ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹಾತಿರಾಮ್ ಬಾವಾಜಿ

ಹಾತಿರಾಮ್ ಬಾವಾಜಿ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ಲಂಬಾಣಿಗರ ಬಹಳ  ಮುಖ್ಯ  ದೇವರೆಂದರೆ, ತಿರುಮಲದ ಬಾಲಾಜಿಯೇಯಾಗಿರುತ್ತಾರೆ. ಈ ದೇವರಿಗೂ ಸಹ ೧ ವರ್ಷಕ್ಕೆ, ೩ ವರ್ಷಕ್ಕೆ ಅಥವಾ ಐದು ವರ್ಷಗಳಿಗೊಮ್ಮೆ ಬೋಗ್ ಕಾರ್ಯಕ್ರಮವನ್ನು ನಡೆಸುತ್ತಾರೆ.

ಇದರ ಹಿನ್ನಲೆಯನ್ನು ನೋಡಿದಾಗ ಪ್ರಮುಖವಾದ ಘಟನೆಯೊಂದು ಪುರಾಣಗಳಿಂದ ತಿಳಿದು ಬರುತ್ತದೆ. ಲಂಬಾಣಿಗರಾದ ಸಂತ ಹಾತಿರಾಮ್ ಬಾಬ ಎಂಬುವರು ಬಾಲಜಿಯ ಭಕ್ತನಾಗಿರುತ್ತಾನೆ.

ಈಗಿರುವ ತಿರುಮಲ ದೇವಸ್ಥಾನದ ಪಕ್ಕದ ಜೋಪಡಿಯೊಂದರಲ್ಲಿ ವಾಸವಾಗಿರುವಾಗ ಬಾಬಾರವರು ಅತೀವ ಭಕ್ತಿಯಿಂದ ಬಾಲಾಜಿಯನ್ನು ಪೂಜಿಸಿ ಭಜಿಸುತ್ತಾನೆ. ಈತನ ಪೂಜೆ ಮತ್ತು ಭಕ್ತಿಯನ್ನು ಮೆಚ್ಚಿದ ಬಾಲಾಜಿಯು ಬಾಬಾನ ಮನೆಯಲ್ಲಿ ಪ್ರತ್ಯಕ್ಷನಾಗಿ ದರುಶನ ನೀಡಿ ಆತಿಥ್ಯವನ್ನು ಬಾಬಾನಿಂದ ಸ್ವೀಕರಿಸಿ. ಅಂದಿನ ರಾತ್ರಿ ಅಲ್ಲಿಯೇ ಉಳಿದು ಬಾಬಾನೊಂದಿಗೆ ಪಗಡೆಯಾಡಿ ನಂತರ ಅಲ್ಲಿಯೇ ಮಲಗಿ ಬೆಳಗಿನ ಜಾವಾ ಪೂಜಾಸಮಯವಿದ್ದುದರಿಂದ ಮರಳಿ ಬಾಲಾಜಿ ಗುಡಿಗೆ ಬಂದು ಬಿಡುತ್ತಾರೆ. ಬರುವ ಆತುರದಲ್ಲಿಯೂ, ಅಥವಾ ಬಾಬಾನ ಮಹಿಮೆ ಜಗತ್ತಿಗೆ ತಿಳಿಯಲೆಂದೋ ತನ್ನ  ಕಂಠಿಹಾರವನ್ನು ಬಾಬಾನ ಮನೆಯಲ್ಲೇ ಬಿಟ್ಟು ಬಂದುಬಿಡುತ್ತಾರೆ. ಪೂಜಾ ಸಮಯದಲ್ಲಿ ಕಲ್ಲಿನ ಮೂರ್ತಿಯಾಗಿ ನಿಂತಿರುವ ಬಾಲಾಜಿಯ ಮೂರ್ತಿಯಲ್ಲಿ ಕಂಠೀಹಾರ ಇಲ್ಲದಿರುವುದನ್ನು ನೋಡಿದ ಪೂಜಾರಿಗಳಿಗೆ ಗಾಬರಿಯಾಗಿ ಯಾರೋ ಅದನ್ನು ಕಡ್ಹೋಯ್ದರೆಂದು  ಮುಖ್ಯಾದಿಕಾರಿಗಳಿಗೆ ತಿಳಿಸಿ ಹುಡುಕಾಟದಲ್ಲಿ ತೊಡಗಿದ್ದಾಗ ಅಷ್ಟರಲ್ಲೇ ಬಾಬಾರವರು ಬೆಳಿಗ್ಗೆ ಎದ್ದು ಬಾಲಾಜಿ ಮಲಗಿದ ಮಂಚವನ್ನು ನೋಡಲಾಗಿ ಬಾಲಾಜಿಯವರು ಕಂಠೀಹಾರ ಬಿಟ್ಟೊಗಿರುವುದು ನೋಡಿ ಅದನ್ನು ಅಲ್ಲಿಂದ ಎತ್ತಿಕೊಂಡು ದೇವಸ್ಥಾನಕ್ಕೆ ಕೂಡಲೇ ಕೊಡಲೆಂದು ಬಂದಾಗ ಪೂಜಾರಿಗಳು ಬಾಬಾನ ಕೈಯಲ್ಲಿದ್ದ ಕಂಠಿಹಾರವನ್ನು ನೋಡಿ ಇವನೇ ಕದ್ದುಹೊಯ್ಯುತ್ತಿರುವುದುದಾಗಿ ಭಾವಿಸಿ ಆಪಾದಿಸುತ್ತಾರೆ. ಬಾಬಾರವರು ಎಷ್ಟೇ ಪರಿಪರಿಯಾಗಿ ಶ್ರೀನಿವಾಸ ನಮ್ಮನೆಗೆ ಬಂದಿದ್ದರು. ರಾತ್ರಿಯೆಲ್ಲ ತಂಗಿದ್ದರು. ಬೆಳಿಗ್ಗೆ ಬರುವಾಗ ಕಂಠಿಹಾರ ಮರೆತು ಬಂದಿದ್ದಾರೆ. ಅದನ್ನು ತಮ್ಮಗಳಿಗೆ ಕೊಡಲೆಂದೇ ಅದನ್ನೆತ್ತಿಕೊಂಡು ಬರುತ್ತಿದ್ದೇನೆಂದು ಹೇಳಿದರು. ಅದಕ್ಕೆ ಯಾರೂ ಸಹ ನಂಬದೆ, ಈ ಕಲಿಯುಗದಲ್ಲಿ ಇದು ಅಸಾಧ್ಯ ಕಾಲಾಂತರದಿಂದ ಪೂಜೆ ಮಾಡುತ್ತಿರುವ ಈ ಬ್ರಾಹ್ಮಣರಿಗೆ ಶ್ರೀನಿವಾಸ ಕಾಣಿಸಿಕೊಣ್ಡಿಲ್ಲವೆನ್ದ ಮೇಲೆ ನಿನಗೆ ಕಾಣಿಸಿಕೊಳ್ಳಲು ಹೇಗೆ ಸಾಧ್ಯ? ಕಳ್ಳತನ ಮಾಡಿ ಸಿಕ್ಕಿಕೊಂಡು ಹೀಗೊಂದು ಸಬೂಬು ಹೇಳುತ್ತಿರುವೆಯ ಎಂದು ಅವನನ್ನು ರಾಜನಲ್ಲಿ ಕರೆದೊಯ್ದು ನಡೆದ ಘಟನೆಯನ್ನು ವಿವರಿಸುತ್ತಾ ಇವನಿಗೆ ದಂಡಿಸಬೇಕೆಂದು ಆಗಿನ ಮುಖ್ಯಾದಿಕಾರಿಗಳು ರಾಜನಲ್ಲಿ ಮನವಿ ಮಾಡುತ್ತಾರೆ. ವಿಷಯ ತಿಳಿದ ರಾಜರು ಒಂದು ಸತ್ವ ಪರೀಕ್ಷೆಯನ್ನಿಡುತ್ತಾರೆ

ಬಾಬಾ ಹೇಳುವುದು ನಿಜವೇ ಆದರೆ ಆ ಬಾಲಾಜಿ ಬಂದು ಕಾಪಾಡಲಿ ಇವನನ್ನು ಸೆರೆಮನೆಗೆ ಕಳುಹಿಸಿ ಒಂದೆರಡು ಟನ್ ಕಬ್ಬನ್ನು ಅಲ್ಲಿಹಾಕಿ ಆನೆಯೊಂದನ್ನು ಅಲ್ಲಿ ಬಿಡೋಣ ಕಬ್ಬು ತಿಂದ ಆನೆ ಬಾಬಾರನ್ನು ಕೊಲ್ಲದಿದ್ದರೆ ಇವನು ಹೇಳುವುದು ಸತ್ಯವೆಂದು ಭಾವಿಸೋಣ ಎಂದು ಈ ಸತ್ವ ಪರೀಕ್ಷೆಯನ್ನು ಅಂದಿನ ರಾತ್ರಿ ನಡೆಸುತ್ತಾರಂತೆ. ಆಗ ಬಾಬಾ ಭಕ್ತಿಯಿಂದ ಬಾಲಾಜಿಯನ್ನು ಬೇಡಿದಂತೆ ಬಾಲಾಜಿ ಆನೆಯ ರೂಪದಲ್ಲಿ ಬಂದು ಕಬ್ಬನ್ನೆಲ್ಲಾ ತಿಂದು ಬಾಬಾನನ್ನು ಹರಸಿ ಹೊರಟು ಹೋಗಿರುತ್ತಾರೆ. ಇದನ್ನೆಲ್ಲಾ ನೋಡಿದ ಕಾವಲುಗಾರನು ರಾಜರಲ್ಲಿ ವಿಷಯ ಮುಟ್ಟಿಸಿದಾಗ ರಾಜರು ತಮ್ಮ ಪರಿವಾರದೊಂದಿಗೆ ಅಲ್ಲಿಗೆ ಧಾವಿಸಿ ಬಂದು ನೋಡಲಾಗಿ ಆನೆ ಬಂದು ಕಬ್ಬು ತಿಂದು ಲದ್ದಿ ಹಾಕಿ ಬಾಬಾನನ್ನು ಏನು ಮಾಡದೇ ಹೋಗಿರುವುದು ಖಾತರಿಯಾಯಿತು. ಎಲ್ಲರಿಗೆ ಆಶ್ಚರ್ಯ ಜೊತೆಗೆ ಬಾಬಾನ ಭಕ್ತಿಗೆ ಬಾಲಾಜಿ ಪ್ರತ್ಯಕ್ಷನಾಗಿ ಆನೆಯ ರೂಪದಲ್ಲಿ ಬಂದು ದರುಶನ ನೀಡಿದ್ದರಿಂದ ಬಾಬಾರವರನ್ನು ಆನೆಯಷ್ಟೇ ಬಲಶಾಲಿಗಳು ಎಂದು ಅವರನ್ನು ಹಾತಿರಾಮ್ ಬಾಬ, ಹಾತಿರಾಮ್ ಬಾಲಾಜಿ, ಹಾತಿರಾಮ್ ಬಾವಾಜಿ ಎಂದು ಕರೆದರು.

ಅಂದಿನಿಂದ ಹಾತಿರಾಮ್ ಬಾವಾಜಿರವರಿಂದ ಶ್ರೀನಿವಾಸನಿಗೆ ಅಭಿಷೇಕ, ಪೂಜೆಗಳನ್ನು ಮೊದಲು ಮಾಡಿಸಿ ನಂತರ ಇತರ ಪೂಜಾ ಕಾರ್ಯ ನಡೆಯುತ್ತಿತ್ತು. ಕೀಳು ಜಾತಿಯೆಂದು ಮೂಗು ಮುರಿದ ಬ್ರಾಹ್ಮಣರಿಗೂ ಸಹ ಇವರನ್ನು ಗೌರವಿಸಿದರು. ಅವರಿಗೊಂದು ಮಠವನ್ನು ಬಾಲಾಜಿ ದೇವಸ್ಥಾನದ ಬಲಭಾಗದಲ್ಲಿ ಕಟ್ಟಿಸಿದರು. ಹಾಗೂ ಬಂಜಾರ (ಲಂಬಾಣಿಗರು) ತಮ್ಮ ಸಾಂಪ್ರದಾಯಿಕ ಉಡುಪಿನೊಂದಿಗೆ ದೇವಸ್ಥಾನಕ್ಕೆ ಹೋದರೆ ನೇರ ದರುಶನಕ್ಕು ಸಹ ಅವಕಾಶಮಾದಿಕೊದಲಾಗುತ್ತಿತ್ತು. ಹಾತಿರಾಮ್ ಬಾವಾಜಿಯ ಉತ್ತರಾಧಿಕಾರಿಗಳಾಗಿ ಈಗಲೂ ಸಹ ಆ ಮಠದಲ್ಲಿರುವುದನ್ನು ಕಾಣಬಹುದು. ಆದರೆ, ಲಂಬಾಣಿಗರು ಇತ್ತೀಚಿಗೆ ನೇರ ದರುಶನದ ಭಾಗ್ಯವನ್ನು ಕಳೆದುಕೊಂಡಿದ್ದಾರೆ ಆದರೆ  ಸಾಮಾನ್ಯ ದರುಶನದಲ್ಲಿಯೇ ಬಾಲಾಜಿಯನ್ನು ದರುಶನ ಮಾಡಿ ಮಠಕ್ಕೆ ಹೋಗಿ ಕಾಣಿಕೆ  ಕೊಟ್ಟು  ಒಂದಿಡಿ ಅಲ್ಲಿ ಪಡೆದು ಅದನ್ನು ಮನೆಗೆ ತಂದು ಬೋಗ್ ಕಾರ್ಯಕ್ರಮ ಮಾಡಿ ಪೂಜಿಸಿ ಪ್ರಸಾದ ಸ್ವೀಕರಿಸುವ ರೂಢಿ ಇದೆ. ಲಂಬಾಣಿಗರು ವಿಶೇಷ ದಿನಗಳಲ್ಲಿ ಸಂಗ್ರಹಿಸಿದ ಹಣವನ್ನು ಭಾವಾಜಿರ್ ಭಾವಾಜಿರ್ ಭೆಟರೆ ಪಿಸಾ ಎಂದು ಸಾದು ಸಂತರು ಮನೆಗೆ ಬಂದಾಗ ಆ ಹಣವನ್ನು ಕೊಟ್ಟು ಕಳುಹಿಸುತ್ತಿದ್ದರು. ಇತ್ತಿಚೆಗೆ ಆ ಸಾಧುಗಳೂ ಸಹ ಕಾಣೆಯಾಗಿದ್ದಾರೆ.

ನೋಟ್:  ಹಾತಿರಾಮ್ ಬಾವಾಜಿಯವರು ಪುರಾಣಗಳಲ್ಲಿ ಬರುವ ಮೋಲದಾದ ಮತ್ತು ರಾಧೆಯವರು ಪರಿಚಯಿಸಿದ ಗುರೂಜಿ ಇವರೇ.

ಕೋಡುಗೆದಾರರು : ಪಳನಿಸ್ವಾಮಿ ಜಾಗೇರಿ

3.0099009901
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top