ಬಳಕೆಯಲ್ಲಿರುವ ಜೈವಿಕ ಗೊಬ್ಬರಗಳು
ಪುಡಿ ರೂಪದ ಜೈವಿಕ ಗೊಬ್ಬರಗಳು
ಇದ್ದಿಲು ಪುಡಿ, ಕಲ್ಲಿದ್ದಲು, ಪ್ರೆಸ್ಮಡ್, ಕೊಟ್ಟಿಗೆ ಗೊಬ್ಬರ ಮುಂತಾದ ಮಾಧ್ಯಮಗಳಲ್ಲಿ ಉಪಯುಕ್ತ ಸೂಕ್ಷ್ಮಣು ಜೀವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲಾಗಿರುತ್ತದೆ. ಈ ರೂಪದ ಜೈವಿಕ ಗೊಬ್ಬರವು ಬೀಜೋಪಚಾರ, ಮಣ್ಣಿಗೆ ಸೇರಿಸುವಿಕೆ ಮತ್ತು ಸಸ್ಯದ ಬೇರಿನ ಉಪಚರಣೆಗೆ ಸೂಕ್ತವಾಗಿರುತ್ತದೆ. ಈ ಮಾಧ್ಯಮಗಳು ಇಂಗಾಲಯುಕ್ತವಾಗಿದ್ದು ಹೆಚ್ಚಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವಿದ್ದು ಇದರ ಜೊತೆಗೆ ಸೇರಿಸಿದ ಸೂಕ್ಷ್ಮಾಣುಜೀವಿಗಳನ್ನು ಸುಮಾರು 6 ತಿಂಗಳು ಕಾಲ ಕಾಪಾಡಿಕೊಂಡು ಬರಲು ಈ ಮಾಧ್ಯಮಗಳು ಸಹಾಯಕವಾಗಿದೆ.
ಹರಳು ರೂಪದ ಜೈವಿಕ ಗೊಬ್ಬರಗಳು
ಹರಳು ರೂಪದ ಜೀವಾಣು ಗೊಬ್ಬರವು ಕುರಿಗೆ ಬಿತ್ತನೆಯ ಜೊತೆಯಲ್ಲಿ ಬೀಜದೊಂದಿಗೆ ಹಾಕಲು ಸಹಾಯಕವಾಗಿದೆ. ಈ ರೂಪದ ಜೈವಿಕ ಗೊಬ್ಬರವು ಮಣ್ಣಿಗೆ ಎರಚಲುಸೂಕ್ತ. ಇದರ ಶೇಖರಣಾ ಅವಧಿ ಬಹಳಷ್ಟು ಕಾಲ ಇರುತ್ತದೆ. ಈ ಗೊಬ್ಬರವನ್ನು ಬಳಸಿದಾಗ ಒಂದು ಎಕರೆಗೆ ಶಿಫಾರಸ್ಸು ಮಾಡಿದ ಶೇ. 50 ರಷ್ಟು ಸಾರಜನಕ ಹಾಗೂ ರಂಜಕ ಒದಗಿಸುವ ರಸಗೊಬ್ಬರವನ್ನು ಉಳಿಸಬಹುದು.
ದ್ರವ ರೂಪದ ಜೈವಿಕ ಗೊಬ್ಬರಗಳು
- ಜೈವಿಕ ಕ್ರಿಯೆಯಿಂದ ಸ್ಥಿರೀಕರಣಗೊಂಡ ಸಾರಜನಕವು ಸಸ್ಯದ ಬೆಳವಣಿಗೆಗೆ ಸಹಾಯಕವಾಗುವುದಲ್ಲದೆ ಮಣ್ಣಿನಲ್ಲಿ ಬಹಳಷ್ಟು ಕಾಲ ನೆಲೆಸಿ ಮುಂದಿನ ಬೆಳೆಗೂ ದೊರೆಯುತ್ತದೆ. ಗೊಬ್ಬರದ ಬಳಕೆಯಿಂದ ಭೂಮಿಯ ಫಲವತ್ತತೆಯು ಹೆಚ್ಚುತ್ತದೆ. ಹಾಗೂ ಮಣ್ಣಿನ ಗುಣಗಳನ್ನು ವೃದ್ಧಿಗೊಳಿಸುತ್ತದೆ.
- ಜೈವಿಕ ಗೊಬ್ಬರದ ಬಳಕೆಯಿಂದ ಬೀಜ ಮೊಳೆಯುವಿಕೆ ಹಾಗೂ ಸಸ್ಯ ಬೆಳೆಯುವ ಚೇತನವನ್ನು ಹೆಚ್ಚಿಸುತ್ತದೆ.
- ಬೆಳೆಯ ಬೆಳವಣಿಗೆಗೆ ಸಹಾಯಕವಾಗಿ ಹಸಿರೆಲೆಗಳ ಎಲೆಗಳಲ್ಲಿ ದ್ಯುತಿಸಂಶ್ಲೇಷಣಾ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ., ಗಿಡದಲ್ಲಿ ಹೆಚ್ಚಿನ ಹೂ ಬಿಡುವಿಕೆ ಹಾಗೂ ಪರಿಪಕ್ವವಾದ ಪಸಲನ್ನು ಕಾಣಬಹುದು.
- ಅನಾವೃಷ್ಠಿ, ರೋಗಗಳನ್ನು ಎದುರಿಸುವ ಶಕ್ತಿ ಬೆಳೆಗೆ ಬರುತ್ತದೆ.
- ಜೈವಿಕ ಗೊಬ್ಬರ ಕಡಿಮೆ ವೆಚ್ಚದ ತಾಂತ್ರಿಕತೆಯಾಗಿದ್ದು ಅತ್ಯಲ್ಪ ಖರ್ಚಿನಲ್ಲಿ ಹೆಚ್ಚಿನ ಬೆಳೆಯ ಇಳುವರಿ ಮತ್ತು ಆದಾಯವನ್ನು ಪಡೆಯಬಹುದು.
- ರಸಗೊಬ್ಬರ ಬಳಕೆಯನ್ನು ಮಿತಗೊಳಿಸಿ ಪರಿಸರ ಮಾಲಿನ್ಯವಾಗದಂತೆ ಕಾಪಾಡುತ್ತದೆ.
- ಜೈವಿಕ ಗೊಬ್ಬರಗಳನ್ನು ಬಳಸಿ ರೈತು ತಮ್ಮೆಲ್ಲಾ ಪರಿಪಕ್ವವಾದ ಗೊಬ್ಬರವನ್ನು ಅತಿ ಕಡಿಮೆ ದಿನಗಳಲ್ಲಿ ತಯಾರು ಮಾಡಿಕೊಳ್ಳಬಹುದು.
- ಜೈವಿಕ ಗೊಬ್ಬರವನ್ನು ಸಾಗಿಸಲು ಸುಲಭ
ಮನ್ನೆಚ್ಚರಿಕೆ ಕ್ರಮಗಳು
- ಲಕೋಟೆಯ ಮೇಲೆ ನಮೂದಿಸಿದ ಬೆಳೆಗೆ ಮಾತ್ರ ಉಪಯೋಗಿಸಬೇಕು.
- ಅವಧಿ ಮುಗಿಯುವುದರೊಳಗೆ ಜೈವಿಕ ಗೊಬ್ಬರವನ್ನು ಬಳಸಿರಿ
- ಜೈವಿಕ ಗೊಬ್ಬರವನ್ನು ಯಾವುದೇ ಕಾರಣಕ್ಕೂ ಗೊಬ್ಬರ ಮತ್ತು ಕ್ರಿಮಿಕೀಟನಾಶಕಗಳೊಂದಿಗೆ ಮಿಶ್ರ ಮಾಡಿ ಬಳಸಬಾರದು.
ಮೂಲ :
ದೂರ ಶಿಕ್ಷಣ ಘಟಕ
ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 1/28/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.