ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವ್ಯಾಸೆಕ್ಟಮಿ

ವ್ಯಾಸೆಕ್ಟಮಿ (ಪುರುಷರ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ)

ವ್ಯಾಸೆಕ್ಟಮಿ (ಪುರುಷರ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ)

ಸಂತಾನೋತ್ಪತ್ತಿಯನ್ನು ಶಾಶ್ವತವಾಗಿ ತಡೆಗಟ್ಟಲು ಇದೊಂದು ತೀರ ಚಿಕ್ಕ ಶಸ್ತ್ರಚಿಕಿತ್ಸೆ. ವ್ಯಾಸೆಕ್ಟಮಿ ಮಾಡಲು ಕಡಿಚೆ ಸಮಯ ಸಾಕು. ಪುರುಷರಿಗೆ ಇದರಿಂದ ಹೆಚ್ಚು ತೊಮದರೆಯೂ ಆಗುವುದಿಲ್ಲ. ಆಸ್ಪತ್ರೆಯಲ್ಲಿಯೂ ಇರಬೇಕಾಗಿಲ್ಲ.

ವ್ಯಾಸೆಕ್ಟಮಿಯಲ್ಲಿ ಎರಡು ವಿಧಾನಗಳಿವೆ.

ಸಂಪ್ರದಾಯಿಕವಾದ ವ್ಯಾಸೆಕ್ಟಮಿ

ನೋಸ್ಕಾಲಪೆಲ್ ವ್ಯಾಸೆಕ್ಟಮಿ

ಸಾಂಪ್ರದಾಯಿಕ ವ್ಯಾಸೆಕ್ಟಮಿ

ಈ ವಿಧಾನಕ್ಕೆ ಕೆಲವೇ ನಿಮಿಷಗಳು ಸಾಕು. ವ್ಯಾಸೆಕ್ಟಮಿ ಮಾಡಿಸಿಕೊಂಡ ವ್ಯಕ್ತಿಯು ಒಂದು ಗಂಟೆಯಲ್ಲಿ ಮನೆಗೆ ಹೋಗಬಹುದು. ಅನುಭವಸ್ಥರಾದ ವೈದ್ಯರು ಶಸ್ತ್ರವೈದ್ಯರ ಚಾಕುವನ್ನು ಬಳಸಿ ವೃಷಣ ಕೋಶದಲ್ಲಿ ಒಂದು ಚಿಕ್ಕ ಗೀರನ್ನು ಕೊರೆಯುತ್ತಾರೆ ಮತ್ತು ಎರಡೂ ಪಕ್ಕದ ನಾಳಗಳನ್ನು ಹುಡುಕುತ್ತಾರೆ. ನಾಳಕ್ಕೆ ಗಂಟು ಹಾಕಿ, ವೀರ್ಯಾಣುಗಳು ವೀರ್ಯ ಚೀಲವನ್ನು ತಲಪದಂತೆ ತಡೆಯಲು ಕತ್ತರಿಸಲಾಗುವುದು. ಇದಕ್ಕೆ ಒಂದು ಹೊಲಿಗೆ ಸಾಕಾಗುತ್ತದೆ.

ನೋಸ್ಕಾಲ್‍ಪೆಲ್ ವ್ಯಾಸೆಕ್ಟಮಿ (ಎನ್‍ಎಸ್‍ವಿ)

ನೋಸ್ಕಾಲ್‍ಪೆಲ್ ವ್ಯಾಸೆಕ್ಟಮಿ ವಿಧಾನದಲ್ಲಿ, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಒಂದು ಸೂಜಿಯಿಂದ ಚುಚ್ಚಲಾಗುತ್ತದೆ. ಅಷ್ಟೆ ಹೊಲಿತೆಯ ಅಗತ್ಯವಿಲದಲ. ಆದ್ದರಿಂದ ಹೊಲಿತೆಯನ್ನು ತೆಗೆಸಲು ಮತ್ತೆ ಬರಬೇಕಾಗಿಲದಲ. ಈ ವಿಧಾನ ಜನಪ್ರಿಯವಾಗುತ್ತಿದೆ. ಈಗ ಈ ಹೊಸ ವಿಧಾನದಲ್ಲಿ ವೈದ್ಯರಿಗೆ ತರಬೇತಿ ಕೊಡಲಾಗುತ್ತದೆ. ಸಾಂಪ್ರದಾಯಿಕ ವ್ಯಾಸೆಕ್ಟಮಿಗೆ ಹೋಲಿಸಿದರೆ ಎನ್‍ಎಸ್‍ವಿಯಲ್ಲಿ ಅಡ್ಡಪರಿಣಾಚಗಳು ಕಡಚೆ. ಇದು ಸುರಕ್ಷಿಗವಾದ ಮತ್ತು ಸುಲಭವಾದ ವಿಧಾನ ಇದಕ್ಕೆ 10-15 ನಿಮಿಷಗಳು ಮಾತ್ರ ಸಾಕು.

ವ್ಯಾಸೆಕ್ಟಮಿಯಿಂದ ಕೆಲಸದಲ್ಲಿ ಮತ್ತು ಲೈಂಗಿಕ ಜೀವನದಲ್ಲಿ ನಿಶ್ಚಕ್ತಿ ಉಂಟಾಗುತ್ತದೆ ಎಂದು ಸಾಮಾನ್ಯವಾಗಿ ಪುರುಷರು ಯೋಚನೆ ಮಾಡುತ್ತಾರೆ. ಇದು ಸತ್ಯವಲ್ಲ. ಇಲ್ಲಿಯವರೆತೆ ಇದಕ್ಕೆ ಯಾವುದೇ ಸಾಕ್ಷ್ಯಾಧಾರವೂ ದೊರೆತಿಲ್ಲ. ವ್ಯಾಸೆಕ್ಟಮಿಯಲ್ಲಿ ವೃಷಣಗಳನ್ನು ಸ್ಪರ್ಶಿಸುವುದೂ ಇಲ್ಲ. ಹಾರ್ಮೋನುಗಳನ್ನು ಸ್ರವಿಸಿ ಲೈಂಗಿಕ ಕ್ರಿಯೆಗಳನ್ನು ನಿಯಂತ್ರಿಸುವುದು ವೃಷಣಗಳೇ. ವ್ಯಾಸೆಕ್ಟಮಿಯು ಯಾವುದೇ ರೀತಿಯಲ್ಲಿಯೂ ಇದರ ಮೇಲೆ ಪರಿಣಾಮ ಬೀರುವುದಿಲ್ಲ. ವ್ಯಾಸೆಕ್ಟಮಿಯನ್ನು ಜನಪ್ರಿಯಗೊಳಿಸುವುದರ ಅಗತ್ಯವಿದೆ.

ವ್ಯಾಸೆಕ್ಟಮಿಯ ಅನಂತರ ಕೆಲವು ಸಲ ಗರ್ಭಧಾರಣೆ ಆಗುವುದು ಏಕೆ ?

ವ್ಯಾಸೆಕ್ಟಮಿಯ ಅನಂತರ ರೇತಸ್ಸಿನಲ್ಲಿ ವೀರ್ಯಾಣುಗಳು ಇಲ್ಲದಂತೆ ತಲು ಮೂರು ತಿಂಗಳು ಬೇಕಾಗುತ್ತದೆ. ಈ ಅವಧಿಯಲ್ಲಿ ಕಾಂಡೋಮ್ ಅನ್ನು ಉಪಯೋಗಿಸಬೇಕು. ಪುರುಷರು ಅನೇಕ ಸಂದರ್ಭಗಳಲ್ಲಿ ಈ ಅಂಶವನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಗರ್ಭಧಾರಣೆ ಸಂಭವಿಸಬಹುದು. ವ್ಯಾಸೆಕ್ಟಮಿಯ ಅನಂತರ ಮೂರು ತಿಮಗಳ ಕಾಲ ಕಾಂಡೋಮ್ ಅನ್ನು ಉಪಯೋಗಿಸಿದರೆ  ಗರ್ಭಧಾರಣೆಯ ಸಾಧ್ಯತೆಗಳನ್ನು ತಡೆಗಟ್ಟಬಹುದು.

ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ

2.99122807018
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top