অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವೈರಸ್ ಮುಕ್ತ ಭಾರತ

ದೇಶವನ್ನು ನಡುಗಿಸುತ್ತಿರುವ ಮಾರಕ ರೋಗ HIV/AIDS. ಇದೊಂದು ಮಾರ್ಣಾಂತಿಕ ಖಾಯಿಲೆಯಲ್ಲ. ಇದನ್ನು ವೈದ್ಯಕೀಯೋಪಾಚಾರದಿಂದ ವೃದ್ಧಿ ಹೊಂದಂತೆ ತಡೆಯಬಹುದು. ಇಂದು ಒಂದು ರೀತಿಯ ಭಯದ ವಾತವರಣವನ್ನು ಸಮಾಜದಲ್ಲಿ ಸೃಷ್ಟಿಸುತ್ತಿದೆ. ಈ ಸಾಮಾಜದಲ್ಲಿ ಖಾಯಿಲೆಗೆ ತುತ್ತಾಗಿರುವವರನ್ನು ನಿರ್ಲಕ್ಷ್ಯದಿಂದ ನೋಡಲಾಗುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.

ಈ ವಿಚಾರದಲ್ಲಿ 2014ರ ಜುಲೈ ತಿಂಗಳಿನಲ್ಲಿ ಅಮೇರಿಕಾ ದೇಶದ ವರದಿಯಂತೆ ಭಾರತ ದೇಶವು ವಿಶ್ವದ 3ನೇ ಅತಿ ದೊಡ್ಡ HIV/AIDS ಪೀಡಿತರ ದೇಶವಾಗಿರುತ್ತದೆ. ಭಾರತ ದೇಶದಲ್ಲಿ 100 ಜನರಲ್ಲಿ 4ಜನ HIV/AIDS ಪೀಡಿತರಾಗಿದ್ದಾರೆ.13ನೇ ವಯಸ್ಸಿನಿಂದ 30ರ ವಯೋಮಾನದವರು ಶೇ50ಕ್ಕೂ ಹೇಚ್ಚು ಜನ ಈ ಖಾಯಿಲೆಗೆ ತುತ್ತಾಗಿದ್ದಾರೆ.

ನಮ್ಮ ದೇಶದಲ್ಲಿ HIV/AIDS ಪೀಡಿತರಲ್ಲಿ ಶೇ38ರಷ್ಟು ಜನ ಮಾತ್ರ ಎ.ಆರ್.ಟಿ ಕೇಂದ್ರಗಳ ಮೂಲಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ಆಘಾತವಾದದ್ದು. ದೇಶದಲ್ಲಿ ಲಕ್ಷಂತರ ವ್ಯಕ್ತಿಗಳು HIV/AIDS ಪೀಡಿತರಾಗಿದ್ದಾರೆ. ಎಂದು ಅಂದಾಜಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ 2,50 ಲಕ್ಷಕ್ಕೂ ಹೆಚ್ಚು ಹೆಚ್.ಐ.ವಿ ಪೀಡಿತರು ಔಷದೋಪಚಾರ ಪಡೆಯುತ್ತಿದ್ದು, ವರದಿ ಮಾಡಿಕೊಳ್ಳದ ಲಕ್ಷಾಂತರ ಜನ ಎ.ಆರ್.ಟಿ ಕೇಂದ್ರದಿಂದ ದೂರವುಳಿದಿರುತ್ತಾರೆ.

ಹಗ್ ಮತ್ತು ಅಡಾಪ್ಟ್ (ಮಕ್ಕಳ ಆಲಿಂಗನ ಮತ್ತು ದತ್ತು ಸ್ವೀಕಾರ)

ಭಾರತ ದೇಶದ ಆರ್ಥಿಕ ಪ್ರಗತಿಯ ನಡುವೆಯೂ ಹಲವಾರು ಕಾರಣಗಳಿಂದ 9,00,00 ನವಜಾತ ಮಕ್ಕಳು ಪ್ರತಿ ವರ್ಷ ಸಾಯುತ್ತಿದ್ದಾರೆ. ಅಂದರೆ ಪ್ರತಿ ನಿಮಿಷಕ್ಕೆ ಒಂದು ಮಗು ಸಾಯುತ್ತಿದೆ. ಇದು ದುರಾದೃಷ್ಟಕರ. ಭಾರತದಲ್ಲಿ ಒಂದುಲಕ್ಷಕ್ಕೂ ಹೆಚ್ಚು HIV/AIDS ಪೀಡಿತ ಮಕ್ಕಳಿದ್ದು, ಕಾರ್ನಾಟಕ ರಾಜ್ಯದಲ್ಲಿ 6000ಜನ ಹೆಚ್.ಐ.ವಿ ಸೋಂಕಿತ ಮಕ್ಕಳಿದ್ದು, ಇದರಲ್ಲಿ 3000ಕ್ಕೂ ಹೆಚ್ಚು ತಂದೆ ತಾಯಿ ಇಲ್ಲದ ಮಕ್ಕಳು, 1000ಕ್ಕೂ ಹೆಚ್ಚು ಏಕ ಪೋಷಕರಿರುವ ಮಕ್ಕಳಾಗಿರುತ್ತಾರೆ. HIV/AIDS ಇದು ಗುಣವಾಗಲು ಕಷ್ಟಕರ, ಆದರೆ ನಿಮ್ಮ ಒಂದು ನಿಮಿಷದ ಸಮಯ ಮತ್ತು ಪ್ರತಿ ತಿಂಗಳ ಸಣ್ಣ ಸಹಾಯ ಸ್ಥಿತಿಯನ್ನೇ ಬದಲಿಸುತ್ತದೆ. ನಮ್ಮ ಜೊತೆ ಸೇರಿ ಇಂದಿನ ವಿಶ್ವಾಸದ ಪೋಷಕರಾಗಿ ನಮ್ಮ ದೀರ್ಘಕಾಲದ ವಿಶ್ವಾಸಾರ್ಹ ಪ್ರಯತ್ನಗಳ ಅನುಷ್ಠಾನದಿಂದ ಮಕ್ಕಳಿಗೆ ಎಲ್ಲಾ ಹಂತಗಳಲ್ಲಿ ಸಹಾಯ ಮಾಡೋಣ. ಮಕ್ಕಳಿಗೆ ಜೀವನವೆಂಬ ಬಹುಮಾನವನ್ನು ನೀವು ನೀಡಬಹುದು. ವಿದೇಶಿ ದೇಣಿಗೆಯಿಂದ ಈ ಮಕ್ಕಳ ಪೋಷಣೆಯನ್ನು ನಿಲ್ಲಿಸಿ ಭಾರತಿಯರಾದ ನಾವೇ ಪ್ರೀತಿಯಿಂದ ಅಪ್ಪಿಕೊಂಡು ದತ್ತು ಸ್ವಿಕರಿಸಿ ದೇಶದ ಘನತೆ ಗೌರವವನ್ನು ಉಳಿಸಿಕೊಳ್ಳೋಣ. ನಮ್ಮ ಸೇವಾ ಬ್ಯಾಂಕ್ ಯೋಜನೆಯಲ್ಲಿ ಭಾಗಿಯಾಗಿ.

ಸೇವಾ ಬ್ಯಾಂಕ್

ಪ್ರತಿಯೊಂದು ಮನೆಯ ಮಕ್ಕಳಲ್ಲಿ ಸೇವಾ ಭಾವನೆ ಮೂಡಿಸುವುದು. ದೇಶಾದ್ಯಂತ ಇರುವ ಒಂದುವರೆ ಲಕ್ಷಕ್ಕೂ ಹೆಚ್ಚಿನ ಹೆಚ್ ಐ ವಿ ಪೀಡಿತ ಮಕ್ಕಳಿಗೆ ನಾವು ಸಹಾಯ ಹಸ್ತ ನೀಡುವುದು ನಮ್ಮ ಕರ್ತವ್ಯ ಎಂದು ತಿಳಿಸುವುದಲ್ಲದೆ ನಮ್ಮ ತಂದೆ ತಾಯಿಗಳು ನಮ್ಮನ್ನು ಚೆನ್ನಾಗಿ ಸಾಕುತ್ತಿದ್ದಾರೆ. ಅದೃಷ್ಟವಂತ ಮಕ್ಕಳು ಎನ್ನುವ ಅರಿವನ್ನು ಮೂಡಿಸುವ ದೃಷ್ಠಿಯಿಂದ ಮನೆಯಲ್ಲೊಂದು ಸೇವಾ ಬ್ಯಾಂಕ್ ಗೋಲಕವನ್ನು ಪಡೆದು ಪ್ರತಿನಿತ್ಯ ಬೆಳಿಗ್ಗೆ ಮಗುವಿನ ಕೈಯಲ್ಲಿ ಒಂದು ರೂ ನಾಣ್ಯವನ್ನು ಈ ಗೋಲಕಕ್ಕೆ ಹಾಕಿಸುವ ಮೂಲಕ ಮನೆಯಲ್ಲಿ ಸೇವಾ ಮನೋಭಾವ ಮೂಡಿಸುವುದು ಮತ್ತು ಒಂದು ವರ್ಷದ ನಂತರ ಆ ಹಣವನ್ನು ದೇಶಾದ್ಯಂತ ಇರುವ ಮಕ್ಕಳ ಹುಟ್ಟುಹಬ್ಬದ ದಿನ ಅವರಿಗೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗೋಣ

ಪಾಸಿಟೀವ್ ಮ್ಯಾರೇಜ್ ಬ್ಯೂರೋ

ವಯಸ್ಕರಿಗೆ ಮ್ಯಾರೇಜ್ ಬ್ಯೂರೋ (ಹೆಚ್.ಐ.ವಿ. ಪೀಡಿತರ ವಧುವರಾನ್ವೇಷಣಾ ಕೇಂದ್ರ ) ಇದರ ಅಡಿಯಲ್ಲಿ ರಾಜ್ಯ ಮಟ್ಟದಲ್ಲಿ ಹೆಚ್.ಐ.ವಿ+ ವ್ಯಕ್ತಿಗಳ ನಡುವೆ ಮದುವೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುವುದು.

ಜೀವನ ಶೈಲಿ

ಔಷದೋಪಚಾರ, ರೋಗ, ಧ್ಯಾನ, ಆಯುರ್ವೇದ ಹಾಗೂ ಭಾರತಿಯ ವೈದ್ಯಕೀಯ ಪದ್ದತಿಯ ಮೂಲಕವಾಗಿ ಹೆಚ್.ಐ.ವಿ ಪೀಡಿತರಲ್ಲಿ ಶಿಸ್ತಿನ ಜೀವನ ತರುವುದರ ಮೂಲಕವಾಗಿ ಆರೋಗ್ಯ ಸುಧಾರಣೆ ಮಾಡುವುದು. ಹೊಸ ಸಂಶೋಧನೆಗೆ ಪ್ರೋತ್ಸಾಹಿಸುವುದು.

ಅಗ್ನಿಹೋತ್ರ

ಪ್ರತಿಯೊಬ್ಬ ಮನುಷ್ಯನೂ ಸಂತೋಷವನ್ನು ಅರಸಿ ಹೋಗುತ್ತಾನೆ. ಭಾರತದಲ್ಲಿ ಸಂತೋಷವನ್ನು ಪಡೆಯಲು 5 ಮಾರ್ಗಗಳನ್ನು ಅನುಸರಿಸುತ್ತಾರೆ.

  1. ಯಜ್ಞ
  2. ದಾನ
  3. ತಪ
  4. ಕರ್ಮ
  5. ಸ್ವಾಧ್ಯಾಯ

ಯಜ್ಞದ ಅಡಿಯಲ್ಲಿ ಅಗ್ನಿಹೋತ್ರ ಪ್ರಮುಖವಾದದ್ದು. ಪ್ರತಿನಿತ್ಯ ಮನೆಯಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ಥದಲ್ಲಿ ಮಂತ್ರಸಮೇತವಾಗಿ ಅಗ್ನಿಹೋತ್ರ ಮಾಡುವ ಅನಿವಾರ್ಯವಿದೆ ಅಗ್ನಿಹೋತ್ರದಿಂದ

  • ದೇಹ ಮತ್ತು ಮನಸ್ಸನ್ನು ನಿರ್ಮಲಗೊಳಿಸುತ್ತದೆ.
  • ಮನೆಯ ಪರಿಸರವನ್ನು ಶುಚಿಗೊಳಿಸುತ್ತದೆ.
  • ದೈಹಿಕ ಮತ್ತು ಮಾನಸಿಕ ರೋಗಗಳಿಗೆ ಇದು ಮದ್ದು.
  • ಅಗ್ನಿಹೋತ್ರವು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ ಮತ್ತು ರೋಗಮುಕ್ತ ವ್ಯಕ್ತಿಯನ್ನಾಗಿಸುತ್ತದೆ.

ಭೂಪಾಲ್ ಅನಿಲ ದುರಂತದ ನಂತರದ ಜರ್ಮನಿಯ ವಿಜ್ಞಾನಿಗಳು ನೀಡಿರುವ ವರದಿಯಂತೆ ಪ್ರತಿನಿತ್ಯ ಅಗ್ನಿಹೋತ್ರದಿಂದ ಮನುಷ್ಯನನ್ನು ಎಲ್ಲಾ ರೋಗಾಣುಗಳಿಂದ ಮುಕ್ತ ಗೊಳಿಸುತ್ತದೆ. ಪ್ರತಿನಿತ್ಯ ಜಾತಿ ಮತ ಧರ್ಮ ಎಲ್ಲವನ್ನೂ ಮೀರಿ ವೈಜ್ಞಾನಿಕವಾಗಿ ಪ್ರತಿ ಮನೆಯಲ್ಲೂ ಸೂರ್ಯೋದಯ ಹಾಗೂ ಸೂರ್ಯಾಸ್ಥದಲ್ಲಿ ಅಗ್ನಿಹೋತ್ರ ಮಾಡೋಣ, ಆರೋಗ್ಯವಂತರಾಗೋಣ

ಮೂಲ :ಪೋರ್ಟಲ್   ತಂಡ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate