಿಥ್ರಾಯ್ಡ್ ಕೀಟನಾಶಕಗಳನ್ನು ಉಪಯೋಗಿಸುವಾಗ ಸ್ಟ್ರೇ ಸಿಬ್ಬಂದಿ ರಬ್ಬರ್ ಗ್ಲೋವ್, ರಕ್ಷಣಾ ಉಡುಪುಗಳನ್ನು ಹಾಗೂ ರಕ್ಷಣಾ ಕನ್ನಡಕವನ್ನು ಉಪಯೋಗಿಸಲೇಬೇಕು.
ಕೀಟನಾಶಕಗಳ ಸಾಗಣೆ ಹಾಗೂ ಸುರಕ್ಷಿತ ಸಂಗ್ರಹಣೆ :
1. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಳ್ಳಿಗಳಲ್ಲಿ ಕೀಟನಾಶಕಗಳನ್ನು ಶೇಖರಿಸುವ ಸುರಕ್ಷಿತ ಸ್ಥಳಗಳನ್ನು ಮೊದಲೇ ಗುರುತಿಸಬೇಕು. ಈ ಸ್ಥಳಗಳು ತೇವವಿಲ್ಲದ ಒಳ್ಳೆಯ ಬಂದೋಬಸ್ತಿರುವ ಕೊಠಡಿಯಾಗಿದ್ದು, ಬಾಗಿಲಿಗೆ ಬೀಗದ ವ್ಯವಸ್ಥೆ ಇರಬೇಕು. ಹಳ್ಳಿಗಳಲ್ಲಿ ಆರೋಗ್ಯ ಘಟಕ, ಚಿಕಿತ್ಸಾ ಕೇಂದ್ರ ಅಥವಾ ಜವಾಬ್ದಾರಿ ವಹಿಸಿಕೊಳ್ಳುವ ಪ್ರಮುಖರ ಮನೆ ಇರಬಹುದು.
2. ಬಿಸಿಲು, ಮಳೆ ತಾಕದಿರುವ ಸ್ಥಳ ನೋಡಿ ಕೀಟನಾಶಕವನ್ನು ಇಡಬೇಕು.
3. ಕೀಟನಾಶಕಗಳನ್ನು ಮಕ್ಕಳಿಂದ, ಆಹಾರ ಪದಾರ್ಥ, ಮೇವು ಹಾಗೂ ಪ್ರಾಣಿಗಳಿಂದ ದೂರವಿಡಬೇಕು.
4. ಬೇರೆ ಚೀಲ ಅಥವಾ ಪಾತ್ರೆಗಳಲ್ಲಿ ಕೀಟನಾಶಕ ಸಂಗ್ರಹಿಸಿಟ್ಟಾಗ ಅವುಗಳ ಮೇಲೆ ಸರಿಯಾದ ಹೆಸರನ್ನು ಬರೆದಿಡಬೇಕು.
5. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಳ್ಳಿಗಳಿಗೆ ಸಿಂಪಡಣಾ ಕಾರ್ಯಕ್ರಮಕ್ಕೆ ಮೊದಲೇ ನಿಗಧಿತ ಸುರಕ್ಷಿತ ಸ್ಥಳಗಳಿಗೆ ಸಾಗಿಸಬೇಕು.
6. ಖಾಲಿಯಾದ ಚೀಲ ಮತ್ತು ಡ್ರಂಗಗಳನ್ನು ಕೂಡಲೇ ನಾಶ ಮಾಡಬೇಕು. ಬೇರೆ ಯಾವ ಪದಾರ್ಥಗಳನ್ನೂ ಅವುಗಳಲ್ಲಿ ಶೇಖರಿಸಬಾರದು.
ಕೊನೆಯ ಮಾರ್ಪಾಟು : 1/28/2020