অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಯೋಜನೆಯ ಮುಖ್ಯಾಂಶಗಳು

ಯೋಜನೆಯ ಮುಖ್ಯಾಂಶಗಳು

•             ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಯುವಜನತೆ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಪ್ರತಿ ಕೃಷಿ ಅವಲಂಬಿತ ಕುಟುಂಬದ ಅಗತ್ಯತೆ ಪೂರೈಸಲು ಸಾಕಾಗುವಷ್ಟು ಜಮೀನು ಸಹ ದೊರೆಯುತ್ತಿಲ್ಲ. ಹೀಗಾಗಿ ಈ ಕುಟುಂಬಗಳು ಆದಾಯೋತ್ಪನ್ನಗಳ ಬಗ್ಗೆ ಪರ್ಯಾಯ ವ್ಯವಸ್ಥೆ ಹುಡುಕಿಕೊಳ್ಳಬೇಕಾಗಿದೆ.

•             ಗ್ರಾಮೀಣ ಪ್ರದೇಶದಲ್ಲಿರುವ ಯುವಜನತೆಯಲ್ಲಿ ಕೆಲವೇ ಮಂದಿ ವೃತ್ತಿಪರ ಶಿಕ್ಷಣ ಹಾಗೂ ಕೌಶಲ್ಯ ತರಬೇತಿ ಪಡೆಯುತ್ತಿದ್ದಾರೆ. ಶಾಲಾ ಮತ್ತು ಕಾಲೇಜುಗಳನ್ನು ಮಧ್ಯದಲ್ಲಿಯೇ ಬಿಡುತ್ತಿರುವ ಯುವಜನರ, ಅದರಲ್ಲೂ ಹೆಣ್ಣುಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ, ಹಾಗೆಯೇ ಉದ್ಯೋಗ ಒದಗಿಸಬಲ್ಲ ಕೌಶಲ್ಯ ತರಬೇತಿಗಳ ಕೊರತೆ ಸಹ ಇದೆ.

•             ಸ್ವ-ಉದ್ಯೋಗಕ್ಕೆ ಕೈ ಹಾಕಿದರೆ ಸೋಲು / ನಷ್ಟ ಉಂಟಾಗಬಹುದೆಂಬ ಭಯದಿಂದ ಬಹಳ ಮಂದಿ ಈ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಗ್ರಾಮೀಣ ಪ್ರದೇಶದಲ್ಲಿನ ಯುವಜನತೆ ಜೀವನೋಪಾಯ ಅರಸಿ ನಗರ ಪ್ರದೇಶಗಳತ್ತ ವಲಸೆ ಹೋಗುತ್ತಿರುವುದು ಹೆಚ್ಚಾಗುತ್ತಿದೆ.

•             ಇಂತಹ ಪರಿಸ್ಥಿತಿಯಲ್ಲಿ ನಿರುದ್ಯೋಗಿ ಯುವಜನರನ್ನು ಕೃಷಿ ಆಧಾರಿತÀ ಉತ್ಪಾದನಾ ಹಾಗೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರವರ ಗ್ರಾಮಗಳಲ್ಲಿಯೆ ಉಳಿಸಿಕೊಳ್ಳಲು ಸಾಧ್ಯವಿದೆ, ಹಾಗೆಯೇ ಕೃಷಿಯೇತರ ವಲಯದಲ್ಲಿಯೂ ಉತ್ಪಾದನಾ ಹಾಗೂ ಸೇವಾ ಚಟುವಟಿಕೆಗಳಿಗೆ ಸಾಕಷ್ಟು ಅವಕಾಶಗಳಿವೆ.

•             ರಾಜೀವ್ ಗಾಂಧಿ ಚೈತನ್ಯ ಯೋಜನೆಯು ಪರ್ಯಾಯ ಆದಾಯ ವ್ಯವಸ್ಥೆ ಕಲ್ಪಿಸುವುದರ ಮೂಲಕ ಇಂತಹ ಯುವಜನರಲ್ಲಿ ಅಡಗಿರುವ ಸಾಮಥ್ರ್ಯವನ್ನು ಬಳಸಿಕೊಳ್ಳಲು ಯೋಜಿಸಿದೆ. ಇದರಿಂದ ಈ ಯುವಜನರು ಉತ್ಪಾದನÀ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಗ್ರಾಮದ ಆಸ್ತಿಯಾಗಿ ಪರಿವರ್ತನೆಗೊಳ್ಳುತ್ತಾರೆ.

•             ಗ್ರಾಮೀಣ ಪ್ರದೇಶದ ಯುವಜನರಿಗೆ ಸೂಕ್ತ ತರಬೇತಿ ಮತ್ತು ಬೆಂಬಲ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿದಲ್ಲಿ ಅವರುಗಳು ಗ್ರಾಮದಲ್ಲಿಯೇ ಉಳಿದುಕೊಳ್ಳುವ ಸಾದ್ಯತೆ ಹೆಚ್ಚಾಗುತ್ತದೆ.

•             ಈ ಯೋಜನೆಯು ಅಂತಿಮವಾಗಿ ನಿರುದ್ಯೋಗಿ ಯುವಜನರ ಅಂತಃಶಕ್ತಿಯನ್ನು ವೃಧ್ಧಿಪಡಿಸಿ, ಲಾಭದಾಯಕ ಉದ್ಯಮಕ್ಕೆ ಸಹಾಯಕವಾಗಿ ಗ್ರಾಮೀಣ ಪ್ರದೇಶದ ಸಹಸ್ರಾರು ಯುವಜನರ ಜೀವನದ ಗುಣಮಟ್ಟ ಹೆಚ್ಚಿಸಲು ಕಾರಣವಾಗುತ್ತದೆ.

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 6/12/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate