- ಮಹಿಳೆ ತಾನು ಗರ್ಭಿಣಿಯೆಂದು ಭಾವಿಸಿದ ಅಥವಾ ತಿಳಿದ ತಕ್ಷಣವೇ ಮೊದಲನೇ ಭೇಟಿಗೆ ಶಿಫಾರಸ್ಸು ಮಾಡಬೇಕು. ಇದನ್ನು ಗರ್ಭಿಣಿ ದಾಖಲಾತಿ ಎಂದು ಸಹ ಕರೆಯಲಾಗುತ್ತದೆ. ಇದು ಗರ್ಭಿಣಿ ಗರ್ಭಾವಸ್ಥೆಯಲ್ಲಿ ಆರೈಕೆ ತೆಗೆದುಕೊಂಡಿರುವ ಬಗ್ಗೆ ಖಚಿತಪಡಿಸುತ್ತದೆ.
- ಹುಟ್ಟುವುದಕ್ಕೆ ಮೊದಲೆ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವ ಗ್ರಾಮ/ಜಿಲ್ಲೆಯಲ್ಲಿ ಬೇಗನೆ ಗರ್ಭಧಾರಣೆಯನ್ನು ದಾಖಲಾಗಿಸುವುದು ಬಹುಮುಖ್ಯ.
- ಮೂರು ಮತ್ತು ನಾಲ್ಕನೇ ತಿಂಗಳ ಮಧ್ಯದಲ್ಲಿ ಎರಡನೇ ಭೇಟಿ ನೀಡಬೇಕು.
- ಮೂರನೇ ಭೇಟಿಯನ್ನು 8ನೇ ತಿಂಗಳಲ್ಲಿ ನೀಡಲು ಯೋಜನೆ ಮಾಡಿಕೊಳ್ಳಬೇಕು.
- ಒಂಭತ್ತನೇ ತಿಂಗಳಲ್ಲಿ ಹೆಚ್ಚುವರಿಯಾಗಿ ನೀಡುವ ಭೇಟಿ ಉತ್ತಮ ಆರೈಕೆ ಒದಗಿಸಲು ಸಹಾಯಕವಾಗುತ್ತದೆ.
ಆರೋಗ್ಯ ಕಾರ್ಯಕರ್ತರು ಈ ಭೇಟಿಗಳ ಸಮಯದಲ್ಲಿ ಆರೋಗ್ಯ ಸಮಸ್ಯಗಳನ್ನು ಗುರುತಿಸಿದ ಪಕ್ಷದಲ್ಲಿ, ವೈದ್ಯರನ್ನು ಭೇಟಿಮಾಡುವುದು ಅಗತ್ಯವಾಗುತ್ತದೆ.
ಗರ್ಭಾವಸ್ಥೆ ಸಮಯದಲ್ಲಿ ಪರೀಕ್ಷೆ ಮತ್ತು ಆರೈಕೆ ಮಾಡುವಾಗ ಏನು ಮಾಡಬೇಕು ?
- ಮೊದಲನೇ ಪರೀಕ್ಷೆಯ ಸಮಯದಲ್ಲಿ ಈ ಗರ್ಭಾವಸ್ಥೆಯ ಮತ್ತು ಹಿಂದಿನ ಗರ್ಭಧಾರಣೆಗಳ ಬಗ್ಗೆ. ಗರ್ಭಿಣಿ ಹಿಂದೆ ವೆದ್ಯಕೀಯ ಸಮಸ್ಯೆ ಹೊಂದಿದ್ದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೆ ಮಾಹಿತಿ ಪಡೆದುಕೊಳ್ಳುವುದು.
- ಗರ್ಭಾವಸ್ಥೆಯಲ್ಲಿ ಗರ್ಭಿಣಿ ಮಹಿಳೆಯ ತೂಕ ಸಾಕಷ್ಟು ಹೆಚ್ಚಾಗುತ್ತಿದೆಯೆ ಅಥವಾ ಇಲ್ಲವೆ ಎಂದು ತಿಳಿದುಕೊಳ್ಳಲು ಎ.ಎನ್.ಎಂ. ಗರ್ಭಿಣಿಯನ್ನು ತೂಕ ಮಾಡಬೇಕು.
- ಎದೆ ಮತ್ತು ಎದೆಯ ತೊಟ್ಟುಗಳು ಸಹಜವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಸ್ತನಗಳ ಪರೀಕ್ಷೆ ಮಾಡಬೇಕು.
ಮಗುವಿನ ಬೆಳವಣಿಗೆ/ಮಗು ಇರುವ ಸ್ಥಳವನ್ನು ತಿಳಿದುಕೊಳ್ಳಲು ಹೊಟ್ಟೆ ಪರೀಕ್ಷೆ ಮಾಡಬೇಕು.
- ಗರ್ಭಿಣಿಯಲ್ಲಿ ರಕ್ತಹೀನತೆ ಇದ್ದಲ್ಲಿ ಸರಳ ರಕ್ತ ಪರೀಕ್ಷೆ ಮಾಡಬೇಕು ಗರ್ಭಿಣಿಗೆ ರಕ್ತಹೀನತೆ (ರಕ್ತ ಕೊರತೆ) ಇದ್ದರೆ ಸರಿಯಾದ ಚಿಕಿತ್ಸೆಯಿಂದ ತೊಡಕುಗಳನ್ನು ತಡೆಗಟ್ಟಬಹುದು.
- ಮೂತ್ರ ಪರೀಕ್ಷೆ
- ಧನುರ್ವಾಯು ಚುಚ್ಚುಮದ್ದು
- ಪದೇ ಪದೇ ಭೇಟಿ ನೀಡಿದಾಗ ಹಿಂದಿನ ಭೇಟಿ ನೀಡಿದ ಮೇಲೆ ಯಾವುದಾದರೂ ಸಮಸ್ಯೆ ಬಂದಿರುವ ಬಗ್ಗೆ ವಿವರವಾಗಿ ತಿಳಿದುಕೊಂಡು ಆರೈಕೆ ಮಾಡಬಹುದು. ರಕ್ತದೊತ್ತಡ, ತೂಕ ಮತ್ತು ಪರೀಕ್ಷೆಗಳ ಪುನರಾವರ್ತನೆ ಮಾಡಬೇಕು.
- ಎಲ್ಲೆ ಗರ್ಭಿಣಿಯರಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ನೀಡಬೇಕು. ರಕ್ತಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ರಕ್ತಹೀನತೆಗೆ ಚಿಕಿತ್ಸೆ ನೀಡಬೇಕು.
- ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆ ಗರ್ಭಿಣಿಯನ್ನು ಪೂರ್ಣ ಪರೀಕ್ಷೆ ಮಾಡಿದ ಮೇಲೆ ಸಮಸ್ಯೆಗಳು ಪತ್ತೆಹಚ್ಚಲು ಸಾಧ್ಯವಾಗುತ್ತದೆ ಮತ್ತು ವೈದ್ಯರ ಹತ್ತಿರ ಕಳುಹಿಸಲು ನಿರ್ಧರಿಸಬಹುದು.
ಗರ್ಭಿಣಿಯಲ್ಲಿ ಈ ಕೆಳಕಂಡ ಸ್ಥಿತಿ ಇದ್ದಲ್ಲಿ ವೈದ್ಯರನ್ನು ಭೇಟಿ ಮಾಡುವುದು ಅಗತ್ಯವಾಗಿರುತ್ತದೆ.
- ಪದೇ ಪದೇ ಹಸುಗೂಸಿನ ಮರಣ, ಸತ್ತ ಕೂಸಿನ ಜನನ, ಪದೇ ಪದೇ ಗರ್ಭಪಾತ ಅಥವಾ ಅಕಾಲಿಕ ಜನನ.
- ಈಗಿನ ಗರ್ಭಾವಸ್ಥೆಯಲ್ಲಿ ಯೋನಿಸ್ರಾವ
- ಅಧಿಕ ರಕ್ತದ ಒತ್ತಡ ಅಥವಾ ಅಸಾಮಾನ್ಯ ಮೂತ್ರ ಪರೀಕ್ಷೆ
- ಮಹಿಳೆಗೆ ಹಿಂದಿನ ಹೆರಿಗೆ ಹೊಟ್ಟೆ ಶಸ್ತ್ರಚಿಕಿತ್ಸೆ ಮೂಲಕ ಅಥವಾ ಹಿಂದೆ ಅವರಿಗೆ ಬೇರೆ ಕಾರಣಗಳಿಗೆ ಹೊಟ್ಟೆ ಶಸ್ತ್ರಚಿಕಿತ್ಸೆ ಆಗಿದ್ದರೆ.
- ಮಹಿಳೆಗೆ ಹೃದಯ ಕಾಯಿಲೆ ಇದ್ದರೆ, ಅಧಿಕ ರಕ್ತದೊತ್ತಡ, ಕಾಮಾಲೆ ರೋಗ, ಇತ್ಯಾದಿ ಇದ್ದರೆ.
- ದೊಡ್ಡ ಗಾತ್ರದ ಹೊಟ್ಟೆಯಾಗಿದ್ದರೆ.
- ಅವಳಿ-ಜವಳಿ ಇದ್ದರೆ.
- ಮಗು ಗರ್ಭಕೋಶದಲಿ ಅಸಾಮಾನ್ಯ ಜಾಗದಲ್ಲಿದ್ದರೆ ಅಥವಾ ಮತು ತಲೆ ಕೆಳಗಾಗಿ ಇದ್ದರೆ.
- ಆಶಾ ಕಾರ್ಯಕರ್ತರಾಗಿರುವುದರಿಮದ ನೀವು ಆಪ್ತಸಮಾಲೋಚನೆ ಮಾಡಬೇಕು ಅಂತಹ ಮಹಿಳೆಬರಿಗೆ ಆಸ್ಪತ್ರೆಗೆ ಹೋಗಲು ಸಹಾಯ ಮಾಡಬೇಕು.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 1/28/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.