ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ 1ನೇ ಮನವಿ ಅರ್ಜಿಯನ್ನು ಸಲ್ಲಿಸಲು ಸೂಚನೆಗಳು
- ಮೊದಲ ಮನವಿಯನ್ನು ಯಾವಾಗ ಮಾಡಬೇಕು:
- ಸಾರ್ವಜನಿಕ ಮಾಹಿತಿ ಅಧಿಕಾರಿ (PIO) ನೀವು ಕೇಳಿದ ಮಾಹಿತಿಯನ್ನು ಒದಗಿಸಲು ಸಲ್ಲಿಸಿದ ನಿಮ್ಮ ಅರ್ಜಿಯನ್ನು ತಿರಸ್ಕರಿಸಿದರೆ
- ಸಾರ್ವಜನಿಕ ಪ್ರಾಧಿಕಾರವು 30 ದಿನಗಳು ಅಥವಾ 48 ಘಂಟೆಗಳ* ಕಾಲಾವಧಿಯ ಒಳಗೆ ಮಾಹಿತಿ ಒದಗಿಸಲು ಅಸಮರ್ಥವಾದರೆ
- ಸಾರ್ವಜನಿಕ ಪ್ರಾಧಿಕಾರವು ಅರ್ಜಿಯನ್ನು ಸ್ವೀಕರಿಸಲು ಅಥವಾ ಕೇಳಿದ ಮಾಹಿತಿಯನ್ನು ಒದಗಿಸಲು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸದಿದ್ದಲ್ಲಿ
- ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅರ್ಜಿಯನ್ನು ಸ್ವೀಕರಿಸಲು ಮತ್ತು ಅದನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ವರ್ಗಾಯಿಸಲು ನಿರಾಕರಿಸಿದರೆ
- ನಿಮಗೆ ಸಾರ್ವಜನಿಕ ಮಾಹಿತಿ ಅಧಿಕಾರಿಯ ತೀರ್ಪು ತೃಪ್ತಿಕರವಾಗಿರದಿದ್ದಲ್ಲಿ
- ಪೂರೈಸಿದ ಮಾಹಿತಿಯು ಅಪೂರ್ಣ, ತಪ್ಪು ಅಭಿಪ್ರಾಯವನ್ನುಂಟುಮಾಡುತ್ತದೆ ಅಥವಾ ತಪ್ಪು ಎಂದು ನೀವು ಭಾವಿಸಿದಲ್ಲಿ
- ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ ಪಡೆದ ಅರ್ಜಿ ಶುಲ್ಕವು ದುಬಾರಿ ಎಂದು ನೀವು ಭಾವಿಸಿದರೆ.
- ಪ್ರಥಮ ಮೇಲ್ಮನವಿ ಅರ್ಜಿಯನ್ನು ದಾಖಲು ಮಾಡಲು ಕಾಲಾವಧಿ:
- ವಿಧಿಸಿದ ಸಮಯದ ಮುಕ್ತಾಯದ ದಿನಾಂಕ ಅಥವಾ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ (SPIO) / ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯೊಂದಿಗೆ (CPIO) ಸಂಪರ್ಕಿಸಿದ (ತೀರ್ಪು ಅಥವಾ ಬೇಡಿಕೆಯ ನಿರಾಕರಣೆ) ದಿನದಿಂದ 30 ದಿನಗಳ ಒಳಗೆ
- ಮೇಲ್ಮನವಿದಾರನನ್ನು ಮೇಲ್ಮನವಿ ಮೊಕದ್ದಮೆ ದಾಖಲು ಮಾಡುವುದನ್ನು ತಡೆಯಲಾಗಿದೆ ಎಂಬುದು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಖಾತ್ರಿಯಾದರೆ, ಮೇಲ್ಮನವಿಯನ್ನು 30 ದಿವಸಗಳ ನಂತರ ಸಹ ಒಪ್ಪಿಕೊಳ್ಳಬಹುದು.
- ಪ್ರಥಮ ಮೇಲ್ಮನವಿ ಅರ್ಜಿಯನ್ನು ಸಿದ್ಧಗೊಳಿಸುವುದು:
- ಬಿಳಿಯ ಹಾಳೆಯ ಮೇಲೆ ಅರ್ಜಿಯ ಕರಡನ್ನು ಬರೆಯಿರಿ
- ಅರ್ಜಿಯು ಕೈ ಬರಹದಲ್ಲಿರ ಬೇಕು ಅಥವಾ ಟೈಪ್ ಮಾಡಿರಬೇಕು
- ಅರ್ಜಿಯು ಇಂಗ್ಲಿಷ್, ಹಿಂದಿ ಅಥವಾ ಯಾವುದೇ ರಾಜ್ಯ ಭಾಷೆಗಳಲ್ಲಿರಬೇಕು
- ನಿಗದಿ ಪಡಿಸಿದ ವಿಧಾನದಲ್ಲಿ ಸ್ಪಷ್ಟವಾಗಿ ಅಗತ್ಯವಾದ ಮಾಹಿತಿಗಳನ್ನು ಒದಗಿಸಿ,
- ಸ್ವತಃ ದೃಢೀಕರಿಸಿದ ಕೋರಿಕೆಯ ಅರ್ಜಿಯ ಜೆರಾಕ್ಸ್ ಪ್ರತಿಯ ಜೊತೆಗೆ ಅರ್ಜಿ ಶುಲ್ಕದ ಪುರಾವೆ, ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಅರ್ಜಿ ಸ್ವೀಕೃತದ ರಸೀದಿ, ತೀರ್ಪಿನ ಪ್ರತಿ ಇತ್ಯಾದಿಗಳನ್ನು ಸೇರಿಸಿ
- ನಿಮ್ಮ ಹೆಚ್ಚಿನ ಉಪಯೋಗಕ್ಕಾಗಿ ಅರ್ಜಿ ಮತ್ತು ಸೇರಿಸಿದ ಎಲ್ಲಾ ದಾಖಲೆಗಳ ಒಂದು ಜೆರಾಕ್ಸ್ ಪ್ರತಿ ಮಾಡಿಸಿ ಕೊಳ್ಳಿ.
- ಪ್ರಥಮ ಮೇಲ್ಮನವಿ ಅರ್ಜಿಯನ್ನು ಎಲ್ಲಿ ಸಲ್ಲಿಸುವುದು:
- ಇದನ್ನು ಅದೇ ಸಾರ್ವಜನಿಕ ಪ್ರಾಧಿಕಾರದ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಕಚೇರಿಯಲ್ಲಿ ಸಲ್ಲಿಸ ಬೇಕು
- ಅಧಿಕಾರ ಶ್ರೇಣಿಯಲ್ಲಿ, ಪ್ರಥಮ ಮೇಲ್ಮನವಿ ಪ್ರಾಧಿಕಾರವು ಸಾರ್ವಜನಿಕ ಮಾಹಿತಿ ಅಧಿಕಾರಿಗಿಂತ ಮೇಲ್ದರ್ಜೆಯದು ಮತ್ತು ಅರ್ಜಿಯನ್ನು ಪಡೆಯಲು, ಕೋರಿದ ಮಾಹಿತಿಯನ್ನು ಒದಗಿಸಲು ಅಥವಾ ಅರ್ಜಿಯನ್ನು ನಿರಾಕರಿಸಲು ಬದ್ಧವಾಗಿರುತ್ತದೆ
- 1ನೇ ಮನವಿ ಅರ್ಜಿಯನ್ನು ಸಲ್ಲಿಸುವ ಮೊದಲು, ಪ್ರಥಮ ಮೇಲ್ಮನವಿ ಪ್ರಾಧಿಕಾರದ ಹೆಸರು, ನಿಗದಿಸಿದ ಶುಲ್ಕ ಮತ್ತು ಶುಲ್ಕ ಪಾವತಿಯ ವಿಧಾನವನ್ನು ಪರಿಕ್ಷೀಸಿ (ಕೆಲವು ರಾಜ್ಯಗಳು 1ನೇ ಮನವಿಯ ವೆಚ್ಚದ ಶುಲ್ಕದ ನಿಬಂಧನೆಯನ್ನು ಮಾಡಿದೆ ಆದರೆ ಕೆಲವು ರಾಜ್ಯಗಳು ಅರ್ಜಿ ಶುಲ್ಕವನ್ನು ವಿಧಿಸುತ್ತವೆ).
- 1ನೇ ಮನವಿ ಅರ್ಜಿಯನ್ನು ಹೇಗೆ ಕಳುಹಿಸುವುದು:
- ಅರ್ಜಿಯನ್ನು ನೇರವಾಗಿ ಅಥವಾ ಅಂಚೆ ಮೂಲಕ ಕಳುಹಿಸ ಬೇಕು.
- ನೀವು ಅಂಚೆ ಮೂಲಕ ಕಳುಹಿಸುವುದಾದರೆ, ನೋಂದಾಯಿತ/ರಿಜಸ್ಟರ್ ಅಂಚೆ ಸೇವೆ ಮೂಲಕವೇ ಕಳುಹಿಸಿ. ಯಾವಾಗಲೂ ಕೊರಿಯರ್ ಸೇವೆಯನ್ನು ಬಳಸಬೇಡಿ.
- ಎರಡು ಸಂಧರ್ಭಗಳಲ್ಲಿ ಅರ್ಜಿಯನ್ನು ಕಳುಹಿಸಿದ ಅಥವಾ ಸಲ್ಲಿಸಿದ ರಸೀದಿಯನ್ನು ಪಡೆಯಿರಿ.
- ಮಾಹಿತಿಯ ಪುರೈಕೆಗೆ ಕಾಲಾವಧಿ:
- ಸಹಜ ಪರಿಸ್ಥಿತಿಯಲ್ಲಿ ತೀರ್ಪನ್ನು 30 ದಿನಗಳ ಒಳಗೆ ನೀಡಬೇಕು, ಆದರೆ ಅಸಹಜ ಪರಿಸ್ಥಿತಿಯಲ್ಲಿ 45 ದಿನಗಳ ಕಾಲ ಪರಿಮಿತಿ ಇರುತ್ತದೆ.
- ಪ್ರಥಮ ಮೇಲ್ಮನವಿ ಪ್ರಾಧಿಕಾರದಿಂದ (FAA) ಅರ್ಜಿ ಸ್ವೀಕೃತವಾದ ದಿನಾಂಕದಿಂದ ತೀರ್ಪಿನ ಕಾಲಾವಧಿಯನ್ನು ಪರಿಗಣಿಸಲಾಗುತ್ತದೆ.
೧ ನೇ ಮನವಿ ಅರ್ಜಿ
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/19/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.