ಹಿನ್ನಲೆ
ಕರ್ನಾಟಕ ರಾಜ್ಯದಲ್ಲಿ ತಾಂಡ ನಿವಾಸಿಗಳ ಅಭಿವೃದ್ದಿಗಾಗಿ ಪ್ರಾರ0ಬಿಸಿರುವ ತಾಂಡ ನಿಗಮದ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಆರಿವು
ನಿಗಮವು ಅನುಷ್ಠಾನಗೊಳಿಸುತ್ತೀರುವ ಅರಿವು ಕಾರ್ಯಕ್ರಮದಲ್ಲಿ ಸಹಯೋಗ ನೀಡಲು ಆಸಕ್ತಿ ವ್ಯಕ್ತಪಡಿಸಿ ಒಪ್ಪಿಕೊಂಡಿರುವ ನೋಂದಾಯಿತ ಸಂಘ/ಸಂಸ್ಥೆಗಳಿಗೆ ತಾಲ್ಲೂಕವಾರು ಕಾರ್ಯಕ್ರಮವನ್ನು ವಹಿಸಲಾಗಿದೆ. ಸಂಘ/ಸಂಸ್ಥೆಗಳು ಪ್ರತಿ ತಾಂಡಾದಲ್ಲಿ ದಿನಕ್ಕೊಂದು ಸಭೆಯಂತೆ ವಹಿಸಲಾದ ತಾಲ್ಲೂಕಿನ ತಾಂಡಾಗಳಲ್ಲಿ ಸಭೆಗಳನ್ನು ನಡೆಸಬೇಕು.ಸಂಸ್ಥೆಗಳಿಗೆ ವಹಿಸಲಾದ ತಾಲ್ಲೂಕಿನ ತಾಂಡಾಗಳ ಕಾರ್ಯಕ್ರಮವನ್ನು ಈ ಕೆಳಗಿನಂತೆ, ಎಲ್ಲಾ ಸಿದ್ದತೆಗಳೊಂದಿಗೆ ಸೂಚಿಸಲಾದ ವಿಧಾನವನ್ನು ಅನುಸರಿಸಿ ಅನುಷ್ಠಾನಗೊಳಿಸಬೇಕು.
ಪೂರ್ವಭಾವಿ ಸಿದ್ದತೆ
- ಅರಿವು ಕಾರ್ಯಕ್ರಮದ ರ್ಕಾದೇಶ ಪ್ರಕಾರ ಸಂಸ್ಥೆಯು ಸಂಬಂಧಿಸಿದ ವಲಯ ಅಭಿವೃದ್ಧಿ ಅಧಿಕಾರಿಗಳಿಗೆ ಭೇಟಿಯಾಗಿ ರೂ. 100.00 ಗಳ ಛಾಪಾ ಕಾಗದದಲ್ಲಿ ಒಡಂಬಡಿಕೆ ಪತ್ರ ಸಲ್ಲಿಸಬೇಕು. ವಹಿಸಿದ ತಾಲ್ಲೂಕಿನಲ್ಲಿ ಇರುವ ತಾಂಡಾಗಳ ಮಾಹಿತಿಯನ್ನು ಪಡೆದುಕೊಳ್ಳವುದು.
- ಸಂಸ್ಥೆಗೆ ವಹಿಸಿದ ತಾಲ್ಲೂಕಿನ ಪ್ರತಿ ತಾಂಡಾದಲ್ಲಿ ಮಾಹಿತಿ ಒದಗಿಸುವ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳುವುದು.
- ಐದು ತಾಂಡಾಗಳಂತೆ, ತಾಂಡಾಗಳ ಗುಚ್ಚವನ್ನು ರಚಿಸಿಕೊಂಡು ತಾಂಡಾವಾರು ಕ್ರೀಯಾಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುವುದು.
- ಸಭೆ ನಡೆಸುವ ಪೂರ್ವದಲ್ಲಿ ಪ್ರಥಮವಾಗಿ ಸಂಸ್ಥೆಯು ಒಂದು ತಾಂಡಾ ಗುಚ್ಚದಲ್ಲಿರುವ ಪ್ರತಿ ತಾಂಡಾವನ್ನು ಭೇಟಿ ನೀಡಿ ತಾಂಡಾದ ನಾಯಕ್, ಡಾವೂ, ಕಾರಭಾರಿ, ತಾಂಡಾದಲ್ಲಿ ವಾಸವಾಗಿರುವ ಗ್ರಾಮ ಪಂಚಾಯಿತಿ, ತಾಲ್ಲೂಕಾ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸರು, ಹಿರಿಯರನ್ನು ಸಂಪರ್ಕಿಸಿ ಸಭೆ ನಡೆಸುವ ಬಗ್ಗೆ ಸಮಾಲೋಚಿಸಿ ತಾಂಡಾದಲ್ಲಿ ನಡೆಸುವ ಸಭೆ ದಿನಾಂಕ, ಸಮಯ, ಮತ್ತು ಸ್ಥಳವನ್ನು 07 ದಿನ ಮುಂಚಿತವಾಗಿಯೇ ನಿಗಧಿಪಡಿಸಿಕೊಳ್ಳಬೇಕು.
- ತಾಂಡಾದ ಯುವಕ, ಯುವತಿ ಮಂಡಳಿಗಳ ಪದಾಧಿಕಾರಿಗಳ, ಸ್ವ-ಸಹಾಯ ಸಂಘಗಳ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಬೇಟಿ ಮಾಡಿ ಸಭೆಯಲ್ಲಿ ತಾಂಡಾದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ, ಪ್ರಚಾರ ಕಾರ್ಯವನ್ನು ಮಾಡಲು ಕೋರುವುದು.
- ನಾಯಕ್, ಡಾವೂ, ಕಾರಬಾರಿ, ತಾಂಡಾದ ಚುನಾಯಿತ ಪ್ರತಿನಿಧಿ, ಯುವಕ, ಯುವತಿ ಮಂಡಳಿ, ಅಧ್ಯಕ್ಷರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ದೂರವಾಣಿ ಸಂಖ್ಯೆಯನ್ನು ಪಡೆದು ಅವರನ್ನು ಅಗಾಗ ದೂರವಾಣಿ ಮೂಲಕ ಸಂಪರ್ಕಿಸಿ ಸಭೆಯ ದಿನಾಂಕದಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳುವಂತೆ, ಮಾಡಲು ತಿಳಿಸುವುದು.
- ತಾಂಡಾದ ಜನರು ಸಭೆಯಲ್ಲಿ ಪಾಲ್ಗೋಳ್ಳುವಿಕೆಗೆ ನೇರ ಪ್ರಚಾರ ಅಥವಾ ಕರಪತ್ರದ ಮೂಲಕ ಪ್ರಚಾರ ಮಾಡುವುದು.
- ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲಾಗುವ ಅರಿವು ಕಾರ್ಯಕ್ರಮದ ಮಾಹಿತಿಯನ್ನು ಶಾಸಕರ ಅವಗಾಹನೆಗೆ ತರುವುದು.
- ಸಂಸ್ಥೆಯು ಪ್ರತಿ ತಾಂಡಾ ಗುಚ್ಚದಲ್ಲಿರುವ ಐದು ತಾಂಡಾಗಳಲ್ಲಿ ನಡೆಸುವ ಸಭೆ ದಿನಾಂಕಗಳ ಕಾಲಸೂಚಿ (ವೇಳಾಪಟ್ಟಿ)ಯನ್ನು ಸಿದ್ದಪಡಿಸಿ ನಿಗಮದ ವಲಯ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮಾಲೋಚಿಸುವುದು ಮತ್ತು ಸಭೆಯ ಪೂರ್ವದಲ್ಲಿಯೆ ಸಂಬಂಧಿಸಿದ ತಾಂಡಾಗಳಿಗೆ ಮತ್ತು ಸಂಪನ್ಮೂಲ ವ್ಯಕ್ತಿಗೆ ತಲುಪಿಸುವುದು.
- ಸಭೆ ನಡೆಸಲು ತಾಂಡಾದಲ್ಲಿ ಲಭ್ಯವಿರುವ ಸಂಪನ್ಮೂಲ :- ಟಾರ್ ಪಾಲ್, ಗೋಡಾರ, ಮೈಕ್ ಸೇಟ್, ವೈರ್ ಇತ್ಯಾಧಿಗಳ ಹಾಗೂ ಶಿಸ್ತು ಪಾಲನೆಗೆ ವಿದ್ಯಾವಂತ ಯುವಕರ ಸಹಕಾರ ಪಡೆಯುವುದು.
ಸಭೆ
ಸಭೆ ನಡೆಸಲು (ಸಾಕ್ಷ್ಯಚಿತ್ರ ಪ್ರದರ್ಶನ) ಬೇಕಾದ ಕೆಳಕಾಣಿಸಿದ ಎಲ್ಲಾ ಸಲಕರಣೆಗಳ ವ್ಯವಸ್ಥೆ ಮುಂಚಿತವಾಗಿ ಮಾಡಿಕೊಂಡು ನಿಗಧಿ ಪಡಿಸಿದ ದಿನಾಂಕದಂದು ನಿಗಧಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ತಾಂಡಾವನ್ನು ತಲುಪುವುದು.
- ಲ್ಯಾಪ್ ಟಾಪ್
- ಸಾಕ್ಷ್ಯಚಿತ್ರ ಪದರ್ಶನಕ್ಕಾಗಿ ಬಿಳಿ ಪರದೆ (ಸ್ಕ್ರೀನ್)
- ಎಲ್.ಸಿ.ಡಿ ಪ್ರೋಜೆಕ್ಟರ್
- ಸಾಕ್ಷ್ಯಚಿತ್ರದ ಡಿ.ವಿ.ಡಿಗಳು
- ಜನರೇಟರ್ ಅಥವಾ ಪವರ್ ಬ್ಯಾಕ್ ಆಪ್ ಬ್ಯಾಟರಿ
- ಸಗಾಣಿಕೆಗೆ ವಾಹನ
- ಧ್ವನಿ ವರ್ಧಕ
- ತಾಂಡಾದ ಮಾಹಿತಿ ಸಂಗ್ರಹಣಾ ನಮೂನೆ.
- ಪ್ರತಿ ತಾಂಡಾದಲ್ಲಿ ಭಾಗವಹಿಸುವವರ ಹೆಸರು ಮತ್ತು ಸÀಹಿಗಾಗಿ ವಹಿ
- ಪ್ರತಿ ಸಭೆಯಲ್ಲಿ ಭಾಗವಹಿಸಿದವರ ಭಾವಚಿತ್ರ ತೆಗೆಯಲು ಕ್ಯಾಮರ
- ಕಾರ್ಯಕ್ರಮದ 2 ಬ್ಯಾನರ್ಸ್
- ಸಾಕ್ಷ್ಯಚಿತ್ರ ಪ್ರದರ್ಶನಕ್ಕಾಗಿ ನುರಿತ ತಾಂತ್ರಿಕ ಸಿಬ್ಬಂದ
ಸಭೆಯ ಕಾರ್ಯಕಲಾಪ
- ಸಂಸ್ಥೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಪರಸ್ಪರ ಸಹಭಾಗಿತ್ವದಲ್ಲಿ ಸಭೆ ನಡೆಸುವುದು.
- ಸಭೆ ನಡೆಸುವ ದಿನಾಂಕದಂದು ಅರಿವು ಕಾರ್ಯಕ್ರಮದ ಒಂದು ಬ್ಯಾನರ್ ವನ್ನು ಸಭಾಂಗಣದ ಹೊರಗೆ ಹಾಗೂ ಮತ್ತೊಂದು ಬ್ಯಾನರ್ ಸಭಾಂಗಣದ ವೇದಿಕೆಗೆ ಹಾಕುವುದು.
- ಸಂಪನ್ಮೂಲ ವ್ಯಕ್ತಿಯು ತಾಂಡಾದ ಸಂಕ್ಷಿಪ್ತ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ಸಂಗ್ರಹಿಸುವುದು.
- ಸಭೆಯಲ್ಲಿ ಎಲ್ಲರು ವ್ಯವಸ್ಥಿತವಾಗಿ ಮತ್ತು ಶಾಂತವಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡುವುದು.
- ತಾಂಡಾದ ನಾಯಕ್, ಡಾವೂ, ಕಾರಭಾರಿ, ತಾಂಡಾದ ಚುನಾಯಿತಿ ಪ್ರತಿನಿಧಿಗಳು ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡುವುದು.
- ಸಭೆಗೆ ಅಗಮಿಸುವವರ ಹೆಸರು ಮತ್ತು ಸಹಿಯನ್ನು ವಹಿಯಲ್ಲಿ ಪಡೆಯುವುದು.
- ಸಭೆಯನ್ನು ಸಂಜೆ 5.00 ರಿಂದ ಪ್ರಾರಂಬಿಸಿ 3-4 ಗಂಟೆಗಳ ಕಾಲ ಈ ಕೆಳಗಿನಂತೆ ನಡೆಸುವುದು.
- ಸಭೆಯನ್ನು ಸ್ವಾಗತಿಸುವುದರ ಮೂಲಕ ಪ್ರಾರಂಭಿಸುವುದು.
- ಸಂಪನ್ಮೂಲ ವ್ಯಕ್ತಿಯಿಂದ ಅರಿವು ಕಾರ್ಯಕ್ರಮ ಕುರಿತು ಪ್ರಸ್ತಾವಿಕ ನುಡಿಗಳು.
- ಕಂದಾಯ ಗ್ರಾಮಗಳಾಗಿರದ ತಾಂಡಾಗಳಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತಿಸಿಕೊಳ್ಳುವ ವಿಧಾನ ಕುರಿತ ಮಾಹಿತಿ ನೀಡಿ ವಿವರದ ಕಾಗದ ನೀಡುವುದು.
- ಅರಣ್ಯ ಪ್ರದೇಶದ ತಾಂಡಾಗಳಲ್ಲಿ ಮಾತ್ರ ಅರಣ್ಯ ಹಕ್ಕು ಕಾಯ್ದೆ 2006ರ ಅನ್ವಯ ತಾಂಡಾದಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸುವ ಕುರಿತು ಮಾಹಿತಿ ನೀಡಿ ಸಂಬಂಧಿಸಿದ ವಿವರದ ಬುಕ್ ಲೇಟ್ ನೀಡುವುದು.
- ರಾತ್ರಿ ಸಮಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ (ಕೆಳಕಾಣಿಸಿದ 5 ಸಾಕ್ಷ್ಯಿಚಿತ್ರಗಳಲ್ಲಿ ಕನಿಷ್ಠ 3 ಸಾಕ್ಷ್ಯಚಿತ್ರಗಳ ಪ್ರದರ್ಶನ
- ತಾಂಡಾ ವಿಕಾಸ ಸಮಿತಿಯ ರಚನೆ ಮತ್ತು ಕಾರ್ಯವಿಧಾನ
- ನಿಗಮ ಮತ್ತು ಸರ್ಕಾರದ ಮೂಲಸೌಕರ್ಯ ಯೋಜನೆಗಳ ಪರಿಚಯ
- ಮಧ್ಯಪಾನ, ಧೂಮಪಾನ ಇತ್ಯಾಧಿ ದುಷ್ಚಟಗಳಿಂದಾಗುವ ದುಷ್ಯಪರಿಣಾಮಗಳು
- ಮಾದರಿ ತಾಂಡಾ ಪರಿಕಲ್ಪನೆ ಮತ್ತು ಅನುಷ್ಠಾನ
- ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕ್ರಮ ಹಾಗೂ ಅರಣ್ಯ ಹಕ್ಕು ಸಮಿತಿ ರಚನೆ-
ಕಾರ್ಯವಿಧಾನ
- ಪ್ರತಿ ಸಾಕ್ಷ್ಯಚಿತ್ರ ಪ್ರದರ್ಶನದ ನಂತರ ಚರ್ಚೆ/ಸಮಾಲೋಚನೆ
- ವಂದನಾರ್ಪಣೆ
ಮೇಲ್ಕಾಣಿಸಿದ ಮಾದರಿಯಲ್ಲಿ ಸಂಸ್ಥೆಯ ಸಿಬ್ಬಂದಿ ಸಹಯೋಗದಲ್ಲಿ ಒಂದು ತಾಂಡಾ ಗುಚ್ಚದ ಸಭೆಗಳು ನಡೆಯುತ್ತೀರುವಾಗ ಮತ್ತೊಂದು ತಾಂಡಾ ಗುಚ್ಚದ ಐದು ತಾಂಡಾಗಳ ಪೂರ್ವಬಾವಿ ಸಿದ್ದತೆ ಮಾಡಿಕೊಂಡು ದಿನಕ್ಕೆ ಒಂದರಂತೆ ಸಭೆ ನಡೆಸಿ ಸಂಸ್ಥೆಗೆ ವಹಿಸಿರುವ ಎಲ್ಲಾ ತಾಂಡಾಗಳ ಕಾರ್ಯಕ್ರಮವನ್ನು 45 ದಿವಸಗಳ ಒಳಗಾಗಿ ಪೂರ್ಣಗೊಳಿಸಬೇಕು.
ಯೋಜನೆಗಳು
ತಾಂಡಾದ ಜನರ ಅಭಿವೃದ್ಧಿಗಾಗಿ ನಿಗಮ ಮತ್ತು ಇಲಾಖೆಗಳ ಯೋಜನೆಗಳು ಈ ಕೆಳಗಿನಂತಿವೆ.
ನಿಗಮದ ಕಾರ್ಯ ಯೋಜನೆಗಳು
- ತಾಂಡಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳು:-
- ತಾಂಡಗಳಲ್ಲಿ ಸರ್ವಋತು ರಸ್ತೆಗಳು ಮತ್ತು ಚರಂಡಿಗಳು
- ಹತ್ತಿರದ ತಾಂಡಗಳ ಮದ್ಯದ ಸಂಪರ್ಕ ರಸ್ತೆ
- ಮುಖ್ಯ ರಸ್ತೆಯಿಂದ ತಾಂಡಾಗಳಿಗೆ ಸಂಪರ್ಕ ರಸ್ತೆ
- ಶುದ್ದ ಕುಡಿಯುವ ನೀರು
- ಬೀದಿ ದೀಪಗಳು ಮತ್ತು ವಿದ್ಯುತ್ ಸಂಪರ್ಕ
- ಬಸ್ ನಿಲುಗಡೆ ಸ್ಥಳದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ
- ಆರೋಗ್ಯ ಮತ್ತು ಶೈಕ್ಷಣಿಕ ಮೂಲ ಸೌಕರ್ಯ ಯೋಜನೆಗಳು:-
- ಆರೋಗ್ಯ ಕೇಂದ್ರಗಳು
- ಆರೋಗ್ಯ ತಪಾಸಣಾ ಶಿಬಿರ
- ಶೈಕ್ಷಣಿಕವಾಗಿ ಅಂಗನವಾಡಿ ಕೇಂದ್ರ, ಋತುಮಾನ ಶಾಲೆಗಳು
- ತಾಂಡಾ ನಿವಾಸಿಗಳಿಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳು:-
- ನಿಗಮ ಮತ್ತು ಸರ್ಕಾರ ಅಭಿವೃದ್ದಿ ಯೋಜನೆಗಳ ಮಾಹಿತಿ ಒದಗಿಸುವುದು.
- ಪ್ರಚಲಿತ ಕಾಯ್ದೆಗಳು-ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಮತದಾನದ ಹಕ್ಕು, ಕೆಲಸದ ಹಕ್ಕು,
- ಬಂಜಾರ ಜನರ ಪಾರಂಪರಿಕ ಮತ್ತು ಸಾಂಸ್ಕøತಿಕ ಆಚಾರ ವಿಚಾರ ಸದ್ ಸಂಪ್ರದಾಯಗಳಿಗೆ ಉತ್ತೇಜನ
- ಆರ್ಥಿಕ ಮೂಲಭೂತ ಸೌಕರ್ಯಗಳು:-
- ಪ್ರತಿಭಾವಂತ ವಿದ್ಯಾವಂತ ನಿರುದ್ಯೋಗಿ ಆದ್ಯತೆ ಮೇರೆಗೆ ಬಿ.ಇ ಮತ್ತು ಇಂಜಿನಿಯರಿಂಗ್ ಡಿಪ್ಲೋಮೊ ಇವರಿಗೆ ಗುತ್ತಿಗೆದಾರರಾಗಿ ಲೈಸೆನ್ಸ್ ದೊರೆಯುವಂತೆ ಸಂಬಂಧಿಸಿದ ಇಲಾಖೆಗಳ ಕಾರ್ಯಕ್ರಮದೊಂದಿಗೆ ಸಮನ್ವಯ ಸಾಧಿಸುವುದು.
- ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಮೇಷನ್, ಕಾರ್‍ಪೇಂಟರಿ/ಬಿಲ್ಡಿಂಗ್, ಎಲೆಕ್ಟ್ರಿಕಲ್, ಪೈಂಟಿಂಗ್, ಕಂಪ್ಯೂಟರ್, ಬಾರ್‍ಬೈಂಡಿಂಗ್, ಮೋಟಾರ್ ರೀಪೇರಿ, ಬೋರ್‍ವೆಲ್, ಗೃಹೋಪಯೋಗಿ ಯಂತ್ರಗಳ ರಿಪೇರಿ, ತೋಟಗಾರಿಕೆ ತರಬೇತಿ ಮುಂತಾದ ವೃತ್ತಿ ಕೌಶಲ್ಯ ತರಬೇತಿ ಕೇಂದ್ರ.
- ವಿದ್ಯಾವಂತ ಯುವತಿಯರಿಗೆ ಹೊಲಿಗೆ ತರಬೇತಿ, ಉಡುಪು ತಯಾರಿ, ಬ್ಯೂಟಿ ಪಾರ್ಲರ್, ಕಸೂತಿ, ಕಂಪ್ಯೂಟರ್, ಜರಿ, ಜರ್ದೋಸಿ ಕೌಶಲ್ಯ ಒದಗಿಸುವ ತರಬೇತಿ ಕೇಂದ್ರಗಳು.
- ಬಂಜಾರ ಉಡುಗೆ ತೊಡಿಗೆಗಳ ಆಧುನಿಕ ರೂಪ ನೀಡಲು ಬಂಜಾರ ಕಸೂತಿ ಕೌಶಲ್ಯಕ್ಕೆ ಹೊಸ ತಂತ್ರಜ್ಞಾನ ಒದಗಿಸಿ, ಗುಣವiಟ್ಟ ಹೆಚ್ಚಿಸುವುದು.
- ಬಂಜಾರ ಉಡುಪು ತಯಾರಿಕೆಗೆ ಬೇಕಾದ ಕಚ್ಚಾವಸ್ತು, ಮಾರುಕಟ್ಟೆ ಮಾಹಿತಿ ನೀಡಿ, ಉಡುಪುಗಳನ್ನು ರಫ್ತು ಮಾಡಲು ಅನುಕೂಲ ಮಾಡಿಕೊಡುವುದು.
- ತಾಂಡಾಗಳ ವಸತಿ ಯೋಜನೆ.
- ವಸತಿ ಕೊರತೆ ಇರುವ ತಾಂಡಾಗಳ, ಕುಟುಂಬಗಳ ಅಗತ್ಯತೆಯನ್ನಾಧರಿಸಿ ನಿವೇಶನ ಒದಗಿಸುವುದು.
- ತಾಂಡಾಗಳ ಪಕ್ಕದಲ್ಲಿ ಜಮೀನು ದೊರೆತಲ್ಲ್ಲಿ ಖರೀದಿಸಿ ತಾಂಡಾ ಬಡಾವಣೆಯನ್ನು ನಿರ್ಮಿಸುವುದು.
- ಹತ್ತಿರ ಇರುವ ಮೂರು ನಾಲ್ಕು ತಾಂಡಾಗಳ ಪರದಿಯಲ್ಲಿ ಸರ್ಕಾರಿ/ಖಾಸಗಿ ಜಮೀನು ಪಡೆದು ಬಡಾವಣೆ ರಚಿಸಿ ಕರ್ನಾಟಕ ಗೃಹ ಮಂಡಳಿ/ವಸತಿ ಯೋಜನೆಗಳ ಮೂಲಕ ಮನೆ ಕಟ್ಟಿಸಿ ಕೊಡುವುದು.
- ತಾಂಡಾಗಳ ಸಕ್ರಮೀಕರಣ ಕಂದಾಯ ಗ್ರಾಮಗಳಾಗಿ ಪರಿವರ್ತನೆ:
- ಗೋಮಾಳ, ಸರ್ಕಾರಿ ಜಮೀನು, ಅರಣ್ಯ ಮತ್ತು ಖಾಸಗಿ ಜಮೀನುಗಳಲ್ಲಿ ನಿರ್ಮಾಣಗೊಂಡ ತಾಂಡಾ ನಿವಾಸಿಗಳ ಮನೆಗಳನ್ನು ತಜ್ಞರ ಸಮಿತಿಯ ಶಿಫಾರಸ್ಸು ಮತ್ತು ಸರ್ಕಾರದ ಆದೇಶದನ್ವಯ ಸಕ್ರಮಣಗೊಳಿಸಲು ನೆರವು.
- ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ನೆರವು.
- ಅರಣ್ಯ ಕಾಯ್ದೆ 2006ರ ಅನ್ವಯ ತಾಂಡಾದ ನಿವಾಸಿಗಳು ಉಳಿಮೆ ಮಾಡುತ್ತಿರುವ ಅರಣ್ಯ ಜಮೀನಿನ ಹಕ್ಕು ಪತ್ರ ಕೊಡಿಸಲು ನೆರವು.
- ಬಂಜಾರ ಭಾಷಾಭಿವೃದ್ದಿ ಮತ್ತು ಸಾಂಸ್ಕøತಿಕ ಚಟುವಟಿಕೆಗಳು
- ಬಂಜಾರ ಭಾಷಾ ಅಭಿವೃದ್ದಿಗೆ ಪ್ರೋತ್ಸಾಹ, ಪ್ರಚಲಿತದಲ್ಲಿರುವ ಬಂಜಾರ ಒಗಟು, ಗಾದೆ, ಜನಪದ ಹಾಡು, ಪೂಜಾ ವಿಂತಿ, ಕಸಳಾತ್ ಮುಂತಾದವುಗಳ ಸಂಗ್ರಹಣೆ ಮತ್ತು ಮುದ್ರಣ
- ಬಂಜಾರ ಭಾಷಾ ಶಬ್ದಕೋಶ
- ಬಂಜಾರ ಭಾಷೆಗೆ ಬಳಸುವ ಲಿಪಿ ಕುರಿತು ನಿರ್ಣಯ
- ನಿಗಮದಿಂದ ಮಾಸ ಪತ್ರಿಕೆ ಹೊರಡಿಸುವುದು
- ಬಂಜಾರ ಸಾಂಸ್ಕøತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ
- ಬಂಜಾರ ಪರಾಂಪರಿಕ ಪದ್ದತಿಗಳ ಬಲವರ್ಧನೆ.
- ಸೂರಗೊಂಡನಕೊಪ್ಪ ಸೇವಾಲಾಲ್ ಜನ್ಮ ಸ್ಥಳದ ಸಮಗ್ರ ಅಭಿವೃದ್ದಿ ಯೋಜನೆ:-
- ಸಂತ ಶ್ರೀ ಸೇವಾಲಾಲ್ ಮಹಾಮಠದ ಜೀರ್ಣೋದ್ಧಾರ, ಹಾಗೂ ಆಗಮಿಸುವ ಯಾತ್ರಿಗಳಿಗಾಗಿ ಮೂಲಭೂತ ಸೌಕರ್ಯ ಒದಗಿಸುವುದು,
- ಮಹಾಮಠದ ವ್ಯಾಪ್ತಿಯಲ್ಲಿ ಸಭಾ ಭವನ, ಅತಿಥಿ ಗೃಹ, ತರಬೇತಿ ಕೇಂದ್ರ, ವಸತಿ ಶಾಲೆ, ವಸ್ತು ಸಂಗ್ರಾಹಲಯ, ಗ್ರಂಥಾಲಯ, ತಾಂಡಾ ಮಾದರಿ ಥೀಮ್,ಗೋಶಾಲೆ ಮತ್ತು ಗೋತಳಿ ಅಭಿವೃದ್ದಿ ಕೇಂದ್ರ.
- ಉದ್ಯೋಗಸ್ಥ/ತರಬೇತಿ ಪಡೆಯುವ ಮಹಿಳೆಯರಿಗೆ ಹಾಸ್ಟೆಲ್ ವ್ಯವಸ್ಥೆ :-
- ಬೆಂಗಳೂರು ನಗರದಲ್ಲಿ ಉದ್ಯೋಗ ಪಡೆದ ಮತ್ತು ಉದ್ಯೋಗ ಪಡೆಯುಲು ಸಂದರ್ಶನಕ್ಕೆ ಬರುವ ಮಹಿಳೆಯರಿಗೆ ತಾತ್ಕಾಲಿಕ ವಸತಿ ಒದಗಿಸಲು
- ವಿದ್ಯಾವಂತ ಯುವತಿಯರಿಗೆ ವೃತ್ತಿಕೌಶಲ್ಯ ನೀಡಲು ತರಬೇತಿ ಕೇಂದ್ರ.
- ಕಳಂಕಿತ ಮತ್ತು ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸುವುದು:-
- ಮಧ್ಯಪಾನದಂತ ದುಶ್ಚಟಗಳನ್ನು ಬಿಡಿಸಿ, ದುಶ್ಚಟಗಳ ಪರಿಣಾಮಕ್ಕೊಳಗಾದವರಿಗೆ ಪುನರ್ ವ್ಯವಸ್ಥೆ ಮಾಡುವುದು.
- ಮೌಡ್ಯ ಮತ್ತು ಅಂಧ ಶ್ರದ್ದೆ ವಿರುದ್ಧ ಜಾಗೃತಿ.
- ಕಳ್ಳಬಟ್ಟಿ ನಿಯಂತ್ರಣ ಮತ್ತು ಅದರ ಪರಿಣಾಮಕ್ಕೊಳಗಾದವರ ಪುನರ್ ವಸತಿ.
- ತಾಂಡಗಳಲ್ಲಿ ನಾಗರೀಕ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳು:-
- ತಾಂಡಾಗಳ ನಿವಾಸಿಗಳಿಗೆ ಸಮೂಹ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆ ವ್ಯವಸ್ಥೆ
- ತಾಂಡಾಗಳಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ
- ರಸ್ತೆಗಳನ್ನು ಸಿ.ಸಿ.ರಸ್ತೆಗಳನ್ನಾಗಿ ಪರಿವರ್ತಿಸುವುದು.
- ಬಂಜಾರ ಭವನ ಮತ್ತು ಸೇವಾಲಾಲ್ ಸಮುದಾಯ ಭವನ ಕೇಂದ್ರಗಳ ನಿರ್ಮಾಣ:-
- ಜಿಲ್ಲಾ ಮಟ್ಟಗಳಲ್ಲಿ ಬಂಜಾರ ಭವನಗಳ ನಿರ್ಮಾಣ.
- ತಾಂಡಾಗಳಲ್ಲಿ ಸೇವಾಲಾಲ ಸಮುದಾಯ ಭವನಗಳ ನಿರ್ಮಾಣ
- ಭವನಗಳ ನಿರ್ವಹಣೆ ವ್ಯವಸ್ಥೆಗೆ ನೆರವು
ಇಲಾಖಾ ಯೋಜನೆಗಳು
ಸಮಾಜ ಕಲ್ಯಾಣ ಇಲಾಖೆ :-
ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಇಲಾಖೆಯಡಿಯಲ್ಲಿ ಮತ್ತು ಮೂಲಕ ಲಂಬಾಣಿ ಸಮುದಾಯದವರಿಗೆ ಸಿಗುವ ಸೌಲತ್ತು ಮತ್ತು ಸೌಲಭ್ಯಗಳ ವಿವರ ಕೆಳಗಿನಂತಿದೆ.
- ರಾಜ್ಯ ಸರ್ಕಾರದ ಮ್ಯಾಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ
- ಭಾರತ ಸರ್ಕಾರದ ಮ್ಯಾಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ
- ಭಾರತ ಸರ್ಕಾರದ ಮ್ಯಾಟ್ರಿಕ್ ನಂತರದ ಮಾಸಿಕ ವಿದ್ಯಾರ್ಥಿ ವೇತನದ
- ಶಿಕ್ಷಣ ಇಲಾಖೆಯ ಕಾರ್ಯಕ್ರಮದಡಿ
2ನೇ ಪಿಯುಸಿ ವಿದ್ಯಾರ್ಥಿಗಳಿಗೆ
|
ರೂ.750.00
|
ಪದವಿ ತರಗತಿ ವಿದ್ಯಾರ್ಥಿಗಳಿಗೆ
|
ರೂ.1000.00
|
ಸ್ನಾತಕ್ಕೋತ್ತರ ಪದವಿ ಎಂ.ಎ, ಎಂ.ಎಸ್ಸಿ, ಎಂ.ಕಾಂ
|
ರೂ.1250.00
|
ತಾಂತ್ರಿಕ ಪದವಿ
|
ರೂ.1500.00
|
ವೈದ್ಯಕೀಯ ಪದವಿ
|
ರೂ.1500.00
|
ವ್ಯವಸಾಯ ಮತ್ತು ಪಶು ವೈದ್ಯ
|
ರೂ.1500.00
|
- ಅರ್ಹತೆ:- ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ಪಬ್ಲಿಕ್ ಪ್ರಥಮ ಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ರ್ತೀರ್ಣರಾಗಿರಬೇಕು.
- ವಿಧಾನ:- ನಗದು ಬಹುಮಾನಕ್ಕೆ ಅರ್ಜಿ ಕರೆದಾಗ ಸಂಸ್ಥೆಯ ಮುಖ್ಯಸ್ಥರ ಮೂಲಕ ಭರ್ತಿ ಮಾಡಿದ ಅರ್ಜಿಗಳನ್ನು ಅಂಕಪಟ್ಟಿಯ ಜೆರಾಕ್ಸ್ ಮತ್ತು ಜಾತಿ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ತಾಲ್ಲೂಕು/ ಜಿಲ್ಲಾ ಸÀಮಾಜ ಕಲ್ಯಾಣ ಅಧಿಕಾರಿಗಳ ಕಛೇರಿಗೆ ಕಳುಹಿಸಬೇಕು. ತಾಲ್ಲೂಕು/ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಕಾಲೇಜಿಗೆ ಬಹುಮಾನದ ಹಣದ ಚೆಕ್‍ನ್ನು ಕಳುಹಿಸುವುದು.
ಎಂ.ಫಿಲ್/ ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಧನ ಸಹಾಯ
- ಭಾರತ ಸರ್ಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನದ ಜೊತೆಗೆ ಸಂಶೋಧನಾ ಚಟುವಟಿಕೆ ನಡೆಸಲು ಪರಿಶಿಷ್ಟ ಜಾತಿಯ ಎಂ.ಫಿಲ್. ವಿದ್ಯಾರ್ಥಿಗಳಿಗೆ ರೂ.8,000/- ಮತ್ತು ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ರೂ.10,000/- ಹೆಚ್ಚುವರಿ ಧನ ಸಹಾಯ ನೀಡಲಾಗುವುದು - ಸಂಪರ್ಕಾಧಿಕಾರಿಗಳು: ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ.
ಪ್ರತಿಷ್ಠಿತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ :-
- ವ್ಯಾಸಂಗ ಮಾಡುತ್ತಿರುವ ಪರಿಶಿಷ್ಠ ಜಾತಿಯ ವಿದ್ಯಾರ್ಥಿಗಳಿಗೆ ರೂ. 50.000/- ಗಳನ್ನು ಒಂದು ಅವಧಿಗೆ ಮಾತ್ರ ಮಂಜೂರು ಮಾಡಲಾಗುವುದು.
- ಅರ್ಹತೆ:- ಐ.ಐ.ಟಿ/ ಐ.ಐ.ಎಂ/ ಐ.ಐ.ಎಸ್‍ಸಿ ಮುಂತಾದ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯು ಪರಿಶಿಷ್ಟ ಜಾತಿಗೆ ಸೇರಿದವರಗಿರಬೇಕು.
- ವಿಧಾನ:- ಪ್ರತಿಷ್ಠಿತ ಸಂಸ್ಥೆಯ ಮುಖ್ಯಸ್ಥರ ಮೂಲಕ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರಿಗೆ ಅರ್ಜಿ ಸಲ್ಲಿಸಬೇಕು.
- ಪ್ರತಿಷ್ಠಿತ ಸಂಸ್ಥೆಗೆ ಸೇರಿದ ಬಗ್ಗೆ ದೃಢೀಕರಣ ಪ್ರಮಾಣ ಪತ್ರ ಜಾತಿ ಮತ್ತು ಆದಾಯ ಪ್ರಮಾಣ ಪತ್ರÀ ಮತ್ತು ಹಿಂದಿನ ತರಗತಿಯ ಅಂಕಪಟ್ಟಿ ಜೆರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸುವುದು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
- ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ:-
- ಕೆಳಕಾಣಿಸಿದ ಕೋರ್ಸ್‍ಗಳಲ್ಲಿ ವಿದ್ಯಾಬ್ಯಾಸ ಮಾಡಿ ಪರೀಕ್ಷೆಯಲ್ಲಿ 1 ರಿಂದ 5 ರ್ಯಾಂಕುಗಳನ್ನು ಗಳಿಸಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ಪ್ರೋತ್ಸಾಹ ಧನ ಮಂಜೂರು ಮಾಡಲಾಗುವುದು.
- ವಿವಿದ ವಿಶ್ವವಿದ್ಯಾನಿಲಯಗಳ ಪದವಿ ಕೋರ್ಸ್ (ಬಿ.ಎ, ಬಿ.ಕಾಮ್, ಬಿಎಸ್ಸ್ಸಿ) 20,000/-
- ವಿವಿದ ವಿಶ್ವವಿದ್ಯಾನಿಲಯಗಳ ಸ್ನಾತಕ್ಕೋತ್ತರ ಪದವಿಯಲ್ಲಿ ಪ್ರತಿ ಕೋರ್ಸ್ 25,000/-
- ವಿವಿದ ವಿಶ್ವವಿದ್ಯಾನಿಲಯಗಳ ತಾಂತ್ರಿಕ ಪದವಿ ಇಂಜಿನಿಯರಿಂಗ್, ಬಿ.ಡಿ.ಎಸ್,
- ಇಂಡಿಯನ್ ಮೆಡಿಸನ್, ಕೃಷಿ, ಪಶು ವೈದ್ಯಕೀಯ - ಪ್ರತಿ ಕೋರ್ಸ್ 25,000/-
- ಎಂ.ಬಿ.ಬಿ.ಎಸ್ ಕೋರ್ಸ್ 25,000/-
- ಅರ್ಹತೆ:- ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಯು ಮೇಲ್ಕಾಣಿಸಿದ ಕೋರ್ಸ್ ಪರೀಕ್ಷೆಯಲ್ಲಿ 1 ರಿಂದ 5 ನೇ ರ್ಯಾಂಕ್ ಪಡೆದಿರಬೇಕು.
- ವಿಧಾನ:- ನಿಗಧಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ. ಜಿಲ್ಲಾ ಸಮಾಜ ಕಲ್ಯಾಣಧಿಕಾರಿಗಳಿಗೆ ಸಲ;ಲಿಸಬೇಕು.
- ದಾಖಲೆಗಳು:- ರ್ಯಾಂಕ್ ಪಡೆದ ಪ್ರಮಾಣ ಪತ್ರ, ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಮತ್ತು ಅದಾಯ ಪ್ರಮಾಣ ಪತ್ರಗಳ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸುವುದು. ಸಂಬಂಧಿಸಿದ ಜೆರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸುವುದು.
- ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಧನ ಸಹಾಯ:-
- ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗೆ ವಾರ್ಷಿಕ ರೂ.3.50 ಲಕ್ಷದಂತೆ ಅಥವಾ ವ್ಯಾಸಂಗದ ಅವಧಿಗೆ ಒಟ್ಟು ಗರಿಷ್ಠ ರೂ.10.00 ಲಕ್ಷಗಳಿಗೆ ಧನ ಸಹಾಯ ನೀಡಲಾಗುತ್ತದೆ. ಇದರಲ್ಲಿ ವಿಮಾನ ಶುಲ್ಕವು ಒಳಗೊಂಡಿರುತ್ತದೆ.
- ಅರ್ಹತೆ:- ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಪೋಷಕರ ವಾರ್ಷಿಕ ಆದಾಯ ರೂ.2.00 ಲಕ್ಷ ಮೀರಿರಬಾರದು.
- ವಿಧಾನ:- ನಿಗಧಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು.
- ದಾಖಲೆಗಳು:- ಅಂಕಪಟ್ಟಿ, ಜಾತಿ ಪ್ರಮಾನ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳ ಪ್ರತಿ ಮತ್ತು ವಿಧೇಶಿ ವಿಶ್ವವಿದ್ಯಾನಿಲಯಗಳಲ್ಲಿ ಆಯ್ಕೆಗೊಂಡ ಪತ್ರ ಅರ್ಜಿಯೊಂದಿಗೆ ಲಗತ್ತಿಸುವುದು.
- ಪರಿಶಿಷ್ಟ ಜಾತಿಗೆ ಸೇರಿದ ನಿರುದ್ಯೋಗಿ ಕಾನೂನು ಪಧವೀದರರು ಸ್ವತಂತ್ರವಾಗಿ ವಕೀಲ ವೃತ್ತಿಯನ್ನು ಕೈಗೊಳ್ಳಲು ವಕೀಲರ ಸಂಘದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಗ್ರಂಥಗಳನ್ನು ಖರೀದಿಸಲು ಇತ್ಯಾಧಿಗಳಿಗೆ ರೂ.5000/- ದನ ಸಹಾಯ ಜಿಲ್ಲಾ/ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿಗೆ ಅರ್ಜಿ ಸಲ್ಲಿಸುವುದು.
- ಪರಿಶಿಷ್ಟ ಜಾತಿಗೆ ಸೇರಿದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ಹೆಚ್ಚಿನ ಜ್ಞಾನ ಗಳಿಸಿಕೊಳ್ಳಲು ನೆರವಾಗುವಂತೆ 4 ವರ್ಷದ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ರೂ.2000/- ರಂತೆ ಶಿಷ್ಯ ವೇತನ ನೀಡಲಾಗುತ್ತದೆ.
- ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕಕ್ಕೆ ಕಾನೂನು ಪದವೀದರರಾಗಿ 2 ವರ್ಷ ಅಥವಾ 35 ವರ್ಷಗಳು ಮೀರಿರಬಾರದು.
- ಅದ್ಯಯನ ಪ್ರವಾಸಕ್ಕೆ ನೆರವು :- ಅದ್ಯಯನ ಪ್ರವಾಸಕ್ಕಾಗಿ ರೂ.1600/- ಮೀರದಂತೆ ಸಹಾಯ ಧನದ ನೆರವು ನೀಡಲಾಗುವುದು.
- ಅರ್ಹತೆ:- ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
- ವಿಧಾನ:- ನಿಗಧಿತ ಅರ್ಜಿಯನ್ನು ಭರ್ತಿ ಮಾಡಿ, ವಿದ್ಯಾ ಸಂಸ್ಥೆಯ ಮುಖ್ಯಸ್ಥರ ಮೂಲಕ ಸಂಬಂದಿಸಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮಂಜೂರಾತಿಗಾಗಿ ಕಳುಹಿಸುವುದು.
- ದಾಖಲೆಗಳು:- ವಿದ್ಯಾ ಸಂಸ್ಥೆಯ ಮುಖ್ಯಸ್ಥರ ದೃಡೀರರಿಸಿದ ಅಧ್ಯಯನದ ಪ್ರವಾಸ ವಿವರಗಳನ್ನು ಲಗತ್ತಿಸುವುದು.
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆಗಳನ್ನು ಪೂರೈಸುವುದು :-
- ಇಂಜಿನಿಯರಿಂಗ್ ಅಥವಾ ಡಿಪ್ಲೋಮಾ ತರಗತಿಯಲ್ಲಿ ದಾಖಲಾದ ಪರಿಶಿಷ್ಟ ಜಾತಿಗೆ ಸೇರಿದ ಎಲ್ಲಾ ವಿದ್ಯಾರ್ಥಿಗಳ ಪಟ್ಟಿಯನ್ನು ತರಿಸಿಕೊಂಡು, ತಲಾ ರೂ.700/-ಗಳ ವೆಚ್ಚದಲ್ಲಿ ಡ್ರಾಯಿಂಗ್ ಬೋರ್ಡ್, ಕ್ಯಾಲ್ಕ್ಯುಲೇಟರ್ ಮುಂತಾದ ಸಲಕರಣೆಗಳನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಾಲೇಜು ಮುಖ್ಯಸ್ಥರ ಮೂಲಕ ಒದಗಿಸುವರು.
- ವೈದ್ಯಕೀಯ, ತಾಂತ್ರಿಕ, ಕೃಷಿ ವಿಜ್ಞಾನ ಮತ್ತು ಪಶು ವಿಜ್ಞಾನದ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿ ಮಾತ್ರ ಪುಸ್ತಕ ಭಂಡಾರ/ ಪುಸ್ತಕ ಬ್ಯಾಂಕ್ ತೆರೆಯಲಾಗಿದೆ.
- ಪರೀಕ್ಷಾ ಪೂರ್ವ ತರಬೇತಿ ಕೇಂದ್ರ:-
- ಉದ್ಯೋಗವಕಾಶಕ್ಕಾಗಿ ಇರುವ ವಿವಿದ ಸ್ಪರ್ದಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲು ಬೆಂಗಳೂರಿನಲ್ಲಿ ತರಬೇತಿ ಕೇಂದ್ರ ತೆರೆಯಲಾಗಿದೆ. ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್, ಬ್ಯಾಂಕಿಂಗ್ ಮತ್ತು ರೈಲ್ವೆ ಇತರೆ ನೇಮಕಾತಿ ಪ್ರಾಧಿಕಾರದ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳನ್ನು ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆ ಮಾಡಿ, ತರಬೇತಿ ನೀಡಲಾಗುತ್ತದೆ. ಅಪೇಕ್ಷಿತ ಆಕಾಂಕ್ಷೆಯುಳ್ಳ ಅಭ್ಯರ್ಥಿಗಳು ಸಂಬಂದಿಸಿದ, ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಪ್ರಾಂಶುಪಾಲರು, ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ಅಂಬೇಡ್ಕರ್ ಭವನ, ಮಿಲ್ಲರ್ಸ್ ರಸ್ತೆ, ಬೆಂಗಳೂರು ಇವರನ್ನು ಸಂಪರ್ಕಿಸುವುದು.
ವಸತಿ ಶಾಲೆ
- ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು:-
- 6ನೇ ತರಗತಿಯಿಂದ 10ನೇ ತರಗತಿಯ ವರೆಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ತೆರೆಯಲಾಗಿವೆ.
- 6ನೇ ತರಗತಿಯಿಂದ 10ನೇ ತರಗತಿಯ ವರೆಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲಾಗಿವೆ.
- ಅರ್ಹತೆ:- ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
- ವಿಧಾನ:- ನಿಗಧಿತ ಅರ್ಜಿಯನ್ನು ಭರ್ತಿ ಮಾಡಿ, ವಿದ್ಯಾ ಸಂಸ್ಥೆಯ ಮುಖ್ಯಸ್ಥರ ಮೂಲಕ ಸಂಬಂದಿಸಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮಂಜೂರಾತಿಗಾಗಿ ಕಳುಹಿಸುವುದು.
- ದಾಖಲೆಗಳು:- ವಿದ್ಯಾ ಸಂಸ್ಥೆಯ ಮುಖ್ಯಸ್ಥರು ದೃಢೀಕರಿಸಿದ ಅದ್ಯಯನದ ಪ್ರವಾಸದ ವಿವರಗಳನ್ನು ಲಗತ್ತಿಸುವುದು.
- ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಶಾಲೆಗಳು:-
- ಮೆಟ್ರಿಕ್ ನಂತರ ಶಿಕ್ಷಣ ಮುಂದುವರೆಸಲು ಅನುಕೂಲವಾಗುವಂತೆ ಕಿತ್ತೂರು ರಾಣಿ ಚೆನ್ನಮ್ಮ ಪದವಿ ಪೂರ್ವ ವಸತಿ ಕಾಲೇಜುಗಳನ್ನು ತೆರೆಯಲಾಗಿವೆ.
- ಮೆಟ್ರಿಕ್ ನಂತರ ಶಿಕ್ಷಣ ಮುಂದುವರೆಸಲು ಅನುಕೂಲವಾಗುವಂತೆ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜುಗಳನ್ನು ತೆರೆಯಲಾಗಿವೆ.
- ಅರ್ಹತೆ:- ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
- ವಿಧಾನ:- ನಿಗಧಿತ ಅರ್ಜಿಯನ್ನು ಭರ್ತಿ ಮಾಡಿ, ವಿದ್ಯಾ ಸಂಸ್ಥೆಯ ಮುಖ್ಯಸ್ಥರ ಮೂಲಕ ಸಂಬಂದಿಸಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮಂಜೂರಾತಿಗಾಗಿ ಕಳುಹಿಸುವುದು.
- ದಾಖಲೆಗಳು:- ವಿದ್ಯಾ ಸಂಸ್ಥೆಯ ಮುಖ್ಯಸ್ಥರು ದೃಢೀಕರಿಸಿದ ಅದ್ಯಯನದ ಪ್ರವಾಸದ ವಿವರಗಳನ್ನು ಲಗತ್ತಿಸುವುದು.
- ಮೈಸೂರಿನ ರಾಮಕೃಷ್ಣ ಆಶ್ರಮ, ಜೆ.ಎಸ್.ಎಸ್. ಮತ್ತು ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರಗಳಲ್ಲಿ 5ನೇ ತರಗತಿಯಿಂದ ಪ್ರವೇಶಾವಕಾಶವಿರುತ್ತದೆ. :-
- ವಿದ್ಯಾರ್ಥಿಯೂ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಕುಟುಂಬದ ವಾರ್ಷಿಕ ವರಮಾನ ರೂ.2.50 ಲಕ್ಷ ಮೀರಿರಬಾರದು.
- ಹಿಂದಿನ ತರಗತಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಪ್ರತಿ ವರ್ಷ ಏಪ್ರಿಲ್ ಮಾಹೆಯಲ್ಲಿ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಸದರಿ ಸಂಸ್ಥೆಗಳ ಎಲ್ಲಾ ಶಾಲಾ ಶುಲ್ಕ ಮತ್ತು ನಿರ್ವಹಣಾ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆ ಭರಿಸುವುದು.
- ಮಾಹಿತಿಗಾಗಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸುವುದು.
- ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ:-
- 5 ರಿಂದ 10ನೇ ತರಗತಿಯವರೆಗೆ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳ ಊಟ ಮತ್ತು ವಸತಿ ಸೌಲಭ್ಯ ಒದಗಿಸಲು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳನ್ನು ತೆರೆಯಲಾಗಿವೆ.
- 5ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳು ಮುಖ್ಯೋಪಾದ್ಯಾಯರ ಮೂಲಕ ಅರ್ಜಿಯನ್ನು ಜೂನ್-15ರೊಳಗೆ ಸಂಬಂದಿಸಿದ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಕಳುಹಿಸಬೇಕು.
- ನಿಲಯಗಳಲ್ಲಿ ಪ್ರವೇಶ ಪಡೆದು ಉತ್ತೀರ್ಣರಾಗುವ ವಿದ್ಯಾರ್ಥಿಗಳನ್ನು ನಿಲಯ ವಾಸಿಗಳಾಗಿ ಮುಂದುವರೆಸಲಾಗುವುದು.
- ಹೊಸದಾಗಿ ವಸತಿ ನಿಲಯಗಳಿಗೆ ಸೇರಲು ಬಯಸುವ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬೇಕು.
- ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ವಿಶೇಷ ಭೋದನೆ ನೀಡಲಾಗುವುದು (ವಿಜ್ಞಾನ, ಗಣಿತ, ಇಂಗ್ಲೀಷ್ ಮತ್ತು ಸಮಾಜ).
- ಕಾಲೇಜು ವಿದ್ಯಾರ್ಥಿ ನಿಲಯಗಳು:-
- ಪಿ.ಯು.ಸಿ ಮತ್ತು ಪದವಿ ತರಗತಿಗಳಿಗೆ ಸೇರಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಊಟ ಮತ್ತು ವಸತಿ ಸೌಲಭ್ಯ ಒದಗಿಸಲು ಪಿ.ಯು.ಸಿ ಮತ್ತು ಪದವಿ ವಿದ್ಯಾರ್ಥಿ ನಿಲಯಗಳನ್ನು ತೆರೆಯಲಾಗಿವೆ.
- ಪಿ.ಯು.ಸಿ ತರಗÀತಿಗೆ ದಾಖಲಾದ ವಿದ್ಯಾರ್ಥಿಗಳು ಪ್ರಾಂಶುಪಾಲರ ಮೂಲಕ ಅರ್ಜಿಯನ್ನು ಜೂನ್-15ರೊಳಗೆ ಸಂಬಂದಿಸಿದ ತಾಲ್ಲೂಕು/ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಕಳುಹಿಸಬೇಕು.
- ನಿಲಯಗಳಲ್ಲಿ ಪ್ರವೇಶ ಪಡೆದು ಉತ್ತೀರ್ಣರಾಗುವ ವಿದ್ಯಾರ್ಥಿಗಳನ್ನು ನಿಲಯ ವಾಸಿಗಳಾಗಿ ಮುಂದುವರೆಸಲಾಗುವುದು.
- ಹೊಸದಾಗಿ ವಸತಿ ನಿಲಯಗಳಿಗೆ ಸೇರಲು ಬಯಸುವ ವಿದ್ಯಾರ್ಥಿಗಳು ಅರ್ಜಿಗಳನ್ನು ಪ್ರಾಂಶುಪಾಲರ ಮೂಲಕ ಸಲ್ಲಿಸಬೇಕು.
- ವಿದ್ಯಾರ್ಜನೆಗಾಗಿ ಪ್ರೋತ್ಸಾಹ ಧನ:-
- ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪಿ.ಯು.ಸಿ ಮತ್ತು ಪದವಿ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಾವಕಾಶ ಸಿಗದೇ ಇದ್ದಲ್ಲಿ, ಪ್ರತಿ ಮಾಹೆಗೆ ರೂ.1500/- ರಂತೆ 10 ತಿಂಗಳುಗಳಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಇರುತ್ತದೆ. ಅಂತಹ ವಿದ್ಯಾರ್ಥಿಗಳು ಪ್ರಾಂಶುಪಾಲರ ಮೂಲಕ ಸಮಾಜ ಕಲ್ಯಾಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು.
ಉದ್ಯೋಗ ಯೋಜನೆ
- . ನಿರುದ್ಯೋಗಿಗಳಿಗೆ ರೂ. 1.00 ಲಕ್ಷಕ್ಕೆ ಒಳಪಟ್ಟ ಯೋಜನೆಗಳು
- ಹೈನುಗಾರಿಕೆ, ಸಣ್ಣ ವ್ಯಾಪಾರ, ದಿನಸಿ ಅಂಗಡಿ, ಸೈಕಲ್ ಶಾಪ್, ಸಣ್ಣ ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳಿಗೆ ಬ್ಯಾಂಕುಗಳ ಸಹಯೋಗದೊಂದಿಗೆ ಆರ್ಥಿಕ ಸೌಲಭ್ಯ ಕಲ್ಪಿಸುವುದು.
- ಘಟಕದ ವೆಚ್ಚದ ಶೇ.50 ಭಾಗ/ಗರಿಷ್ಠ ರೂ.35,000/- ಪ್ರತಿ ಫಲಾನುಭವಿಗೆ ಸಹಾಯ ಧನ’
- ಘಟಕ ಪ್ರಾರಂಬಿಸಲು ಸಾಲ ಸೌಲಭ್ಯಗಳನ್ನು ಬ್ಯಾಂಕುಗಳ ಮೂಲಕ ಕಲ್ಪಿಸಲಾಗುತ್ತದೆ.
- ನಿರುದ್ಯೋಗಿಗಳಿಗೆ ರೂ. 1.00 ಲಕ್ಷಕ್ಕೆ ಮೇಲ್ಪಟ್ಟ ಯೋಜನೆಗಳು:
- ಸಣ್ಣ ಕೈಗಾರಿಕೆ, ಟಾಟಾ ಇಂಡಿಕಾ, ಆಟೋರಿಕ್ಷಾ, ಟ್ರಾಕ್ಟ್‍ರ್ ಮತ್ತು ಟ್ರೈಲರ್, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ವ್ಯಾಪಾರ, ವಕೀಲರ ಕಛೇರಿ, ಬ್ಯೂಟಿ ಪಾರ್ಲರ್, ರೆಡಿಮೇಡ್ ಗಾರ್ಮೆಂಟ್ಸ್, ಡಿ.ಟಿ.ಪಿ. ಸೆಂಟರ್, ಮಿನಿಡೈರಿ ಇತ್ಯಾದಿ.
- ಘಟಕದ ವೆಚ್ಚದ ಶೇ. 33 ಭಾಗ/ಗರಿಷ್ಠ ರೂ. 1.00 ಪ್ರತಿ ಫಲಾನುಭವಿಗೆ ಸಹಾಯ ಧನ’
- ಘಟಕ ಪ್ರಾರಂಬಿಸಲು ಸಾಲ ಸೌಲಭ್ಯಗಳನ್ನು ಬ್ಯಾಂಕುಗಳ ಮೂಲಕ ಕಲ್ಪಿಸಲಾಗುತ್ತದೆ.
ಮಹಿಳಾ ಕಿಸಾನ್ ಯೋಜನೆ:-
ಮಹಿಳಾ ಕಿಸಾನ್ ಯೋಜನೆ 40,000 ಕ್ಕಿಂತ ಕಡಿಮೆ ಆದಾಯ ಇರುವ ಸಣ್ಣ ಮತ್ತು ಅತೀ ಸಣ್ಣ ಪರಿಶಿಷ್ಟ ಜಾತಿಯ ಮಹಿಳಾ ರೈತರಿಗೆ ನಿಗಮದಿಂದ ಬೇಸಾಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಘಟಕ ವೆಚ್ಚ ರೂ.50,000/- ಮಂಜೂರು ಮಾಡಿ ಅದರಲ್ಲಿ ನಿಗಮದಿಂದ ಗರಿಷ್ಠ ಸಹಯ ಧನ 10,000/- ಬೀಜ ಧನ 10,000/- ಮತ್ತು 30,000=00 ಸಾಲ ರೂಪದಲ್ಲಿ ಶೇಕಡ 50ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ.
ಪರಿಶಿಷ್ಟ ಜಾತಿಗೆ ಸೇರಿದ ಭೂ ರಹಿತಿ ಕೃಷಿ ಕಾರ್ಮಿಕ ಕುಟುಂಬದ ಮಹಿಳೆಯೂ ಮಾತ್ರ ಭೂ ಖರೀದಿಸಲು ಘಟಕ ವೆಚ್ಚ ಗರಿಷ್ಠ ರೂ. 10 ಲಕ್ಷದ ವರೆಗೆ ಇದ್ದು. ಸೇ.50ರ ಭಾಗ ಸಹಾಯ ಧನ ಹಾಗೂ ಶೇ. 50ರ ಭಾಗ ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ನೀಡಲಾಗುವುದು.
ವಾಸ ಸ್ಥಳದಿಂದ 5.00 ಕಿ.ಮೀ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಕನಿಷ್ಠ 2.00 ಎಕರೆ ಕೃಷಿ/ 1.00 ಎಕರೆ ತರಿ /1/2, ಎಕರೆ ಬಾಗಾಯ್ತು ಕಡಿಮೆ ಇಲ್ಲದಂತೆ ಒದಗಿಸಲಾಗುವುದು, ಸಾಲದ ಕಂತು 10 ವರ್ಷಗಳಾಗಿರುತ್ತದೆ.
- ವೈಯಕ್ತಿಕ ನೀರಾವರಿ ಕೊಳೆವೆ ಬಾವಿ ಯೋಜನೆ:-
- ಎಕರೆಯಿಂದ 5.00 ಎಕರೆ ವರೆಗೆ ಭೂಮಿ ಹೊಂದಿರುವ ಪರಿಶಿಷ್ಟ ಜಾತಿಗೆ ಸೇರಿದ ಸಣ್ಣ ರೈತರಿಗೆ ನೀರಾವರಿ ಸೌಲಬ್ಯಕ್ಕಾಗಿ ಕೊಳೆವೆ ಬಾವಿ ಕೊರೆಸಿ ಪಂಪ್‍ಸೆಟ್ ಅಳವಡಿಸಿ, ವಿದ್ಯುದ್ದೀಕರಣಗೊಳಿಸಲಾಗುವುದು.
- ಘಟಕ ವೆಚ್ಚ ರೂ. 2.00 ಲಕ್ಷವಿದ್ದು, ಇದರಲ್ಲಿ ರೂ.1.50 ಲಕ್ಷ ಸಹಾಯ ಧನ ಉಳಿದ ರೂ. 50 ಸಾವಿರ ಸಾಲವಾಗಿದ್ದು ಶೇ. 6 ರ ಬಡ್ಡಿ ದರದಲ್ಲಿ 8 ವರ್ಷ ಅವಧಿಯಲ್ಲಿ ತೀರಿಸಬೇಕು.
- ಸಾಮೂಹಿಕ ನೀರಾವರಿ /ಏತ ನೀರಾವರಿ ಯೋಜನೆ:-
- ಸನ್ಣ ರೈತರಿಗೆ 2 ರಿಂದ 3 ಫಲಾಪೇಕ್ಷಿಗಳ 8 ರಿಂದ 15 ಎಕರೆ ಜಮೀನಿನಲ್ಲಿ 2 ರಿಂದ 3 ಕೊಳವೆ ಬಾವಿಗಳನ್ನು ಕೊರೆದು ಪಂಪ್ ಸೆಟ್ ಅಳವಡಿಸಿ, ವಿದ್ಯುದ್ದೀಕರಣಗೊಳಿಸಲಾಗುವುದು. ಪೂರ್ಣ ವೆಚ್ಚ ಸಹಾಯ ಧನವಾಗಿರುತ್ತದೆ.
- ಸಣ್ಣ ರೈತರಿಗೆ ಏತ ನೀರಾವರಿ ಯೋಜನೆಯಡಿಯ ಘಟಕದಲ್ಲಿ 3 ರಿಂದ 8 ಫಲಾನುಭವಿಗಳು ಇರುತ್ತಾರೆ. ಘಟಕದ ವೆಚ್ಚ 8.00 ಎಕರೆಗೆ ರೂ. 2.53 ಲಕ್ಷ ಮತ್ತು 15.00 ಎಕರೆಗೆ ರೂ. 3.59 ಲಕ್ಷ ಸಹಾಯ ಧನವಿರುತ್ತದೆ.
- ಅರ್ಹತೆ:- 18 ವರ್ಷ ಮೇಲ್ಪಟ್ಟು, ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿರಬೇಕು.
- ಹೆಚ್ಚಿನ ಮಾಹಿತಿಗಾಗಿ ಡಾ. ಬಇ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೇಂದ್ರ ಕಛೇರಿ ಮತ್ತು ಜಿಲ್ಲಾ ಕಛೇರಿಗಳಲ್ಲಿ ಸಂಪರ್ಕಿಸುವುದು.
ಶಿಕ್ಷಣ ಇಲಾಖೆ
- ಪ್ರಾಥಮಿಕ ಶಾಲೆಯಿಂದ ಕಾಲೇಜ್‍ವರೆಗೆ ಉಚಿತ ಶಿಕ್ಷಣ
- ಬಿಸಿ ಊಟದ ವ್ಯವಸ್ಥೆ
- ಸಮವಸ್ತ್ರ, ಪಠ್ಯ ಪುಸ್ತಕ, ಸೈಕಲ್ ಯೋಜನೆ
- ವಿಧ್ಯಾರ್ಥಿನಿಯರಿಗೆ ಹಾಜರಾತಿಗಾಗಿ ಪ್ರೋತ್ಸಾಹ ಧನ
ನಗದು ಬಹುಮಾನ :-
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯಕ್ರಮ ಅನುಷ್ಠಾನದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.60 ರಿಂದ 74.99 ವರೆಗೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ.5000/- ಮತ್ತು ಶೇ.75% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ.10,000/- ಬಹುಮಾನ ದನವನ್ನು ವಿತರಿಸಲಾಗುವುದು.
- ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಪಿಯುಸಿ/10+2 ತರಗತಿ ಪರೀಕ್ಷೆಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಪದವಿ ಕೋರ್ಸ್‍ಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದಲ್ಲಿ ಅಂತವರಿಗೆ ವಾರ್ಷಿಕ ರೂ.10,000/- ಸ್ನಾತಕ್ಕೋತ್ತರ ಪದವಿಯ ವಿದ್ಯಾಬ್ಯಾಸಕ್ಕಾಗಿ ರೂ.20,000/- ಮತ್ತು ನಂತರದ ಉನ್ನತ ಶಿಕ್ಷಣಕ್ಕಾಗಿ ರೂ.30,000/-ಗಳ ವಿದ್ಯಾರ್ಥಿ ವೇತನ ನೀಡಲಾಗುವುದು.
ಅರ್ಹತೆ:- 10+2 ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆಯಲ್ಲಿ ಶೇ.80% ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.
ವಿಧಾನ:- ಅರ್ಜಿ ಕರೆದಾಗ ಸಂಸ್ಥೆಯ ಮುಖ್ಯಸ್ಥರ ಮೂಲಕ ಭರ್ತಿ ಮಾಡಿದ ಅರ್ಜಿಗಳನ್ನು ಕೇಂದ್ರ ಸರ್ಕಾರದ ಎಮ್.ಹೆಚ್.ಆರ್.ಡಿ.ಗೆ ಅಂಕಪಟ್ಟಿಯ ಜೆರಾಕ್ಸ್ ಮತ್ತು ಜಾತಿ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ಕಳುಹಿಸುವುದು.
ಕೃಷಿ ಮತ್ತು ತೋಟಗಾರಿಕೆ ಇಲಾಖೆ
ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿಯ ರೈತರಿಗೆ ದೊರೆಯುವ ಸೌಲಭ್ಯಗಳು:-
ಶೇಕಡ 90 ರಷ್ಟು ಸಹಾಯಧನದ ಅಡಿ ಕೆಳಕಣಿಸಿದ ಗರಿಷ್ಠ ಮೀತಿಯಲ್ಲಿ :-
- ಆಧುನಿಕ ಕೃಷಿ ಉಪಕರಣಗಳ (ಬಹುಬೆಳೆ ಒಕ್ಕಣಿ ಯಂತ್ರ, ಕಳೆ ತೆಗೆಯುವ ಯಂತ್ರ ಇತ್ಯಾಧಿ) ಪೂರೈಕೆಗೆ ರೂ. 1.00,000 ಗಳು
- ಪವರ್ ಟೀಲ್ ಗಳ ಪೂರೈಕೆಗೆ ರೂ. 1,00,000 ಗಳು
- ಹನಿ ನೀರಾವರಿ ಘಟಕಕ್ಕಾಗಿ ರೂ. 98,550=00 ಗಳು
- ವ್ಯಯಕ್ತಿಕ ಒಕ್ಕಣಿ ಕಣಕ್ಕೆ ರೂ. 45,000 ಗಳು, ಸಮುದಾಯ ಒಕ್ಕಣಿ ಕಣಕ್ಕಾಗಿ ರೂ. 90,000 ಗಳು
- ಸಬ್‍ಮರ್ಸಿಬಲ್ (ಜಲಾಂತರಗಮಿ) ಪಂಪ್‍ಸೆಟ್‍ಗಳ ಪೂರೈಕೆಗೆ ರೂ. 58,500=00 ಗಳು
- ಲಘು ನೀರಾವರಿ ಘಟಕಗಳ ವಿತರಣೆ ರೂ. 24,550=00 ಗಳು
- ಡೀಸೆಲ್/ಸೀಮೆಎಣ್ಣೆ ಪಂಪ್‍ಸೆಟ್ ಪೂರೈಕೆಗೆ ರೂ. 20.000=00 ಗಳು
- ನೀರು ದೊರೆಯುವ ಸ್ಥಳದಿಂದ ಕ್ಷೇತ್ರಕ್ಕೆ ನೀರು ಹರಿಸುವ ಪೈಪುಗಳ ಪೂರೈಕೆಗೆ ರೂ. 15,000
- ಧಾನ್ಯ ಸಂಗ್ರಹಣ ಕಣಜಗಳ ಪೂರೈಕೆಗೆ ರೂ.2500, ಕೈಚಾಲಿತ ಸಸ್ಯ ಸಂರಕ್ಷಣ ಉಪಕರಣಗಳಿಗೆ ರೂ. 3000, ಹಾಗೆಯೇ ಟಾರ್ಪಾಲಿನ್‍ಗಳ ಪೂರೈಕೆಗೆ ರೂ. 250 ಸಹಯಧನ ನೀಡಲಾಗುತ್ತದೆ.
- ಶೇಕಡ 100 ರಷ್ಟು ಸಹಾಯಧನದ ಅಡಿಯಲ್ಲಿ, ಗುಣಮಟ್ಟದ ಬಿತ್ತನೆ ಬೀಜ ರಾಸಾಯನಿಕ ಗೊಬ್ಬರ ಸಸ್ಯ ಸಂರಕ್ಷಣ ಔಷಧಿಗಳ ಪೂರೈಕೆಗೆÀ ಪ್ರತಿ ಹೇಕ್ಟರ್‍ಗೆ ರೂ. 4.000 ಗಳು. ವಿಶೇಷವಾಗಿ ಮುಸುಕಿನ ಜೊಳ
ರೈತರಿಗಾಗಿ ಪರಿಹಾರಗಳು ಯೋಜನೆಗಳು:-
ರೈತರಿಗಾಗಿ ಯೋಜನೆಗಳು
ರೈತರಿಗಾಗಿ ಪರಿಹಾರಗಳು ಯೋಜನೆಗಳು:-
- ಪ್ರಕೃತಿ ವಿಕೋಪ ಮತ್ತು ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯದೆ ನಷ್ಟ ಅನುಭವಿಸಿ ಸರ್ಕಾರಿ ಸ್ವಾಮ್ಯದ ಅಥವಾ ಮಾನ್ಯತೆ ಪಡೆದ ಸಾಲ ನೀಡಿದ ಸಂಸ್ಥೆಗಳಿಂದ ಪಡೆದ ಸಾಲವನ್ನು ತಿರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಂಡರೆ ಮೃತನ ಕುಟುಂಬಕ್ಕೆ ರೂ. 1,00,000 ಸಹಯ ಧನ ಒದಗಿಸಲಾಗುವುದು.
- ಕೃಷಿ ಸಂಬಂಧಿತ ಕೆಲಸ ಮಾಡುವಾಗ ಆಕಸ್ಮಿಕಗಳಿಂದ ಮರಣ ಹೊಂದಿದ ರೈತರು ಹಾಗೂ ಕೃಷಿ ಕಾರ್ಮಿಕರ ಕುಟುಂಬಕ್ಕೆ ರೂ. 1,00,000
- ಬೆಂಕಿ ಆಕಸ್ಮಿಕಗಳಿಂದ ಹುಲ್ಲು ಮೆದೆ/ಬಣವೆಗಳ ನಷ್ಠವದಲ್ಲಿ ರೂ.10,000
ಇತರೆ ಸೌಲಭ್ಯಗಳು:-
- ಬಡ್ಡಿರಹಿತ ಬೆಳೆ ಸಾಲ ಯೋಜನೆ
- ರಾಷ್ಟ್ರೀಯ ಕೃಷಿ ವಿಮಾ ಯೋಜನೆ
- ಜಿಲ್ಲಾ ವಲಯ ಸಾವಯವ ಗೊಬ್ಬರಗಳ ಯೋಜನೆ.
- ಜಿಲ್ಲಾ ಕೃಷಿ ತರಬೇತಿ ಕೆಂದ್ರಗಳು
- ಕೃಷಿ ಪ್ರಶಸ್ತಿ ಯೋಜನೆ: ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಯೋಜನೆಗಳು
- ಭೂ ಚೇತನ ಯೋಜನೆ ಅಡಿ ಮಣ್ಣು ಪರೀಕ್ಷೆ ಮತ್ತು ಪೋಷಕಾಂಶ, ಮಳೆ ನೀರು ನಿರ್ವಹಣೆ, ಸುಧಾರಿತ ತಳಿಗಳು, ತಾಂತ್ರೀಕತೆ ಇತ್ಯಾದಿಗಳ ಮಾಹಿತಿ ಮತ್ತು ತರಬೇತಿ
- ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ ಧನ
- ರೈತರ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ
ಹೆಚ್ಚಿನ ಸಂಪರ್ಕಕ್ಕಾಗಿ ಕೃಷಿ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಕಛೇರಿಗಳಿಗೆ ಸಂಪರ್ಕಿಸುವುದು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ:-
- ಸುತ್ತು ನಿಧಿ ರೂ. 5000/- ಗಳು ಮತ್ತು ತರಬೇತಿ
- ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಪ್ರೋತ್ಸಹ ಧನ ರೂ. 75000/-ದಿಂದ 1 ಲಕ್ಷ ರೂಪಾಯಿಗಳ ವರೆಗಿನ ಉಳಿತಯಕ್ಕೆ 15000/- ಮತ್ತು ರೂ. 1 ಲಕ್ಷಕ್ಕಿಂತ ಮೇಪಟ್ಟ ಉಳಿತಾಯಕ್ಕೆ ರೂ. 20,000/-
- ಪರಿಶಿಷ್ಟ ಜಾತಿ ನಿಗಮದಿಂದ ಸಾಲ ಸೌಲಭ್ಯ, ಪಾಶು ಸಂಗೋಪನ ಇಲಾಖೆಯಿಂದ ಗಿರಿರಾಜ ಕೋಳಿ
ಸಮಾಜದಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಹೆಚ್ಚಿಸಲು ಮತ್ತು ಹೆಣ್ಣು ಮಗುವಿನ ಮರಣ ತಡೆಯಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸುವ ಹೆಣ್ಣು ಮಗುವಿನ ಹೆಸರಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಅಡಿ ರೂ. 1 ಲಕ್ಷ ಗಳ ಠೇವಣಿ ಸರ್ಟಿಫಿಕೆಟ್ ನೀಡಲಾಗುವುದು.
- ವಿಧುವೆಯರಿಗೆ ಸಹಾಯಧನ ಯೋಜನೆ:-
ನಿರ್ಗತಿಕ ವಿಧವೆ ಹಾಗೂ ದೇವದಾಸಿಯರ ವಿವಾಹಕ್ಕೆ ರೂ. 10.000 ಸಹಾಯಧನ ಅದರಲ್ಲಿ ರೂ. 5000/-ಗಳು ವಿವಾಹದ ಖರ್ಚುಗಳಿಗೆ ಮತ್ತು ರೂ. 5000/- ಗಳು ಮಹಿಳೆಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಉಳಿತಾಯ ಠೇವಣಿ.
ಈ ಯೋಜನೆ ಅಡಿ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಗರ್ಭಿಣಿ ಸ್ತ್ರೀಯರಿಗೆ ಪೋಷಕಾಂಶ ಒದಗಿಸುವುದು.
ಹೆಚ್ಚಿನ ಸಂಪರ್ಕಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಕಛೇರಿಯಲ್ಲಿ ಸಂಪರ್ಕಿಸುವುದು.
ಕಂದಾಯ ಇಲಾಖೆ
ಕಂದಾಯ ಇಲಾಖೆ:-
- ನಿರ್ಗತಿಕ ವೃದ್ದರಿಗೆ ಮಾಸಿಕ ವೃದ್ದಾಪ್ಯ ವೇತನ
- ಶೇಕಡ 40 ರಷ್ಟು ಅಂಗ ನ್ಯೋನ್ಯತೆಯುಳ್ಳವರಿಗೆ ಮಾಸಿಕ ಅಂಗವೈಕಲ್ಯ ವೇತನ
- ನಿರ್ಗತಿಕ ವಿಧವೆಯರಿಗೆ ಮಾಸಿಕ ವಿಧುವಾ ವೇತನ
- ಮನಸ್ವಿನಿ ಯೋಜನೆಯಡಿ 40 ರಿಂದ 64 ವರ್ಷದೊಳಗಿನ ಸಂಕಷ್ಟದಲ್ಲಿರುವ ಅವಿವಾಹಿತ/ವಿಚ್ಚೇಧಿತ ಮಹಿಳೆಯರ ಆರ್ಥಿಕ ಭದ್ರತೆಗಾಗಿ ಮಾಸಾಶನ ನೀಡಲಾಗುತ್ತದೆ.
- ಸಿಡಿಲು, ನೆರೆಹಾವಳಿ, ಬರಗಾಲ, ಬೆಂಕಿ ಅನಾಹುತ, ಭೂಕಂಪ ಇತ್ಯಾದಿ ಪ್ರಕೃತಿ ವಿಕೋಪದಿಂದ ಮೃತ ಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪ್ರಕೃತಿ ವಿಕೋಪ ನಿಧಿಯಿಂದ ಸಹಾಯಧನ ಯೋಜನೆ.
- ಕೇಲಸ ಮಾಡುವ ಸಂಧರ್ಭದಲ್ಲಿ ಆಕಸ್ಮಿಕವಾಗಿ ವ್ಯಕ್ತಿ ಮೃತ ಪಟ್ಟರೆ ಅವರ ಕುಟುಂಬಕ್ಕೆÉ ರಾಷ್ಟ್ರೀಯ ಭದ್ರತ ಯೋಜನೆ ನಿಧಿಯಿಂದ ಸಹಾಯಧನ.
- ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಯು ಮೃತಪಟ್ಟರೆ ಶವ ಸಂಸ್ಕಾರಕ್ಕೆ ಮೃತನ ಕುಟುಂಬಕ್ಕೆ ಶವ ಸಂಸ್ಕಾರ ಭತ್ಯೆ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಕಂದಾಯ ಇಲಾಖೆಯ ತಹಶೀಲ್ದಾರರ ಕಛೇರಿಯನ್ನು ಸಂಪರ್ಕಿಸುವುದು.
ಆರೋಗ್ಯ ಇಲಾಖೆ:-
- ಆರೋಗ್ಯ ತಪಾಸಣಾ ಯೋಜನೆ ಅಡಿ ಉಚಿತ ಔಷಧಿ ಮತ್ತು ಚಿಕಿತ್ಸೆ ಹಾಗೂ ತುರ್ತು ಚಿಕಿತ್ಸೆಗಾಗಿ ರೋಗಿಗಳ ಪ್ರಯಾಣಕ್ಕೆ 108 ಆಂಬ್ಯುಲೆನ್ಸ್ ಸೇವೆÉ.
- ಜನನಿ ಸುರಕಾ ಯೋಜನೆ ಅಡಿ ಗರ್ಬೀಣಿ ತಪಾಸಣೆ, ಟಿ.ಟಿ ಚುಚುಮದ್ದು, ಕಬ್ಬಿಣಾಂಶ ಮಾತ್ರೆ.
- ಪ್ರಸೂತಿ ಆರೈಕೆ ಯೋಜನೆಯಡಿ ಪರಿಶಿಷ್ಟ ಜಾತಿಯ ಮಹಿಳೆಯರ ಪ್ರಸೂತಿ ಆರೈಕೆಗಾಗಿ 6 ರಿಂದ 9ನೇ ತಿಂಗಳ ಗರ್ಭವಸ್ಥೆ ಸುರಕ್ಷತೆಗಾಗಿ ರೂ. 1000/- ಮತ್ತು ಹೆರಿಗೆಯ ನಂತರ 48 ಗಂಟೆಯೊಳಗೆ ರೂ.1000/- ಸಹಾಯ ಧನ ನೀಡಲಾಗುವುದು.
- ಮಡಿಲು ಕಾರ್ಯಕ್ರಮ ಅಡಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ಹೆರಿಗೆ, ಬೇಬಿ ಕಿಟ್ ಮತ್ತು ಪ್ರೋತ್ಸಾಹ ಧನ ಸೌಲಭ್ಯ.
- ಕಿಶೋರಿ ಕಾರ್ಯಕ್ರಮದಲ್ಲಿ ಕಿಶೋರಿಯರಿಗೆ ಋತು ಚಕ್ರದ ಸಮಯದಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ನೇಹ ಕ್ಲಿನಿಕ್ ವ್ಯವಸ್ಥೆ ಮತ್ತು ಸ್ಯಾನಿಟರಿ ನ್ಯಾಪ್‍ಕಿನ್ ನೀಡಲಾಗುವುದು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತಯ ಹಲವು ಚಿತ್ರಗಳು
ಪತ್ರ
ಒಡಂಬಡಿಕೆ ಒಪ್ಪಂದದ ಪತ್ರ
ಮೇ|| ---------------------, ಸಂಸ್ಥೆಯ ಅಧ್ಯಕ್ಷ/ಕಾರ್ಯದರ್ಶಿಯಾದ ಶ್ರೀ. ------------ ಆದ ನಾನು ದಿನಾಂಕ: ------ ರಂದು ವಲಯ ಅಭಿವೃದ್ಧಿ ಅಧಿಕಾರಿಗಳು -----------ವಲಯ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಇವರಿಗೆ ಬರೆದುಕೊಟ್ಟ ಒಡಂಬಡಿಕೆ ಒಪ್ಪಂದದ ಪತ್ರ ಏನೆಂದರೆ.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಇವರ ಪತ್ರ ಸಂಖ್ಯೆ: ಕತಾನಿನಿ/ಎ5/ಅ.ಜಾ/ಸಿ.ಆರ್-30/2014-15, ದಿನಾಂಕ: 16.01.2015 ರಲ್ಲಿ ಸೂಚಿಸಿರುವಂತೆ, ಮತ್ತು ಪತ್ರದೊಂದಿಗೆ ಲಗತ್ತಿಸಿರುವ ಅರಿವು ಕಾರ್ಯಕ್ರಮದ ಮಾರ್ಗಸೂಚಿಯಲ್ಲಿ ವಿವರಿಸಿರುವ ಅನುಷ್ಠಾನ ವಿಧಾನಗಳಿಗೆ ಬದ್ಧರಾಗಿ ನಮ್ಮ ಸಂಸ್ಥೆಗೆ ವಹಿಸಲಾದ ತಾಲ್ಲೂಕಿನ ಪ್ರತಿ ತಾಂಡಾದ ಕಾರ್ಯಕ್ರಮವನ್ನು ರೂ. 3000.00(ಮೂರು ಸಾವಿರ)ಗಳ ಅನುದಾನದಲ್ಲಿ ಈ ಕೆಳಕಾಣಿಸಿದಂತೆ ಅನುಷ್ಠಾನಗೊಳಿಸಲು ಮಾಡಿಕೊಂಡು ಒಡಂಬಡಿಕೆ ಒಪ್ಪಂದ.
- ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ, ತಾಂಡಾದ ನಾಯಕ್, ಡಾವೂ, ಕಾರಬಾರಿ ಮತ್ತು ಚುನಾಯಿತ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಭೆಯ ದಿನಾಂಕವನ್ನು 7 ದಿವಸಗಳ ಮುಂಚಿತವಾಗಿ ನಿಗದಿಪಡಿಸಿಕೊಂಡು ವಲಯ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗೆ ಮಾಹಿತಿ ನೀಡಲಾಗುವುದು.
- ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಂಡು ತಾಂಡಾದಲ್ಲಿ ಸಭೆ ನಡೆಸಲು ಅಗತ್ಯವಾಗಿರುವ ಲ್ಯಾಪ್ ಟಾಪ್, ಎಲ್.ಸಿ.ಡಿ ಪ್ರೋಜೆಕ್ಟರ್, ಸಾಕ್ಷ್ಯಚಿತ್ರ ಪದರ್ಶನಕ್ಕಾಗಿ ಬಿಳಿ ಪರದೆ (ಸ್ಕ್ರೀನ್), ಜನರೇಟರ್ ಅಥವಾ ಪವರ್ ಬ್ಯಾಕ್ ಆಪ್ ಬ್ಯಾಟರಿ, ಧ್ವನಿ ವರ್ಧಕ, ಸಾಕ್ಷ್ಯಚಿತ್ರದ ಡಿ.ವಿ.ಡಿಗಳು, ಪ್ರತಿ ತಾಂಡಾದಲ್ಲಿ ಭಾಗವಹಿಸುವವರ ಹೆಸರು ಮತ್ತು ಸÀಹಿಗಾಗಿ ವಹಿ, ಕಾರ್ಯಕ್ರಮದ 2 ಬ್ಯಾನರ್ಸ್ , ತಾಂಡಾದ ಮಾಹಿತಿ ಸಂಗ್ರಹಣಾ ನಮೂನೆ, ಪ್ರತಿ ಸಭೆಯಲ್ಲಿ ಭಾಗವಹಿಸಿದವರ ಭಾವಚಿತ್ರ ತೆಗೆಯಲು ಕ್ಯಾಮರ, ಸಾಕ್ಷ್ಯಚಿತ್ರ ಪ್ರದರ್ಶನಕ್ಕಾಗಿ ನುರಿತ ತಾಂತ್ರಿಕ ಸಿಬ್ಬಂದಿ, ವಾಹನದಲ್ಲಿ ಪ್ರಯಾಣ ಮಾಡಿ ನಿಗಧಿ ಪಡಿಸಿದ ದಿನಾಂಕದಂದು ನಿಗಧಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ತಾಂಡಾವನ್ನು ತಲುಪುತ್ತೇವೆ.
- ಎಲ್ಲಾ ವ್ಯವಸ್ಥೆಯೊಂದಿಗೆ ಸಭೆಯ ಕಾರ್ಯಕಲಾಪಗಳನ್ನು ಸಂಜೆ 5.00 ಗಂಟೆಗೆ ಪ್ರಾರಂಭಿಸಿ 3-4 ಗಂಟೆÀ ನಡೆಸಲಾಗುತ್ತದೆ.
- ನಿಗಮ ಮತ್ತು ಅಭಿವೃಧ್ಧಿ ಇಲಾಖೆಗಳ ಯೋಜನೆಗಳ ಮಾಹಿತಿಗಳನ್ನು ಪರಿಚಯಿಸುವುದು.
- ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿಕೊಳ್ಳುವ ವಿಧಾನ ಕುರಿತ ಮಾಹಿತಿ ನೀಡಿ ವಿವರದ ಕಾಗದವನ್ನು ನೀಡಲಾಗುವುದು.
- ಅರಣ್ಯ ಪ್ರದೇಶದ ತಾಂಡಾಗಳಲ್ಲಿ ಮಾತ್ರ ಅರಣ್ಯ ಹಕ್ಕು ಕಾಯ್ದೆ 2006ರ ಅನ್ವಯ ತಾಂಡಾದಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸುವ ಕುರಿತು ಮಾಹಿತಿ ನೀಡಿ ಸಂಬಂಧಿಸಿದ ವಿವರದ ಬುಕ್ ಲೇಟ್ ನೀಡುವುದು.
- ರಾತ್ರಿ ಸಮಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ (5 ಸಾಕ್ಷ್ಯಿಚಿತ್ರಗಳಲ್ಲಿ ಕನಿಷ್ಠ 3 ಸಾಕ್ಷ್ಯಚಿತ್ರಗಳ ಪ್ರದರ್ಶನ ಮಾಡಲಾಗುವುದು.
- ಕಾರ್ಯಕ್ರಮ ಅನುಷ್ಠಾನದ ಸಮಯದಲ್ಲಿ ನಿಗಮದಿಂದ ನೀಡಲಾಗುವ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುತ್ತೆವೆ.
- ಯಾವುದೇ ಕಾನೂನಿನ ವಿವಾದ ಉಂಟಾದಂಥ ಸಂದರ್ಭದಲ್ಲಿ ಅದನ್ನು ಬಗೆಹರಿಸಲು ಬೆಂಗಳೂರಿನ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
- 5 ತಾಂಡಾಗಳ ಗುಚ್ಚದ ಕಾರ್ಯಕ್ರಮ ಪೂರ್ಣಗೊಳಿಸಿ ವರದಿಯೊಂದಿಗೆ ಪ್ರತಿ ತಾಂಡಾದ ಕಾರ್ಯಕ್ರಮದ 6-7 ಪೋಟೋಗಳನ್ನು ಮತ್ತು ಬಿಲ್ಲನ್ನು ಸಲ್ಲಿಸಿದ ನಂತರ ಅಭಿವೃದ್ದಿ ಅಧಿಕಾರಿಗಳು ಪ್ರತಿ ತಾಂಡಾದ ಕಾರ್ಯಕ್ರಮಕ್ಕೆ ರೂ. 3000.00(ಮೂರು ಸಾವಿರ)ಗಳಂತೆ, ಶೇ. 2. ರಷ್ಟು ಟಿಡಿಎಸ್ ಕಟ್ಟಾಯಿಸಿ ಪಾವತಿಸುವುದನ್ನು ಒಪ್ಪಲಾಗಿದೆ.
ಈ ಮೇಲಿನ ಎಲ್ಲಾ ಷರತ್ತುಗಳು ಹಾಗೂ ನಿಬಂಧನೆಗಳಿಗೆ ಒಳಪಟ್ಟು ಒಪ್ಪಿ ಸಹಿ ಮಾಡಿರುತ್ತೇನೆ/ಮಾಡಿರುತ್ತೆವೆ
ಸಂಘ/ಸಂಸ್ಥೆಯ ಅಧ್ಯಕ್ಷರ/ಕಾರ್ಯದರ್ಶಿಸಹಿ
ಸಂಘ/ಸಂಸ್ಥೆಯ ಸೀಲ್ ಮತ್ತು ವಿಳಾಸ
ಗೆ, ದಿನಾಂಕ:
ವಲಯ ಅಭಿವೃಧ್ಧಿ ಅಧಿಕಾರಿಗಳು
------------ ವಲಯ,
--------------
ಮಾನ್ಯರೇ,
ವಿಷಯ: ತಾಂಡಾ ವಿಕಾಸ ಸಮಿತಿಯ ನೋಂದಾಣಿ ಕುರಿತು.
*********
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ, ನಮ್ಮ ತಾಂಡಾದ ನಾಯಕ್, ಡಾವೂ, ಕಾರಬಾರಿ ಇವರು------------ದಿನಾಂಕದಂದು ಸಭೆ ಸೇರಿ ---------------ತಾಂಡಾ ವಿಕಾಸ ಸಮಿತಿಯನ್ನು ರಚಿಸಲಾಗಿದೆ. ನಿಗಮದ ನಿರ್ದೇಶನದಂತೆ ನಮ್ಮ ತಾಂಡಾ ವಿಕಾಸ ಸಮಿತಿಯನ್ನು ತಮ್ಮ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಲು ಈ ಕೆಳಗಿನಂತೆ ಮಾಹಿತಿಯನ್ನು ಸಲ್ಲಿಸುತ್ತೀದೆವೆ.
ಕ್ರ.ಸಂ
|
ವಿವರ
|
ಮಾಹಿತಿ
|
1
|
ವಿಕಾಸ ಸಮಿತಿ ನೋಂದಾಯಿಸುವ ತಾಂಡಾದ ಹೆಸರು
|
|
2
|
ನಾಯಕ್ ರವರ ಹೆಸರು
|
|
3
|
ಡಾವೂ ರವರ ಹೆಸರು
|
|
4
|
ಕಾರಬಾರಿ ರವರ ಹೆಸರು
|
|
5
|
ಗ್ರಾಮ ಪಂಚಾಯಿತಿ ತಾಂಡಾದ ಸದಸ್ಯರ ಹೆಸರು
|
|
6
|
ಸಮಿತಿಯ ಸಂಚಾಲಕರ (ವಿದ್ಯಾವಂತ ಯುವಕ) ಹೆಸರು
|
|
7
|
ಸಮಿತಿಯ ಸಹ ಸಂಚಾಲಕರ (ವಿದ್ಯಾವಂತ ಯುವತಿ) ಹೆಸರು
|
|
8
|
ತಾಂಡಾ ವಿಕಾಸ ಸಮಿತಿಯ ವಿಳಾಸ
|
|
ನಮ್ಮ ತಾಂಡಾ ವಿಕಾಸ ಸಮಿತಿಯನ್ನು ನೋಂದಾಯಿಸಲು ರೂ.100.00 ಗಳನ್ನು ಅರ್ಜಿಯೊಂದಿಗೆ ಸಲ್ಲಿಸಲಾಗಿದ್ದು. ತಮ್ಮ ಕಛೇರಿಯಲ್ಲಿ ನೋಂದಾಯಿಸಿಕೊಂಡು ನೋಂದಾಣಿ ಪ್ರಮಾಣ ಪತ್ರವನ್ನು ನೀಡಲು ತಮ್ಮಲ್ಲಿ ಕೋರಿದೆ.
ತಮ್ಮ ವಿಶ್ವಾಸಿ
ಸಂಚಾಲಕರು
ತಾಂಡಾ ವಿಕಾಸ ಸಮಿತಿ,
--------- ತಾಂಡಾ
ನಮೂನೆ
ಅರಣ್ಯ ಭೂಮಿಯ ಹಕ್ಕುಗಳ ಕ್ಲೇಮಿನ ನಮೂನೆ
(ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ನಿಯಮಗಳು 2008 ರ (1) (ಎ) ನಿಯಮವನ್ನು ನೋಡಿ)
ಕ್ರ.ಸಂ.
|
ವಿವರ
|
|
1
|
ಕ್ಲೇಮುದಾರನ (ರ) ಹೆಸರು
|
|
2
|
ಗಂಡ/ ಹೆಂಡತಿಯ ಹೆಸರು
|
|
3
|
ತಂದೆ/ ತಾಯಿಯ ಹೆಸರು
|
|
4
|
ವಿಳಾಸ
|
|
5
|
ಗ್ರಾಮ
|
|
6
|
ಗ್ರಾಮ ಪಂಚಾಯಿತಿ
|
|
7
|
ತಹಶೀಲ್/ ತಾಲ್ಲೂಕು
|
|
8
|
ಜಿಲ್ಲೆ
|
|
9
|
(ಎ) ಅನುಸೂಚಿತ ಬುಡಕಟ್ಟು (ಪ್ರಮಾಣ ಪತ್ರದ ಅಧಿಪ್ರಮಾಣಿತ ಹೌದು/ ಇಲ್ಲ ಪ್ರತಿಯನ್ನು ಲಗತ್ತಿಸಿ)
|
ಹೌದು/ ಇಲ್ಲ
|
(ಬಿ)ಇತರ ಪಾರಂಪರಿಕ ಅರಣ್ಯ ವಾಸಿಯಾಗಿದ್ದರೆ (ಪ್ರಮಾಣ ಪತ್ರದ ಅಧಿನಿಯಮ ಪ್ರಮಾಣಿತ ಪ್ರತಿಯನ್ನು ಲಗತ್ತಿಸಿ) ಮತ್ತು ಜಾತಿ ಹಾಗೂ ಆದಾಯ ಪತ್ರದ ಪ್ರತಿಯನ್ನು ಲಗತ್ತಿಸಿ)
|
ಹೌದು/ ಇಲ್ಲ
|
10
|
ಕುಟುಂಬದಲ್ಲಿನ ಇತರ ಸದಸ್ಯರ ಹೆಸರು ಮತ್ತು ವಯಸ್ಸು (ಅವಲಂಬಿತ ಮಕ್ಕಳು ಮತ್ತು ವಯಸ್ಕರೂ ಸೇರಿದಂತೆ)
|
|
ಕ್ರ.ಸಂ.
|
ಹೆಸರು
|
ವಯಸ್ಸು ಕುಟುಂಬದ ಹಿರಿಯನ/ಳ ಜೊತೆ ಸಂಬಂಧ
|
|
|
|
|
ಸ್ವರೂಪ
ಭೂಮಿಯ ಮೇಲಿನ ಕ್ಲೇಮಿನ ಸ್ವರೂಪ
11
|
ಸ್ವಾಧೀನತೆಯಲ್ಲಿರುವ ಅರಣ್ಯ ಭೂಮಿಯ ವಿಸ್ತೀರ್ಣ
|
|
|
ಎ) ವಾಸಕ್ಕಾಗಿ
|
|
|
ಬಿ) ಸ್ವಂತ-ಸಾಗುವಳಿಗಾಗಿ ಯಾವುದಾದರೂ ಇದ್ದರೆ
|
|
12
|
ವಿವಾಧಿತ ಭೂಮಿಗಳು ಯಾವುದಾದರೂ ಇದ್ದರೆ (ಅಧಿನಿಯಮದ 3(1) (ಎಫ್) ಪ್ರಕರಣವನ್ನು ನೋಡಿ)
|
|
13
|
ಪಟ್ಟಾಗಳು/ಗೇಣಿಗಳು/ಮಂಜೂರಾತಿಗಳು, ಯಾವುದಾದರೂ ಇದ್ದರೆ (ಅಧಿನಿಯಮದ 3 (1) (ಜಿ) ಪ್ರಕರಣವನ್ನು ನೋಡಿ)
|
|
14
|
ಸ್ಥಳದಲ್ಲಿಯೇ ಪುನರ್ವಸತಿಗಾಗಿ ಭೂಮಿ ಅಥವಾ ಪರ್ಯಾಯ ಭೂಮಿ ಯಾವುದಾದರೂ ಇದ್ದರೆ (ಅಧಿನಿಯಮದ 3 (1) (ಎಂ) ಪ್ರಕರಣವನ್ನು ನೋಡಿ)
|
|
15
|
ಭೂ ನಷ್ಟ ಪರಿಹಾರ ನೀಡದೆ ಯಾವ ಭೂಮಿಯಿಂದ ಸ್ಥಳಾಂತರ ಮಾಡಲಾಗಿತ್ತೋ ಆ ಭೂಮಿ (ಅಧಿನಿಯಮದ 4 (8)ನೇ ಪ್ರಕರಣವನ್ನು ನೋಡಿ)
|
|
16
|
ಅರಣ್ಯ ಗ್ರಾಮಗಳಲ್ಲಿನ ಭೂಮಿಯ ವಿಸ್ತೀರ್ಣ, ಯಾವುದಾದರೂ ಇದ್ದರೆ (ಅಧಿನಿಯಮದ 3 (1) (ಹೆಚ್) ಪ್ರಕರಣವನ್ನು ನೋಡಿ)
|
|
17
|
ಯಾವುದೇ ಇತರ ಪಾರಂಪರಿಕ ಹಕ್ಕು, ಯಾವುದಾದರೂ ಇದ್ದರೆ (ಅಧಿನಿಯಮದ 3(1) (ಐ) ಪ್ರಕರಣವನ್ನು ನೋಡಿ)
|
|
18
|
ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪಾಸ್‍ಪೋರ್ಟ್, ಮನೆ ತೆರಿಗೆ ರಸೀದಿಗಳು, ಅಧಿವಾಸದ ಪ್ರಮಾಣ ಪತ್ರಗಳಂತಹ ಅಧಿಕೃತ ಯಾವುದಾದರೂ ಸರ್ಕಾರಿ ದಾಸ್ತಾವೇಜುಗಳನ್ನು ಹೊಂದಿರುವುದು.
|
|
19
|
ಸಮರ್ಥಿಸುವ ಸಾಕ್ಷ್ಯ (ನಿಯಮ 13 ನೋಡಿ)
|
|
20
|
ಯಾವುದೇ ಇತರೆ ಮಾಹಿತಿ
|
|
21
|
ಕ್ಲೇಮುದಾರರ ಗುರುತಿನ ಚೀಟಿ (ಅನುಬಂಧ-1ಎ) ಯನ್ನು ಲಗತ್ತಿಸುವುದು.
ಹೌದು/ ಇಲ್ಲ
|
|
ಕ್ಲೇಮುದಾರನ (ರ) ಸಹಿ/ ಹೆಬ್ಬೆರಳು ಗುರುತು
ಗುರುತಿನ ಚೀಟಿ
ಅನುಬಂಧ-1ಎ
ಕ್ಲೇಮುದಾರರ ಗುರುತಿನ ಚೀಟಿ
(ಗ್ರಾಮದ 70 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ವ್ಯಕ್ತಿಯಿಂದ ದೃಢೀಕೃತವಾಗಬೇಕು)
ಪಾಸ್ ಪೋರ್ಟ್ ಸೈಜ್
ಫೋಟೋ ಅಂಟಿಸುವುದು
ಹೆಸರು :
ಗಂಡನ ಹೆಸರು :
ಮನೆ ನಂ :
ವಯಸು :
ಗ್ರಾಮ :
ಶ್ರೀಮತಿ/ಶ್ರೀ._______________________ ಇವರು ಉಳುಮೆ ಮಾಡುತ್ತಿರುವ ಸುಮಾರು ____ ಎಕರೆ ಅರಣ್ಯ ಭೂಮಿಯು ಮೂರು ತಲೆಮಾರು ಹಿಂದಿನಿಂದ ಪಿತ್ರಾರ್ಜಿತವಾಗಿ ಉಳುಮೆ ಮಾಡುತ್ತಿರುವರು ಎಂದು ದೃಢೀಕರಿಸಿ ಪ್ರಮಾಣೀಕರಿಸಲಾಗಿದೆ.
ಹೆಸರು ಮತ್ತು ಸಹಿ
ಪ್ರಮಾಣ ಪತ್ರ
ಅರ್ಜಿದಾರರ ಪ್ರಮಾಣ ಪತ್ರ
_____________ತಾಲ್ಲೂಕು, ___________ಹೋಬಳಿಯ ________________ ಗ್ರಾಮದ ನಿವಾಸಿಯಾದ ಶ್ರೀಮತಿ/ಶ್ರೀ______________________________________ ಅಂದಾಜು ಪ್ರಾಯ _____ ಆದ ನನ್ನ ಪ್ರಮಾಣಿಸುವ ಹೇಳಿಕೆ ಏನೆಂದರೆ,
ಸದರಿ _______________ಗ್ರಾಮದಲ್ಲಿ ನಮ್ಮ ಕುಟುಂಬದವರು _______ನೇ ಇಸ್ವಿಗಿಂತ ಮೊದಲಿನಿಂದಲೆ ವಾಸವಿದ್ದು __________ಗ್ರಾಮದಲ್ಲಿ ನಾನು ಜೀವನೋಪಾಯಕ್ಕಾಗಿ ____ ತಲೆಮಾರುಗಳ ಹಿಂದಿನಿಂದ ಸಾಗುವಳಿ ಮಾಡಿದ ಅರಣ್ಯ ಪ್ರದೇಶವು _______________ ಗ್ರಾಮದ ರಿ.ಸ.ನಂ.__________ ರಲ್ಲಿದ್ದು, ಅಂದಾಜು ____________ ಪ್ರದೇಶದಲ್ಲಿರುತ್ತೇವೆ. ಇದರ ಚೆಕ್ ಬಂದಿ ವಿವರ ಈ ಕೆಳಗಿನಂತೆ ಇರುತ್ತದೆ.
ಪೂರ್ವಕ್ಕೆ –
ಪಶ್ಚಿಮಕ್ಕೆ –
ಉತ್ತರಕ್ಕೆ –
ದಕ್ಷಿಣಕ್ಕೆ –
ಆದುದರಿಂದ ಈ ಮೇಲಿನ ಅರಣ್ಯ ಪ್ರದೇಶವನ್ನು ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ 2006 ರಂತೆ ಹಕ್ಕು ಪತ್ರ ನೀಡಬೇಕಾಗಿ ವಿನಂತಿಸುತ್ತೇನೆ. ಈ ಮೇಲಿನ ಚೆಕ್ ಬಂದಿಯಂತೆ ಇರುವ ವಿಸ್ತೀರ್ಣದ ಹೊರತು ಪಡಿಸಿ ಇನ್ನು ಮುಂದಿನ ಯಾವುದೇ ಕಾರಣದಿಂದಲೂ ಅರಣ್ಯ ಭೂಮಿಯನ್ನು ಹೊಸದಾಗಿ ಒತ್ತುವರಿ ಮಾಡುವುದಿಲ್ಲವೆಂದು ಹಾಗೂ ಅರಣ್ಯ ಪರಿಸರ ಮತ್ತು ಅರಣ್ಯ ಪ್ರಾಣಿ/ಜೀವಿಗಳಿಗೆ ಯಾವುದೇ ರೀತಿ ತೊಂದರೆ/ಧಕ್ಕೆ/ಹಾನಿ ಯಾಗದಂತೆ ಉಳುಮೆ ಮಾಡುತ್ತಿರುವುದಾಗಿ ಈ ಮೂಲಕ ಪ್ರಮಾಣೀಕರಿಸುತ್ತೇನೆ.
ಗ್ರಾಮ:
ಸ್ಥಳ:
ದಿನಾಂಕ: ಅರ್ಜಿದಾರರ ಸಹಿ
ಸಮಿತಿ ರಚನೆ
ಅರಣ್ಯ ಹಕ್ಕು ಸಮಿತಿ ರಚನೆ
ದಿನಾಂಕ: __________ ರಂದು ______________ ಗ್ರಾಮದ ಗ್ರಾಮ ಸಭೆಯಲ್ಲಿ ಅರಣ್ಯ ಹಕ್ಕು ಸಮಿತಿಯನ್ನು ಈ ಕೆಳಗಿನಂತೆ ರಚಿಸಲಾಗಿದೆ.
ಕ್ರ.ಸಂ.
|
ಹೆಸರು
|
ಪದನಾಮ
|
1
|
|
ಅಧ್ಯಕ್ಷರು
|
2
|
|
ಸದಸ್ಯರು
|
3
|
|
ಸದಸ್ಯರು
|
4
|
|
ಸದಸ್ಯರು
|
5
|
|
ಸದಸ್ಯರು
|
6
|
|
ಸದಸ್ಯರು
|
7
|
|
ಸದಸ್ಯರು
|
8
|
|
ಸದಸ್ಯರು
|
9
|
|
ಸದಸ್ಯರು
|
10
|
|
ಸದಸ್ಯರು
|
11
|
|
ಸದಸ್ಯರು
|
12
|
|
ಸದಸ್ಯರು
|
13
|
|
ಸದಸ್ಯರು
|
14
|
|
ಸದಸ್ಯ ಕಾರ್ಯದರ್ಶಿಗಳು
|
ಅರಣ್ಯ ಹಕ್ಕು ಸಮಿತಿಯು ಅರಣ್ಯ ಹಕ್ಕು ಕ್ಲೇಮುದಾರರ ಅರ್ಜಿಗಳನ್ನು ಸ್ವೀಕರಿಸುವ, ಪರಿಶೀಲಿಸುವ, ಕ್ಷೇತ್ರ ಭೇಟಿ ನೀಡಿ ಪರಿಶೀಲಿಸುವ ಮತ್ತು ಅರಣ್ಯ ಹಕ್ಕು ಮಾನ್ಯ ಮಾಡುವ ತೀರ್ಮಾನ ಮತ್ತು ಶಿಫಾರಸ್ಸು ಮಾಡುವ ಕಾರ್ಯವನ್ನು ನಿರ್ವಹಿಸುವಂತೆ ತೀರ್ಮಾನಿಸಲಾಯಿತು.
ಕಾರ್ಯದರ್ಶಿ ಅಧ್ಯಕ್ಷರು
ಸ್ವೀಕೃತಿ
ನಮೂನೆ-2
ಅರ್ಜಿ ಪಡೆದ ಬಗ್ಗೆ ಸ್ವೀಕೃತಿ
ಶ್ರೀಮತಿ/ಶ್ರೀ._________________________________ ಇವರು ಅರಣ್ಯ ಹಕ್ಕು ಸಂಬಂಧ ಸಲ್ಲಿಸಿರುವ ಅರ್ಜಿಯನ್ನು ದಿನಾಂಕ:__________ ರಂದು ಸ್ವೀಕರಿಸಿ ಕ್ಲೇಮುಗಳ ಪಟ್ಟಿಗೆ ಸೇರಿಸಿದ್ದು, ಕ್ರಮ ಸಂಖ್ಯೆ _____ ಆಗಿರುತ್ತದೆ.
ಪಟ್ಟಿ
ಕ್ಲೇಮುದಾರರ (ನೊಂದಾಯಿತ) ಪಟ್ಟಿ
(ಈ ಕೆಳಗಿನ ಮಾದರಿ ನಮೂನೆಯನ್ನು ರಿಜಿಸ್ಟರ್ (ವಹಿ) ಯಲ್ಲಿ ಕಾಲಂಗಳನ್ನು ಮಾಡಿ ಬರೆಯುವುದು)
ಕ್ರ.
ಸಂ.
|
ಅರ್ಜಿದಾರರ ಹೆಸರು
|
ಅರ್ಜಿ ನಮೂನೆ-1,
1ಎ, 1ಬಿ
|
ಸಾಕ್ಷ್ಯಾದಾರಗಳು
|
ಷರಾ
|
|
|
|
|
|
|
|
|
|
|
ಕಾರ್ಯದರ್ಶಿ
ಹಕ್ಕು ಸಮಿತಿ
ಪರಿಶೀಲನ ವರದಿ
ಸ್ಥಳ ಪರಿಶೀಲನ ವರದಿ
ದಿನಾಂಕ:
ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕು ಮಾನ್ಯ ಮಾಡುವ) ಅಧಿನಿಯಮ -2006 (2007 ರ2) ಮತ್ತು ನಿಯಮಗಳು – 2008 ರಲ್ಲಿ ನೀಡಿದ ಅವಕಾಶಗಳನ್ವಯ ಗ್ರಾಮ ಪಂಚಾಯಿತಿ ________________ ಇವರಿಂದ ಅನುಮೋದಿತವಾಗಿ ರಚಿತವಾದ ______________ ಗ್ರಾಮದ ಅರಣ್ಯ ಹಕ್ಕು ಸಮಿತಿಯವರು ದಿನಾಂಕ:_____________ರಂದು ಹೊರಡಿಸಿದ ಪ್ರಕಟಣೆಯನ್ವಯ _________________ ಗ್ರಾಮದ ಶ್ರೀಮತಿ/ಶ್ರೀ._________________________________ಇವರ ಅರ್ಜಿಯು ಸ್ವೀಕೃತವಾಗಿದೆ.
ಸದರಿ ಅರ್ಜಿದಾರರು ಸ್ಥಳ ಪರಿಶೀಲನೆ ಸಮಯದಲ್ಲಿ ಹಾಜರಿದ್ದು, ತಾವು ಸಾಗುವಳಿ ಮಾಡಿದ ಕ್ಷೇತ್ರದ ಬಗ್ಗೆ ಅರಣ್ಯ ಹಕ್ಕು ಸಮಿತಿಗೆ ವಿವರಣೆ ನೀಡಿದರು.
ಅರ್ಜಿದಾರರಾದ _________________________________________ ಇವರು ಸಾಗುವಳಿ ಮಾಡಿದ ರಿ.ಸ.ನಂ._____________ನೇದ್ದರಲ್ಲಿ ಕ್ಷೇತ್ರ ________________ ನೇದ್ದನ್ನು ಪರಿಶೀಲಿಸಲಾಗಿದೆ. ಈ ಜಮೀನಿನ ಚಕ್ಕುಬಂದಿ ಈ ಕೆಳಗಿನಂತಿದೆ.
ಚಕಬಂದಿ
ಪೂರ್ವಕ್ಕೆ :
ಪಶ್ಚಿಮಕ್ಕೆ :
ಉತ್ತರಕ್ಕೆ :
ದಕ್ಷಿಣಕ್ಕೆ :
ಅರ್ಜಿದಾರರು ಸಾಗುವಳಿ ಮಾಡಿದ ಕ್ಷೇತ್ರದಲ್ಲಿ ಪರಿಶೀಲನಾ ಸಮಯದಲ್ಲಿ ____________ ಜಮೀನಿನಲ್ಲಿ ಕೃಷಿಗೆ ಪೂರಕ ಚಟುವಟಿಕೆ ಜರುಗಿದ್ದು ಕಂಡು ಬರುವುದು. ಅನಾದಿ ಕಾಲದಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವ ಕುರುಹು ಕಂಡು ಬರುವುದು. ಅರ್ಜಿದಾರರ ಕುಟುಂಬ ಈ ಕ್ಷೇತ್ರವನ್ನು ಸುಮಾರು _____ ವರ್ಷಗಳ ಮೇಲ್ಪಟ್ಟು ಅವರ ಹಿರಿಯರ ಕಾಲದಿಂದಲೂ ಸಾಗುವಳಿ ಮಾಡಿ ಉಪ ಜೀವನ ಸಾಗಿಸುತ್ತಿರುವುದಾಗಿ ಪರಿಶೀಲನೆಯ ಸಮಯದಲ್ಲಿ ಕಂಡು ಬಂದಿರುತ್ತದೆ.
ಕಾರ್ಯದರ್ಶಿ ಅಧ್ಯಕ್ಷರು
ಸ್ಥಳ ಪರಿಶೀಲನಾ ಸಮಯದಲ್ಲಿ ಹಾಜರಿದ್ದವರ ಹೆಸರು ಹಾಗೂ ಸಹಿ
1) ಶ್ರೀ.
2) ಶ್ರೀ.
3) ಶ್ರೀ.
4) ಶ್ರೀ.
5) ಶ್ರೀ.
ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ