অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರೆಮುಟಾಯ್ಡ್‌ ಆರ್ಥ್ರೈಟಿಸ್‌

ರೆಮುಟಾಯ್ಡ್‌ ಆರ್ಥ್ರೈಟಿಸ್‌ ಆದಾಗ ಕೀಲುಗಳು ಬಾಯುತ್ತವೆ ಮತ್ತು ಇದು ಬಹಳ ನಿಧಾನವಾಗಿ ಶುರುವಾಗುತ್ತದೆ. ಇದು ಒಂದು ಸಲಕ್ಕೆ ಒಂದಕ್ಕಿಂತ ಹೆಚ್ಚು ಕೀಲುಗಳಿಗೆ ತೊಂದರೆ ನೀಡುವುದು. ಅದರೂ ಮೊದಲಲ್ಲಿ ಚಿಕ್ಕ ಮತ್ತು ಹೊರಭಾಗದ ಕೀಲುಗಳನ್ನು ಭಾದಿಸುವುದು.ಉದಾಹರಣೆಗೆ (ಬೆರಳುಗಳ ಕೀಲುಗಳು) ನಂತರ ರೋಗ ಬೆಳೆದಂತೆ ಇತರ ಕೀಲುಗಳಿಗೂ ಹರಡುತ್ತದೆ. (ಮೊಣಕಾಲು, ಮುಂಗೈ ಕೀಲು, ಹೆಬ್ಬೆರಳು, ಇತ್ಯಾದಿ)

ಕಾರಣಗಳು

ರೆಮುಟಾಯ್ಡ್‌ ಆರ್ಥ್ರೈಟಿಸ್‌ನ ಕಾರಣಗಳು ನಿಖರವಾಗಿ ಗೊತ್ತಿಲ್ಲ. ವಂಶಾನುಗತ, ಪರಿಸರ ಮತ್ತು ಹಾರ್ಮೋನುಗಳ ಒಟ್ಟು ಪರಿಣಾಮದಿಂದ ಉಂಟಾದ ಸ್ವಯಂ ನಿರೋಧತೆ ಪ್ರತಿಕ್ರಿಯೆ ಯಾಗಿದೆ. (ದೇಹದ ನಿರೋಧಕ ವ್ಯವಸ್ಥೆಯು. ಈ ಅಂಗಾಂಶಗಳನ್ನು ತನ್ನದೆ ಎಂದು ಗುರುತಿಸದೆ ಅವುಗಳ ಮೇಲೆ ದಾಳಿ ಮಾಡುವುದು, ಹೋಗುವವು ಪರಿಣಾಮಾಗಿ ಊತ ಮೊದಲಾಗುವುದು. ಅಂತಿಮವಾಗಿ ಕೀಲುಗಳ ಹಾನಿಯಾಗಿ ವಿಕೃತಿಗೆ ಕಾರಣವಾಗುವುದು.ವಂಶಾನುಗತ ಅಂಶಗಳು ರೋಗಬರುವ ಅವಕಾಶವನ್ನು ಹೆಚ್ಚಿಸುವುದು. ರೆಮುಟಾಯ್ಡ್‌ ಆರ್ಥ್ರೈಟಿಸ್‌ ಅನೇಕ ಕುಟುಂಬಗಳಲ್ಲಿ ಮುಂದುವರಿಯುವುದು.ಪರಿಸರದ ಅಂಶಗಳು ರೋಗದ ಬರವನ್ನು ಉತ್ತೇಜಿಸ ಬಹುದು.. ಸೋಂಕಿಗೆ ಕಾರಣವಾದ ಅನೇಕ ಅಂಶಗಳನ್ನು ಗುರುತಿಸಲಾಗಿದೆ.

ಹಾರ್ಮೊನು ಅಂಶಗಳು ರೋಗದ ಬಲಿಯುವುದನ್ನು ಹೆಚ್ಚು ಅಥವ ಕಡಿಮೆ ಮಾಡಬಹುದು.ಮಹಿಳೆಯರಲ್ಲಿ ಋತುಸ್ರಾವ ಅವಧಿಯಲ್ಲಿ ರೆಮುಟಾಯ್ಡ್‌ ಆರ್ಥ್ರೈಟಿಸ್‌ ಹೆಚ್ಚಾಗಿರುವುದು ಕಾಣುವುದು.

ಆತಂಕಕಾರಿ ಅಂಶಗಳು

ವಯಸ್ಸು ಈ ರೋಗವು ಯಾವುದೆ ವಯಸ್ಸಿನಲ್ಲಿ ಬರಬಹುದಾದರೂ 20-40 ವಯೋಮಾನದಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ.ಲಿಂಗ ಮಹಿಳೆಯರಲ್ಲಿ ಮುಟ್ಟಿನಅವಧಿಯಲ್ಲಿ ರೆಮುಟಾಯ್ಡ್‌ ಆರ್ಥ್ರೈಟಿಸ್‌ ಮೂರು ಪಟ್ಟು ಹೆಚ್ಚಾಗಿರುವುದು ಕಾಣುವುದು.

ರೆಮುಟಾಯ್ಡ್ ಆರ್ಥ್ರೈಟಿನಿಂದ ಏನಾಗುತ್ತದೆ

ಕೀಲುಗಳ ಒಳಪದರದಲ್ಲಿ ಬಿಳಿಯ ರಕ್ತ ಕಣಗಳು ಶೇಖಕರವಾಗಿ ಬಾಯುವುದು ಮೊದಲ ಬದಲಾವಣೆ. ಸೈನವಯಲ್ ಜೀವದ್ರವವು ಕೀಲುಗಳಲ್ಲಿ ಸಂಗ್ರಹವಾಗುವುದು. ಮುಂದಿನ ಹಂತದಲ್ಲಿ ಸೈನವಯಲ್ ಪೊರೆಯುದಪ್ಪವಾಗುವುದು. ಅದು ಕೀಲುಗಳಲ್ಲಿನ ಅವಕಾಶದಲ್ಲಿ ಉದ್ದನೆಯ ಬೆರಳಂತೆ ಮುಂಚಾಚುವುದು ಈ ದಪ್ಪವಾದ, ಸಾಂದ್ರವಾದ ಸೈನವಯಲ್ ಪೊರೆಯು ಸಾವಕಾಶವಾಗಿ ಆರಿಕ್ಯುಲರ್ ಮೃದ್ವಸ್ಥಿಯ ಮೇಲೆ ಮತ್ತು ಕೇಳಗೆ ಆವರಿಸಿಕೊಳ್ಳುವುದು.( ಪನ್ನಸ್ ನಿರ್ಮಾಣ ವಾಗುವುದು) ಅದು ಸಾವಕಾಶವಾಗಿ ಆರಿಕ್ಯುಲರ್ ಮೃದ್ವಸ್ಥಿಯ ಮತ್ತು ಅದರ ಹತ್ತಿರದ ಮೂಳೆಯನ್ನು ಕ್ರಮೇಣ ಸವೆಸುವುದು. ಇದರಿಂದ ಕೀಲಿನ ಅವಕಾಶವು ಕಡಿಮೆಯಾಗುವುದು.ಮತ್ತು ಸುಗಮ ಚಲನೆಗೆ ತೊಡಕಾಗುವುದು. ರೋಗವು ಬಲಗೊಂಡು ಸ್ನಾಯುಗಳ ಮತ್ತ ಕೀಲುಗಳ ಎಲ್ಲೆಂದರೆ ಅಲ್ಲಿ ಚಲನ ರಹಿತ ವಾಗುವವು. ಅದರೋಂದಿಗೆ ಬಾಗಿದ ಭಂಗಿಯಲ್ಲಿಯೇ ಇದ್ದರೆ ತುಸು ಪರಿಹಾರದೊರಕಿದಂತೆ ಆಗುವುದು. ತರುವಾಯ ಪನ್ನಸ್ ಕೀಲುಗಲ್ಲಿ ಹೋಗಿ ಗಟ್ಟಿಯಾಗುವುದು. ಇದರಿಂದ ಕೀಲುಗಳು ಒಂದಾಗುವವು. ಇದನ್ನೆ ಅಂಕಿಲಾಸಿಸ್ ಎನ್ನುವರು. ಈ ಚಿಕ್ಕ ಬದಲಾವಣೆಗಳ ಜೊತೆಗೆ ದುಂಡಗಿನ್ರುಮಾಟಿಡ್ ಗಂಟುಗಳು ಚರ್ಮದ ಕೆಳಗೆ ಮತ್ತು ಶ್ವಾಶಕೋಶ, ಹೃದಯ ಮತ್ತು .ಕಣ್ಣುಗಳಲ್ಲಿ ಕಾಣಬಹುದು.

ರೆಮುಟಾಯ್ಡ್‌ ಆರ್ಥ್ರೈಟಿಸ್‌ - ನಿರ್ವಹಣೆ

ನಿರ್ವಹಣೆಯ ಗುರಿಯು :

  • ನೋವು ಮತ್ತು ಬಾವನ್ನು ಕಡಿಮೆ ಮಾಡುವುದು
  • ರೋಗವು ಬಲಗೊಳ್ಳುವುದನ್ನು ಮುಂದೂಡುವುದು
  • ಕೀಲುಗಳ ಚಲನೆಯನ್ನು ಸುಗಮಗೊಳಿಸುವುದು , ವಿಕಲತೆಯಾಗದಂತೆ ನೋಡಿಕೊಳ್ಳುವುದು.

ಈ ಗುರಿಯ ಸಾಧನೆಗೆ ದೈಹಿಕ (ಫಿಸಿಕಲ್) ಥೆರಪಿ, ವೈದ್ಯಕೀಯ ಚಿಕಿತ್ಸೆ ಮತ್ತು ಅಗತ್ಯ ಬಿದ್ದರೆ ಶಸ್ತ್ರ ಚಕಿತ್ಸೆಗಳ ಒಟ್ಟಾಗಿಸಿದ ಮಾರ್ಗದ ಮೂಲಕ ಗುರಿ ಸಾಧಿಸಬಹುದು.ದೈಹಿಕ (ಫಿಸಿಕಲ್) ಥೆರಪಿ

  • ಕೀಲುಗಳಿಗೆ ವಿಶ್ರಾಂತಿ ನೀಡುವುದು ನೋವಿಗೆ ಸಾಕಷ್ಟು ಪರಿಹಾರ ಕೊಡುವುದು. ಮತ್ತು ಸ್ನಾಯು ಸೆಳೆತವ್ನನು ಕಡಿಮೆ ಮಾಡುವುದು. ತೆಳುವಾದ ಮರದ ತೊಡು ಬಳಸಿ ಕೀಲುಗಳ ಅನವಶ್ಯಕ ಚಲನೆಯನ್ನು ನಿಲ್ಲಿಸಬಹುದು. ಅದರೀಮದ ಕೀಳುಗಳಿಗೆ ವಿಶ್ರಾಂತಿ ಸಿಗುವುವು. ಊರುಗೋಲು, ವಾಕರ್, ಕಟ್ಟಿಗೆಗಳೂ ರೋಗ ಪೀಡಿತ ಕೀಲುಗಳ ಸಹಾಕ್ಕೆ ಒದಗುವವು.
  • ನಿರ್ವಹಣೆಯ ಅತಿ ಮುಖ್ಯ ಭಾಗ ವ್ಯಾಯಾಮ. ನೋವು ಮತ್ತು ಬಾವನ್ನು ಹೆಚ್ಚು ಮಾಡದೆ ಕೀಲುಗಳ ಚಲನಶೀಲತೆ ಹೆಚ್ಚಿಸಬೇಕು. ಇದನ್ನು ವೈದ್ಯರು ಪ್ರತಿ ರೋಗಿಗೆ ಪ್ರತ್ಯೇಕಕವಾಗಿ ನಿಗದಿ ಪಡಿಸುವರು.
  • ಆದರ್ಶ ತೂಕವನ್ನು ಕಾಪಾಡಿಕೊಳ್ಳುವುದು, ರೋಗಗ್ರಸ್ಥ ಕೀಲುಗಳ ಮೇಲೆ ಹಾಕದಿರುವುದು ಅತಿ ಮುಖ್ಯ ..
  • ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 12/7/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate