ಹೆಂಗಸರು ಅವರ ದೇಹ ಹೇಕೆ ಕಾರ್ಯ ನಿರ್ವಹಿಸುತ್ತದೆ. ಅದರಲ್ಲೂ ವಿಶೇಷವಾಗಿ ಸಚಿತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದಂತೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಮಹಿಳೆಯರಲ್ಲಿ ಮಗುವಿಗೆ ಜನ್ಮ ನೀಡುವ ಶಕ್ತಿ ವರವಾಗಿರುತ್ತದೆ. ಬಾಲಕಿ 10-13 ವರ್ಷ ತಲುಪುವ ವೇಳೆಗೆ ಅವರ ದೇಹದಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ದೇಹ ಮಗುವಿಗೆ ಜನ್ಮ ನೀಡುವ ಪ್ರಕ್ರಿಯೆಗೆ ಸಿದ್ಧವಾಗುತ್ತದೆ. ಸಾಮಾನ್ಯವಾಗಿ ಋತುಸ್ರಾವ ಚಕ್ರ ಈ ಕೆಳಕಂಡ ಲಕ್ಷಣಗಳನ್ನು ಹೊಂದಿರುತ್ತದೆ.
ರಕ್ತಸ್ರಾವವಾಗುವ ಅವಧಿ ಮೂರರಿಂದ ಐದು ದಿನಗಳು
ಪುನಃ ರಕ್ತಸ್ರಾವ 25-35 ದಿನಗಳ ನಂತರ
ಹರಿಯುವುದು ಹೆಪ್ಪುರಹಿತ
ನಿಯಮಿತವಾಗಿ 28 ದಿನಗಳಿಗೆ ಋ್ಮತುಸ್ರಾವವಾಗುವ ಚಕ್ರದಲ್ಲಿ, ಋತುಸ್ರಾವ ಚಕ್ರದ ಮಧ್ಯದ 10 ದಿನಗಳು (10ನೇ ದಿನದಿಂದ 20ನೇ ದಿನದವರೆಗೆ) ಫಲವತ್ತತೆಯ ಅವಧಿಯಾಗಿರುತ್ತದೆ. ಈ ಅವಧಿಯಲ್ಲಿ ಗರ್ಭಧಾರಣೆಯಾಗುವ ಸಾಧ್ಯತೆ ಇರುತ್ತದೆ. ರಕ್ತಸ್ರಾವ ಪ್ರಾರಂಭವಾದ ದಿನ ಮೊದಲನೇ ದಿನವಾಗುತ್ತದೆ. ಮಹಿಳೆ 13-16ನೇ ವಯಸ್ಸಿನಿಂದ (ಋತುಸ್ರಾವ ಪ್ರಾರಂಭವಾದಾಗ) 45-55ನೇ ವಯಸ್ಸಿನವರೆಗೆ ಗರ್ಭಿಣಿಯಾಗುವ ಸಾಧ್ಯತೆ ಇರುತ್ತದೆ (ಅಚಿತಿಮವಾಗಿ ಋತುಸ್ರಾವ ನಿಲ್ಲುವತನಕ). ಋತುಸ್ರಾವ ನಿಂತಾಗ ಅದನ್ನು ಋತುಬಂಧ ಎಂದು ಕ್ಪರೆಯಲಾಗುತ್ತದೆ. ಋತುಸ್ರಾವ ಅಥವಾ ಮುಟ್ಟು ಮೇಲೆ ಹೇಳಿರುವುದಕ್ಕಿಂತ ಭಿನ್ನವಾಗಿದ್ದರೆ, ಋತುಬಂಧದ ನಂತರ ಮತ್ತೆ ರಕ್ತಸ್ರಾವವಾದರೆ, ಅಥವಾ 55 ವರ್ಷಗಳ ನಂತರವು ರಕ್ತಸ್ರಾವ ಮುಂದುವರಿದರೆ ಅಂತಹ ಮಹಿಳೆಯರು ವೈದ್ಯರನ್ನು ಸಂಪರ್ಕಿಸಬೇಕು.
ಮೂಲ:ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 4/22/2020
ಗರ್ಭಾಶಯದ ಒಳಪಸೆಯನ್ನು ರಕ್ತಸ್ರಾವದ ಜತೆ ಹೊರಹಾಕುವುದೆ ಮುಟ...
ಈ ಪುಸ್ತಕದಲ್ಲಿ ಋತುಸ್ರಾವ ಮತ್ತು ಫಲವತ್ತತೆ, ಗರ್ಭಾವಸ್ಥೆ...