অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಲಸೆ

ವಲಸೆ

  • ಭಾರತಕ್ಕೆ ವಸಲೆ ಹೋಗುವ ಬಡಕಾರ್ಮಿಕರ/ಕೂಲಿಕಾರರ ಸಂಖ್ಯೆ ಹೆಚ್ಚಾಗಿದೆ. ಬಡವಲಸೆಗಾರರು ಕಡೆಗೆ ಅನೌಪಚಾರಿಕ ವಲಯ ಕ್ಷೇತ್ರದಲ್ಲಿ ಹಂಗಾಮಿ ದಿನಕೂಲಿ ಕೆಲಸಗಾರರಾಗಿ ದುಡಿಯುತ್ತಾರೆ. ಈ ಜನತೆಯು ಕಾಯಿಲೆ ಮತ್ತಿತರ ಗಂಡಾಂತರಗಳಿಗೆ ಒಳಗಾಗುತ್ತಾರೆ. ಮತ್ತು ಆರೋಗ್ಯ ಸೌಲಭ್ಯ ಸೇವೆಗಳನ್ನು ಪಡೆಯುವಲ್ಲಿ ಶ್ರಮಪಡುತ್ತಾರೆ. ೨೦೦೧ನೇ ಜನಗಣತಿಯ ಪ್ರಕಾರ ಭಾರತ ದೇಶದಲ್ಲಿಯೇ ೧೪.೪ ಮಿಲಿಯನ್ ಜನರು ಪಟ್ಟಣ ಮತ್ತು ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆರ್ಥಿಕ ಲಾಭವನ್ನುದ್ದೇಶಿಸಿ ವಲಸೆ ಹೋಗುತ್ತಾರೆ. ೨೫ ಲಕ್ಷ ವಲಸೆಗಾರರು ಕೃಷಿಯಲ್ಲಿ ಮತ್ತು ತೋಟಗಳಲ್ಲಿ, ಇಟ್ಟಿಗೆ ಗೂಡುಗಳಲ್ಲಿ, ಕಲ್ಲು ಗಣಿಗಾರಿಕೆಗಳಲ್ಲಿ ಕಟ್ಟಡ ನಿರ್ಮಾಣ ಮತ್ತು ಮೀನು ಸಂಸ್ಕರಣ (ಎನ್.ಸಿ.ಆರ್.ಎಲ್.-೨೦೦೧) ದಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
  • ಹೆಚ್ಚಿನ ವಲಸೆಗಾರರು ಪಟ್ಟಣ ಪ್ರದೇಶದ ಅನೌಪಚಾರಿಕ ಕ್ಷೇತ್ರದ ಪದಾರ್ಥ ತಯಾರಿಕೆ, ಸೇವೆ, ಅಥವಾ ಸಾರಿಗೆ ಕ್ಷೇತ್ರದಲ್ಲಿ ದಿನಕೂಲಿಕಾರರಾಗಿ, ರಿಕ್ಷಾ ಎಳೆಯುವವರಾಗಿ, ಹೊರೆ ಹೊರುವವರಾಗಿ, ಮತ್ತು ತಿರುಗು ವ್ಯಾಪಾರಿಗಳಾಗಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಈ ರೀತಿಯ ದಿನಗೂಲಿ ಕೆಲಸದಿಂದುಂಟಾದ ಹಾಗೂ ಮನೆ, ಸ್ಥಳದ ಬದಲಾವಣೆಯಿಂದಾಗಿ ಉಂಟಾಗುವ ಅಡ್ಡಿ ಆತಂಕಗಳ ತಡೆ/ನಿವಾರಣಾ ಕ್ರಮಗಳನ್ನು ತೆಗೆದುಕೊಳ್ಳುವ ಮಾರ್ಗೋಪಾಯ ಕಾಣದೆ ಅವರು ತೊಡಗಿಕೊಂಡಿರುವ ಕೆಲಸದ ಅನೌಪಚಾರಿಕ ಕೆಲಸದ ವ್ಯವಸ್ಥೆಯಿಂದಾಗಿ ಪಟ್ಟಣದಲ್ಲಿ ಅಗತ್ಯವಾದ ಚಿಕಿತ್ಸಾ ಸೌಲಭ್ಯವನ್ನು ಪಡೆಯಲು ಅಡ್ಡಿಯುಂಟಾಗುತ್ತದೆ.
  • ವಲಸೆಗಾರರಾಗಿ ಬಂದವರಲ್ಲಿ ಭೇಧ್ಯೆತೆಗೆ/ತಾರತಮ್ಯಕ್ಕೆ ಈಡಾಗುವಂತಹ ಮತ್ತು ಆಂತರಿಕವಾಗಿ ಸ್ಥಳಾಂತರ ಹೊಂದಿದವರ ಬಗ್ಗೆ ಪ್ರಸ್ತಾಪಿಸುವುದು ತಕ್ಕುದಾಗಿರುತ್ತದೆ. ಭಾರತದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡವರ ಸಂಖ್ಯೆ ಸರಿಸುಮಾರು ೬ ಲಕ್ಷಗಳು (ಐಡಿಎಮ್‌ಸಿ-೨೦೦೬). ಆಂತರಿಕ ಸ್ಥಳಾಂತರವು ಜನಾಂಗೀಯ ಘರ್ಷಣೆ, ಧಾರ್ಮಿಕ ಘರ್ಷಣೆ, ರಾಜಕೀಯ ಕಾರಣಗಳು, ಅಭಿವೃದ್ಧಿ ಯೋಜನೆಗಳು, ಪಾಕೃತಿಕ ವಿಕೋಪ, ಇತ್ಯಾದಿಗಳಿಂದಾಗಿ ಉಂಟಾಗುತ್ತದೆ. ಆಂತರಿಕವಾಗಿ ಸ್ಥಳಾಂತರಗೊಂಡ ಜನರು ಸರ್ಕಾರದ ಸಾಮಾಜಿಕ ಸುರಕ್ಷಾ ಯೋಜನೆಗಳ ಪ್ರಯೋಜನ ಪಡೆಯುವುದರಲ್ಲಿ ಕಷ್ಟಕ್ಕೆ ಈಡಾಗುತ್ತಾರೆ.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate