ದೇಹದಲ್ಲಿ ರಕ್ತದ ಕೊರತೆಯನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಗರ್ಭಾವಸ್ಥೆಯಲ್ಲಿ ರಕ್ತಯೀನತೆ ಗರ್ಭಿಣಿಯರಲ್ಲಿ ಗಂಡಾಂತರ ಉಂಟಾಗಲು ದಾರಿ ಮಡಿಕೊತ್ತದೆ. ಇದರಿಮದ ತಾಯಿ ಮತ್ತು ಮಗುವಿನ ಮರಣ ಸಂಭವಿಸಯುಗುಗ. ರಕ್ತಹೀನತೆ ಇರುವ ಗರ್ಭಿಣಿ. ಕಳೆಗುಂದಿದ ಹಾಗೆ ಸುಸ್ತಾದ ಹಾಗೆ ಕಾಣುತ್ತಾರೆ. ಮಾಮುಲು ಕೆಲಸ ಮಾಡುವಾಗ ಉಸಿರುಕಟ್ಟುತ್ತದೆ ಎಂದು ಹೇಳುತ್ತಾರೆ. ಶರೀರ ಮತತು ಮುಖದ ಮೇಲೆ ಊತ ಕಾಣಿಸಬಹುರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮತ್ತು ವೈದ್ಯರ ಸಲಹೆಗಳನ್ನು ಅನುಸರಿಸಿದರೆ ರಕ್ತಹೀನತೆಯನ್ನು ತಡೆಗಟ್ಟಬಹುದು ಮತ್ತು ಸಮಫೂರ್ಣವಾಗಿ ಗುಣಪಡಿಸಬಹುದು.
ಗರ್ಭಾವಸ್ಥೆಯಲ್ಲಿ ಗರ್ಭಿಣಿ ಕೆಲಬು ತಿಮಗಳು ಪ್ರತಿದಿನ ಕಬ್ಬಿಣಾಂಶದ ಮಾತ್ರೆಗಳನ್ನು ನುಂದುವುದರಿಂದ ಅಥವಾ ಚುಚ್ಚುಮದ್ದು ತೆಗೆದುಕೊಳ್ಳುವುದರಿಂದ ರಕ್ತಹೀನತೆಯನ್ನು ಗುಣಪಡಿಸಬಹುದು. ರಕ್ತಹೀನತೆ ತೀವ್ರವಾಗಿದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ರಕ್ತ ನೀಡುವ ಅಗತ್ಯವಿರುತ್ತದೆ.
ರಕ್ತಹೀನತೆ ತಡೆಗಟ್ಟಲು ಎಲ್ಲಾ ಗರ್ಭಿಣಿಯರು ಪ್ರತಿದಿನ ಒಂದು ಕಬ್ಬಿಣಾಂಶದ ಮಾತ್ರೆ ಯನ್ನು ತೆಗೆದುಕೊಳ್ಳಬೇಕು. ಗರ್ಭಿಣಿಯಾದ 3 ತಿಂಗಳ ನಂತರ ಪ್ರಾರಂಭಿಸಬೇಕು. ಈ ರೀತಿಯಾಗಿ 100 ಗುಳಿಗೆಗಳನ್ನು ತೆಗೆದುಕೊಳ್ಳಬೇಕು.
ಕಬ್ಬಿಣಾಂಶಚ ಮಾತ್ರೆಗಳನ್ನು ನೀಡುವಾಗ ಈ ಗುಳಿಗೆ ನುಂಗುವುದರಿಂದ ಕೆಲವು ಅಡ್ಡಪರಿಣಾಮಗಳು ಕಾಣಿಸಬಹುದು ಎಂದು ಸಲಹೆ ನೀಡಬೇಕು. ಆದಾಗ್ಯೂ ಅವುಗಳನ್ನು ಈ ಕೆಳಕಂಡ ರೀತಿಯಲ್ಲಿ ಪರಿಹರಿಸಬಹುದು.
ಆಗಾಗ ಸಂಭವಿಸುವ ವಾಂತಿ-ಇದನ್ನು ತಡೆಗಟ್ಟಲು ಸಾಧ್ಯ / ಊಟದ ನಂತರ ಗುಳಿಗೆ ತೆಗೆದುಕೊಳ್ಳುವುದರಿಂದ ತಪ್ಪಿಸಬಹುದು.
ಮಲಬದ್ಧತೆ - ಗರ್ಭಿಣಿ ಹೆಚ್ಚು ನೀರನ್ನು ಕುಡಿಯುವುದರಿಂದ ಮತ್ತು ಹೆಚ್ಚು ಹಣ್ಣುಗಳನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.
ಮಲವಿಸರ್ಜನೆ ಕಪ್ಪಾಗಿರುವುದು ಅಥವಾ ಸೌಮ್ಯವಾಗಿ ಭೇದಿಯಾಗುವುದು.
ಚಹದ ಜೊತೆ ಕಬ್ಬಿಣಾಂಶದ ಮಾತ್ರೆಯನ್ನು ಸೇವಿಸಬಾರದು. ಏಕೆಂದರೆ ಇದು ದೇಹ ಕಬ್ಬಿಣಾಂಶವನ್ನು ಹೀರುವುದನ್ನು ಅಥವಾ ವಿಲೀನವಾಗುವುದ್ನ್ನು ಕಡಿಮೆ ಮಾಡುತ್ತದೆ.
ರಕ್ತಹೀನತೆ ಇರುವ ಗರ್ಭಿಣಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕು.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 1/28/2020
ಗರ್ಭಿಣಿ ಆರೈಕೆಯ ವಿವರ
ಪ್ರೋಟೀನ್ಸ್ ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿವೆ. ಅಮೈನೋ ಆಮ್...
ಆಶಾ ಕಾರ್ಯಕರ್ತೆಯರ ಜವಾಬ್ದಾರಿಗಳು ಮತ್ತು ಕಾರ್ಯಗಳು
ಆಶಾ ಕಾರ್ಯಕರ್ತೆಯರ ಕರ್ತವ್ಯ ಮತ್ತು ಜವಾಬ್ದಾರಿಗಳು