অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಿರಿಯ ನಾಗರಿಕರು

ಭಾರತದಲ್ಲಿ ೨/೩ ರಷ್ಟು ವೃದ್ಧ ಪುರುಷರು ಮತ್ತು ಶೇ ೯೦-೯೫% ರಷ್ಟು ವೃದ್ಧ ಮಹಿಳೆಯರು ಅನಕ್ಷರಸ್ಥರಾಗಿದ್ದು, ಬಹುಪಾಲು ಮಹಿಳೆಯರು ಒಬ್ಬಂಟಿಗರಾಗಿದ್ದಾರೆ. ಅದ್ದರಿಂದ ಆರ್ಥಿಕ ಅವಲಂಬನೆಯು ಅಧಿಕವಾಗಿದೆ. ೨೦೦೧ನೇ ಇಸವಿಯ ಹೊತ್ತಿಗೆ ೧.೮ ಲಕ್ಷ ವೃದ್ಧ ಪುರುಷರು ಮತ್ತು ೩.೫ ಮಿಲಿಯನ್ ವೃದ್ಧ ಮಹಿಳೆಯರಿಗೆ ಉದ್ಯೋಗದ ಅವಶ್ಯಕತೆ ಇದೆ ಎಂದು ಅಂದಾಜು ಮಾಡಲಾಗಿದೆ. ಈ ಸಂಖ್ಯೆಯನ್ನು ಪ್ರಸ್ತುತ ಉದ್ಯೋಗದಲ್ಲಿರುವ ಜನಸಂಖ್ಯೆಯ ಪ್ರಮಾಣವನ್ನು ಆಧರಿಸಿ ಗುರುತಿಸಲಾಗಿದೆ. ಈ ಸಂಖ್ಯೆಯ ಜನರಿಗೆ ಭವಿಷ್ಯದಲ್ಲಿ ಉದ್ಯೋಗ ಅವಕಾಶವನ್ನು ಕಲ್ಪಿಸಲು ಅಧಿಕ ಪ್ರಮಾಣ / ಮೊತ್ತದ ಸಂಪನ್ಮೂಲಗಳ ಅವಶ್ಯಕತೆ ಇದೆ. ಇದಲ್ಲದೆ ೫.೫ ಲಕ್ಷ ನಿರುದ್ಯೋಗಿ ವೃದ್ಧರನ್ನು ಪೋಷಿಸಲು ಮತ್ತು ಕುಟುಂಬಕ್ಕೆ ನೆರವು ನೀಡಲು ಸಾಕಷ್ಟು ಉಳಿತಾಯ ಇಲ್ಲದ ಕಾರಣ ಹಣಕಾಸಿನ ಅವಶ್ಯಕತೆ ಇರುತ್ತದೆ.

೨೦೦೧ನೆ ಇಸವಿಯ ವೇಳೆಗೆ ಅಂದಾಜು ೨.೭ ಲಕ್ಷ ವೃದ್ಧರು ಅಸ್ವಸ್ಥರಾಗಬಹುದಾಗಿದ್ದು ಇವರಿಗೆ ವಿಶೇಷ ವೈದ್ಯಕೀಯ ನೆರವಿನ ಅವಶ್ಯಕತೆ ಇದೆ. ವೈದ್ಯಕೀಯ ಸೌಲಭ್ಯಗಳ ಅಭಾವದಲ್ಲಿ ಅಧಿಕ ವೆಚ್ಚವನ್ನು ಅವರ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಮೂಲಭೂತ ಸೌಕರ್ಯಗಳಿಗಾಗಿ ಭರಿಸಬೇಕಾಗುತ್ತದೆ.

ದೈಹಿಕ ವಿಕಲಾಂಗತೆಯು ಕೂಡ ವೃದ್ಧಾಪ್ಯ ಪ್ರಕ್ರಿಯೆಯಲ್ಲಿ ಒಂದು ಮುಖ್ಯವಾದ ಅಂಶವಾಗಿದೆ.
ಅಂಶವಾಗಿದೆ.೦೦೧ನೇ ಇಸವಿಯ ವೇಳೆಗೆ ೧.೭ ಲಕ್ಷ ವಿಕಲಾಂಗ ವೃದ್ಧ ಜನರು ಇರಬಹುದಾಗಿದ್ದು, ಇದರಲ್ಲಿ ಅರ್ಧಭಾಗದಷ್ಟು ವೃದ್ಧರು ದೃಷ್ಠಿ ದೋಷವುಳ್ಳವರಾಗಿರುತ್ತಾರೆ. ಆದ್ದರಿಂದ ಬಹುಪಾಲು ಜನರು ಕೆಲಸ ಮಾಡಲು ಅಸಾಧ್ಯವಾಗಿರುವುದರಿಂದ ಇವರು ಆರ್ಥಿಕಾವಲಂಬಿಗಳಾಗುತ್ತಾರೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಕಲಾಂಗರು ಮತ್ತು ಜೀವನಾಧಾರವಿಲ್ಲದವರಿಗೆ ಸಹಾಯವಾಗುವಂತೆ ಹಣಕಾಸಿನ ಯೋಜನೆಯನ್ನು ತೊಡಗಿಸಿದ್ದರೂ ಈ ಪಿಂಚಣಿ ಮೊತ್ತವು ಮಾಸಿಕ ರೂ. ೩೦/- ಮತ್ತು ರೂ. ೬೦/- ರ ಒಳಗಿರಬೇಕೆಂದು ನಿಗದಿಪಡಿಸಲಾಗಿದೆ. ಇದಲ್ಲದೆ, ಹಣಕಾಸಿನ ಅಭಾವದ ಪ್ರಯುಕ್ತ, ಪಿಂಚಣಿ ಸೌಲಭ್ಯವು ಕೆಲವು ಅರ್ಹವ್ಯಕ್ತಿಗಳಿಗೆ ಮಾತ್ರ ಲಭ್ಯವಾಗುತ್ತಿದೆ.
ಭಾರತದಲ್ಲಿ ವೃದ್ಧರಿಗೆ ಕುಟುಂಬದ ಸದಸ್ಯರಿಗೆ ಇರುವ ಬಲವಾದ ಪ್ರೇಮ ಬಂಧನವು ಒಂದು ಇತ್ಯಾತ್ಮಕ ಅಂಶವಾಗಿದೆ. ಯಾವ ವ್ಯಕ್ತಿಯು ತಮ್ಮ ಕುಟುಂಬದ ವೃದ್ಧ ಸದಸ್ಯರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಪೂರೈಸುವುದಿಲ್ಲವೋ ಅಂತಹವರಿಗೆ ಸಾಮಾಜಿಕ ಒತ್ತಡ ಹೇರುವುದು ಇನ್ನೂ ಚಾಲನೆಯಲ್ಲಿದೆ. ಆದ್ದರಿಂದ ವೃದ್ಧರನ್ನು ಸಲಹುವ ಮತ್ತು ಅವರ ಸಮಸ್ಯೆಗಳನ್ನು ಸಂಭಾಳಿಸುವ ಪ್ರಯತ್ನದಲ್ಲಿ ಇಂತಹ ಮೌಲ್ಯಗಳನ್ನು ಬಲಪಡಿಸುವುದು ಮುಖ್ಯವಾಗಿದೆ. ವೃದ್ಧರನ್ನು ಮಾನವ ಸಂಪನ್ಮೂಲಗಳು ಮತ್ತು ಅವರ ಶ್ರೀಮಂತ ಅನುಭವವನ್ನು ಮತ್ತು ಅವರಲ್ಲಿ ಉಳಿದ ಸಾಮರ್ಥ್ಯವನ್ನು ದೇಶದ ಅಭಿವೃದ್ಧಿಗಾಗಿ ಅತ್ಯುತ್ತಮವಾಗಿ ಬಳಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗುತ್ತದೆ.

ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ

ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವು ೧೫ನೇ ಆಗಸ್ಟ್ ೧೯೯೫ ರಿಂದ ಜಾರಿಗೆ ಬಂದು ಇದು ಭಾರತೀಯ ಸಂವಿಧಾನ ರಾಜ್ಯ ನಿರ್ಧೇಶಕ ತತ್ವದ ಪರಿಚ್ಛೇದ ೪೧,೪೨ ವನ್ನು ಮಾದರಿ/ಆದರ್ಶವಾಗಿಸುವುದರಲ್ಲಿ/ಪ್ರತಿನಿಧಿಸುವುದರಲ್ಲಿ ಮಹತ್ವವಾದ ಹೆಜ್ಜೆಯನ್ನಿಟ್ಟಿದೆ. ರಾಷ್ಟ್ರೀಯ ಸಾಮಾಜಿಕ ನೆರವು ರಾಜ್ಯನೀತಿಯು ಬಡಕುಟುಂಬಗಳಲ್ಲಿನ ವೃದ್ಧರು, ಪ್ರಮುಖ ಜೀವನಕ್ಕೆ ಆಧಾರವಾದ ವ್ಯಕ್ತಿಯ ಮರಣ ಮತ್ತು ತಾಯ್ತನದಂತಹ ಸಂದರ್ಭಗಳಲ್ಲಿ ನೀಡಲಾಗುತ್ತದೆ. ಈ ಕಾರ್ಯಕ್ರಮದಡಿ 3 ಅಂಗಗಳಿವೆ .ಅವು ಯಾವುವೆಂದರೆ:

  1. ರಾಷ್ಟ್ರೀಯ ವೃದ್ದಾಪ್ಯ ಪಿಂಚಣಿ ಯೋಜನೆ.
  2. ರಾ ಷ್ರ್ಟೀಯ ಕುಟುಂಬ ಸೌಲಭ್ಯ.
  3. ರಾಷ್ರ್ಟೀಯ ಮಾತೃತ್ವ ಸೌಲಭ್ಯ

ಈ ಮೇಲಿನ ಯೋಜನೆ ಗಳನ್ನು 1998 ರಲ್ಲಿ ವಿವಿಧ ಭಾಗಗಳಿಂದ ಬಂದಂತಹ ಸಲಹೆಗಳು ಮತ್ತು ರಾಜ್ಯ ಸರ್ಕಾರದಿಂದ ಬಂದಂತಹ ಪ್ರತಿ ಕ್ರಿಯೆಗಳ ಮೇರೆಗೆ ಭಾಗಶಃ ಬದಲಾವಣೆ ಮಾಡಲಾಯಿತು. ಈ ರೀತಿ ಬದಲಾವಣೆಗೊಂಡ ಯೋಜನೆಗಳ ಗಮನಾರ್ಹವಾದ ಲಕ್ಷಣಗಳೇನೆಂದರೆ; ರಾಷ್ರ್ಟೀಯ ವೃದ್ದ್ಯಾಪ ಪಿಂಚಣಿ ಯೋಜನೆಯಡಿಯಲ್ಲಿ. ಕೇಂದ್ರದ ನೆರವು; ಕೆಳಕಂಡ ಅರ್ಹತೆಯ ಮೇರೆಗೆ ದೊರಕುತ್ತದೆ.ಅರ್ಜಿದಾರರ (ಮಹಿಳೆ ಅಥವಾ ಪುರುಷ) ವಯಸ್ಸು 60 ಅಥವಾ ಅದಕ್ಕಿಂತ ಮೇಲ್ಪಟ್ಟಿರಬೇಕು. ಅರ್ಜಿದಾರರು ’ನಿರ್ಗತಿಕರಾಗಿದ್ದು ಎಂದರೆ ಬಹಳ ಅಲ್ಪ ಅಥವಾ ನಿಗದಿತ ಆದಾಯವನ್ನು, ತನ್ನ ಸ್ವಂತ ಮೂಲಗಳಿಂದ,ಅಥವಾ ಕುಟುಂಬದ ಸದಸ್ಯರ ಅಥವ ಇತರೆ ಮೂಲಗಳಿಂದ, ಹಣದ ನೆರವು ಜೀವನೊಪಾಯಕ್ಕಾಗಿ ದೊರಕುತ್ತಿರ ಬಾರದು. ವೃದ್ದಾಪ್ಯ ವೇತನದ ಪಿಂಚಿಣಿ ಮೊತ್ತವು ಮಾಸಿಕ ವೃದ್ದಾಪ್ಯ ವೇತನದ ಪಿಂಚಿಣಿ ಮೊತ್ತವು ಮಾಸಿಕ ರೊ 200/- (Rs. 500 for above 80 Years) ಆಗಿರುತ್ತದೆ.

ವೃದ್ಧರಿಗಾಗಿ ಸಂಯುಕ್ತ ಯೋಜನೆ

ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯ್ದೆ, ೨೦೦೭

ಹಿರಿಯ ನಾಗರಿಕರಿಗಾಗಿ ರಾಷ್ಟ್ರೀಯ ನೀತಿ - ೧೯೯೯

ಮೂಲ :ಪೋರ್ಟಲ್  ತಂಡ

ಕೊನೆಯ ಮಾರ್ಪಾಟು : 6/3/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate