ಉ: ಬಂಜೆತನವು ಸಂತಾನೋತ್ಪತ್ತಿ ಅಂಗವ್ಯೂಹದ ಒಂದು ರೋಗ. ಅದು ದೇಹದ ಅತಿಮುಖ್ಯ ಕಾರ್ಯನಿರ್ವಹಣೆಯಾದ ಗರ್ಭಧರಿಸಿ ಮಗುವನ್ನು ಪಡೆಯುವುದನ್ನು ನಿರುಪಯುಕ್ತಗೊಳಿಸುವುದು. ಗರ್ಭಧಾರಣೆಯು ಬಹಳ ಸಂಕೀರ್ಣ ಪ್ರಕ್ರಿಯೆ. ಅದು ಅನೇಕ ಅಂಶಗಳ ಮೇಲೆ ಆಧರಿತವಾಗಿದೆ. ಗಂಡಸಿನ ಆರೋಗ್ಯಪೂರ್ಣ ವೀರ್ಯದ ಉತ್ಪಾದನೆ, ಹೆಂಗಸಿನ ಆರೋಗ್ಯವಂತ ಅಂಡಾಣುಗಳ ಉತ್ಪಾದನೆ ತಡೆರಹಿತವಾಗಿ ಸಾಗಿಸಬಲ್ಲ ಫಿಲೋಪಿಯನ್ ನಾಳ ಮತ್ತು ಅದರಲ್ಲಿ ವೀರ್ಯವು ಅಂಡಾಣುವನ್ನು ಸೇರುವ ಅವಕಾಶ. ವೀರ್ಯಾಣುವು ಅಂಡಾಣುವನ್ನು ಸೇರಿದಾಗ ಅದನ್ನು ಫಲಪ್ರದ ಮಾಡುವ ಶಕ್ತಿ, ಫಲಿತವಾದ ಅಂಡಾಣುವು ಮಹಿಳೆಯ ಗರ್ಭಾಶಯದಲ್ಲಿ ನೆಲೆಸುವ ಸಾಮರ್ಥ್ಯ ಮತ್ತು ಭ್ರೂಣದ ಗುಣಮಟ್ಟ, ಅಂತಿಮವಾಗಿ ಗರ್ಭಧಾರಣೆಯ ಪೂರ್ಣಾವಧಿಯವರೆಗೆ ಮುಂದುವರಿಯುವ ಅವಕಾಶ, ಆರೋಗ್ಯವಂತ ಭ್ರೂಣ, ಮಹಿಳೆಯ ಹಾರ್ಮೋನುಗಳು, ಉತ್ತಮ ಪರಿಸರಗಳಿಂದ ಅದರ ಬೆಳವಣಿಗೆ ಸೂಕ್ತವಾಗಿರಬೇಕು. ಇವುಗಳಲ್ಲಿ ಯಾವುದೇ ಒಂದು ಅಂಶವೂ ದೋಷಪೂರ್ಣವಾಗಿದ್ದರೂ ಬಂಜೆತನ ಬರುವುದು.
ಉ: ಗಂಡಸಿನ ಬಂಜೆತನಕ್ಕೆ ಸರ್ವೇಸಾಮಾನ್ಯ ಕಾರಣವೆಂದರೆ ವೀರ್ಯಾಣುಗಳ ಕೊರತೆ ಅಥವಾ ವೀರ್ಯಾಣುಗಳು ಇಲ್ಲದೇ ಇರುವುದು. ಅನೇಕ ಸಾರಿ ವೀರ್ಯಾಣು ಜೀವಕೋಶಗಳ ಅಸಮರ್ಪಕ ರಚನೆ ಮತ್ತು ಅವು ಅಂಡಾಣುಗಳನ್ನು ಸೇರುವ ಮೊದಲೇ ಸಾಯುವುದರಿಂದ ಬಂಜೆತನ ಬರುತ್ತದೆ. ಸ್ತ್ರೀಯರ ಬಂಜೆತನದ ಬಹುಸಾಮಾನ್ಯ ಕಾರಣ. ಅವರ ಅಸಮರ್ಪಕವಾದ ಅಂಡಾಣು ನಿರ್ಮಾಣ. ಇನ್ನೊಂದು ಕಾರಣ ಫಿಲೊಪಿಯನ್ ನಾಳದಲ್ಲಿನ ಅಡಚಣೆ. ಹುಟ್ಟಿನಿಂದಲೇ ಇರುವ ದೋಷಪೂರಿತ ಗರ್ಭಾಶಯದ ರಚನೆ, ಗರ್ಭಾಶಯದಲ್ಲಿನ ನಾರು ಗಡ್ಡೆಗಳು ಸತತ ಗರ್ಭಸ್ರಾವಕ್ಕೆ ಕಾರಣವಾಗುತ್ತವೆ.
ಉ: ಇನ್ ವಿಟ್ರೋ ಫರ್ಟಿಲೈಸೇಷನ್‌ನಲ್ಲಿ ಅಂಡಾಣುವನ್ನು ಶಸ್ತ್ರಕ್ರಿಯೆಯ ಮೂಲಕ ಅಂಡಾಶಯದ ಮೂಲಕ ಹೊರತೆಗೆದು ಅದನ್ನು ದೇಹದ ಹೊರಗಡೆ ಪೆಟ್ರಿ ಡಿಶ್‌ನಲ್ಲಿ ವೀರ್ಯಾಣುವಿನ ಜತೆ ಸೇರಿಸುವುದು. ಸುಮಾರು ೪೦ ಗಂಟೆಗಳ ಕಾಲ ಅಂಡಾಣುಗಳು ವೀರ್ಯಾಣುವಿನ ಜತೆ ಸೇರಿ ಫಲಿತವಾಗಿವೆ ಎಂಬುದನ್ನು ಮತ್ತು ಕೋಶ ವಿಭಜನೆ ಆರಂಭವಾಗಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಈ ಫಲಿತ ಭ್ರೂಣವನ್ನು ಮಹಿಳೆಯ ಗರ್ಭಾಶಯದಲ್ಲಿ ನೇರವಾಗಿ ಫಿಲೋಪಿಯನ್ ನಾಳದ ಗೊಡವೆಗೆ ಹೋಗದೆ ಸ್ಥಾಪಿಸಬೇಕು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/26/2020
ಬಂಜೆತನಕ್ಕೆ ಹಲವು ಕಾರಣಗಳ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿ...