অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಶಿಕ್ಷಣ ಸಾಲ

ಭಾರತದ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯ ಬ್ಯಾಂಕ್ಗ ಳು ಅಗತ್ಯವಿರುವ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಬೆಂಬಲವನ್ನು ಒದಗಿಸಲು ಶಿಕ್ಷಣ ಸಾಲವನ್ನು ಪ್ರಾರಂಭಿಸಿವೆ. 'ಶಿಕ್ಷಣ ಸಾಲ'ವನ್ನು ಯಾವುದೇ ತೊಂದರೆ ಮತ್ತು ವಿಳಂಬದವಿಲ್ಲದೆ ಒದಗಿಸಲು, ಎಲ್ಲಾ ಭಾರತೀಯ ಬ್ಯಾಂಕ್‌ಗಳು ಪ್ರಕ್ರಿಯೆಗಳನ್ನು ಸರಳೀಕರಿಸಿವೆ ಮತ್ತು ಸಾಲಕ್ಕಾಗಿ ಅನ್‌ಲೈನ್ ಅರ್ಜಿ ಸಲ್ಲಿಸಲು "ಆನ್‌ಲೈನ್ ಅರ್ಜಿ" ನಮೂನೆಯನ್ನು ಅಭಿವೃದ್ಧಿಪಡಿಸಿವೆ. ಹಾಗಿದ್ದರೂ, ಕೆಲವು ಬ್ಯಾಂಕ್‌ಗಳು ಶಿಕ್ಷಣ ಸಾಲಕ್ಕೆ ಅನ್‌ಲೈನ್ ಪ್ರಕ್ರಿಯೆಯನ್ನು ಇನ್ನೂ ಆರಂಭ ಮಾಡಿಲ್ಲ, ಈ ರೀತಿಯ ಸಂಧರ್ಭದಲ್ಲಿ ಆಸಕ್ತಿಯನ್ನು ಹೊಂದಿದ ವಿದ್ಯಾರ್ಥಿಗಳು ಅವರ ಭರ್ತಿ ಮಾಡಿದ ಅರ್ಜಿಯನ್ನು ಹತ್ತಿರದ ಬ್ಯಾಂಕ್ನ ಶಾಖೆಗೆ ಸಲ್ಲಿಸಬೇಕು. ಇವರು ಭಾರತೀಯ ರಾಷ್ಟ್ರೀಯತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.

ಶಿಕ್ಷಣ ಸಾಲಕ್ಕೆ ಆರ್ಹತೆಗಳು

  • ಕಡ್ಡಾಯವಾಗಿ ಭಾರತೀಯರಾಗಿರಬೇಕು
  • ಅರ್ಜಿ ಸಲ್ಲಿಸಿದ ದಿನಾಂಕಕ್ಕೆ ಹೊಂದುವಂತೆ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಆದರೆ 30 ವರ್ಷ ವಯಸ್ಸಿನ ಒಳಗಿರಬೇಕು.
  • ವೃತ್ತಿಪರ/ತಾಂತ್ರಿಕ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ/ ಆಯ್ಕೆ ಪ್ರಕ್ರಿಯೆಯ ಮೂಲಕ ದಾಖಲಾತಿ ಗಳಿಸಿರಬೇಕು
  • ಈ ಯೋಜನೆಯು ಭಾರತ ಮತ್ತು ವಿದೇಶದಲ್ಲಿ ಮಾನ್ಯತೆ ಪಡೆದ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ ಕೋರ್ಸುಗಳಿಗೆ ಮಾತ್ರ ಅನ್ವಯಿಸುತ್ತದೆ
  • ವಿದ್ಯಾರ್ಥಿಯು ಇತರೆ ಯಾವುದೇ ಸಂಸ್ಥೆಯಿಂದ ಇನ್ನೂ ಬಾಕಿ ಇರುವ ಶಿಕ್ಷಣ ಸಾಲವನ್ನು ಹೊಂದಿರಬಾರದು.
  • ವಿದ್ಯಾರ್ಥಿಯ ಖಾಯಂ ನಿವಾಸಕ್ಕೆ ಸಮೀಪವಿರುವ ಶಾಖೆಯನ್ನು ಸಾಲಕ್ಕೆ ಪರಿಗಣಿಸಲಾಗುವುದು.

ಅರ್ಹ ಕೋರ್ಸುಗಳು

ಭಾರತದಲ್ಲಿ ವ್ಯಾಸಂಗ (ಸೂಚಕ ಪಟ್ಟಿ)

  • ಪದವಿ ಶಿಕ್ಷಣಗಳು: ಬಿಎ, ಬಿ.ಕಾಂ, ಬಿ. ಎಸ್ಸಿ ಇತ್ಯಾದಿ.
  • ಸ್ನಾತಕೋತ್ತರ ಪದವಿ ಶಿಕ್ಷಣ ಕೋರ್ಸುಗಳು: ಸ್ನಾತಕೋತ್ತರ ಪದವಿ ಗಳು ಮತ್ತು ಪಿಎಚ್.ಡಿ
  • ವೃತ್ತಿಪರ ಕೋರ್ಸುಗಳು: ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಪಶು, ಕಾನೂನು, ದಂತ, ಆಡಳಿತ, ಕಂಪ್ಯೂಟರ್ ಇತ್ಯಾದಿ.
  • ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಅಧಿಕೃತವಾಗಿ ಮನ್ನಣೆ ಪಡೆದಿರುವ ಪ್ರಸಿದ್ಧವಾದ ಸಂಸ್ಥೆಗಳ ಅಥವಾ ವಿಶ್ವವಿದ್ಯಾನಿಲಯದ ಭಾಗವಾಗಿರುವ ಸಂಸ್ಥೆಗಳ ಕಂಪ್ಯೂಟರ್ ಪ್ರಮಾಣ ಪತ್ರ ಕೋರ್ಸುಗಳು
  • ಕೋರ್ಸುಗಳಾದ ಐ ಸಿ ಡಬ್ಲ್ಯೂ ಎ, ಸಿಎ, ಸಿಎಫ್ಎ, ಇತ್ಯಾದಿ.
  • ಐಐಎಂ, ಐಐಟಿ, ಐಐಎಸ್ಸಿ, ಎಕ್ಸ್ ಎಲ್ ಆರ್ ಐ , ಎನ್ಐಎಫ್ಟಿ, ಎನ್ ಎಐ ಡಿ ಮೂಲಕ ಮತ್ತು ಕೇಂದ್ರ/ರಾಜ್ಯ ಸರ್ಕಾರದಿಂದ ಸ್ಥಾಪಿಸವಾತ ಇತರೆ ಸಂಸ್ಥೆಗಳಿಂದ ನೆಡೆಸುವ ಕೋರ್ಸುಗಳು
  • ಮಾನ್ಯತೆ ಪಡೆದಿರುವ ಸಂಸ್ಥೆಗಳ ಸಂಜೆ ಶಿಕ್ಷಣ ಕೋರ್ಸುಗಳು
  • ಯುಜಿಸಿ/ ಸರ್ಕಾರ/ ಐ ಸಿ ಟಿ ಇ/ ಎಐ ಬಿಎಂಎಸ್/ ಐಸಿ ಎಮ್ಆರ್ ಇತ್ಯಾದಿಗಳಿಂದ ಮಾನ್ಯತೆ ಪಡೆದಿರುವ ಕಾಲೇಜುಗಳು/ವಿಶ್ವವಿದ್ಯಾನಿಲಯಗಳ ಮೂಲಕ ನೆಡೆಸುವ ಡಿಪ್ಲೊಮೊ/ಡಿಗ್ರಿ ಇತ್ಯಾದಿಗಳನ್ನು ನೀಡುವ ಇತರೆ ಕೋರ್ಸುಗಳು
  • ನ್ಯಾಶನಲ್ ಇನ್ಸ್ಟಿಟ್ಯೂಟ್ಗಳು ಮತ್ತು ಇತರೆ ಪ್ರಸಿದ್ಧಿ ಖಾಸಗಿ ಸಂಸ್ಥೆಗಳು ಮುಖ್ಯ ಕಚೇರಿಯ ಪೂರ್ವ ಮಾನ್ಯತೆಯೊಂದಿಗೆ ನೀಡುವ ಕೋರ್ಸುಗಳು
  • ಮುಖ್ಯ ಕಚೇರಿಯ ಪೂರ್ವ ಮಾನ್ಯತೆಯೊಂದಿಗೆ ಪ್ರಸಿದ್ಧ ವಿದೇಶಿ ವಿಶ್ವವಿದ್ಯಾನಿಲಯಗಳು ಭಾರತದಲ್ಲಿ ನೀಡುವ ಕೋರ್ಸುಗಳು.

ಗಮನಿಸಿ

  • ಐ ಸಿ ಟಿ ಇನಿಂದ ಮಾನ್ಯತೆ ಪಡೆಯದ ವೃತ್ತಿಪರ ಕೋರ್ಸುಗಳು ಮತ್ತು ರಾಜ್ಯದ ವಿಶ್ವವಿದ್ಯಾನಿಲಯಗಳಿಂದ ಗುರುತಿಸಲ್ಪಡದ ಸಂಸ್ಥೆಗಳು ನೆಡೆಸುವ ಕೋರ್ಸ್ ಗಳು ಈ ಯೋಜನೆಯಡಿಯಲ್ಲಿನ ಅರ್ಹತೆಯ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತವೆ.
  • ಐಐಟಿಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಬಡ್ಡಿಯ ರಿಯಾಯಿತಿ ದರದಲ್ಲಿ, ವಿಶೇಷ ಯೋಜನೆಗಳಿವೆ.

ವಿದೇಶದಲ್ಲಿ ವ್ಯಾಸಂಗ

  • ಪದವಿ: ಪ್ರಸಿದ್ಧ ವಿಶ್ವವಿದ್ಯಾನಿಲಯಗಳಿಂದ ಕೆಲಸದ ಗುರಿಯ ವೃತ್ತಿಪರ/ತಾಂತ್ರಿಕ ಕೋರ್ಸುಗಳಿಗೆ
  • ಸ್ನಾತಕೋತ್ತರ ಪದವಿ: ಎಂಸಿಎ, ಎಂಬಿಎ, ಎಂಎಸ್ ಇತ್ಯಾದಿ
  • ಸಿ.ಇ. ಎಮ್.ಎ -ಲಂಡನ್, ಅಮೇರಿಕಾನಲ್ಲಿ ಸಿಪಿಎ, ಇತ್ಯಾದಿಗಳ ಮೂಲಕ ನೆಡೆಸಲಾಗುವ ಕೋರ್ಸುಗಳು:
  • ಶಾಲಾ ಶಿಕ್ಷಣ/ಮಧ್ಯದ ಕೋರ್ಸುಗಳು/ಪದವಿ ಕೋರ್ಸುಗಳು/ ಸ್ನಾತಕೋತ್ತರ ಪದವಿ ಕೋರ್ಸುಗಳು/ವೃತ್ತಿಪರ ಕೋರ್ಸುಗಳು:
  • ಎಂಜಿನಿಯರಿಂಗ್/ವೈದ್ಯಕೀಯ/ಕೃಷಿ/ಪಶು/ಕಾನೂನು/ದಂತ/ನರ್ಸಿಂಗ್/ಫಿಸಿಯೋಥೆರಪಿ/ಆಡಳಿತ/ಪಿ ಜಿ ಡಿ ಆರ್ ಐಎಂ / ಐಸಿ ದೆಬಲ್ಯು ಎ/ ಸಿಎ / ಸಿಎಫ್ಎ / ಐಐಎಂ /ಐಐಟಿ/ಐಐಎಸ್ಸಿ/ಎಕ್ಸ್ ಎಲ್ ಆರ್ ಐ/ ಎನ್ಐಎಫ್ಟಿ ಮತ್ತು ಕೇಂದ್ರ/ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಇತರೆ ಕೋರ್ಸುಗಳು ಯುಜಿಸಿ/ ಸರ್ಕಾರ/ ಐ ಸಿ ಟಿ ಇ/ ಎಐ ಬಿಎಂಎಸ್/ ಐಸಿ ಎಮ್ಆರ್ ಇತ್ಯಾದಿಗಳಿಂದ ಮಾನ್ಯತೆ ಪಡೆದಿರುವ ಕಾಲೇಜುಗಳು/ವಿಶ್ವವಿದ್ಯಾನಿಲಯಗಳ ಮೂಲಕ ನೆಡೆಸುವ ಡಿಪ್ಲೊಮಾ/ಡಿಗ್ರಿ ಇತ್ಯಾದಿಗಳನ್ನು ನೀಡುವ, ಮತ್ತು ನ್ಯಾಶನಲ್ ಇನ್ಸ್ಟಿಟ್ಯೂಟ್ಗಳು ಮತ್ತು ಇತರೆ ಪ್ರಸಿದ್ಧ ಖಾಸಗಿ ಸಂಸ್ಥೆಗಳು ನೆಡೆಸುವ ಇತರೆ ಕೋರ್ಸುಗಳು.

ಗರಿಷ್ಠ ಸಾಲ ಮೊತ್ತ

  • ಪೋಷಕರ/ವಿದ್ಯಾರ್ಥಿಯಸಾಲ ತೀರಿಸಬಲ್ಲ ಸಾಮರ್ಥ್ಯಕ್ಕೆ ಅನುಗುಣವಾಗಿ ಬ್ಯಾಂಕ್ ಗರಿಷ್ಠ 10ಲಕ್ಷ ರುಪಾಯಿಗಳವರೆಗೆ ಸಾಲವನ್ನು ಒದಗಿಸುತ್ತದೆ.
  • ಭಾರತದಲ್ಲಿ ಅಧ್ಯಯನಕ್ಕೆ ಸಾಲ ಮಿತಿ- ಗರಿಷ್ಠ ರು.10ಲಕ್ಷ
  • ವಿದೇಶಗಳಲ್ಲಿ ಅಧ್ಯಯನಕ್ಕೆ ಸಾಲ ಮಿತಿ- ಗರಿಷ್ಠ ರು.20ಲಕ್ಷ

ಸಾಲಕ್ಕೆ ಮಿತಿ

  • 04.00 ಲಕ್ಷ ರೂಪಾಯಿಗಳ ವರೆಗೆ :ಸೊನ್ನೆ
  • 04.00 ಲಕ್ಷ ರೂಪಾಯಿಗಳ ಮೇಲೆ :5%

ಸಾಲಕ್ಕೆ ಆಧಾರ

  • 04.00 ಲಕ್ಷ ರೂಪಾಯಿಗಳ ವರೆಗೆ :ಆಧಾರ ಬೇಡ
  • 04.00 ಲಕ್ಷ ರೂಪಾಯಿಗಳ ಮೇಲೆ & 7 ಲಕ್ಷದ ವರೆಗೆ: ಸೂಕ್ತ ಮೂರನೆ ವ್ಯಕ್ಯಿಯ ಜಾಮೀನಿನ ಆಧಾರದ ಮೇಲೆ ಸಾಲ ನೀಡಲಾಗುವುದು.
  • 7 ಲಕ್ಷಕ್ಕಿಂತ ಮೇಲೆ: ಸೂಕ್ತ ಮೌಲ್ಯದ ಸಾಲದ ಪಾವತಿಗೆ ಆಧಾರ ಅಥವಾ ಬ್ಯಾಂಕ್ನ ವಿವೇಚನೆಯ ಅನುಗುಣವಾಗಿ, ಸೂಕ್ತ ಮೂರನೆ ವ್ಯಕ್ಯಿಯ ಜಾಮೀನಿನ ಜೊತೆಗೆ ಕಂತಿನ ಪಾವತಿಗೆ ವಿದ್ಯಾರ್ಥಿಯ ಮುಂದಿನ ಆದಾಯದ ನಿಯೋಜನೆ.

ಗಮನಿಸಿ: ಆಧಾರವು ಭೂಮಿ/ಕಟ್ಟಡ/ಸರ್ಕಾರದ ಆಧಾರಗಳು/ ಸಾರ್ವಜನಿಕ ವಲಯದ ಬಾಂಡ್ಗಯಳು, NSC/ KVP/ LIP/ ಬ್ಯಾಂಕ್ ಠೇವಣಿ ಇತ್ಯಾದಿಗಳ ರೂಪದಲ್ಲಿರ ಬಹುದು. ಅವುಗಳು ಸೂಕ್ತ ಠೇವಣಿಯೊಂದಿಗೆ ವಿದ್ಯಾರ್ಥಿ/ಹೆತ್ತವರು/ಪೋಷಕರು/ಜಾಮೀನುದಾರ ಹೆಸರಿನಲ್ಲಿರಬಹುದು.

ಸಾಲಗಳ ವಿತರಣೆಯ ವಿಧಾನ

ಸಾಲದ ಮೊತ್ತವನ್ನು ವರ್ಷಗಳ ಸಂಖ್ಯೆಯ ಅನುಪಾತದಲ್ಲಿ, ವಿದ್ಯಾರ್ಥಿಯ ಅಭಿವೃದ್ಧಿಯನ್ನು ಅವಲಂಬಿಸಿ ಬಿಡುಗಡೆ ಮಾಡಬೇಕು. ವಿದ್ಯಾರ್ಥಿಯು ಶೈಕ್ಷಣಿಕ ವರ್ಷವನ್ನು ಯಶಸ್ವಿಯಾಗಿ ಮುಗಿಸಿದ್ದಕ್ಕೆ, ಅರ್ಹತೆಯುಳ್ಳ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಮುಂದಿನ ಹಣದ ಬಿಡುಗಡೆಗೆ ಮುನ್ನ ಒದಗಿಸಬೇಕು.

ಸಾಲದ ಮರುಪಾವತಿ

ಮರುಪಾವತಿ ರಜೆ/ಸಾಲಾವಧಿ ವಿಸ್ತರಣೆ: ಕೋರ್ಸು ಅವಧಿ+ ಕೆಲಸ ಸಿಕ್ಕಿದ ಮೇಲೆ 1 ವರ್ಷ ಅಥವಾ 6 ತಿಂಗಳು, ಯಾವುದು ಬೇಗ ಸಾಧ್ಯವಾಗುತ್ತದೆಯೋ ಅದು ಅನ್ವಯಿಸುತ್ತದೆ. ಸಾಲವನ್ನು ಮರು ಪಾವತಿಸಲು ಆರಂಭಿಸಿದ 5-7 ವರ್ಷಗಳಲ್ಲಿ ಮರು ಪಾವತಿಸ ಬೇಕು. ಆದರೆ, ಸಾಲದ ಸಮಯ ಒಂದು ಬ್ಯಾಂಕ್ನಿಂನದ ಇನ್ನೊಂದು ಬ್ಯಾಂಕ್ಗೆಸ ವ್ಯತ್ಯಾಸವಿರುತ್ತದೆ ಮತ್ತು ಅದನ್ನು ಕೋರ್ಸಿನ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಪ್ರಕ್ರಿಯೆಯ ಶುಲ್ಕ

ಹಾಗಿದ್ದರೂ, ಕೆಲವು ಬ್ಯಾಂಕ್ಗಅಳು ಶಿಕ್ಷಣ ಸಾಲಕ್ಕೆ ಪ್ರಕ್ರಿಯೆಯ ಶುಲ್ಕವನ್ನು ವಿಧಿಸುವುದಿಲ್ಲ, ಆದರೆ ವಾಸ್ತವಿಕದ ಮೇಲೆ ಶುಲ್ಕವನ್ನು ವಿಧಿಸುತ್ತವೆ.

ಇತರೆ ಕರಾರುಗಳು

  • ಸಾಲವನ್ನು ಹಂತಗಳಲ್ಲಿ ಅಗತ್ಯ/ಬೇಡಿಕೆಗೆ ಅನುಗುಣವಾಗಿ, ನೇರವಾಗಿ ಸಂಸ್ಥೆ/ಪುಸ್ತಕಗಳ ಮಾರಾಟಗಾರರು/ಉಪಕರಣ/ಸಾಧನಗಳಿಗೆ ಸಾಧ್ಯವಿರುವಷ್ಟು ವಿತರಿಸಬೇಕು.
  • ಮುಂದಿನ ಕಂತನ್ನು ಪಡೆಯುವ ಮುನ್ನ ವಿದ್ಯಾರ್ಥಿಯು ಹಿಂದಿನ ಅವಧಿ/ಸೆಮಿಸ್ಟರ್ನ ಅಂಕಪಟ್ಟಿಯನ್ನು ಒದಗಿಸಬೇಕು.
  • ಅಂಚೆ ವಿಳಾಸ ಬದಲಾದ ಸಂಧರ್ಭದಲ್ಲಿ ವಿದ್ಯಾರ್ಥಿ/ಹೆತ್ತವರು ಪ್ರಸ್ತುತ ವಿಳಾಸವನ್ನು ನೀಡಬೇಕು.
  • ವಿದ್ಯಾರ್ಥಿ/ಹೆತ್ತವರು, ಕೋರ್ಸಿನ ಬದಲಾವಣೆ/ವ್ಯಾಸಂಗದ ಮುಕ್ತಾಯ/ಶಿಕ್ಷಣವನ್ನು ಕೊನೆಗೊಳಿಸುವುದು /ಕಾಲೇಜು/ಸಂಸ್ಥೆಯಿಂದ ಶುಲ್ಕದ ಮರುಪಾವತಿ/ಯಶಸ್ವಿ ನಿಯೋಜನೆ/ಕೆಲಸದ ಉದ್ದೇಶ/ಕೆಲಸದ ಬದಲಾವಣೆ ಇತ್ಯಾದಿಗಳನ್ನು ತಕ್ಷಣ ಶಾಖೆಗೆ ತಿಳಿಸಬೇಕು.

ಸಾಲ ಮಂಜೂರಾತಿಗೆ ಶಾಖೆ

ಶಿಕ್ಷಣ ಸಾಲದ ಮಂಜೂರಾತಿಯನ್ನು ಸಾಲ ಪಡೆಯುವವನ ನಿವಾಸದ ಸ್ಥಳದ ಸಮೀಪದಲ್ಲಿರುವ ಶಾಖೆಯಲ್ಲಿ ಮಾಡಲಾಗುತ್ತದೆ. ಆದ್ಯಾಗಿಯೂ, ವಿದ್ಯಾರ್ಥಿಯೂ ವಾಸದ ಸ್ಥಳ/ಹೆತ್ತವರ ನಿವಾಸ/ಪೋಷಕರ ನಿವಾಸ ಸ್ಥಳದಿಂದ ಬೇರೆ ಸ್ಥಳದಲ್ಲಿರುವ ಸಂಸ್ಥೆಯಲ್ಲಿ ದಾಖಲಾತಿಯನ್ನು ಬಯಸಿದರೆ ಮತ್ತು ಅರ್ಜಿದಾರರನ್ನು ಶಿಕ್ಷಣ ಸಂಸ್ಥೆಯಿರುವ ಸ್ಥಳದಲ್ಲಿ ಸಾಲವನ್ನು ಪಡೆಯಲು ಬಯಸಿದರೆ, ಶಾಖೆಯಿಂದ ಶಿಕ್ಷಣ ಸಂಸ್ಥೆಯಿರುವ ಸ್ಥಳದಲ್ಲಿ ಸಾಲವನ್ನು ಪರಿಗಣಿಸಲಾಗುತ್ತದೆ, ನಾವು ವಿದ್ಯಾರ್ಥಿ/ಹೆತ್ತವರು/ಪೋಷಕರ ಸ್ಥಳದಲ್ಲಿ ಶಾಖೆಯನ್ನು ಹೊಂದಿದ್ದರೆ. ಹೆತ್ತವರು/ಪೋಷಕರು ಮತ್ತು ಜಾಮೀನುದಾರ (ಎಲ್ಲೆಲ್ಲಿ ಅಗತ್ಯವಿದ್ದೆಯೋ ಅಲ್ಲಿ) ವಿದ್ಯಾರ್ಥಿಯ ಜೊತೆಯಲ್ಲಿ ಖಾಖೆಗೆ ಭೇಟಿ ನೀಡಿ ಸಾಲದ ಮಂಜೂರು/ವಿತರಣೆಯ ನಿಯಮಗಳು ಮತ್ತು ದಾಖಲೀಕರಣವನ್ನು ಮುಗಿಸಬೇಕು.

ಅಗತ್ಯವಾದ ದಾಖಲೆಗಳು

  • ಪೂರ್ಣಗೊಳಿಸಿದ ಅರ್ಜಿ
  • ಹಿಂದೆ ತೇರ್ಗಡೆಯಾದ ಪರೀಕ್ಷೆಯ ಅಂಕಪಟ್ಟಿ
  • ದಾಖಲಾತಿಗೆ ಸಾಕ್ಷಿ, ಖರ್ಚಿನ ವಿವರ ಮತ್ತು ಕೋರ್ಸಿನ ಅವಧಿ
  • ಶುಲ್ಕದ ವಿನ್ಯಾಸ ( ಕಾಲೇಜು/ವಿಶ್ವವಿದ್ಯಾನಿಲಯದಿಂದ ಕಾಗದ/ಪ್ರಮಾಣ ಪತ್ರ)
  • 2 ಪಾಸ್ಪೋರ್ಟ್ ಆಳತೆಯ ಭಾವಚಿತ್ರ
  • ವಿದ್ಯಾರ್ಥಿ/ಮತ್ತು ಜಾಮೀನುದಾರ (ಅಗತ್ಯವಿದ್ದಲ್ಲಿ) ಗುರುತಿನ ಚೀಟಿ (ಪಾಸ್ಪೋ್ರ್ಟ್/ಐಡಿ ಕಾರ್ಡ್/ಮತದಾನ ಐಡಿ ಕಾರ್ಡ್/PAN ಕಾರ್ಡ್ ಇತ್ಯಾದಿ)
  • ನಿವಾಸದ ಪುರಾವೆ (ಪಡಿತರ ಚೀಟಿ ಅಥವಾ ವೋಟರ್ ಐಡಿ ಕಾರ್ಡ್ ಅಥವಾ ಪಾಸ್ಪೋರ್ಟ್ ಅಥವಾ ವಿದ್ಯುಚ್ಛಕ್ತಿ ಅಥವಾ ದೂರವಾಣಿ ಅಥವಾ ಬ್ಯಾಂಕ್ ನಿಂದ ಅಂಗೀಕೃತವಾದ ಯಾವುದೇ ರೀತಿಯು ದಾಖಲೆಯ ಜೆರಾಕ್ಸ್ ಪ್ರತಿಗಳು)
  • ಜಾಮೀನುದಾರರಿಗೆ ಸಂಬಂಧಿಸಿದ ವಿವರಗಳು (ಸಾಲದ ಮೊತ್ತ 4 ಲಕ್ಷಕ್ಕಿಂತ ಹೆಚ್ಚಾಗಿದ್ದಲ್ಲಿ)
  • ಸಾಲಗಾರ/ಜಾಮೀನುದಾರನ ಆದಾಯದ ಪುರಾವೆ
  • ಹೆತ್ತವರ/ಪೋಷಕರ ಸಹ ಬಾಧ್ಯತೆಯ ಹೇಳಿಕೆ
  • ಬೇರೆ ಯಾವುದೇ ಬ್ಯಾಂಕಿನಿಂದ ಅರ್ಜಿದಾರ ಮತ್ತು ಹೆತ್ತವರು ಶಿಕ್ಷಣ ಸಾಲವನ್ನು ಪಡೆದಿಲ್ಲ ಎಂದು ಧೃಡಪಡಿಸುವ ಘೋಷಣೆ/ಅಫಿಡವಿಟ್.
  • ಠೇವಣಿ(4 ಲಕ್ಷ ರೂಪಾಯಿಗಳಿಂದ ಮೇಲೆ): ಭಾರತದಲ್ಲಿ ವ್ಯಾಸಂಗ ಮಾಡಲು: 5%, ವಿದೇಶದಲ್ಲಿ ವ್ಯಾಸಂಗ ಮಾಡಲು:15%
  • ಆಸ್ತಿಯ ಹಕ್ಕು ಪತ್ರ ಅಥವಾ ಇತರೆ ಬಂಡವಾಳ ಪತ್ರಗಳು ಮತ್ತು ಇತರೆ ಸಂಬಂಧ ಪಟ್ಟ ಕಾಗದ ಪತ್ರಗಳು ಇತ್ಯಾದಿ. (ಸಾಲದ ಮೊತ್ತವು 7.50 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಆಗಿದ್ದಲ್ಲಿ)
  • ಸಾಲದ ಪಾವತಿಗೆ ಆಧಾರವಾಗಿಡುವ ಹಣ ಯಾ ಸ್ವತ್ತು, ಅಗತ್ಯವಿದ್ದಾಗ LIC ಪಾಲಿಸಿ( ಅದರ ಒಪ್ಪಿಸುವಿಕೆಯ ಮೌಲ್ಯವು ಸಾಲವನ್ನು ಪಡೆಯುವ ಸಮಯದಲ್ಲಿ ಸಾಲದ ಮೊತ್ತಕ್ಕಿಂತ ಕಡಿಮೆಯಾಗಿರಬಾರದು) /ಷೇರು ಪ್ರಮಾಣ ಪತ್ರಗಳು/ UTIನ ಘಟಕಗಳು ಇತ್ಯಾದಿ. ಬ್ಯಾಂಕಿನ ಧೃಡಪಡಿಸಿದ ತಜ್ಞ ಮೌಲ್ಯಮಾಪಕರ ಮೌಲ್ಯನಿರ್ಣಯ ಪ್ರಮಾಣ ಪತ್ರಗಳು ಮತ್ತು ಭೂಮಿ/ಕಟ್ಟಡಗಳ ವಿಷಯದಲ್ಲಿ ಬ್ಯಾಂಕಿನ ತಜ್ಞ ವಕೀಲರಿಂದ ಕಾನೂನು ಅಭಿಪ್ರಾಯ)

ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಎಲ್ಲಾ ಸಾರ್ವಜನಿಕ ವಲಯ ಹಾಗೇ ಖಾಸಗಿ ವಲಯ ಬ್ಯಾಂಕುಗಳು ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸಲು ಆನ್ಲೈುನ್ ಸೌಲಭ್ಯವನ್ನು ಒದಗಿಸುತ್ತವೆ.ವಿದ್ಯಾರ್ಥಿ/ಹೆತ್ತವರು ಆನ್ಲೈುನ್ ವಿಧಾನನಿಂದ ಅರ್ಜಿ ಸಲ್ಲಿಸುವುದನ್ನು ಅಥವಾ ಭರ್ತಿ ಮಾಡಿದ ಅರ್ಜಿಯನ್ನು ಸಮೀಪದ ಬ್ಯಾಂಕಿಗೆ ಸಲ್ಲಿಸುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಶಿಕ್ಷಣ ಸಾಲಕ್ಕೆ ಆನ್ಲೈಿನ್ ನಲ್ಲಿ ದಾಖಲಿಸಿದ ನಂತರ ಸಂಬಂಧಪಟ್ಟ ವಿದ್ಯಾರ್ಥಿಯು ಆನ್ಲೈನನ್ ನಲ್ಲಿ ಆತನ ಅರ್ಜಿಯ ಸ್ಥಿತಿಗತಿಯನ್ನು ಸಹ ಪರೀಕ್ಷಿಸಲು ಸಾಧ್ಯ .

ಗಮನಿಸಿ: ಸಾಲದ ಮೊತ್ತವು ಕೋರ್ಸಿನ ಅವಧಿ ಮತ್ತು ಸಂಸ್ಥೆಯ ಮೇಲೆ ಅವಲಂಬಿಸಿದೆ ಮತ್ತು ಅದು ಬ್ಯಾಂಕಿನಿಂದ ಬ್ಯಾಂಕಿಗೆ ಮತ್ತು ಕೋರ್ಸಿನಿಂದ ಕೋರ್ಸಿಗೆ ವ್ಯತ್ಯಾಸವಾಗುತ್ತದೆ. ಹಾಗೆಯೇ, ಬಡ್ಡಿಯ ದರ, ಶುಲ್ಕ ಪ್ರಕ್ರಿಯೆ, ಸಾಲದ ಮರು ಪಾವತಿ, ಸಾಲಕ್ಕೆ ಮಿತಿ ಮತ್ತು ಆಧಾರಗಳು ಆಯಾ ಬ್ಯಾಂಕಿನ ಪ್ರತ್ಯೇಕ ಕಾರ್ಯನೀತಿಯನ್ನು ಅವಲಂಬಿಸಿರುತ್ತವೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate