ಪ್ರೌಢ ರೇಷ್ಮೆ ಹುಳು ಸಾಕಾಣಿಕೆ
ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ವೈಜ್ಞಾನಿಕ ಬೇಸಾಯ ಕ್ರಮಗಳ ಜೊತೆಗೆ ನೂತನ ತಾಂತ್ರಿಕತೆಗಳನ್ನೊಳಗೊಂಡ ರೇಷ್ಮೆ ಹುಳು ಸಾಕಾಣಿಕೆ ಬಹು ಮುಖ್ಯ ಪಾತ್ರವಹಿಸುತ್ತದೆ. ರೇಷ್ಮೆ ಹುಳು ತನ್ನ ಜೀವನ ಚಕ್ರದಲ್ಲಿ ಸುಮಾರು 24-28 ದಿನಗಳವರೆಗೆ ಹುಳುವಿನ ಹಂತದಲ್ಲಿರುತ್ತದೆ. ಮೂರನೇ ಅಥವ ನಾಲ್ಕನೇ ಹಂತದಿಂದ ಗೂಡು ಕಟ್ಟುವವರೆಗೆ ಪ್ರೌಢ ಹುಳು ಸಾಕಾಣಿಕೆ ಎಂದು ಕರೆಯುತ್ತಾರೆ. ಪ್ರೌಢ ಹುಳುವಿನ ಹಂತದಲ್ಲಿ ರೇಷ್ಮೆ ಹುಳುಗಳು ಶೇ. 94 ರಷ್ಟು ಸೊಪ್ಪನ್ನು ತಿಂದು, 133 ಪಟ್ಟು ದೇಹ ಗಾತ್ರದಲ್ಲಿ ಬೆಳೆದು, 125 ಪಟ್ಟು ದೇಹದ ತೂಕವನ್ನು ಹೆಚ್ಚಿಸಿ ಸುಮಾರು 1000 ಪಟ್ಟು ರೇಷ್ಮೆ ಗ್ರಂಥಿಗಳ ತೂಕವನ್ನು ಹೆಚ್ಚಿಸಿಕೊಳ್ಳುತ್ತವೆ. ಹೆಚ್ಚಿನ ಉಷ್ಣಾಂಶ, ಶೈತ್ಯಾಂಶ ಹಾಗೂ ರೋಗಗಳಿಗೆ ಪ್ರೌಢ ಹುಳುಗಳು ಸೂಕ್ಷ್ಮವಾಗಿ ಸ್ಪಂದಿಸುವುದರಿಂದ ವೈe್ಞÁನಿಕ ವಿಧಾನ ಮತ್ತು ಕುಶಲತೆಯಿಂದ ಸಾಕಾಣಿಕೆಯನ್ನು ಮಾಡಿ ಅಧಿಕ ಗೂಡಿನ ಇಳುವರಿ ಪಡೆಯಬಹುದು.
ಪ್ರೌಢ ರೇಷ್ಮೆ ಹುಳು ಸಾಕಾಣಿಕೆಗುಣಮಟ್ಟದ ರೇಷ್ಮೆ ಉತ್ಪಾದನೆಗೆ ವೈಜ್ಞಾನಿಕ ಬೇಸಾಯ ಕ್ರಮಗಳ ಜೊತೆಗೆ ನೂತನ ತಾಂತ್ರಿಕತೆಗಳನ್ನೊಳಗೊಂಡ ರೇಷ್ಮೆ ಹುಳು ಸಾಕಾಣಿಕೆ ಬಹು ಮುಖ್ಯ ಪಾತ್ರವಹಿಸುತ್ತದೆ. ರೇಷ್ಮೆ ಹುಳು ತನ್ನ ಜೀವನ ಚಕ್ರದಲ್ಲಿ ಸುಮಾರು 24-28 ದಿನಗಳವರೆಗೆ ಹುಳುವಿನ ಹಂತದಲ್ಲಿರುತ್ತದೆ. ಮೂರನೇ ಅಥವ ನಾಲ್ಕನೇ ಹಂತದಿಂದ ಗೂಡು ಕಟ್ಟುವವರೆಗೆ ಪ್ರೌಢ ಹುಳು ಸಾಕಾಣಿಕೆ ಎಂದು ಕರೆಯುತ್ತಾರೆ. ಪ್ರೌಢ ಹುಳುವಿನ ಹಂತದಲ್ಲಿ ರೇಷ್ಮೆ ಹುಳುಗಳು ಶೇ. 94 ರಷ್ಟು ಸೊಪ್ಪನ್ನು ತಿಂದು, 133 ಪಟ್ಟು ದೇಹ ಗಾತ್ರದಲ್ಲಿ ಬೆಳೆದು, 125 ಪಟ್ಟು ದೇಹದ ತೂಕವನ್ನು ಹೆಚ್ಚಿಸಿ ಸುಮಾರು 1000 ಪಟ್ಟು ರೇಷ್ಮೆ ಗ್ರಂಥಿಗಳ ತೂಕವನ್ನು ಹೆಚ್ಚಿಸಿಕೊಳ್ಳುತ್ತವೆ. ಹೆಚ್ಚಿನ ಉಷ್ಣಾಂಶ, ಶೈತ್ಯಾಂಶ ಹಾಗೂ ರೋಗಗಳಿಗೆ ಪ್ರೌಢ ಹುಳುಗಳು ಸೂಕ್ಷ್ಮವಾಗಿ ಸ್ಪಂದಿಸುವುದರಿಂದ ವೈe್ಞÁನಿಕ ವಿಧಾನ ಮತ್ತು ಕುಶಲತೆಯಿಂದ ಸಾಕಾಣಿಕೆಯನ್ನು ಮಾಡಿ ಅಧಿಕ ಗೂಡಿನ ಇಳುವರಿ ಪಡೆಯಬಹುದು.
ಹುಳು ಸಾಕಾಣಿಕೆ ಮನೆ:
ಉತ್ತಮ ಗಾಳಿ ಸಂಚಾರ, ಬೆಳಕು ಮತ್ತು ಸ್ಥಳಾವಕಾಶ ಇರುವ ಪ್ರತ್ಯೇಕ ಹುಳು ಸಾಕಾಣಿಕೆ ಮನೆಯನ್ನು ಪ್ರೌಢ ಹುಳುಗಳಿಗೆ ನಿರ್ಮಿಸುವುದು ಅತ್ಯಾವಶ್ಯಕ. ಮನೆಯು ಅಗತ್ಯಕ್ಕೆ ತಕ್ಕಂತೆ ಎತ್ತರವಿದ್ದು, ಅಪೇಕ್ಷಿತ ಉಷ್ಣಾಂಶ ಮತ್ತು ಶೈತ್ಯಾಂಶವನ್ನು ನಿರ್ವಹಿಸುವಂತಿರಬೇಕು. ಹುಳು ಸಾಕಾಣಿಕೆ ಮನೆಯು ಪರಿಣಾಮಕಾರಿ ಸೋಂಕು ನಿವಾರಣೆ ಮತ್ತು ಶುಚಿತ್ವ ಕಾಪಾಡಲು ಸೂಕ್ತವಾಗಿದ್ದು,
ಪ್ರತ್ಯೇಕ ಸೊಪ್ಪು ಸಂಗ್ರಹಣಾ ಕೊಠಡಿ ಹಾಗೂ ಊಜಿ ನೊಣ ಒಳ ಪ್ರವೇಶಿಸದಂತೆ ನಿಯಂತ್ರಿಸಲು ಉಪ ಕೊಠಡಿ ಹೊಂದಿರುವುದು ಉತ್ತಮ.
ಹುಳು ಸಾಕಾಣಿಕೆ ಮನೆಯು ಪೂರ್ವ-ಪಶ್ಚಿಮ ಮುಖವಾಗಿರಬೇಕು. ಉತ್ತರ-ದಕ್ಷಿಣಕ್ಕೆ ಕಿಟಕಿ ಬಾಗಿಲುಗಳು ಇರಬೇಕು. ಊಜಿ ನಿಯಂತ್ರಣಕ್ಕೆ ಕಿಟಕಿ ಬಾಗಿಲುಗಳಿಗೆ ತಂತಿ ಜಾಲರಿಯನ್ನು ಅಳವಡಿಸಿರಬೇಕು. ಗಾಳಿ, ಬೆಳಕು ಸರಾಗವಾಗಿ ಚಲಿಸಲು ಎದುರು ಬದುರಾಗಿ ಕಿಟಕಿಗಳಿರಬೇಕು. ಜೊತೆಗೆ ಕೆಳಭಾಗ ಮತ್ತು ಮೇಲ್ಭಾಗದಲ್ಲಿ ಗವಾಕ್ಷಿಗಳನ್ನು ಇಡಬೇಕು. ಒಂದು ಮೊಟ್ಟೆಯ ಹುಳು ಸಾಕಣಿಕೆಗೆ ಸುಮಾರು 8 ಚದರ ಅಡಿ ಸ್ಥಳಾವಕಾಶ ಬೇಕಾಗುತ್ತದೆ.
ಪ್ರತಿ ಸಾಕಾಣಿಕೆಗೆ ಮುನ್ನ ಹಾಗೂ ನಂತರ ಸಾಕಾಣಿಕಾ ಕೊಠಡಿ ಮತ್ತು ಸಲಕರಣೆಗಳನ್ನು ಕಡ್ಡಾಯವಾಗಿ ಕ್ರಮಬದ್ಧ ಸೋಂಕು ನಿವಾರಣೆ ಮಾಡಬೇಕು.
ತಟ್ಟೆ ವಿಧಾನದ ಹುಳು ಸಾಕಾಣಿಕೆ
ಬಿದಿರಿನ ತಟ್ಟೆಗಳಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮಾಡುವುದು ಸಾಂಪ್ರದಾಯಿಕ ಪದ್ಧತಿ. ಹುಳುಗಳಿಗೆ 22-250 ಸೆಂ. ಉಷ್ಣಾಂಶ, ಶೇ. 70-80 ರ ಶೈತ್ಯಾಂಶದ ಅಗತ್ಯವಿರುತ್ತದೆ. ಹುಳುಗಳು ಉತ್ತಮವಾಗಿ ಬೆಳೆಯಲು ಸಾಕಷ್ಟು ಸ್ಥಳಾವಕಾಶ ನೀಡಬೇಕಾಗುತ್ತದೆ. ಸಾಕಾಣಿಕೆ ಸಮಯದಲ್ಲಿ 16 ಗಂಟೆ ಮಂದ ಬೆಳಕು ಮತ್ತು 8 ಗಂಟೆ ಕತ್ತಲು ಇರುವಂತೆ ವ್ಯವಸ್ಥೆ ಮಾಡಿ, ಸಾಕಾಣಿಕೆ ಮನೆಯಲ್ಲಿ ಸಾಕಷ್ಟು ಗಾಳಿ ಸಂಚಾರ ಇರುವಂತೆ ನೋಡಿಕೊಳ್ಳಬೇಕು. ವಾತಾವರಣಕ್ಕನುಗುಣವಾಗಿ ದಿನಕ್ಕೆ 3-4 ಬಾರಿ ಸೊಪ್ಪನ್ನು ನೀಡಬೇಕಾಗುತ್ತದೆ.
ಗುಣಮಟ್ಟದ ಸೊಪ್ಪನ್ನು ದಿನದ ತಂಪು ವೇಳೆಯಲ್ಲಿ ಬಿಡಿಸಿ, ಒದ್ದೆ ಗೋಣಿ ಚೀಲ ಅಥವ ಬಿದಿರಿನ ಬುಟ್ಟಿಗಳಲ್ಲಿ ತುಂಬಿ ಒದ್ದೆ ಗೋಣಿಚೀಲದಿಂದ ಮುಚ್ಚಿ ಹುಳು ಸಾಕಾಣಿಕೆ ಮನೆಗೆ ಸಾಗಿಸಬೇಕು.
ಸೊಪ್ಪನ್ನು ಶೇಖರಿಸಬೇಕಾದಲ್ಲಿ ಶೇಖರಣಾ ತೊಟ್ಟಿಯಲ್ಲಿ ಸಂಗ್ರಹಿಸಿ, ಒದ್ದೆ ಗೋಣಿ ಚೀಲದಿಂದ ಮುಚ್ಚಿ ಸೊಪ್ಪಿನ ನೀರಿನಂಶ ನಷ್ಟವಾಗದಂತೆ ನೋಡಿಕೊಳ್ಳಬೇಕು. ಸೊಪ್ಪು ಶೇಖರಣಾ ತೊಟ್ಟಿಯಲ್ಲಿ ಸೊಪ್ಪಿನ ಜೀವ ಕ್ರಿಯೆಯಿಂದ ಬಿಡುಗಡೆಯಾಗಿರುವ ಶಾಖವನ್ನು ಹೊರಹೋಗುವಂತೆ ಮಾಡಲು ಬಿದಿರಿನ ಏರೇಟರ್ (ಚಿeಡಿಚಿಣoಡಿ) ಅಥವಾ ರಂಧ್ರಗಳಿರುವ Pಗಿಅ ಪೈಪನ್ನು ಬಳಸಬೇಕು.
ಹುಳುಗಳು ಜ್ವರಕ್ಕೆ ಹೋದಾಗ ಸುಣ್ಣವನ್ನು ಧೂಳೀಕರಿಸಿ ಹಾಸಿಗೆ ಒಣಗಿರುವಂತೆ ನೋಡಿಕೊಳ್ಳಬೇಕು ಮತ್ತು ಸಾಕಾಣಿಕಾ ಮನೆಯಲ್ಲಿ ಗಾಳಿ ಸಂಚಾರವನ್ನು ಹೆಚ್ಚಿಸಬೇಕು. ಜ್ವರದಿಂದ ಶೇ. 95 ರಷ್ಟು ಹುಳುಗಳು ಎದ್ದ ನಂತರ ಸೊಪ್ಪು ಕೊಡುವ ಅರ್ಧ ಗಂಟೆ ಮುಂಚಿತವಾಗಿ ಶಿಫಾರಿತ ಹಾಸಿಗೆ ಸೋಂಕು ನಿವಾರಕವನ್ನು ಸಿಂಪಡಿಸಿ, ಜ್ವರದ ನಂತರದ ಮೊದಲ ಸೊಪ್ಪನ್ನು ತೆಳುವಾಗಿ ನೀಡಬೇಕು. ರೋಗಗ್ರಸ್ತ ಹುಳುಗಳು ಕಂಡುಬಂದಲ್ಲಿ ಅವುಗಳನ್ನು ಹಾಸಿಗೆಯಿಂದ ಕೂಡಲೇ ಬೇರ್ಪಡಿಸಿ ಫಾರ್ಮಲಿನ್ : ಬ್ಲೀಚಿಂಗ್ ಪುಡಿ ದ್ರಾವಣದಲ್ಲಿ ಹಾಕಿ ನಾಶಪಡಿಸಬೇಕು. ದಡೇವುಗಳ ತಟ್ಟೆಗಳನ್ನು ಸ್ಥಾನಪಲ್ಲಟ ಮಾಡುವುದರಿಂದ ತಟ್ಟೆಗಳ ನಡುವೆ ಗಾಳಿ ಸಂಚಾರಕ್ಕೆ ಅನುಕೂಲವಾಗುತ್ತದೆ. ಚಳಿಗಾಲ ಅಥವಾ ಬೇಸಿಗೆಯಲ್ಲಿ ಅಪೇಕ್ಷಿತ ಉಷ್ಣಾಂಶ ಮತ್ತು ಶೈತ್ಯಾಂಶಗಳ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಇರಬೇಕು.