ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹೆಚ್1ಎನ್1

ಈ ರೋಗ ಹರಡುವ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೆಚ್1ಎನ್1 ವೈರಾಣುಗಳ ಕಾರಣ ಹರಡುತ್ತಿದ್ದು ಇದರ ನಿಗ್ರಹ ಕಷ್ಟಕರವಾಗಿದೆ

ಹೆಚ್1ಎನ್1 ವೈರಾಣು

ಈ ರೋಗ ಹರಡುವ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೆಚ್1ಎನ್1 ವೈರಾಣುಗಳ ಕಾರಣ viral pneumonia (ವೈರಸ್ಸುಗಳ ಕಾರಣ ಬಂದ ಜ್ವರ) ಹರಡುತ್ತಿದ್ದು ಇದರ ನಿಗ್ರಹ ಕಷ್ಟಕರವಾಗಿದೆ, ಆದರೆ ಸಾಮಾನ್ಯ ಜ್ವರಕ್ಕೆ ಕಾರಣವಾದ ವೈರಾಣು bacterial pneumonia (ಬ್ಯಾಕ್ಟೀರಿಯಾಗಳಿಂದ ಬಂದ ಜ್ವರ) ಕ್ಕೆ ಕಾರಣವಾಗಿದ್ದು ಇದನ್ನು ಸುಲಭವಾಗಿ ನಿಗ್ರಹಿಸಬಹುದು ಎಂದು ತಿಳಿಸುತ್ತಾರೆ.

ಫೆರೆಟ್ (ಒಂದು ಜಾತಿಯ ಮುಂಗುಸಿ) ಗಳ ಮೇಲಿನ ಪರೀಕ್ಷೆಯಿಂದ ಹೆಚ್1ಎನ್1 ಪತ್ತೆ

ಇಂಗ್ಲೆಂಡಿನಲ್ಲಿ ಕಾಣಬರುವ ಫೆರೆಟ್ ಎಂದು ಕರೆಯಲಾಗುವ ಒಂದು ಜಾತಿಯ ಮುಂಗುಸಿಯ ಮೇಲೆ ಹಲವು ವೈದ್ಯಕೀಯ ಪ್ರಯೋಗಗಳನ್ನು ಮಾಡಲಾಗುತ್ತದೆ. ಏಕೆಂದರೆ ವೈರಸ್ಸುಗಳ ಪ್ರಭಾವ ಮನುಷ್ಯರ ಮೇಲೆ ಯಾವ ಬೀರುತ್ತದೆಯೋ ಹೆಚ್ಚು ಕಡಿಮೆ ಅದೇ ರೀತಿಯ ಪ್ರಭಾವ ಈ ಫೆರೆಟ್ಟುಗಳ ಮೇಲೆಯೂ ಬೀರುತ್ತದೆ. 2009ರಿಂದ ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳು ಹಲವು ಮಾಹಿತಿಗಳನ್ನು ನೀಡಿದ್ದಾರೆ. ಮೊದಲು ಈ ವೈರಸ್ ಫೆರೆಟ್ಟಿನ ಮೂಗಿನ ಮೂಲಕ ದೇಹ ಪ್ರವೇಶಿಸುತ್ತದೆ.

ಸಾಮಾನ್ಯ ಜ್ವರಕ್ಕೂ ಹಂದಿ ಜ್ವರಕ್ಕೂ ವ್ಯತ್ಯಾಸ

ಸಾಮಾನ್ಯ ಜ್ವರದ ವೈರಸ್ ಮೂಗಿನಲ್ಲಿ ಶೇಖರವಾಗಿ ಇನ್ನೂ ಮುಂದಕ್ಕೆ ಹೋಗಲು ಅಸಮರ್ಥವಾದರೆ ಹೆಚ್1ಎನ್1 ವೈರಸ್ಸು ಮೂಗಿನಾಳಕ್ಕೆ ಇಳಿದು ಶ್ವಾಸನಳಿಕೆ, ಶ್ವಾಸಕೋಶಗಳನ್ನು ಬಾಧಿಸುತ್ತದೆ. ಬಳಿಕ ರಕ್ತ ಸೇರಿ ರಕ್ತದ ಮೂಲಕ ಕರುಳುಗಳನ್ನು ಸೇರಿದ ಈ ವೈರಸ್ಸು ಬೇಧಿ, ವಾಂತಿಗೂ ಕಾರಣವಾಗುತ್ತದೆ. ಇದು ಸಾಮಾನ್ಯ ಜ್ವರಕ್ಕೂ ಹಂದಿಜ್ವರಕ್ಕೂ ಇರುವ ಪ್ರಮುಖ ವ್ಯತ್ಯಾಸ. ಈ ಲಕ್ಷಣ ಕಂಡು ಬಂದ ಫೆರೆಟ್ ಗಳ ಮೂಲಕ ಇತರ ಫೆರೆಟ್ ಗಳಿಗೂ ಈ ಜ್ವರ ವ್ಯಾಪಿಸಿರುವುದು ಹೆಚ್1ಎನ್1 ವೈರಸ್ಸಿನ ಪ್ರಬಲತೆಯನ್ನು ಸಾಬೀತುಪಡಿಸುತ್ತದೆ.

ಜ್ವರ ಯಾವುದೇ ಇರಲಿ, ವೈದ್ಯರೇ ನಿರ್ಧರಿಸಲಿ

ಯಾವುದೇ ಜ್ವರದ ಲಕ್ಷಣ ಕಂಡುಬಂದರೆ ನಿಮಗೆ ನೀವೇ ಅಥವಾ ಅಕ್ಕಪಕ್ಕದವರು ಜ್ವರದ ಲಕ್ಷಣಗಳ ಹೋಲಿಕೆಯ ಮೂಲಕ ನೀಡುವ ಸಲಹೆಗಳನ್ನು ಪಾಲಿಸದೇ ಮೊದಲಾಗಿ ವೈದ್ಯರನ್ನು ಕಂಡು ಪರೀಕ್ಷೆಗೊಳಪಡಿರಿ. ಕೆಲವೊಮ್ಮೆ ಕೇವಲ ಭಯದ ಕಾರಣ ಕೆಲವು ಲಕ್ಷಣಗಳನ್ನು ನಿಮ್ಮ ದೇಹ ಪ್ರಕಟಿಸಿದ್ದು ಅದಕ್ಕೂ ನಿಜವಾದ ಜ್ವರಕ್ಕೂ ಸಂಬಂಧವೇ ಇರುವುದಿಲ್ಲ. (ಉದಾಹರಣೆಗೆ ಜ್ವರದ ಭಯದಿಂದ ಉಂಟಾಗುವ ನಡುಕ). ಆದರೆ ಇವು ಮುಂದೆ ಬರಲಿರುವ ಭಯಾನಕ ಜ್ವರದ ಮುನ್ಸೂಚನೆಯೂ ಆಗಿರಬಹುದು. ಅದರಲ್ಲೂ ಗರ್ಭಿಣಿಯರು ಮತ್ತು ಐದರಿಂದ ಇಪ್ಪತ್ತನಾಲ್ಕು ವರ್ಷದೊಳಗಿರುವ ಯುವಕರಿಗೆ ಹಂದಿ ಜ್ವರ ಬಾಧಿಸುವ ಪ್ರಮೇಯ ಹೆಚ್ಚು. ಸಾಮಾನ್ಯ ಜ್ವರ ವೃದ್ದರಲ್ಲಿ ಮತ್ತು ಐದು ವರ್ಷಕ್ಕೂ ಕಿರಿಯ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಸಮಾಜದ ಎಲ್ಲಾ ಜನರು ಈ ಜ್ವರದ ಬಗ್ಗೆ (ಸಾಮಾನ್ಯವೇ ಇರಲಿ ಹೆಚ್1ಎನ್1 ಇರಲಿ) ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಸಾಮಾನ್ಯ ಮತ್ತು ಹೆಚ್1ಎನ್1 ವೈರಸ್ ಹರಡುವ ಬಗೆ ಒಂದೇ ಆಗಿದೆ

ರೋಗದ ಲಕ್ಷಣಗಳು ಬೇರೆ ಬೇರೆಯಾಗಿದ್ದರೂ ಈ ಎರಡೂ ಜ್ವರಗಳು ಒಬ್ಬರಿನ್ನೊಂಬ್ಬರಿಗೆ ಒಂದೇ ತೆರನಾಗಿ ಹರಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಸೀನುವುದು, ಕೆಮ್ಮುವುದು, ಕಫ ನಿವಾರಿಸುವುದು ಮೊದಲಾದ ಸಂದರ್ಭಗಳಲ್ಲಿ ಕಡ್ಡಾಯವಾಗಿ ನಿಮ್ಮ ಮುಖವನ್ನು ಬಟ್ಟೆಯಿಂದ ಅಥವಾ ಮುಚ್ಚಿಕೊಳ್ಳಿ. ಮತ್ತು ಈ ಬಟ್ಟೆ ಮತ್ತು ಮಾಸ್ಕ್ ಗಳನ್ನು ಹೆಚ್ಚು ಸಮಯ ಉಪಯೋಗಿಸದೇ ತ್ಯಜಿಸಿ.(ದಾರಿಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬೇಡಿ, ಸುಟ್ಟುಬಿಡುವುದು ಅತಿ ಉತ್ತಮ ಪರಿಹಾರ). ಸ್ವಚ್ಛತೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಿ. ಕೈತೊಳೆದುಕೊಳ್ಳದೇ ಯಾವುದೇ ಆಹಾರವಸ್ತುಗಳನ್ನು ಮುಟ್ಟಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಜನರು ಮುಟ್ಟುವ ಸ್ಥಳಗಳನ್ನು ಮುಟ್ಟಿದ ಬಳಿಕ ಕಡ್ಡಾಯವಾಗಿ ಕೈ ತೊಳೆದುಕೊಂಡೇ ಮುಂದಿನ ಕಾರ್ಯಗಳನ್ನು ನಡೆಸಿ.

ಮೂಲ : ಬೋಲ್ಡ್ ಸ್ಕೈ (http://www.boldsky.com/)

2.91743119266
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top