অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ

ಇತಿಹಾಸ

ವಾರ್ತಾ ಇಲಾಖೆಯು ಸರಕಾರದ ಆಶೋತ್ತರಗಳನ್ನು ಜನರಿಗೆ ತಲುಪಿಸುವ ಸರ್ಕಾರಿ ವ್ಯವಸ್ಥೆಯಲ್ಲಿರುವ ಮುಖ್ಯ ಇಲಾಖೆ. ಸರ್ಕಾರ ರೂಪಿಸಿರುವ ಈ ವ್ಯವಸ್ಥೆಯಲ್ಲಿ ವಾರ್ತಾ ಇಲಾಖೆಯ ಪಾತ್ರ ಬಹುಮುಖ್ಯ. ಇಲಾಖೆಯ ಪಾತ್ರವೂ ಅಷ್ಟೇ ಸ್ಪಷ್ಟ. ಸರ್ಕಾರದ ವಿವಿಧs ಯೋಜನೆ, ಕಾರ್ಯಕ್ರಮ, ಸಾಧನೆ ಮತ್ತು ಮಾಹಿತಿಗಳನ್ನು ವಿವಿಧ ಮಾಧ್ಯಮಗಳ ಮೂಲಕ ತಲುಪಿಸುವುದೇ ವಾರ್ತಾ ಇಲಾಖೆಯ ಪ್ರಧಾನ ಕಾರ್ಯ. ಇಲಾಖೆಯು ಸರ್ಕಾರದ ಅಭಿವೃದ್ದಿ ಕಾರ್ಯಕ್ರಮಗಳು ಮತ್ತು ವಿವಿಧ ಯೋಜನೆಗಳ ಬಗ್ಗೆ ಸಮೂಹ ಮಾಧ್ಯಮಗಳ ನೆರವಿನಿಂದ ಸರ್ಕಾರದ ಪರವಾಗಿ ಅವುಗಳಿಗೆ ಪ್ರಚಾರ ನೀಡುತ್ತದೆ. ಕೆಲವೊಂದು ವೇಳೆ ನೇರವಾಗಿ ತನ್ನದೇ ಆದ ವಿವಿಧ ಮಾದ್ಯಮಗಳನ್ನು ಬಳಸಿಕೊಂಡು ಆ ಮೂಲಕವೂ ಜನರನ್ನು ತಲುಪುತ್ತದೆ. ಮಾಹಿತಿ ವರ್ಗಾವಣೆ ಮತ್ತು ಪ್ರಚಾರ ನೀಡುವುದು ಇಲಾಖೆಯ ಪ್ರಮುಖ ಕರ್ತವ್ಯ.  ಜೊತೆಗೆ ಸಮೂಹ  ಮಾದ್ಯಮಗಳು ಮತ್ತು ಅದರ ಪ್ರತಿನಿಧಿಗಳಿಗೆ ಕಲ್ಯಾಣ, ಸವಲತ್ತು ಮತ್ತು ಸೇವೆಗಳನ್ನು ನೀಡುತ್ತದೆ.  ಇವೆಲ್ಲದರ ಜೊತೆಗೆ ಜನರ ಕುಂದು-ಕೊರತೆ, ಸಲಹೆಗಳನ್ನು ಸರ್ಕಾರಕ್ಕೆ ತಲುಪಿಸುವಲ್ಲಿಯೂ ನೆರವಾಗುತ್ತಿದೆ.

ಹಿನ್ನೆಲೆ

ವಾರ್ತಾ ಇಲಾಖೆ ಆರು ದಶಕಗಳ ಸುಧೀರ್ಘ ಇತಿಹಾಸ ಹೊಂದಿದೆ. ವಾರ್ತಾ ಇಲಾಖೆಯು ೧೯೪೯ರಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಅಂದಿನ ಮೈಸೂರು ಸರ್ಕಾರದಲ್ಲಿ ಪ್ರಚಾರ ಇಲಾಖೆ ಹೆಸರಿನಲ್ಲಿ ಆರಂಭವಾಗಿತ್ತು. ೧೯೫೬ರಲ್ಲಿ ಗೃಹ ಇಲಾಖೆಯ ಅಡಿಯಲ್ಲಿ ಮುಖ್ಯ ಮಂತ್ರಿಗಳ ಸಚಿವಾಲಯದೂಂದಿಗೆ ಜೋಡಣೆಗೊಂಡಿತು. ಪ್ರಧಾನ ವಾರ್ತಾ ಅಧಿಕಾರಿ ಮತ್ತು ಓರ್ವ ಛಾಯಾಗ್ರಾಹಕ ಹಾಗೂ ಬೆರೆಳೆಣಿಕೆಯ ಸಿಬ್ಬಂದಿಯೊಂದಿಗೆ ಅಠಾರ ಕಚೇರಿಯಲ್ಲಿ (ಇಂದಿನ ಹೈಕೋರ್ಟ ಕಟ್ಟಡದಲ್ಲಿ) ಕಾರ್ಯಾರಂಭ ಮಾಡಿತು. ಮುಖ್ಯಮಂತ್ರಿಯವರ ಕಚೇರಿಯ ಅವಶ್ಯಕತೆಗೆ ಅನುಗುಣವಾಗಿ ಪತ್ರಿಕಾ ಪ್ರಕಟಣೆಗಳ ಬಿಡುಗಡೆ ಮತ್ತು ಇತರೆ ಪ್ರಚಾರ ಕಾರ್ಯಗಳನ್ನು ನಿರ್ವಹಿಸುವ ಜವಾಬ್ಧಾರಿ ನಿರ್ವಹಿಸಲಾಗುತ್ತಿತ್ತು .

೧೯೬೧ರಲ್ಲಿ ಪ್ರಧಾನ ವಾರ್ತಾ ಅಧಿಕಾರಿ ಹುದ್ದೆಯನ್ನು ಮೇಲ್ದರ್ಜೆಗೇರಿಸಲಾಯಿತು. ಅಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಎಂದು ಪರಿವರ್ತನೆಯಾದ ಇಲಾಖೆಗೆ ನಿರ್ದೇಶಕರೇ ಮುಖ್ಯಸ್ಥರು. ಜೊತೆಗೆ, ಮತ್ತಷ್ಟು ಸಿಬ್ಬಂದಿಯು ಈ ಅವಧಿಯಲ್ಲಿ ಸೇರ್ಪಡೆಗೊಂಡಿದ್ದರು. ಕೆಲವೇ ವರ್ಷಗಳ ಅವಧಿಯಲ್ಲಿ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯಾಗಿ ಮತ್ತೊಮ್ಮೆ ಬದಲಾವಣೆಯಾಗಿತ್ತು. ಆಯ್ದ ಜಿಲ್ಲೆಗಳಲ್ಲಿ ಜಿಲ್ಲಾ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯನ್ನು ಆರಂಭಿಸಲಾಯಿತು.  ರಾಜ್ಯಗಳ ಏಕೀಕರಣಗೊಂಡ ಅವಧಿಯಲ್ಲಿ ಮುಂಬೈ-ಕರ್ನಾಟಕ ಮತ್ತು ಹೈದರಾಬಾದ್-ಕರ್ನಾಟಕದ ಕೆಲವು ಭಾಗಗಳು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದವು. ಈ ಭಾಗಗಳಲ್ಲೂ ಇಲಾಖೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಾಯಿತು.

ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದ ಹಿನ್ನೆಲೆಯಲ್ಲಿ ೧೯೭೪ ರಲ್ಲಿ ಪ್ರವಾಸೋದ್ಯಮ ಇಲಾಖೆಯನ್ನು ವಾರ್ತಾ ಇಲಾಖೆಯಿಂದ ಪ್ರತ್ಯೇಕಿಸಲಾಯಿತು.  ವಾರ್ತಾ ಮತ್ತು ಪ್ರಚಾರ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ೨೦೦೦ ರಲ್ಲಿ ವಾರ್ತಾ ಇಲಾಖೆ ಎಂದು ಮರುನಾಮಕರಣವಾಗಿ ಇಂದು ಇದೇ ಹೆಸರಿನಿಂದ ರಾಜ್ಯಾದಾದ್ಯಂತ ಚಿರಪರಿಚಿತವಾಗಿದೆ.

ಅಠಾರ ಕಚೇರಿಯಲ್ಲಿ ಆರಂಭಗೊಂಡ ವಾರ್ತಾ ಇಲಾಖೆಯು, ಕೆಲ ಕಾಲ ವಿಧಾನ ಸೌಧದಲ್ಲಿ ನೆಲೆ ನಿಂತಿತ್ತು.  ಆ ಬಳಿಕ ಬೆಂಗಳೂರಿ ಹೈಗ್ರೌಂಡ್ಸ್ ಬಳಿ ಇರುವ ಬಾಲಬ್ರೂಯಿಗೆ ಸ್ಥಳಾಂತರಗೊಂಡಿತ್ತು. ನಂತರ ಇನ್‌ಫೆಂಟ್ರಿ ರಸ್ತೆಗೆ ಸ್ಥಳಾಂತರಗೊಂಡಿತ್ತು. ಇಲ್ಲಿಂದ ಅಲ್ಪ ಕಾಲಾವಧಿಗೆ ಶಿವಾಜಿನಗರದಲ್ಲಿ ತಾತ್ಕಾಲಿಕವಾಗಿ ನೆಲೆ ಕಂಡುಕೊಂಡಿತ್ತು. ಈಗ ಭಗವಾನ್ ಮಹಾವೀರ್ ರಸ್ತೆಯಲ್ಲಿ(ಇನಫೆಂಟ್ರಿ ರಸ್ತೆ) ಹಳೆ ಕಟ್ಟಡವಿದ್ದ ಸ್ಥಳದಲ್ಲೇ ನೂತನ ಕಟ್ಟಡ ತಲೆಎತ್ತಿದೆ.

ಸುದ್ದಿ ಮತ್ತು ಪತ್ರಿಕಾ ಶಾಖೆ

ಸುದ್ದಿ ಮತ್ತು ಪತ್ರಿಕಾ ಶಾಖೆಯ ಸಂಕ್ಷಿಪ್ತ ವಿವರ

ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಹೆಸರು ಪಡೆದ ಪತ್ರಿಕಾ ರಂಗದ ಜತೆ ನಿಕಟ ಬಾಂಧವ್ಯ ಹೊಂದುವ ಮೂಲಕ ಸರ್ಕಾರದ ಕಾರ್ಯಕ್ರಮಗಳಿಗೆ ಮುದ್ರಣ ಮತ್ತು ವಿದ್ಯುನ್ಮಾನ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರ ದೊರಕಿಸಿಕೊಡುವ ಕಾರ್ಯದಲ್ಲಿ ಸುದ್ದಿ ಮತ್ತು ಪತ್ರಿಕಾ ಶಾಖೆಯು ನಿರತವಾಗಿದೆ. ಈ ಶಾಖೆಯಿಂದ ಕೈಗೊಳ್ಳಲಾಗುವ ವಿವಿಧ ಕಾರ್ಯಗಳ ಸಂಕ್ಷಿಪ್ತ ವಿವರ ಇಂತಿದೆ.

  • ಮುಖ್ಯಮಂತ್ರಿ ಮತ್ತಿತರ ಸಚಿವರ ಪತ್ರಿಕಾಗೋಷ್ಠಿಗಳನ್ನು ಏರ್ಪಡಿಸುವುದು.
  • ಪತ್ರಿಕಾ ಪ್ರಕಟಣೆ, ವಿಶೇಷ ಲೇಖನ, ಯಶಸ್ವಿ ಕಥೆಗಳನ್ನು ಬಿಡುಗಡೆ ಮಾಡುವುದು.
  • ಸರ್ಕಾರದ ಬಗ್ಗೆ ಪತ್ರಿಕಾ ಮಾಧ್ಯಮಗಳಲ್ಲಿ ಬರುವ  ಟೀಕೆ ಟಿಪ್ಪಣಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿ ಸ್ಪಷ್ಟೀಕರಣ ಪಡೆದು ಪತ್ರಿಕೆಗಳಿಗೆ ಕಳುಹಿಸುವುದು.
  • ರಾಜ್ಯ ಮಟ್ಟದ ಪ್ರಮುಖ ಸಾಂಸ್ಕೃತಿಕ ಮತ್ತಿತರ ಸಮಾರಂಭಗಳಿಗೆ ಪ್ರತಿ ಜಿಲ್ಲೆಯಲ್ಲಿ ಪತ್ರಕರ್ತರನ್ನು ಕರೆದುಕೊಂಡು ಹೋಗುವುದು.
  • ಅಭಿವೃದ್ಧಿ ಹೊಂದಿದ ಸ್ಥಳಗಳಿಗೆ ಪತ್ರಕರ್ತರ ಪ್ರವಾಸ ಏರ್ಪಡಿಸುವುದು.
  • ಕಾರ್ಯನಿರತ ಪತ್ರಕರ್ತರಿಗೆ  ಹಾಗೂ ಹಿರಿಯ ಪತ್ರಕರ್ತರಿಗೆ  ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲು ಕಾರ್ಯನಿರತ ಪತ್ರಕರ್ತರ ಕ್ಷೇಮನಿಧಿ ದತ್ತಿ ಹಾಗೂ ಹಿರಿಯ ಪತ್ರಕರ್ತರ ಕ್ಷೇಮನಿಧಿ ದತ್ತಿ ಸ್ಥಾಪಿಸಲಾಗಿದೆ.
  • ನಿವೃತ್ತ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮಾಸಾಶನ ನೀಡಲಾಗುತ್ತಿದೆ.
  • ಪರಿಶಿಷ್ಟ ಜಾತಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ / ಡಿಜಿಟಲ್ ಕ್ಯಾಮರಾ ವಿತರಣೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿ ಕೌಶಲ್ಯ ಹಾಗೂ ನಿರೂಪಣಾ ಕೌಶಲ್ಯ ತರಬೇತಿ ವ್ಯವಸ್ಥೆ ಮಾಡುವುದು.
  • ಪತ್ರಿಕಾ ವೃತ್ತಿ ನಿರತರನ್ನು  ಪ್ರೋತ್ಸಾಹಿಸಲು ಪತ್ರಿಕೋದ್ಯಮ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಖ್ಯಾತ ಪತ್ರಕರ್ತ ದಿ|| ಟಿ.ಎಸ್.ರಾಮಚಂದ್ರರಾವ್ ಮತ್ತು ಮೊಹರೆ ಹಣಮಂತರಾಯರ ಹೆಸರಿನಲ್ಲಿ ವಾರ್ಷಿಕ ತಲಾ ಒಂದು ಲಕ್ಷ ರೂ. ನಗದು ಪ್ರಶಸ್ತಿಯನ್ನು  ನೀಡಲಾಗುತ್ತಿದೆ.
  • ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ  ಪತ್ರಿಕೋದ್ಯಮ  ವಾರ್ಷಿಕ ಪ್ರಶಸ್ತಿಗಳನ್ನು ಸಹ ನೀಡಲಾಗುತ್ತಿದೆ.
  • ಅರ್ಹ ಹಾಗೂ ಅಪೇಕ್ಷಿತ ಪತ್ರಕರ್ತರಿಗೆ ನಿಯಮಾನುಸಾರ ಪತ್ರಿಕಾ ಮಾನ್ಯತಾ ಪತ್ರ ನೀಡಲಾಗುವುದು.
  • ಮಾನ್ಯತಾ ಪತ್ರ ಹೊಂದಿದ ಪತ್ರಕರ್ತರು ವೃತ್ತಿ ಸಂಬಂಧಿ ಕಾರ್ಯ ಚಟುವಟಿಕೆಗಳಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡುಗಳನ್ನು ವಿತರಿಸಲಾಗುತ್ತಿದೆ.
  • ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಪತ್ರಿಕಾ ಭವನಗಳ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಲಾಗಿದೆ.
  • ಪತ್ರಕರ್ತರಲ್ಲಿ ವೃತ್ತಿ ಕೌಶಲ್ಯ ಹೆಚ್ಚಿಸಲು ನೆರವಾಗಲು ಕರ್ನಾಟಕ ಮಾಧ್ಯಮ ಅಕಾಡೆಮಿ ಸ್ಥಾಪಿಸಲಾಗಿದೆ.

ಪ್ರಕಟಣಾ ಶಾಖೆ

ಸರ್ಕಾರದ ಯೋಜನೆಗಳನ್ನು  ಜನಸಮುದಾಯಕ್ಕೆ ತಲುಪಿಸಿ ಆದರ ಫಲಾನುಭವಿಗಳು ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಜನಜಾಗೃತಿ ಉಂಟು ಮಡುವ ದಿಸೆಯಲ್ಲಿ ಕಾರ್ಯ ನಿರ್ವಹಿಸುವದು ಪ್ರಕಟಣಾ  ಶಾಖೆಯ ಪ್ರಮುಖ ಪಾತ್ರ.

  • ಇಲಾಖೆಯ  ಮಾಸಿಕಗಳಾದ ‘ಜನಪದ’  ಹಾಗೂ ‘ಮಾರ್ಚ್ ಆಪ್ ಕರ್ನಾಟ’ಗಳಲ್ಲಿ  ಸರ್ಕಾರದ ಯೋಜನೆಗಳು, ಸಾಧನೆಗಳು ಕುರಿತಂತೆ ಲೇಖನಗಳ ಪ್ರಕಟಣೆ.
  • ಸರ್ಕಾರದ ಯೋಜನೆಗಳ ಕುರಿತಂತೆ ಮಡಿಕೆಪತ್ರ, ಕಿರುಹೊತ್ತಿಗೆ ಪ್ರಕಟಣೆ.
  • ಪ್ರಚಾರ ಫಲಕಗಳ  ಮೂಲಕ  ಹಾಗೂ ತಗಡಿನ ಫಲಕಗಳ  ಮೂಲಕ  ಸರ್ಕಾರದ ಅಭಿವೃದ್ಧಿ  ಯೋಜನೆಗಳನ್ನು ಪ್ರಚರಪಡಿಸುವುದು.

ಈಗಾಗಲೇ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳು

  • ಭಾಗ್ಯಲಕ್ಷ್ಮಿ
  • ಗ್ರಾಮೀಣಾಭಿವೃದ್ಧಿ
  • ಸಂಧ್ಯಾಸುರಕ್ಷಾ/ ಅರೋಗ್ಯ ಕವಚ
  • ತಾಯಿಭಾಗ್ಯ
  • ಕೃಷಿ /ರೈತರಿಗೆ  ನೆರವು
  • ನಗರಾಭಿವೃದ್ಧಿ  ಯೋಜನೆಗಳು

ಮುಂತಾದುವಕ್ಕೆ ಸಂಬಂಧಿಸಿದಂತೆ  ಮಡಿಕೆ ಪತ್ರ-ಕಿರುಹೊತ್ತಿಗೆಗಳ ಪ್ರಕಟಣೆ.

ನಿಯತಕಾಲಿಕೆಗಳು

ಜನಪದ‘

‘ಜನಪದ’  ಮಾಸಿಕ  ಪ್ರಮುಕವಾಗಿ ಸರ್ಕಾರದ ಅಭಿವೃದ್ಧಿ   ಯೋಜನೆಗಳ ಮುಖವಾಣಿ. ಈ ಮಾಸಿಕದಲ್ಲಿ  ಪ್ರತಿ ತಿಂಗಳು ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ರವಲ್ಲದೆ  ಪ್ರತಿ  ವರ್ಷದ  ಬಜೆಟ್  ಮಂಡನೆ ಸಂದರ್ಭದಲ್ಲಿ  ಮುಂಗಡಪತ್ರದ  ಸಂಪೂರ್ಣ  ಮಾಹಿತಿಯುಳ್ಳ ಸಂಚಿಕೆಯನ್ನು ಹೊರತರಲಾಗುತ್ತದೆ.

ಆಯಾ ತಿಂಗಳುಗಳಲ್ಲಿ  ಬರುವ  ವಿಶೇಷ ದಿನಗಳು, ಮಹಾಪುರುಷರ  ಜಯಂತಿಗಳು , ಕಲೆ, ಸಂಸ್ಕೃತಿ, ಐತಿಹಾಸಿಕ ಸ್ಥಳಗಳು  ಹಾಗೂ  ಹಬ್ಬ-ಹರಿದಿನಗಳ ಬಗ್ಗೆಯೂ ಮಾಹಿತಿ  ಇರುತ್ತದೆ  ಜನಪದ ಮಾಸಿಕವು  ಹೈನುಗಾರಿಕೆ, ಮೀನುಗಳು   ಸಾವಯುವ  ಕೃಷಿ ಹಾಗೂ ಸಾಧಕರ ಕುರಿತ ಲೇಖನಗಳಿಗೂ  ಆದ್ಯತೆ  ನೀಡುತ್ತದೆ

ಸರ್ಕಾರದ ಯೋಜನೆಗಳ ವಿವರಗಳನನ್ನಳಗೊಂಡ ಈ ಸಂಚಿಕೆಗಳಿಂದ ಗ್ರಾಮಪಂಚಾಯಿತಿ ಸದಸ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ರಾಜ್ಯ ಸರ್ಕಾರ/ಕೇoದ್ರ  ಸರ್ಕಾರದ ಸ್ಪರ್ಧಾತ್ಮಕ  ಪರೀಕ್ಷೆಗಳಿಗೆ ತಯಾರಿ  ನಡೆಸುವ ವಿದ್ಯಾರ್ಥಿಗಳಿಗೆ ವಿಷಯ ಸಂಗ್ರಹಣೆ  ಈ ಸಂಚಿಕೆಗಳ ಬಹಳ ಉಪಯುಕ್ತವಾಗಿದೆ. ಗ್ರಂಥಾಲಯಗಳಿಗೆ   ಹಾಗೂ ಸರ್ಕಾರ ಶಾಲಾ ಕಾಲೇಜೂಗಳಿಗೆ ಈ ಮಾಸಿಕವನ್ನು ಉಚಿತವಾಗಿ   ನೀಡಲಾಗುತ್ತದೆ.

ಮಾರ್ಚ್  ಆಫ್  ಕರ್ನಾಟಕ

ವಿಭಾಗದ ವಿವರ ಪ್ರಕಟಣೆ

ಪ್ರಕಟಣಣಾ  ಶಾಖೆಯ  ಜವಾಬ್ಧಾರಿಯನ್ನು  ಉಪನಿರ್ದೇಶಕರು ನಿರ್ವಯಿಸುತ್ತಾನೆ .  ಈ ವಿಭಾಗದಲ್ಲಿ ‘ಜನಪದ’ ಹಾಗೂ ‘ಮಾರ್ಚ್  ಆಫ್  ಕರ್ನಾಟಕ’  ಮಾಸಿಕಗಳು  ಮಾತ್ರವಲ್ಲದೆ  ಸರ್ಕಾರದ  ವಿವಿಧ ಯೋಜನೆಗಳ ಕುರಿತು  ಕಿರುಹೊತ್ತಿಗೆ,  ಕೈಪಿಡಿ ಮಡಿಕೆ  ಪತ್ರಗಳನ್ನು  ಈ  ಶಾಖೆಯ  ಮುಖಾಂತರ  ಬಿಡುಗಡೆಗೊಳಿಸಲಾಗುವುದು.

ಜಾಯಿ ರಾತು ಫಲಕ, ತಗಡಿನ ಫಲಕ ಮೂಲಕ  ಸರ್ಕಾರದ ಅಭಿವೃದ್ಧಿ  ಯೋಜನೆಗಳಿಗೆ ಪ್ರಚಾರ ನೀಡಲಾಗುವುದು.

‘ಜನಪದ’  ಹಾಗೂ ‘ಮಾರ್ಚ್  ಆಫ್  ಕರ್ನಾಟಕ’  ಮಾಸಿಕ ಪತ್ರಿಕೆಗಳು ಎಲ್ಲ ಗ್ರಾಮ ಗ್ರಾಮಪಂಚಾಯಿತಿಗಳಿಗೆ ಗ್ರಂಥಾಲಯಗಳಿಗೆ   ಉಚಿತವಾಗಿ   ವಿತರಣೆಯಾಗುತ್ತದೆ .

ನಿಯತ ಪ್ರಕಟಣೆಗಳು

ವಾರ್ತಾ  ಎಲಾಖೆಯು ಪ್ರತೀ  ವರ್ಷ ಸರ್ಕಾರದ ಸಾಧನೆ- ಅಭಿವೃದ್ಧಿ, ಸರ್ಕಾರದ ಯೋಜನೆಗಳು  ಕುರಿತ ವಿವರಗಳ ಮಾಹಿತಿಯನ್ನು  ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡುತ್ತಿರುತ್ತದೆ. ನಿಯತ  ಪ್ರಕಟಣೆಗಳ ವೆಚ್ಚಕ್ಕಾಗಿಯೇ  ಅಯದ್ಯಯಾದಲ್ಲಿ     ಮುಂಗಡವನ್ನು ನಿಗದಿ  ಮಾಡಲಾಗಿರುತ್ತದೆ.

ವಿಷೇಶ ಪ್ರಕಟಣೆಗಳು

ನಮ್ಮ  ಕರ್ನಾಟಕದ ಇತಿಹಾಸಿಕ, ಕಲೆ, ಸಂಸ್ಕೃತಿ, ವ್ಯೆಭವವನ್ನು ಬಿಂಬಿಸುವ ಹಲವಾರು ಪುಸ್ತಕಗಳನ್ನು ಸುಂದರ ವರ್ಣನೆಯೊಂದಿಗೆ; ಅತಿ ಸುಂದರ ಲೇಖಾಚಿತ್ರಗಳು ಅತ್ಯುತ್ತಮ ಛಾಯಾಚಿತ್ರಗಳೂಂದಿಗೆ ಪ್ರಕಟಿಸಲಾಗಿದೆ.

ಯೋಜನಾಧಾರಿತ ಪ್ರಕಟಣೆಗಳು

ಸರ್ಕಾರವು ಸಮಾಜದ ವಿವಿಧ ಸ್ತರಗಳ  ಜನರ ಅಭಿವೃದ್ಧಿಗಾಗಿ  ವಿವಿಧ ಇಲಾಖೆಗಳಲ್ಲಿ  ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ. ಸರ್ಕಾರದ ಯೋಜನೆಗಳನ್ನು  ಯಶಸ್ವಿಯಾಗಿ ಜನರಿಗೆ ತಲುಪಿಸಿ ಅವುಗಳ ಬಗ್ಗೆ ಮೂಡಿಸಲು ‘ಪ್ರಕಟಣಾ ಶಾಖೆ’ ವತಿಯಿಂದ  ಮಡಿಕೆ  ಪತ್ರ, ಕಿರುಹೊತ್ತಿಗೆಗಳನ್ನು ಪ್ರಕಟಿಸಲಾಗುವುದು.

ಭಾಗ್ಯಲಕ್ಷ್ಮಿ, ಅರೋಗ್ಯ ಕವಚ , ಮಡಿಲು, ಸಂಧ್ಯಾಸುರಕ್ಷಾ, ಸುವರ್ಣಭೂಮಿ, ಭೂ  ಚೇತನ, ಜಲ ಸಂಪನ್ಮೂಲ  ಹೀಗೆ ವಿವಿಧ ಇಲಾಖೆಗಳ  ಯೋಜನೆಗಳು  ಅವುಗಳ  ಸೌಲಭ್ಯ-ಸವಲತ್ತು,  ಅರ್ಹ ಫಲಾನುಭವಿಗಳ ವಿವರಗಳನ್ನು ಈ ಪ್ರಕಟಣೆಗಳು ಒಳಗೊಂಡಿರುತ್ತದೆ.

ಮಡಿಕೆ ಪತ್ರಗಳು ಕಿರುಹೊತ್ತಿಗೆಗಳು

ಸರ್ಕಾರದ  ಹಲವಾರು ಅಭಿವೃದ್ಧಿಗಳ ಯೋಜನೆಗಳ ಅರಿವು  ಹೆಚ್ಚಿನ  ಫಲಾನುಭವಿಗಳಿಗೆ  ಇರುವುದಿಲ್ಲ.  ಅದು  ಬಡತನ  ರೇಖೆಗಿಂತ ಕೆಳಗಿರುವವರಿಗೆ  ಸರ್ಕಾರ ಒದಗಿಸಿರುವ  ಸವಲತ್ತಾಗಬವುದು, ಮಕ್ಕಳ  ಹಕ್ಕು, ಮಹಿಳೆಯರ ಹಕ್ಕು, ರೈತರ ಹಕ್ಕು ಹೀಗೆ ಯಾವ ಯೋಜನೆ-ಸೌಲಭ್ಯವಾದರೂ ಆಗಬವುದು.  ಇವುಗಳ ಬಗ್ಗೆ ಜಾಗೃತಿ ಮೂಡಿಸಲು  ಯೋಜನೆಗಳ ಸಂಪೂರ್ಣ ವಿವರಗಳನ್ನು ಮಡಿಕೆ ಪತ್ರ ಕಿರುಹೊತ್ತಿಗೆಗಳಲ್ಲಿ  ಮುದ್ರಿಸಿ  ಅರಿವು ಮೂಡಿಸಲಾಗುವುದು.

ಮೂಲ : ಕರ್ನಾಟಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಕೊನೆಯ ಮಾರ್ಪಾಟು : 4/6/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate