ಇದೊಂದು ಪ್ರಸವದ ನಂತರದ ಅವಧಿಗೆ ಬಳಸುವ ವೈದ್ಯಕೀಯ ಶಬ್ದವಾಗಿದೆ. ಈ ಸಮಯದಲ್ಲಿ ಜನನೇಂದ್ರೀಯಗಳ ಮತ್ತು ಕಿಬ್ಬೊಟ್ಟೆಯ ಅಂಗಾಂಗಗಳಾದ ದೇಹದ ಭಾಗಗಳು , ಗಭಾ೯ವಸ್ಥೆಯ ಮುಂಚಿನ ಸ್ಥಿತಿಗೆ ಮರಳುತ್ತಿರುತ್ತವೆ. ಈ ಹೆರಿಗೆ ನಂತರದ ಬದಲಾವಣೆಯು ಹೆರಿಗೆಯನಂತರ ೬ ವಾರಗಳ (೪೨ ದಿನಗಳು) ವರೆಗೆ ಮುಂದುವರೆಯುತ್ತದೆ. ಈ ಅವಧಿಯ ಕೊನೆಯಲ್ಲಿ ನೀವು ಹೆಚ್ಚಿನ ತೂಕದಂತಹ ಕೆಲಬದಲಾವಣೆಗಳನ್ನು ಹೊರತುಪಡಿಸಿ ಸಹಜ ಸ್ಥಿತಿಗೆ ಮರಳಿದಂತೆ ಅನಿಸುತ್ತದೆ. ಬಹುಶ: ಇದೇ ಕಾರಣಕ್ಕಾಗಿ, ಭಾರತೀಯ ಮನೆಗಳಲ್ಲಿ ಸಂಪ್ರದಾಯದ ೪೦ ದಿನಗಳ ಕಲ್ಪನೆ( ಅಥವಾ ಸವ್ವಾ ತಿಂಗಳು) ಪ್ರಸೂತಿ ನಂತರದ ನಿಭ೯೦ಧವನ್ನು ಪಾಲಿಸಲಾಗುತ್ತದೆ. ಇದು ಸ್ತ್ರೀಯರಿಗೆ ಮರುಚೇತನ ಹೊಂದಲು ಸಮಯವನ್ನು ಕೊಡುತ್ತದೆ.
ಬಾಣಂತಾವಸ್ಥೆಯಾದ ಕೂಡಲೇ ಹೆರಿಗೆ ನಂತರದ ಮೊದಲಿನ ೨೪ ಘ೦ಟೆಗಳು ಸಮಯ ಸಂದಿಗ್ಧ ಮಟ್ಟದ್ದಾಗಿದೆ. ಈ ಸಮಯದಲ್ಲಿ ಗಭ೯ವೇಷ್ಟನ ತಗಲುವ ಜಾಗದಿಂದ ರಕ್ತಸ್ರಾವವನ್ನು ತಡೆಗಟ್ಟಲು ನಿಮ್ಮ ಗಭಾ೯ಶಯವು ಚೆನ್ನಾಗಿ ಆಕುಂಚನ ಹೊಂದಬೇಕಾಗುತ್ತದೆ. ಇದು ಸ್ತನಪಾನ ಮಾಡುವ ಮತ್ತು ಸಂಭ೦ಧ ಕಲ್ಪಿಸಲಿಕ್ಕೆ ಕೂಡ ಪ್ರಾರಂಭವಾಗಿದೆ. ಸಾಂದಭಿ೯ಕವಾಗಿ ಈ ಸಮಯದಲ್ಲಿ ಹೆರಿಗೆಯಿಂದ ಜೀವಕ್ಕೆ ಅಪಾಯ ಒಡ್ಡುವಂತಹ ಅನೇಕ ಗೊಂದಲಗಳು ವ್ಯಕ್ತವಾಗುತ್ತವೆ. ಇವುಗಳಲ್ಲಿ ಬರುವವೆಂದರೆ ಹೆರಿಗೆ ನಂತರದ ಅತೀವ ರಕ್ತಸ್ರಾವ, ರಕ್ತ ಪರಿಚಲನೆಯ ಶಕ್ತಿಗುಂದುವಿಕೆ, ಹೃದಯಾಘಾತ ಮುಂತಾದವುಗಳು . ಇವು ಸಾಮಾನ್ಯವಾಗಿ ಇರುವುದಿಲ್ಲ. ಆದರೆ ಸಹಜ ಯೋನಿನಾಳದಿಂದಾದ ಹೆರಿಗೆಗಳಲ್ಲಿಯೂ ಪ್ರತಿ ೧೦,೦೦೦/- ಸ್ತ್ರೀಯರಲ್ಲಿ ಒಬ್ಬರಿಗೆ ಮೄತ್ಯುವಿನ ಅಪಾಯ ಇರುತ್ತದೆ. ಈ ಅಪಾಯವು ರಕ್ತಹೀನತೆ, ಅತೀವ ರಕ್ತದ ಒತ್ತಡ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿರುವ ಸ್ತ್ರೀಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ನಿಮಗೆ ಹೆರಿಗೆಯಾದ ನಂತರ ೨೪ ಗಂಟೆಗಳ ವರೆಗೆ ಆಸ್ಪತ್ರೆಯಲ್ಲಿರಲು ಸಲಹೆ ಮಾಡಲಾಗುತ್ತದೆ.
ಇದು ಹೆರಿಗೆಯ ನಂತರದ ಎರಡನೇಯ ದಿನದಿಂದ ಏಳನೇ ದಿನಕ್ಕೆ ಸಂಬಂಧಿಸಿರುತ್ತದೆ. ಈ ಸಮಯದಲ್ಲಿ ನಿಮ್ಮ ಜನನೇಂದ್ರೀಯದ ಜಾಗದಲ್ಲಿ ಪ್ರಮುಖ ಬದಲಾವಣೆಗಳು ಪ್ರಾರಂಭವಾಗುತ್ತವೆ. ಈ ಸಮಯವು ಬಹುಶ: ನೀವು “ ತಾಯಿ ” ಅನ್ನುವಂತೆ ಹೊಸ ಪಾತ್ರಕ್ಕೆ ಅತೀವವಾಗಿ ಹೊಂದಿಕೊಳ್ಳುವ ಸಮಯವಾಗಿರುತ್ತದೆ. ನೀವು ಈ ಅವಧಿಯ ಮಗುವಿನೊಂದಿಗೆ ಮರಳಿ ಮನೆಗೆ ಹೋಗುತ್ತೀರಿ. ಅಲ್ಲಿ ಅನೇಕ ಆದರೂ ಅತೀ ಚಿಕ್ಕ ಕಾಣುವಂತಹ ದೈಹಿಕ ಬದಲಾವಣೆಗಳು ನಿಮಗೆ ತಿಳಿಯುವಂತೆ ಆಗುತ್ತವೆ. ಇವು ಯಾವುದೆಂದರೆ-
ಈ ಪದವು ಜನನೇಂದ್ರೀಯದಿಂದಾಗುವ ಸ್ರಾವವನ್ನು ಸೂಚಿಸುತ್ತದೆ. ಇದು ಮುಖ್ಯವಾಗಿ ಗಭ೯ಕೋಶದ ಒಳಪದರಿನ ಉದುರಿಕೆಯಿಂದ ಬರುತ್ತದೆ. ಮೊದಲ ನಾಲ್ಕುದಿನಗಳವರೆಗೆ ಅತೀ ಹೆಚ್ಚಿನ ಮುಟ್ಟಿನ ಹರಿವಿನಂತಹ ತಾಜಾ ರಕ್ತಸ್ರಾವವಾಗುತ್ತದೆ. ನೀವು ಪ್ರತೀ ಬಾರಿಗೆ ಎರಡು ಪ್ಯಾಡ್ ಗಳಂತೆ ದಿನಕ್ಕೆ ೩-೪ ಬಾರಿ ಬದಲಾಯಿಸಬೇಕಾಗುತ್ತದೆ. ಏನೇ ಆದರೂ ಅದು ನಿಮಗೆ ತುಂಬ ಹೆಚ್ಚು ಅಥವಾ ದೊಡ್ಡ ರಕ್ತದ ಕರಣೆಗಳು ಹೊರಬಂದರೆ ನೀವು ನಿಮ್ಮ ವೈದ್ಯರನ್ನು ಸಂಪಕಿ೯ಸಲೇಬೇಕು. ಸಾಮಾನ್ಯವಾಗಿ ೫ ನೇ ದಿನಕ್ಕೆ ರಕ್ತಸ್ರಾವ ಅತಿ ಕಡಿಮೆಯಾಗಿರುತ್ತದೆ. ಮತ್ತು ಈಗ ಹಳದಿ ಕಂದು ಬಣ್ಣದಂತಹ ಗುರುತಿನ ಸ್ರಾವದಂತಿರುತ್ತದೆ. ಈ ಸಮಯದಲ್ಲೂ ನಿಮಗೆ ದಿನಕ್ಕೆ ೨-೩ ಪ್ಯಾಡ್ ಗಳ ಅವಶ್ಯಕತೆ ಇರುತ್ತದೆ. ಈ ತರದ ಹೊರಹರಿವು ಎರಡನೇಯ ವಾರದ ಕೊನೆಗೆ ನಿಂತು ಹೋಗುತ್ತದೆ. ಇದಾದ ನಂತರ ಅದು ಸಾದಾ ಬಿಳಿಸ್ರಾವದಂತಾಗುತ್ತದೆ. ಒಳ್ಳೆಯ ಆರೋಗ್ಯಕರ ಪಾಲನೆ ಮತ್ತು ಜನನಾಂಗದ ಬಾಹ್ಯ ಉರಿಯುವಿಕೆಯ ಕಾಳಜಿಯಿಂದ ಅಂಟುರೋಗಗಳನ್ನು ತಡೆಯಬಹುದು. ಸ್ರಾವದಲ್ಲಿಯ ಯಾವುದೇ ಕೆಟ್ಟ ವಾಸನೆ ಬಂದರೆ ನಿಮ್ಮ ವೈದ್ಯರಿಗೆ ತಿಳಿಸಬೇಕು.
ಮೊದಲನೆಯ ದಿನ ನಿಮಗೆ ಹೆರಿಗೆಯ ಹೊಲಿಗೆಯ ನೋವಿದ್ದರೂ ಸಹಿತ ಗಂಟೆಗೆ ೨ ರಿಂದ ೩ ಬಾರಿ ಮೂತ್ರ ಮಾಡಬೇಕು. ಏಕೆಂದರೆ ನಿಮಗೆ ಗೊತ್ತಿಲ್ಲದೇ ನಿಮ್ಮ ಮೂತ್ರಕೋಶವು ಹೆಚ್ಚಿಗೆ ತುಂಬ ಬಹುದಾಗಿದೆ. ಇದರಿಂದ ನಿಮಗೆ ಅನೇಕ ತೊಂದರೆಗಳಾಗಬಹುದು. ವಿಶೇಷವಾಗಿ ನಂತರ ಅಂಟುರೋಗಗಳು ಬರಬಹುದು. ಮೊದಲನೇಯ ವಾರದಲ್ಲಿ ನೀವು ಬಹಳಷ್ಟು ಮೂತ್ರ ಮಾಡುತ್ತಿರುವಂತೆ ಅನಿಸಬಹುದು. ಇದು ಏಕೆಂದರೆ ನಿಮ್ಮ ದೇಹವು ಗಭಾ೯ವಸ್ಥೆಯಲ್ಲಿ ಉಳಿಸಿಕೊಂಡಂತಹ ಹೆಚ್ಚಿನ ಪ್ರಮಾಣದ ನೀರು ಮತ್ತು ಉಪ್ಪನ್ನು ಹೊರಹಾಕುತ್ತಿರುತ್ತದೆ.
ನಿಮಗೆ ಅನೇಕ ಕಾರಣಗಳಿಂದ ಹೆರಿಗೆಯ ನಂತರದ ೨ ದಿನಗಳಲ್ಲಿ ಸರಿಯಾದ ಮಲ ವಿಸರ್ಜನೆಯಾಗದೇ ಇರಬಹುದು. ಮೊದಲನೆಯದಾಗಿ ನೀವು ಚೆನ್ನಾಗಿ ಆಹಾರ ಸೇವನೆಯನ್ನು ಮಾಡುರುವುದಿಲ್ಲ. ನೀವು ತುಂಬ ಆಯಾಸದಿಂದಿರುತ್ತೀರಿ. ಮತ್ತು ನಿದ್ರಾವಸ್ಥೆಯಲ್ಲಿರುತ್ತೀರಿ. ಎರಡನೇಯದಾಗಿ ನಿಮಗೆ ಜನನಾಂಗದ ಬಾಹ್ಯ ಉರಿಯುವಿಕೆಯು ಅಥವಾ ಹೊಲಿಗೆಯ ನೋವು ಇರಬಹುದು. ಈ ಸಮಯದಲ್ಲಿ ನೀವು ಹೆಚ್ಚುನಾರಿನಾಂಶವುಳ್ಳ ಆಹಾರ ಸೇವನೆ ಮತ್ತು ಅತೀವ ದ್ರವಪಾನವು ಮಾಡುವುದರಿಂದ ಗಟ್ಟಿ ಮಲವಿಸರ್ಜನೆಯಾಗುವುದನ್ನು ತಡೆಯಬಹುದು. ನಿಮಗೆ ಕೆಲದಿನಗಳವರೆಗೆ ಅತಿ ಕಡಿಮೆ ಪ್ರಭಾವದ ಭೇದಿ ಔಷಧಿ ಬೇಕಾಗಬಹುದು.
ಮೊದಲನೆಯ ದಿನ ಸ್ತನಗಳಿಂದ ಬರೀ ನೀರಿನಂತಹ , ಹಳದಿ ಬಣ್ಣದ ನಿಜವಾದ ಹಾಲಿನಂತೆ ಕಾಣದಂತಹ ಹರಿವನ್ನು ಕಾಣಬಹುದು. ಇದನ್ನು ಪ್ರಥಮ ಹಾಲು (ಗಿಣ್ಣದ ಹಾಲು) ಎಂದು ಕರೆಯಲ್ಪಡುತ್ತವೆ . ಇದು ನಿಮ್ಮ ಮಗುವಿಗೆ ಬೇಕಾಗುವ ಅನೇಕ ಪೌಷ್ಟಿಕ ಅಂಶಗಳನ್ನು ಹೊಂದಿರುತ್ತದೆ. ನೀವು ಈ ಸಮಯದಲ್ಲಿ ಮಗುವಿಗೆ ಸ್ತನಪಾನ ಮಾಡಿಸಬೇಕು. ಮೂರನೆ ದಿನಕ್ಕೆ ದೇಹದಲ್ಲಾಗುವ ಪುಷ್ಟಿಕಾರಕ ಬದಲಾವಣೆಗಳಿಂದ ಹಾಲಿನ ಹರಿವು ಹೆಚ್ಚಾಗುತ್ತದೆ. ನಿಯತಕಾಲಿಕ ಸ್ತನಪಾನ ಮಾಡಿಸುವುದರಿಂದ ಸ್ತನದಲ್ಲಿ ಹಾಲಿನ ಹೆಚ್ಚಿನ ಶೇಖರಣೆಯನ್ನು ತಡೆಯಬಹುದು.
ಜನನೇಂದ್ರಿಯದ ಹೊರದ್ವಾರದ ಉರಿಯುವಿಕೆಯ ಆರೈಕೆ
ನಿಮಗೆ ಒಂದು ವೇಳೆ ಜನನೇಂದ್ರೀಯ ಮತ್ತು ಗುದದ್ವಾರದ ಮಧ್ಯದ ಪ್ರದೇಶದಲ್ಲಿ ಹೊಲಿಗೆಗಳಿದ್ದರೆ ನೀವು ನಿಧಿ೯ಷ್ಟವಾಗಿ ಮೊದಲವಾರದಲ್ಲಿ ಈ ಕೆಳಗಿನವುಗಳನ್ನು ಆರೋಗ್ಯವಾಗಿರಲು ಮತ್ತು ನೆಮ್ಮದಿಯಿಂದಿರಲು ಅನುಸರಿಸಬೇಕಾಗುವ ಕ್ರಮಗಳು .
ಮತ್ತೆ ಪ್ರಾರಂಭಿಸುವ ಚಟುವಟಿಕೆಗಳು.
ಈ ಮೊದಲು ಚಚಿ೯ಸಿದಂತೆ ಗಭಾ೯ವಸ್ಥೆಯ ಬದಲಾವಣೆಗಳಿಂದ ನಿಮ್ಮ ದೇಹ ಗುಣಮುಖ ಹೊಂದಲು ೬ ವಾರಗಳ ಸಮಯ ಬೇಕಾಗುತ್ತದೆ. ಆದ್ದರಿಂದ ನಿಮ್ಮಷ್ಟಕ್ಕೆ ನೀವು ತಾಳ್ಮೆಯಿಂದಿರಿ. ಬೇರೆ ಬೇರೆ ಸ್ತ್ರೀಯರು ಈ ಆರೋಗ್ಯದ ಬದಲಾವಣೆಗಳನ್ನು ನಿವ೯ಹಿಸಲು ಬೇರೆ ಬೇರೆ ಕ್ಷಮತೆಯನ್ನು ಹೊಂದಿರುತ್ತಾರೆ. ಏನೇ ಆದರೂ ಹೆಚ್ಚಿನ ಸಹಜ ಜನನೇಂದ್ರೀಯನಾಳದ ಹೆರಿಗೆಯ ಪ್ರಕರಣಗಳಲ್ಲಿ ನೀವು ದೈನಂದಿನ ವೈಯಕ್ತಿಕ ಕಾಳಜಿಗಳ ಚಟುವಟಿಕೆಗಳನ್ನು ಒಂದು ದಿನದಲ್ಲಿ ಪುನ: ಪ್ರಾರಂಭಿಸಬಹುದಾಗಿದೆ. ಮತ್ತು ನಿಮ್ಮ ಮನೆಯ ಕೆಲಸಗಳನ್ನು ಒಂದು ವಾರದಲ್ಲಿ ಮತ್ತೆ ಮಾಡಬಹುದಾಗಿದೆ. ನಿಮ್ಮನ್ನು ನೀವು ಹೆಚ್ಚಿಗೆ ಆಯಾಸಕ್ಕೆ ಒಳಪಡಿಸಿಕೊಳ್ಳಬೇಡಿ. ಈ ಸಮಯದಲ್ಲಿ ನೀವು ನಿಮಗೆ ಮತ್ತು ನಿಮ್ಮ ಮಗುವಿಗೆ ಹೆಚ್ಚಿನ ಸಮಯವನ್ನು ಕೊಟ್ಟು ನೋಡಿಕೊಳ್ಳಬೇಕು. ನೀವು ನಿಮ್ಮ ಬಳಿ ಇರುವ ಇತರರ ಸಹಾಯವನ್ನು ಪಡೆದು ನಿಮ್ಮ ಜೀವನವನ್ನು ಸರಾಗವಾಗಿಸಿಕೊಳ್ಳಿ. ಜಟಿಲ ಹೆರಿಗೆ ಅಥವಾ ಶಸ್ತ್ರ ಚಿಕಿತ್ಸೆಯ ಹೆರಿಗೆಯ ನಂತರ ನೀವು ಗುಣಮುಖರಾಗಲು ಮೊದಲನೆಯದಕ್ಕಿಂತ ಎರಡು ಪಟ್ಟು ಸಮಯ ಬೇಕಾಗುತ್ತದೆ.
ಹೆರಿಗೆ ನಂತರದ ಮೊದಲ ದಿನಗಳಲ್ಲಿ ಲೈಂಗಿಕ ಕ್ರಿಯೆಯನ್ನು ಮಾಡದಿರುವುದು ಅತ್ಯುತ್ತಮ. ಇದು ಏಕೆಂದರೆ ವಿಶೇಷವಾಗಿ ಮೊದಲ ಒಂದನೇ ವಾರದಲ್ಲಿ ನಿಮ್ಮ ಜನನೇಂದ್ರೀಯ ನಾಳದಲ್ಲಿ ಅಂಟುರೋಗಗಳಾಗುವ ಸಾಧ್ಯತೆಗಳಿರುತ್ತವೆ. ಮತ್ತು ನಿಮ್ಮ ಹೊಲಿಗೆಗಳು ಕಚ್ಚಾ ಇರುತ್ತವೆ ಅಥವಾ ನೋವುದಾಯಕವಾಗಿರುತ್ತವೆ. ಗಭ೯ಕೋಶದ ಒಳಪದರಿನ ಪೂಣ೯ ಗುಣಮುಖವಾಗಿರುವುದಿಲ್ಲ. ಆದ್ದರಿಂದ ಸಾಂಪ್ರದಾಯಿಕವಾಗಿ ಹೆರಿಗೆಯ ೬ ವಾರಗಳವರೆಗೆ ಈ ಕೆಲಸದಿಂದ ದೂರವಿರಲು ಸಲಹೆ ಮಾಡಲಾಗುತ್ತದೆ. ಏನೇ ಆದರೂ ಒಂದು ವೇಳೆ ನಿಮ್ಮ ಹೆರಿಗೆಯ ಯಾವುದೇ ತೊಂದರೆ ರಹಿತ ಮತ್ತು ಸಂಧಿಗ್ದ ಪರಿಸ್ಥಿತಿಯನ್ನು ಎದುರಿಸದೇ ಸಹಜವಾಗಿ ಆಗಿದ್ದರೆ ನೀವು ಲೈಂಗಿಕ ಕ್ರಿಯೆಯನ್ನು ತುಸು ಮುಂಚೆಯೇ ಮಾಡಬಹುದು. ನೀವು ಮತ್ತು ನಿಮ್ಮ ಸಂಗಾತಿಯ ವಿಶೇಷವಾಗಿ ಗಭಾ೯ವಸ್ಥೆಯ ಕೊನೆಯ ತಿಂಗಳಿಂದ ಒಬ್ಬರನ್ನೊಬ್ಬರು ಅಗಲಿರುತ್ತೀರಿ. ಆದ್ದರಿಂದ ನಿಮ್ಮ ಲೈಂಗಿಕ ಜೀವನದ ಮರುಬಯಕೆಯು ಅಸಾಮಾನ್ಯವಾದದ್ದೇನಲ್ಲ. ನೀವು ಸಂಪೂಣ೯ ಸಂಭೋಗವ ಸುಖಕರ ಎನಿಸುವವರೆಗೆ ನೀವು ಮಾಡುವ ಕಾಳಜಿ ಮತ್ತು ಪ್ರೀತಿ ಸಾಕಾಗಬಹುದು. ಅಪ್ಪಿಕೊಳ್ಳುವುದು, ಮುತ್ತುಕೊಡುವುದು, ನೇವರಿಸುವುದು , ಮುಟ್ಟುವುದು ಇವುಗಳ ಗಭಾ೯ವಸ್ಥೆಯ ಯಾವುದೇ ಸಮಯದಲ್ಲಿ, ಹೆರಿಗೆ ನಂತರ ನಿಷೇಧವಿಲ್ಲ.
ನೀವು ಪ್ರತ್ಯೇಕವಾಗಿ ಸ್ತನಪಾನ ಮಾಡಿಸುವಾಗ, ನಿಮ್ಮ ದೇಹದಲ್ಲಿ ಹಾಮೊ೯ನುಗಳ ಬದಲಾವಣೆಯು ನಿಮ್ಮ ಜನನೇಂದ್ರೀಯದ ನಾಳದ ಮೇಲೆ ಪರಿಣಾಮ ಬೀರಿ ಅಂಡಾಣು ತಯಾರಿಕೆ ಮತ್ತು ಋತುಚಕ್ರವನ್ನು ಕುಂಠಿತಗೊಳಿಸುತ್ತವೆ. ನಿಮ್ಮ ಋತುಚಕ್ರ ಕೆಲ ತಿಂಗಳವರೆಗೆ ಬಾರದೇ ಇರಬಹುದು. ಕೆಲ ಸ್ತ್ರೀಯರಿಗೆರು ಋತುಸ್ರಾವವನ್ನು ಒಂದು ವಷ೯ದವರೆಗೆ ಪ್ರಾರಂಭ ವಾಗುವುದಿಲ್ಲ. ಇದು ಸ್ತನಪಾನದ ಪುನರಾವತ೯ನೆಯ ಪದ್ಧತಿಯನ್ನಾಧರಿಸಿರುತ್ತದೆ.
ಹೀಗೆಂದರೆ ನೀವು ಗಭ೯ಧರಿಸುವದಿಲ್ಲವೆಂದು ಅಥ೯ವೇನು ? ಇದಕ್ಕೆ ಉತ್ತರ “ ಇಲ್ಲ ” ಅಂದಾಜು ೫% ಸ್ತ್ರೀಯರು ಹೆರಿಗೆಯ ನಂತರ ಋತುಸ್ರಾವ ಪ್ರಾರಂಭವಾಗುವ ಮುನ್ನವೆ ಗಭ೯ಧರಿಸುತ್ತಾರೆ. ಕ್ಷೀರಾವಸ್ಥೆಯಲ್ಲಿ ಋತುಸ್ರಾವ ಬರದೇ ಇರುವುದು ( ಋತುಸ್ರಾವವಾಗದೇ ಇರುವುದು) ನಿಮ್ಮನ್ನು ಗಭ೯ಧರಿಸುವುದರಿಂದ ಸ್ವಲ್ಪ ಮಟ್ಟಿಗೆ ತಡೆಯುತ್ತದೆ. ಏನೇ ಆದರೂ ನೀವು ಗಭ೯ಧರಿಸದಿರುವುದಕ್ಕೆ ಕ್ಷೀರಾವಸ್ಥೆಯ ಋತುಸ್ರಾವವಾಗದೇ ಇರುವುದರ ಮೇಲೆ ಅವಲಂಬಿತರಾಗಿರಬಹುದು. ಒಂದು ವೇಳೆ ನೀವು ಈ ಕೆಳಗಿನ ೩ ಪೂವ೯ಶರತ್ತುಗಳನ್ನು ಪಾಲಿಸಿದರೆ ಮಾತ್ರ ಸಾಧ್ಯ.
ಗಭ೯ನಿರೋಧಕ
ನೀವು ಕ್ಷೀರಾವಸ್ಥೆಯ ಋತುಸ್ರಾವಬಾರದೇ ಇರುವುದನ್ನು ಅವಲಂಬಿಸಿದ್ದರೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಒಂದು ವೇಳೆ ಇದಿಲ್ಲದಾದರೆ ಅದು ನಮಗೆ ಮತ್ತೊಂದು ಪ್ರಶ್ನೆಯನ್ನು ತರುತ್ತದೆ. ನೀವು ಮತ್ತೊಂದು ಗಭ೯ಧಾರಣೆಗೆ ತಯಾರಾಗಿರುವಿರಾ? ನೀವು ನಿಮ್ಮ ದೇಹವು ಗುಣಮುಖವಾಗಲು ಸಮಯ ತೆರಬೇಕು. ನಿಮ್ಮ ಮಗುವಿಗೆ ಬೆಳೆಯಲು ಸಮಯ ಕೊಡಬೇಕು. ಮತ್ತು ನೀವು ನಿಮ್ಮ ಮತ್ತೊಂದು ‘ ತಾಯಿ ’ ಎನ್ನುವ ಪಾತ್ರಕ್ಕೆ ಹೊಂದಿಕೊಳ್ಳಲು ಸಮಯ ಕೊಡಬೇಕು. ನಿಸ್ಸಂದೇಹವಾಗಿ ಇದೊಂದು ವೈಯಕ್ತಿಕ ಆಯ್ಕೆಯ ಪ್ರಶ್ನೆ ಆದರೂ ಅತೀ ಕಡಿಮೆಯೆಂದರೆ ಪ್ರತಿಯೊಂದು ಹೆರಿಗೆಗಳ ಮಧ್ಯೆ ಎರಡು ವಷ೯ಗಳ ಅಂತರವನ್ನು ಶಿಫಾರಸ್ಸು ಮಾಡಲಾಗುತ್ತದೆ. ಹೆರಿಗೆ ನಂತರದ ಅವಧಿಯಲ್ಲಿ ನೀವು ಗಭ೯ಧಾರಣೆಯನ್ನು ಹೇಗೆ ತಡೆಹಿಡಿಯಬಹುದು ?
ಇದಕ್ಕೆ ಎಷ್ಟೋ ವಿಧಾನಗಳಿವೆ. ಹೆರಿಗೆ ನಂತರದ ಸಮಯದಲ್ಲಿ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ನಿರೋಧ:- ನಿರೋಧವನ್ನು ಬಳಸುವುದು ಒಳ್ಳೆಯದು, ಇದೊಂದು ಸ್ಥಳೀಯವಾಗಿ ಕೆಲಸ ಮಾಡುವ ವಿಧಾನ, ಒಂದು ವೇಳೆ ಇವುಗಳನ್ನು ಸರಿಯಾಗಿ ಮತ್ತು ಸ್ಥಿರವಾಗಿ ಬಳಸಿದರೆ ಇವು ನಂಬಿಕಾಹ೯ ವಿಧಾನವಾಗಿದೆ. ಇದರಿಂದ ಯಾವುದೇ ಅನಪೇಕ್ಷಿತ ಪರಿಣಾಮವಿಲ್ಲ ಮತ್ತು ಇವು ಕಡಿಮೆ ಸಂಭೋಗದ ಪುನರಾವತ೯ನೆಯ ದಂಪತಿಗಳಿಗೆ ಉಪಯೋಗಕಾರಿಯಾಗಿವೆ.
ಆಯ್.ಯು.ಸಿ.ಡಿಗಳು, ಅಥವಾ ವಂಕಿ:- ಇವು ಒಳ್ಳೆಯ ನಂಬಿಗಾಹ೯ ವಿಧಾನಗಳಾಗಿದ್ದು, ಇವುಗಳನ್ನು ಹಾಕಿಸಿಕೊಳ್ಳಲಿಕ್ಕೆ ನೀವು ವೈದ್ಯರ ಬಳಿ ಒಂದು ಸಾರಿ ಭೇಟಿ ನೀಡಬೇಕಾಗುತ್ತದೆ. ಇವುಗಳನ್ನು ಸ್ಪಶ೯ಜ್ನಾನ ಶೂನ್ಯ ಮಾಡುವ ಔಷಧಿಗಳನ್ನು ಬಳಸದೇ ಸರಾಗವಾಗಿ ಹಾಕಲಾಗುತ್ತದೆ. ಇವು ಸರಾಸರಿ ೩ ರಿಂದ ೫ ( ಉಪಕರಣ ಆಧರಿಸಿ) ವಷ೯ಗಳವರೆಗೆ ಪರಿಣಾಮಕಾರಿಯಾಗಿರುತ್ತದೆ. ಮತ್ತು ಇವು ನಿರೋಧದಂತೆ ಲೈಂಗಿಕ ಕಾಯ೯ವನ್ನು ಅವಲಂಬಿಸಿರುವುದಿಲ್ಲ. ಇದು ಒಂದು ಅಥವಾ ಹೆಚ್ಚು ಮಕ್ಕಳಿರುವ ಸ್ತ್ರೀಯರಿಗೆ ಅತೀ ಜನಪ್ರೀಯ ವಿಧಾನವಾಗಿದೆ. ನಿಜವಾಗಿ ಇದನ್ನು ಶಾಶ್ವತ ಕಾರ್ಯವಿಧಾನದ ಒಂದು ಆಯ್ಕೆಯಾಗಿ ಬಳಸಲಾಗುತ್ತದೆ ಆಯ್.ಯು.ಸಿ.ಡಿ.ಯನ್ನು ಹೆರಿಗೆ ನಂತರದ ಮೊದಲ ಭೇಟಿಯಲ್ಲಿ ( ಮಗುವಿನ ಜನ್ಮದ ೬ ವಾರಗಳ ನಂತರ) ಹಾಕಬಹುದಾಗಿದೆ. ಅಥವಾ ಋತುಸ್ರಾವವಿಲ್ಲದಾಗ ಈ ಅವಧಿಯ ನಂತರವೂ ಹಾಕಬಹುದು ಅದಕ್ಕೆ ನಿಮ್ಮ ಒಳ ಮೈ ಪರೀಕ್ಷೆ ಸಹಜಸ್ಥಿತಿಯಲ್ಲಿರಬೇಕಾಗುತ್ತದೆ.
ಸೇವಿಸಬಹುದಾದ ಗಭ೯ನಿರೋಧಕ ಮಾತ್ರೆಗಳು:-ಪ್ರತ್ಯೇಕವಾಗಿ ಸ್ತನಪಾನ ಮಾಡಿಸುತ್ತಿರುವ ಸಮಯದಲ್ಲಿ ಜೊತೆಗೆ ಗಭ೯ನಿರೋಧಕ ಮಾತ್ರೆಗಳನ್ನು ( ಇಸ್ಟ್ರೂಜೆನ್ ಮತ್ತು ಪ್ರೊಜೆಕ್ಟಕೋನ ಇರುವಂತಹ) ಸೇವಿಸಿದಾಗ ಅದರಿಂದ ಎದೆ ಹಾಲಿನದ ಹರಿವು ಕಡಿಮೆಯಾಗುವ ಸಾದ್ಯತೆಗಳಿವೆ. ಆದ್ದರಿಂದ ಇವುಗಳನ್ನು ಅಷ್ಟು ಜನಪ್ರೀಯವಾಗಿ ಶಿಫಾರಸ್ಸು ಮಾಡುವುದಿಲ್ಲ. ಎದೆ ಹಾಲು ಬಿಡಿಸಿದ ನಂತರ ಇವುಗಳನ್ನು ಸುರಕ್ಷಿತವಾಗಿ ಬಳಸಬಹುದಾಗಿದೆ.
ಸಂತಾಣ ಹರಣ ( ಬಂಜೆ ಮಾಡುವ ವಿಧಾನ):- ಇದೊಂದು ಶಾಶ್ವತ ವಿಧಾನವಾಗಿದ್ದು ಇದನ್ನು ನೀವು ನಿಮ್ಮ ಕುಟುಂಬವನ್ನು ಸಂಪೂಣ೯ವಾಗಿಸಿಕೊಂಡ ನಂತರ ಆಯ್ಕೆ ಮಾಡಬಹುದಾಗಿದೆ. ಇದೊಂದು ಹೆರಿಗೆಯ ತತಕ್ಷಣ ( ಪ್ರಸೂತಿ ಬಂಧೀಕರಣ) ಅಥವಾ ಶಸ್ತ್ರ ಚಿಕಿತ್ಸೆಯ ಹೆರಿಗೆಯ ಸಮಯದಲ್ಲಿ ಅತೀ ಸರಾಗವಾಗಿ ಮಾಡಬಹುದಾದ ಕಾಯ೯ವಿಧಾನವಾಗಿದೆ. ಈ ಎರಡೂ ಆಯ್ಕೆಗಳಲ್ಲಿಯೂ ನೀವು ಇದರಿಂದಾಗುವ ಸಾಧಕ ಬಾಧಕಗಳನ್ನು ನಿಮ್ಮ ಸಂಗಾತಿ ಮತ್ತು ವೈದ್ಯರ ಜೊತೆಗೆ ಹೆರಿಗೆಯ ಮೊದಲಿನ ಒಂದು ಭೇಟಿಯಲ್ಲಿ ಚಚಿ೯ಸಬೇಕಾಗಿದೆ . ಕೆಲವರು ತಮ್ಮ ಮಗು ದೊಡ್ಡದಾದ ನಂತರ ಅಂದರೆ ಮಗು ಒಂದು ವಷ೯ಕ್ಕಿಂತ ದೊಡ್ಡದಾದಾಗ ಈ ಶಾಶ್ವತ ಕಾರ್ಯವಿಧಾನವನ್ನು ಮಾಡಲು ಆಯ್ಕೆ ಮಾಡುತ್ತಾರೆ. ಹೆರಿಗೆಯ ೬ ವಾರಗಳಲ್ಲಿ ಅಥವಾ ನಂತರ ಒಂದು ಮಧ್ಯಂತರ ಕಾರ್ಯವಿಧಾನವಾಗಿ ಇದನ್ನು ಸಾಮಾನ್ಯವಾಗಿ ಕಿಬ್ಬೊಟ್ಟೆಯ ಒಳದಶಿ೯ಕೆಯ ಮುಖಾಂತರ ಮಾಡಲಾಗುತ್ತದೆ.
ಜನನ ನಂತರ ಪ್ರಥಮ ಭೆಟ್ಟಿ ನೀವು ಮತ್ತು ನಿಮ್ಮ ಮಗು ಮೊದಲಿನಿಂದ ಕೊನೆಯವರೆಗೆ ಬಹುಪಾಲು ನೆಮ್ಮದಿಯಿಂದಿರುತ್ತೀರಿ. ನೀವು ಮನೆಗೆ ಹೋದ ನಂತರ ಹಾಗೂ ನೀವು ಮಗುವಿನ ಜನನದಿಂದ ಗುಣಮುಖ ಹೊಂದಿದ ನಂತರ ನಿಮ್ಮ ವೈದ್ಯರು ನಿಮ್ಮನ್ನು ಕಡೇ ಪಕ್ಷ ಒಮ್ಮೆಯಾದರೂ ನಿಮ್ಮ ಸಂಪೂಣ೯ ಗುಣಮುಖವಾದ ಬಗ್ಗೆ ಖಾತರಿಹೊಂದಲು ನಿಮ್ಮನ್ನು ಪರೀಕ್ಷಿಸಬೇಕಾಗುತ್ತದೆ. ಮೊದಲ ತಪಾಸಣೆಯು ಸಾಮಾನ್ಯವಾಗಿ ಹೆರಿಗೆಯ ೬ ವಾರಗಳ ನಂತರವಿರುತ್ತದೆ. ಒಂದು ವೇಳೆ ನಿಮಗೆ ವಿಶೇಷ ಕಾಳಜಿ ಬೇಕಾದಾಗ ಅಥವಾ ಹೆರಿಗೆಯಲ್ಲಿ ನಿಮಗೆ ಯಾವುದೇ ತೊಂದರೆಯಾಗಿದ್ದಾಗ ಮೊದಲ ತಪಾಸಣೆಯ ಅವಧಿಯು ೩ ವಾರಗಳ ನಂತರವೂ ಇರಬಹುದಾಗಿದೆ.
ಮೊದಲ ಭೇಟ್ಟಿಯಲ್ಲಿ ನಿಮ್ಮ ವೈದ್ಯರು ಇವುಗಳನ್ನು ತಪಾಸಿಸುತ್ತಾರೆ.
ನೀವು ಕೆಲ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗಿರುತ್ತದೆ. ನೀವು ಈ ಕೆಳಗಿನವುಗಳ ಬಗ್ಗೆ ನಿಮ್ಮ ವೈದ್ಯರಬಳಿ ಚಚಿ೯ಸಬೇಕಿರುತ್ತದೆ.
ನೀವು ಈಗ ನಿಮ್ಮ ಪ್ರವಾಸದ ಅಂತ್ಯದಲ್ಲಿದ್ದೀರಿ. ಇದು ಹೇಗಿತ್ತು ? ಇದು ಹೇಗೆ ಅನಿಸಿತು ? ನಿಮ್ಮ ಕ್ರಿಯಾಶೀಲ ಉತ್ತರವನ್ನು ನಮಗೆ ಇ-ಮೇಲ್ ಮುಖಾಂತರ ತಿಳಿಸಿರಿ.
ಸಮಯ |
ಸ್ತನಪಾನ ಮಾಡದೇ ಇದ್ದಲ್ಲಿ. |
ಸ್ತನಪಾನ ಮಾಡಿಸಿದಲ್ಲಿ |
ಋತು ಸ್ರಾವ |
೬-೧೨ ವಾರಗಳು. |
೩೬ ವಾರಗಳು(ಸರಾಸರಿ) |
ಅತಿ ಶೀಘ್ರದ ಅಂಡಾಣು ಬಿಡುಗಡೆ. |
೪ ವಾರಗಳು |
೧೨ ವಾರಗಳು |
ಅಂಡಾಣು ಬಿಡುಗಡೆಯ ಸರಾಸರಿ ಸಮಯ. |
೮-೧೦ ವಾರಗಳು |
೧೭ ವಾರಗಳು (ಬದಲಾಗಬಹುದು) |
ಮೂಲ : ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 4/22/2020
ಆಯುರ್ವೇದವು ಭಾರತ ಉಪಖಂಡದ ಅತಿ ಪುರಾತನ ವೈದ್ಯಕೀಯ ಪದ್ಧತಿಯ...
ರೋಗ ನಿರೋಧಕ ಲಸಿಕೆಗಳು ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ....
ವಿಶ್ವ ಆರೋಗ್ಯ ಸಂಸ್ಥೆಯು ಹದಿಹರೆಯವನ್ನು ವಯೋಮಾನಕ್ಕೆ ಅನುಗ...
ರೋಗಗಳನ್ನು ತಡೆಗಟ್ಟುವ ವಿಧಾನಗಳಲ್ಲಿ ರಕ್ಷಣಾ ಚಿಕಿತ್ಸೆ ವಿ...