অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ತವ್ಯ ಮತ್ತು ಜವಾಬ್ದಾರಿಗಳು

ಕರ್ತವ್ಯ ಮತ್ತು ಜವಾಬ್ದಾರಿಗಳು

ಆಶಾಳಿಗೆ ತನ್ನ ಗ್ರಾಮದಲ್ಲಿ ಕೆಲವು ಸಂತಾನವಿಲ್ಲದ ದಂಪತಿಗಳು ಅಥವಾ 2-3 ಯಾರಿ ಗರ್ಭಪಾತವಾದ ಮೇಲೆ ಗರ್ಭಧಾರಣೆಯಾಗದ ದಂಪತಿಗಳು ಸಿಗಬಹುದು. 20 ವರ್ಷ ಅಥವಾ 20 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಹೆಂಗಸು ಕಳೆದ 2 ವರ್ಷಗಳಿಂದ ಗಂಡನ ಜೊತೆ ಸಾಮಾನ್ಯ ದಾಂಪತ್ಯ ಜೀವನ ನಡೆಸುತ್ತಿದ್ದರೂ ಆ ಹೆಂಗಸು ಗರ್ಭಿಣಿಯಾಗಿರುವುದಿಲ್ಲ, ಅಂತಹ ಹೆಂಗಸಿಗೆ ನರ್ಸ್‍ನ್ನು ಸಂಪರ್ಕಿಸಲು ಅಥವಾ ತಪಾಸಣೆ ಮಾಡಿಸಿಕೊಳ್ಳಲು ನೇರವಾಗಿ ವೈದ್ಯರನ್ನು ಭೇಟಿಯಾಗಲು ತಿಳಿಸಿ. ಗಂಡ-ಹೆಚಿಡತಿ ಇಬ್ಬರೂ ಒಟ್ಟಿಗೆ ಬಂಜೆತನ ಚಿಕಿತ್ಸೆಗೆ ಹೋಗಬೇಕು. ಇಬ್ಬರಲ್ಲಿ ಒಬ್ಬರಿಗೆ ಅಥವಾ ಇಬ್ಬರಿಗೂ ಸ್ವಲ್ಪ ಸಮಸ್ಯೆ ಇರಬಹುದು. ಆ ಸಮಸ್ಯೆಗೆ ಚಿಕಿತ್ಸೆ ಅಗತ್ಯವಿರುತ್ತದೆ. ದಂಪತಿಗಳು ಮಗುವನ್ನು ಪಡೆಯುವುದು ಕಷ್ಟವಾಗುತ್ತದೆ. ಈ ವಿಷಯವನ್ನು ದಯವಿಟ್ಟು ಗುರುತು ಮಾಡಿಕೊಳ್ಳಬೇಕು.

ಹೆಂಗಸು ಹೆಣ್ಣು ಮಗುವನ್ನು ಹೊಂದಿದ್ದಾಳೆ ಎಂದು ಅವಳನ್ನು ನಿಂದನೆ ಮಾಡಲಾಗುತ್ತಿದೆ. ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು ಕೆಲವು ಕುಟುಂಬದವರು ಮತ್ತು ಪತಿ ಪತ್ನಿಯನ್ನು ಬಿಟ್ಟಿಬಿಡುತ್ತಾರೆ ಅಥವಾ ದೂರವಿಡುತ್ತಾರೆ. ಮಗುವಿನ ಲಿಂಗ ನಿರ್ಧಾರದಲ್ಲಿ ಪುರುಷ ಮತ್ತು ಮಹಿಳೆಚಿiÀುರ ಪಾತ್ರದ ಬಗ್ಗೆ ನೀವು ಸ್ಪಷ್ಟವಾಗಿ ತಿಳಿಸಬೇಕು.

ಗರ್ಭಾವಸ್ಥೆಯಲ್ಲಿ ಆರೈಕೆ

ಹೆಂಗಸರು ಸಂತಾನೋತ್ಪತ್ತಿ ವಯಸ್ಸಿನಲ್ಲಿ ಗರ್ಭಧರಿಸುವುದು ಸಹಜ ಘಟನೆಯಾಗಿರುತ್ತದೆ.  ಗರ್ಭಾವಸ್ಥೇ ಮತ್ತು ಶಿಶುಜನನದ ಸಮಯದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಳ್ಳಬಹುದು. ಅವುಗಳು ತಾಯಿಯ ಅಥವಾ ಮಗುವಿನ ಅಥವಾ ಎರಡೂ ಜೀವಗಳಿಗೆ ಅಪಾಯ ಉಂಟುಮಾಡಬಹುದು. ಹೆಂಗಸರು ಹೆರಿಗೆಗೆ ಮುನ್ನ ಪರೀಕ್ಷೆ ಮಾಡಿಸಿಕೊಂಡರೆ ಸಮಸ್ಯೆಗಳಿರುವ ಹೆಂಗಸರನ್ನು ಪತ್ತೆ ಮಾಡಲು ಸಾಧ್ಯ. ಇದು ತಜ್ಞರ ಸೇವೆಯನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಪ್ರಗತಿಯನ್ನು ಪರಿಶೀಲಿಸಲು, ಮಗುವಿನ ಬೆಳವಣಿಗೆಗೆ, ಶೀಘ್ರವಾಗಿ ತೊಡಕುಗಳನ್ನು ಪತ್ತೆ ಮಾಡಲು ಗರ್ಭಾವಸ್ಥೆಯ ಆರೈಕೆ ಬಹಳ ಮೂಖ್ಯವಾಗಿರುತ್ತದೆ ಮತ್ತು ಅವಳಿಗೆ ಸೂಕ್ತ ಚಿಕಿತ್ಸೆ ನೀಡಬಹುದು. ಭೇಟಿ ನೀಡಿದ ಸಮಯದಲ್ಲಿ ಹೆಂಗಸಿಗೆ ಮತ್ತು ಅವರ ಕುಟುಂಬಕ್ಕೆ ಸರಿಯಾದ ಪೌಷ್ಠಿಕಾಂಶ, ವಿಶ್ರಾಂತಿ, ವ್ಯಾಯಾಮದ ಬಗ್ಗೆ ತಿಳುವಳಿಕೆ ನೀಡಬೇಕು. ಅವರು ಎಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕು ಎಂದು ಯೋಚಿಸಬಹುದು. ಇದು ಮಗು ಮತ್ತು ತಾಯಿ ಸುಖ-ಸಂತೋಷ ಮತ್ತು ಆರೋಗ್ಯಕರವಾಗಿರುವುದಕ್ಕೆ ಸಹಾಯ ಮಾಡುತ್ತದೆ. ಗರ್ಭಾವಸ್ಥೆಯ ಆರೈಕೆಯ ಸಮಯದಲ್ಲಿ ಗರ್ಭಿಣಿಯಲ್ಲಿರುವ ಸಣ್ಣ ಪುಟ್ಟ ತೊಂದರೆಗಳನ್ನು ನೋಡಬಹುದು (ಉದಾಹರಣೆಗೆ ವಾಂತಿ, ಎದೆವುರಿ, ಮಲಬದ್ಧತೆ, ಬೆನ್ನು ನೋವು ಇತ್ಯಾದಿ).

ಮೂಲ :ಆಶಾ ಕಲಿಕೆ ಕೈಪಿಡಿ

 

ಕೊನೆಯ ಮಾರ್ಪಾಟು : 8/24/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate